Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth rajkumar: ಇಂದು ಸಂಜೆಯೇ ಪುನೀತ್ ಅಂತ್ಯಕ್ರಿಯೆ; ರಾಕ್​ಲೈನ್ ವೆಂಕಟೇಶ್ ಮಾಹಿತಿ

Puneeth Rajkumar funeral: ಇಂದು ಸಂಜೆಯೇ ಪುನೀತ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರಾಕ್​ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

Puneeth rajkumar: ಇಂದು ಸಂಜೆಯೇ ಪುನೀತ್ ಅಂತ್ಯಕ್ರಿಯೆ; ರಾಕ್​ಲೈನ್ ವೆಂಕಟೇಶ್ ಮಾಹಿತಿ
ಪುನೀತ್ ಅಂತಿಮ ದರ್ಶನ ಪಡೆಯುತ್ತಿರುವ ಸಿಎಂ ಬೊಮ್ಮಾಯಿ, ಸಚಿವ ಆರ್ ಅಶೋಕ್ (Credits: PTI)
Follow us
TV9 Web
| Updated By: shivaprasad.hs

Updated on:Oct 30, 2021 | 11:24 AM

ಇಂದು ಸಂಜೆಯೇ ನಟ ಪುನೀತ್ ರಾಜ್​​ಕುಮಾರ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಟಿವಿ9ಗೆ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​ ಹೇಳಿಕೆ ನೀಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆ ಪ್ರಾರಂಭಿಸಲಾಗುತ್ತದೆ. ಸಂಜೆ 5-5.30ರ ವೇಳೆಗೆ ಕಂಠೀರವ ಸ್ಟುಡಿಯೋಗೆ ಬರಲಿದೆ. ಮಧ್ಯಾಹ್ನ 1.30ರ ವೇಳೆಗೆ ಪುನೀತ್ ಪುತ್ರಿ ದೆಹಲಿಗೆ ಬರುತ್ತಾರೆ. ಅಲ್ಲಿಂದ ಸಂಜೆ 4ರಿಂದ 5 ಗಂಟೆ ವೇಳೆಗೆ ಬೆಂಗಳೂರಿಗೆ ಬರ್ತಾರೆ. ಅವರು ಬರುವವರೆಗೆ ಪೂಜೆಗಳನ್ನು ಮಾಡಲಾಗುತ್ತದೆ. ಪುತ್ರಿ ದ್ರಿತಿ ಬಂದ ಬಳಿಕ ಅಂತಿಮ ವಿಧಿವಿಧಾನ ಮಾಡಲಾಗುತ್ತದೆ. ಪಾರ್ವತಮ್ಮ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಟಿವಿ9ಗೆ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​ ಹೇಳಿಕೆ ನೀಡಿದ್ದಾರೆ.

ಪುನೀತ್ ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ; ಪುತ್ರಿ ತಲುಪಿದ ನಂತರ ಸಮಯ ನಿಗದಿ: ಸಿಎಂ ಪುನೀತ್ ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು, ಗಣ್ಯರಿಗೆ ಅವಕಾಶವಿದ್ದು, ಸಾರ್ವಜನಿಕರಿಗೆ ಅವಕಾಶ ಇಲ್ಲ, ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಪುನೀತ್ ಪುತ್ರಿ ದೆಹಲಿ ತಲುಪಿದ ಬಳಿಕ ಅಂತ್ಯಕ್ರಿಯೆ, ಮೆರವಣಿಗೆಯ ಬಗ್ಗೆ ಸಮಯ ನಿಗದಿ ಮಾಡಲಾಗುವುದು. ಮೆರವಣಿಗೆ, ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ನಟ ಪುನೀತ್ ಅಗಲಿಕೆ ನಮಗೆ ತುಂಬಾ ದುಃಖವಾಗಿದೆ. ಗೌರವ, ಶಾಂತಿಯಿಂದ ಅವರನ್ನು ಕಳಿಸಿಕೊಡಬೇಕು. ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಇಂದು ಸಂಜೆ ಅಂತ್ಯ ಸಂಸ್ಕಾರ; ಕುಟುಂಬಸ್ಥರ ತೀರ್ಮಾನ ಅಂತಿಮ: ಕಮಲ್​ಪಂತ್ ಪುನೀತ್ ರಾಜ್ ಕುಮಾರ್ ದಿವಂಗತರಾದಮೇಲೆ ಅವರ ಅಭಿಮಾನಿಗಳು ನಿರಂತರವಾಗಿ ಬರುತ್ತಿದ್ದಾರೆ. ಭದ್ರತಾ ವ್ಯವಸ್ಥೆ ಒದಗಿಸಿದ್ದೇವೆ. ಜನರು ಇದೇ ರೀತಿ ಸಹಕಾರ ಕೊಡಲಿ ಎಂದು ಭಾವಿಸಿದ್ದೇನೆ. ಇಂದು ಕುಟುಂಬದವರ ತೀರ್ಮಾನದಂತೆ ಮುಂದಿನ ವ್ಯವಸ್ಥೆ ಮಾಡುತ್ತೇವೆ. ಅಂತ್ಯಸಂಸ್ಕಾರಕ್ಕೆ ಆಗಬೇಕಾದ ವ್ಯವಸ್ಥೆ ಮಾಡುತ್ತೇವೆ. ಅಂತ್ಯಸಂಸ್ಕಾರ ಸಂಜೆ ನಡೆಯುವ ಸಾಧ್ಯತೆ ಇದೆ. ಕುಟುಂಬದ ನಿರ್ಧಾರದ ಮೇಲೆ ನಿಂತಿದೆ. ಸೂಕ್ತವಾದ ಭದ್ರತೆ ಸಿದ್ಧತೆ ಇದೆ. ಪಾರ್ಥೀವ ಶರೀರ ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋದವರೆಗೆ ಹೋಗುವ ಸಂದರ್ಭದಲ್ಲಿ ರಸ್ತೆ ಬದಲಾವಣೆ ಮಾಡಲಾಗುತ್ತದೆ. ನಿನ್ನೆ ರಾತ್ರಿ ನೂಕುನುಗ್ಗಲಾದ ಸಮಯದಲ್ಲಿ ಗಾಯಗೊಂಡ ಪೊಲೀಸರು ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿಕೆ ನೀಡಿದ್ದಾರೆ.

ಅಂತ್ಯಕ್ರಿಯೆ ವೇಳೆ ಅಭಿಮಾನಿಗಳಿಗೆ ಅವಕಾಶವಿಲ್ಲ; ಶಾಸಕ ಎಸ್​.ಆರ್.ವಿಶ್ವನಾಥ್ ಹೇಳಿಕೆ ಇಂದು ನಟ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ. ಸರ್ಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ. ಸಂಜೆ 4.30ರ ವೇಳೆಗೆ ಪುನೀತ್ ಪುತ್ರಿ ಆಗಮಿಸಲಿದ್ದಾರೆ. ಅಂತ್ಯಕ್ರಿಯೆ ವೇಳೆ ಅಭಿಮಾನಿಗಳಿಗೆ ಅವಕಾಶವಿಲ್ಲ ಎಂದು ಬೆಂಗಳೂರಿನಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಪುನೀತ್ ಅಂತಿಮ ದರ್ಶನದ ಲೈವ್ ಇಲ್ಲಿ ಲಭ್ಯವಿದೆ:

Puneeth Rajkumar Death Live: ಇಂದು ಸಂಜೆಯೇ ನಟ ಪುನೀತ್​ ರಾಜ್​ಕುಮಾರ್​ ಅಂತ್ಯಕ್ರಿಯೆ- ರಾಕ್​ಲೈನ್​ ವೆಂಕಟೇಶ್​

ಇದನ್ನೂ ಓದಿ:

Puneeth Rajkumar: ಪುನೀತ್ ದರ್ಶನಕ್ಕೆ ಅಭಿಮಾನಿಗಳು, ಗಣ್ಯರ ಶೋಕ; ಅಂತಿಮ ದರ್ಶನದ ಚಿತ್ರಗಳು ಇಲ್ಲಿವೆ

Puneeth Rajkumar Death: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಹಿರಿಯ ಛಾಯಗ್ರಾಹಕ

Published On - 11:21 am, Sat, 30 October 21

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ