ಅದು 1976ನೇ ಇಸ್ವಿ. ಡಾ.ರಾಜ್ಕುಮಾರ್, ಆರತಿ ಹಾಗೂ ಜಯಮಾಲ ಅಭಿನಯದ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ 6 ತಿಂಗಳ ಶಿಶುವಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಬೆಳ್ಳಿ ಪರದೆಗೆ ಕಾಲಿಡುವ ಸೂಚನೆಯನ್ನು ಅಂದೇ ನೀಡಿದ್ದರು. ಇದಾದ ನಂತರ ಬಾಲ ಕಲಾವಿದನಾಗಿ, ಹೀರೋ ಆಗಿ ಪುನೀತ್ ಕರ್ನಾಟಕದ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಸಿನಿ ಪ್ರಯಾಣಕ್ಕೆ ಈಗ ಬರೋಬ್ಬರಿ 45 ವರ್ಷ. ಈ ವಿಶೇಷ ದಿನದಂದು ಪುನೀತ್ಗೆ ಸಾಕಷ್ಟು ಕಲಾವಿದರು ಶುಭ ಕೋರಿದ್ದಾರೆ.
ಪ್ರೇಮದ ಕಾಣಿಸಿಕೆ ಸಿನಿಮಾ ತೆರೆಕಂಡ ನಂತರ ಪುನೀತ್ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರದಲ್ಲಿ ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಹೊಸ ಬೆಳಕು ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಪುನೀತ್ ನಟಿಸಿದ್ದರು. ಈ ಸಮಯದಲ್ಲಿ ಪುನೀತ್ ಮಾಸ್ಟರ್ ಲೋಹಿತ್ ಆಗಿ ಪರಿಚಯಗೊಂಡಿದ್ದರು.
1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು. 2002ರಲ್ಲಿ ತೆರೆಕಂಡ ಅಪ್ಪು ಸಿನಿಮಾ ಮೂಲಕ ಪುನೀತ್ ಪೂರ್ಣ ಪ್ರಮಾಣದ ನಟನಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 25 ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ.
ಪ್ರೇಮದ ಕಾಣಿಕೆ ಸಿನಿಮಾ ತೆರೆಕಂಡು ಇದೀಗ 45 ವರ್ಷಗಳು ಕಳೆದಿವೆ. ಈ ವಿಶೇಷ ದಿನಕ್ಕೆ ಕಿಚ್ಚ ಸುದೀಪ್, ರಿಷಬ್ ಶೆಟ್ಟಿ ಸೇರಿ ಸಾಕಷ್ಟು ಮಂದಿ ಶುಭಾಶಯ ಕೋರಿದ್ದಾರೆ.
#NewProfilePic pic.twitter.com/ObFUx7UyN6
— Rishab Shetty (@shetty_rishab) February 28, 2021
You truly have been a Power Star throughout your cinematic journey Appu sir. May your fame continue to grow stronger with time. Hearty congratulations on your 45 invincible years in KFI ?
ಕನ್ನಡ ಚಿತ್ರರಂಗದಲ್ಲಿ 45 ವರ್ಷಗಳನ್ನು ಪೂರೈಸಿದ ಪ್ರೀತಿಯ @PuneethRajkumar ಸರ್ ರವರಿಗೆ ಅಭಿನಂದನೆಗಳು✨— Rakshit Shetty (@rakshitshetty) February 28, 2021
Congrats @PuneethRajkumar ..
45 years is almost ur entire life. HUGE ACHIEVEMENT THIS.
Many more years to come and Wishing U more Power.
??— Kichcha Sudeepa (@KicchaSudeep) February 28, 2021
21ನೇ ಸಂಭ್ರಮಕ್ಕೆ ಶು ಭಕೋರಿದ ಎಲ್ಲರಿಗೂ ಪುನೀತ್ ಧನ್ಯವಾದ ಹೇಳಿದ್ದಾರೆ. ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ೪೫ ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು ಎಂದಿದ್ದಾರೆ.
ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ೪೫ ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು.
— Puneeth Rajkumar (@PuneethRajkumar) February 28, 2021
ಇದನ್ನೂ ಓದಿ: ನಿಜಕ್ಕೂ ಇದೊಂದು ದೊಡ್ಡ ಸಾಧನೆ: ಪುನೀತ್ ರಾಜ್ಕುಮಾರ್ಗೆ ಅಭಿನಂದಿಸಿದ ಕಿಚ್ಚ ಸುದೀಪ್