‘ಹಾದಿಯಲ್ಲಿ ಹೋಗುವವರೆಲ್ಲ ಸಿನಿಮಾ ಮಾಡದಂತೆ ನಿಯಮ ತರಬೇಕು’; ವಿವಾದಾತ್ಮಕ ಹೇಳಿಕೆ ನೀಡಿದ ನಿರ್ಮಾಪಕ ಕೆ.ಮಂಜು
ಇಂದು ಮಂಜು ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಮಾಧ್ಯಮದ ಜತೆ ಅವರು ಮಾತನಾಡಿದ್ದಾರೆ.
‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಅವಘಡ ಸ್ಯಾಂಡಲ್ವುಡ್ಗೆ ಶಾಕ್ ನೀಡಿದೆ. ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎನ್ನುವ ಕೂಗು ಎಲ್ಲ ಕಡೆಗಳಲ್ಲೂ ಕೇಳಿ ಬರುತ್ತಿದೆ. ಹೀಗಿರುವಾಗಲೇ ನಿರ್ಮಾಪಕ ಕೆ.ಮಂಜು ಮಾತಿನ ಭರದಲ್ಲಿ ‘ಹಾದಿಯಲ್ಲಿ ಹೋಗುವವರು ಸಿನಿಮಾ ಮಾಡಿದ್ರೆ ಹೀಗಾಗುತ್ತೆ’ ಎನ್ನುವಂತಹ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇಂದು ಮಂಜು ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಮಾಧ್ಯಮದ ಜತೆ ಅವರು ಮಾತನಾಡಿದ್ದಾರೆ. ‘ಹಾದಿಯಲ್ಲಿ ಹೋಗುವವರೆಲ್ಲ ಸಿನಿಮಾ ಮಾಡಿದ್ರೆ ಹೀಗೇ ಆಗುತ್ತೆ. ಅಂತಹವರು ಸಿನಿಮಾ ಮಾಡದಂತೆ ನಿಯಮವನ್ನು ತರಬೇಕು. ದುರ್ಘಟನೆ ಆಗದಂತೆ ಎಚ್ಚರ ವಹಿಸುವುದು ನಿಮ್ಮ ಕೆಲಸ. ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ರೆ ಸರ್ಕಾರದಿಂದಲೇ ನಿಯಮ ಬರುತ್ತದೆ’ ಎಂದಿದ್ದಾರೆ ಮಂಜು.
‘ಸಿನಿಮಾ ಮಾಡುವುದಕ್ಕೆ ಒಂದು ತರಬೇತಿ ಬೇಕು. ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸಿನಿಮಾ ಮಾಡಬೇಕು. ನೀವು ನಿಯಮ ಮಾಡಿಕೊಡಿ ಅದನ್ನ ಕಾನೂನು ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ತುಂಬಾ ಬೇಸರದಲ್ಲಿ ಈ ಮಾತುಗಳನ್ನು ಅವರು ಹೇಳಿದ್ದಾರೆ’ ಎಂದಿದ್ದಾರೆ ಮಂಜು.
ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ದುರಂತ ಒಂದು ನಡೆದಿತ್ತು. ಫೈಟರ್ ವಿವೇಕ್ ಎಂಬುವವರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ರೋಪ್ ಎಳೆಯುವಾಗ ಫೈಟರ್ ವಿವೇಕ್ ಮೃತಪಟ್ಟಿದ್ದರು. ಚಿತ್ರತಂಡದ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಎಲ್ಲಾ ಕಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Love You Racchu: ಫೈಟರ್ ವಿವೇಕ್ ಸಾವು; ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಪೊಲೀಸರ ವಶಕ್ಕೆ
Fighter Vivek Death: ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ, ಫೈಟರ್ ವಿವೇಕ್ ಸಾವು
Published On - 7:02 pm, Wed, 11 August 21