Puneeth Rajkumar Death: ನಟ ಪುನೀತ್ ರಾಜಕುಮಾರ್ ನಿಧನ; ಭಾನುವಾರ ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ರಾಜ್​​ಕುಮಾರ್ ಅಂತ್ಯಕ್ರಿಯೆ

TV9 Web
| Updated By: shivaprasad.hs

Updated on:Oct 30, 2021 | 7:20 AM

Puneeth Rajkumar passes away News highlights: ಸ್ಯಾಂಡಲ್​ವುಡ್ ನಟ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.

Puneeth Rajkumar Death: ನಟ ಪುನೀತ್ ರಾಜಕುಮಾರ್ ನಿಧನ; ಭಾನುವಾರ ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ರಾಜ್​​ಕುಮಾರ್ ಅಂತ್ಯಕ್ರಿಯೆ
ನಟ ಪುನೀತ್ ರಾಜಕುಮಾರ್

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್​ರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಇದರಿಂದ ಕನ್ನಡ ಚಿತ್ರರಂಗ, ಕನ್ನಡ ನಾಡು ಅಪಾರ ನಷ್ಟಕ್ಕೊಳಗಾಗಿದ್ದು, ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲೇ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ನಿಧನಕ್ಕೆ ನಾಡು ಅಪಾರ ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸುತ್ತಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಭಿಮಾನಿಗಳು ಶಾಂತರೀತಿಯಿಂದ ಪುನೀತ್ ಅವರನ್ನು ಕಳುಹಿಸಿಕೊಡಬೇಕು ಎಂದು ರಾಘವೇಂದ್ರ ರಾಜಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ವಿನಂತಿ ಮಾಡಿದ್ದಾರೆ.

ನಟ ಪುನೀತ್ ನಿಧನದ ಹಿನ್ನಲೆಯಲ್ಲಿ ಕೆಲವು ಖಾಸಗಿ ಶಾಲೆಗಳಿಂದ ನಾಳೆ ಒಂದು ದಿನದ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಕರ್ನಾಟಕದಿಂದ ಘೋಷಿಸಲಾಗಿದೆ. ಬೆಂಗಳೂರು ನಗರ ವಿವಿಯ MBA ಅಂತಿಮ ವರ್ಷದ ವಿದ್ಯಾರ್ಥಿಗಳ ಕೊನೆ ಪರೀಕ್ಷೆ ಮುಂದೂಡಲಾಗಿದೆ. 30 ಕೇಂದ್ರಗಳಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ನಟ ಪುನೀತ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ MBA ಪರೀಕ್ಷೆ ಮುಂದೂಡಲಾಗಿದ್ದು, ಆ ಪರೀಕ್ಷೆ ಮಂಗಳವಾರ ನಡೆಯಲಿದೆ. ವಿವಿ, ಕಾಲೇಜುಗಳಿಗೆ ರಜೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ, ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಟಿವಿ9ಗೆ ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜ ಗಾಂಧಿ ಹೇಳಿಕೆ ನೀಡಿದ್ದಾರೆ.

LIVE NEWS & UPDATES

The liveblog has ended.
  • 29 Oct 2021 10:23 PM (IST)

    ಕಂಠೀರವ ಸ್ಟುಡಿಯೊಗೆ ಬಂದ ಅಭಿಮಾನಿಗಳನ್ನು ವಾಪಸ್ ಕಳಿಸಿದ ಪೊಲೀಸರು

    ಪುನೀತ್ ರಾಜ್​ಕುಮಾರ್ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೊದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದ ನಂತರ ಅಭಿಮಾನಿಗಳು ತಂಡೋಪತಂಡವಾಗಿ ಕಂಠೀರವ ಸ್ಟುಡಿಯೊಗೆ ಬರುತ್ತಿದ್ದಾರೆ. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇಲ್ಲ ಎಂದು ವಿವರಿಸುತ್ತಿರುವ ಪೊಲೀಸರು ಕಂಠೀರವ ಕ್ರೀಡಾಂಗಣಕ್ಕೆ ತೆರಳುವಂತೆ ಸೂಚಿಸುತ್ತಿದ್ದಾರೆ. ಗುಂಪಾಗಿ ನಿಂತವರನ್ನು ಚೆದುರಿಸುತ್ತಿದ್ದಾರೆ.

  • 29 Oct 2021 09:33 PM (IST)

    ರಾತ್ರಿಯಿಡೀ ಪುನೀತ್ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ

    ಪುನೀತ್ ರಾಜ್​ಕುಮಾರ್​ ಪಾರ್ಥಿವ ಶರೀರ ದರ್ಶನಕ್ಕೆ ಇಡೀ ರಾತ್ರಿ ಅವಕಾಶ ನೀಡಲಾಗಿದೆ. ಅಭಿಮಾನಿಗಳು ಶಾಂತಿ ಕಾಪಾಡಿ, ಸಹಕರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿನಂತಿಸಿದ್ದಾರೆ.

  • 29 Oct 2021 09:16 PM (IST)

    ಅಂತ್ಯಕ್ರಿಯೆ ಸ್ಥಳ ಪರಿಶೀಲಿಸಿದ ಶಿವರಾಜ್​ಕುಮಾರ್

    ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರ ಅಣ್ಣ ಶಿವರಾಜ್​ ಕುಮಾರ್ ಕಂಠೀರವ ಕ್ರೀಡಾಂಗಣಕ್ಕೆ ಬಂದು ಕುಟುಂಬದ ಹಿರಿಯರು ಮತ್ತು ಆಪ್ತರೊಂದಿಗೆ ಚರ್ಚಿಸಿದರು. ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಕ್ರಿಯೆ ಸ್ಥಳ ಪರಿಶೀಲಿಸಿದ ಶಿವರಾಜ್​ ಕುಮಾರ್​ ಹಿಂದಿರುಗಿದರು.

  • 29 Oct 2021 09:04 PM (IST)

    ನೃಪತುಂಗ ವಿವಿ ಪರೀಕ್ಷೆಗಳು ಮುಂದೂಡಿಕೆ

    ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನ ನೃಪತುಂಗ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅ.30ರಂದು ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರೀಕ್ಷೆಯ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ವಿವಿ ಮೌಲ್ಯಮಾಪನ ಕುಲಸಚಿವ ರಾಮಕೃಷ್ಣ ರೆಡ್ಡಿ ಮಾಹಿತಿ ನೀಡಿದ್ದಾರೆ.

  • 29 Oct 2021 08:39 PM (IST)

    ಜರ್ಮನಿಯಿಂದ ಬೆಂಗಳೂರು ಕಡೆ ಹೊರಟ ಪುನೀತ್ ರಾಜ್​ಕುಮಾರ್ ಮಗಳು

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಮಗಳು ಬೆಂಗಳೂರಿನ ಕಡೆಗೆ ಹೊರಟಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪವರ್ ಸ್ಟಾರ್ ಪುತ್ರಿ ಆಗಮಿಸುತ್ತಿದ್ದಾರೆ. ನಾಳೆ ಸಾಯಂಕಾಲ 4 ಗಂಟೆ ವೇಳೆಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಒಂದು ವೇಳೆ ಪುನೀತ್ ಅವರ ಪುತ್ರಿ 4 ಗಂಟೆಗೆ ಬಂದ್ರೆ ನಾಳೆಯೇ ಅಂತ್ಯಕ್ರಿಯೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

  • 29 Oct 2021 08:27 PM (IST)

    ಪುನೀತ್ ರಾಜ್​ಕುಮಾರ್ ಅಭಿಮಾನಿಗಳನ್ನು ತಡೆಯುವ ಯತ್ನದಲ್ಲಿ ಪೊಲೀಸ್ ಕಾನ್​ಸ್ಟೆಬಲ್ ಕಾಲುಮುರಿತ

    ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ತಡೆಯುವ ಪ್ರಯತ್ನದಲ್ಲಿದ್ದ ಪೊಲೀಸ್ ಪೇದೆ ಕಾಲುಮುರಿದಿದೆ. ಅಭಿಮಾನಿಗಳನ್ನು ನಿರ್ವಹಿಸುವ ಸಮಯದಲ್ಲಿ ಮಡಿವಾಳ ಠಾಣಾ ಗಣೇಶ್ ನಾಯಕ್ ಅವರ ಕಾಲು ಮುರಿದಿದೆ. ಮಲ್ಯ ಸಿಗ್ನಲ್ ಗೇಟ್ ಬಳಿ ಬಂದೋಬಸ್ತ್​ಗೆ ಅವರನ್ನು ನಿಯೋಜಿಸಲಾಗಿತ್ತು. ಏಕಾಏಕಿ ಅಭಿಮಾನಿಗಳು ಸ್ಟೇಡಿಯಂ ಒಳಗೆ ನುಗ್ಗಿದಾಗ ಈ ವೇಳೆ ಅಭಿಮಾನಿಗಳನ್ನು ತಡೆಯಲು ಹೋದಾಗ ಬಿದ್ದು ಕಾಲು ಮುರಿದಿದೆ. ತಕ್ಷಣವೇ ಅವರನ್ನು ಮಲ್ಯ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.

  • 29 Oct 2021 08:13 PM (IST)

    ಮಹಾರಾಷ್ಟ್ರದಲ್ಲೂ ಅಪ್ಪು ಅಭಿಮಾನಿಗಳಿಂದ ಶ್ರದ್ಧಾಂಜಲಿ

    ಮುಂಬೈ: ಮಹಾರಾಷ್ಟ್ರದ ರಾಯಗಡ್ ಜಿಲ್ಲೆ ಅಲಿಭಾಗ್‌ನಲ್ಲಿ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಭಾವಚಿತ್ರದ ಎದುರು ಅಂತಿಮ ನಮನ ಸಲ್ಲಿಸಿದರು. ಪುನೀತ್ ಅವರ ಬೃಹತ್ ಫ್ಲೆಕ್ಸ್ ಮಾಡಿಸಿ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿ, ಅಗಲಿದ ನಟನ ಆತ್ಮಕ್ಕೆ ಶಾಂತಿ‌ ಕೋರಿದರು.

  • 29 Oct 2021 08:06 PM (IST)

    ಭಾನುವಾರ ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ರಾಜ್​​ಕುಮಾರ್ ಅಂತ್ಯಕ್ರಿಯೆ

    ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ ಭಾನುವಾರ ಕಂಠೀರವ ಸ್ಟುಡಿಯೊದಲ್ಲಿ ನಡೆಯಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಪುನೀತ್​ ಪುತ್ರಿ ಅಮೆರಿಕದಿಂದ ಆಗಮಿಸಬೇಕಿರುವ ಹಿನ್ನೆಲೆಯಲ್ಲಿ ಭಾನುವಾರವೇ ಅಂತ್ಯಕ್ರಿಯೆ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.

  • 29 Oct 2021 07:38 PM (IST)

    ಕಂಠೀರವ ಸ್ಟುಡಿಯೊದಲ್ಲಿ ಡಾ.ರಾಜ್ ಸಮಾಧಿ ಪಕ್ಕ ಪುನೀತ್ ಅಂತ್ಯಕ್ರಿಯೆ

    ಅಪ್ಪ ಡಾ.ರಾಜ್​ಕುಮಾರ್, ಅಮ್ಮ ಪಾರ್ವತಮ್ಮ ರಾಜ್​ಕುಮಾರ್ ಸಮಾಧಿ ಪಕ್ಕದಲ್ಲಿಯೇ ನಟ ಪುನೀತ್ ರಾಜ್​ಕುಮಾರ್​ ಅಂತ್ಯಕ್ರಿಯೆ ನಡೆಯಲಿದೆ ಎಂದು ಟಿವಿ9ಗೆ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪೊಲೀಸ್​ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

  • 29 Oct 2021 07:33 PM (IST)

    ಕಂಠೀರವ ಕ್ರೀಡಾಂಗಣಕ್ಕೆ ಬಂದ ಸಿಎಂ ಬೊಮ್ಮಾಯಿ: ಪುನೀತ್ ಪಾರ್ಥಿವ ಶರೀರಕ್ಕೆ ಪುಷ್ಪನಮನ

    ಕಂಠೀರವ ಸ್ಟೇಡಿಯಂಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಟ ಪುನೀತ್​ ಪಾರ್ಥಿವ ಶರೀರಕ್ಕೆ ಸರ್ಕಾರದ ವತಿಯಿಂದ ಪುಷ್ಪ ನಮನ ಸಲ್ಲಿಸಿದರು. ಸಚಿವರಾದ ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಡಾ.ಅಶ್ವತ್ಥ​ ನಾರಾಯಣ, ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಬಿ.ಸಿ.ಪಾಟೀಲ್​, ಮುರುಗೇಶ್​ ನಿರಾಣಿ, ಬಿ.ಸಿ.ನಾಗೇಶ್, ವಿ.ಸುನಿಲ್​​ ಕುಮಾರ್​, ನಾರಾಯಣಗೌಡ ಸೇರಿದಂತೆ ಹಲವರು ಸಹ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

  • 29 Oct 2021 07:25 PM (IST)

    ಮೈಸೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಪುನೀತ್ ರಾಜ್​ಕುಮಾರ್​ಗೆ ಸಂತಾಪ

    ಮೈಸೂರು: ನಟ ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ಕಲಾವಿದರು ಗೋಡೆಯ ಮೇಲೆ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಚಿತ್ರ ಬರೆದು ಸಂತಾಪ ಸೂಚಿಸಿದರು. ಚಿತ್ರದ ಜೊತೆಗೆ ನೇತ್ರದಾನ ಮಹಾದಾನ ಎಂದು ಬರಹವನ್ನೂ ಮೂಡಿಸಲಾಗಿದೆ. ಪುನೀತ್ ನಿಧನಕ್ಕೆ ಕರ್ನಾಟಕ ಕಣ್ಣೀರಿಡುತ್ತಿದೆ ಎಂದು ಸೂಚಿಸುವ ಚಿತ್ರವನ್ನು ಕಲಾವಿದ ರಾಹುಲ್ ಬಿಡಿಸಿದ್ದಾರೆ. ಚಿತ್ರದ ಎದುರು ಮೆಣದ ಬತ್ತಿ ಹೊತ್ತಿಸಿ ಅಭಿಮಾನಿಗಳು ಸಂತಾಪ ಸೂಚಿಸಿದರು.

  • 29 Oct 2021 07:10 PM (IST)

    ಕಂಠೀರವ ಕ್ರೀಡಾಂಗಣ ತಲುಪಿದ ಪಾರ್ಥಿವ ಶರೀರ

    ಪುನೀತ್ ರಾಜ್​ಕುಮಾರ್ ಪಾರ್ಥಿವ ಶರೀರ ಕಂಠೀರವ ಕ್ರೀಡಾಂಗಣ ತಲುಪಿದೆ. ಌಂಬುಲೆನ್ಸ್​ ಮೂಲಕ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸದಿಂದ ಸ್ಟೇಡಿಯಂಗೆ ಸ್ಥಳಾಂತರಿಸಲಾಯಿತು. ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಸರ್ಕಾರ ಹೇಳಿದೆ.

  • 29 Oct 2021 07:08 PM (IST)

    ಪುನೀತ್ ರಾಜ್​ಕುಮಾರ್ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣದಲ್ಲಿ ನೆರೆದ ಜನಸಾಗರ

    ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣ ಬಳಿ ಸಾವಿರಾರು ಜನರು ಪುನೀತ್ ರಾಜ್​ಕುಮಾರ್ ಅಂತಿಮ ದರ್ಶನಕ್ಕಾಗಿ ಬಂದಿದ್ದಾರೆ. ಸೂಚಿಸಿರುವ ಮಾರ್ಗ ಹೊರತುಪಡಿಸಿಯೂ ಕ್ರೀಡಾಂಗಣಕ್ಕೆ ಅಭಿಮಾನಿಗಳು ಬರುತ್ತಿರುವುದರಿಂದ ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

  • 29 Oct 2021 06:52 PM (IST)

    ಪುನೀತ್​ ನಿಧನದ ಸುದ್ದಿ ಕೇಳಿ ಅಭಿಮಾನಿ ಸಾವು

    ಚಾಮರಾಜನಗರ: ಪುನೀತ್ ರಾಜ್​ಕುಮಾರ್​ ಸಾವಿನ ಸುದ್ದಿ ಕೇಳಿ ಮರೂರು ಗ್ರಾಮದ ಅಭಿಮಾನಿ ಮುನಿಯಪ್ಪ (30) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುನೀತ್ ನಿಧನದ ಸುದ್ದಿ ಕೇಳಿದ ತಕ್ಷಣ ಕುಸಿದು ಬಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

    ಹೃದಯಾಘಾತದಿಂದ ಮೃತಪಟ್ಟ ಪುನೀತ್ ರಾಜ್​ಕುಮಾರ್ ಅಭಿಮಾನಿ

  • 29 Oct 2021 06:38 PM (IST)

    ನನ್ನ ಹೃದಯ ಒಡೆದು ಹೋಯ್ತು: ವಿನೋದ್ ರಾಜ್

    ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ಸಾವಿಗೆ ವಿನೋದ್​ ರಾಜ್ ಕಣ್ಣೀರು ಮಿಡಿದಿದ್ದಾರೆ. ಪುನೀತ್ ಸಾವು ನಮಗೆಲ್ಲಾ ಅಪಾರ ದುಃಖ ತಂದೊಡ್ಡಿದೆ. ಹೆಜ್ಜೆ ಇಡಲು ಆಗದ ನನ್ನ ತಾಯಿ ಪುನೀತ್​ ಸಾವಿನ ಸುದ್ದಿ ಕೇಳಿ ಎದ್ದು ನಿಂತುಬಿಟ್ಟರು. ಅಯ್ಯೋ ಕಂದ ಹೋಗಿ ಆಗೋಯ್ತಾ ಎಂದು ಹೇಳಿದರು. ನಾವು ಯಾರಿಗೆ ಏನು ಮಾಡಿದ್ವಿ, ಯಾಕೆ ಹೀಗಾಗುತ್ತಿದೆ? ದೇವರು ನಮ್ಮನ್ನು ಕೂಡ ಕರೆದುಕೊಂಡು ಬಿಡಬೇಕು. ನನಗೆ ಹೃದಯ ಒಡೆದುಹೋಯ್ತು ಎಂದ ವಿನೋದ್ ರಾಜ್ ಕಣ್ಣೀರು ಮಿಡಿದರು.

  • 29 Oct 2021 06:19 PM (IST)

    ಸ್ಟೇಡಿಯಂ ಒಳಗೆ ಬಿಡುವಂತೆ ಅಭಿಮಾನಿಗಳ ಒತ್ತಾಯ

    ಪುನೀತ್ ಪಾರ್ಥಿವ ಶರೀರ ಇರಿಸುವ ವೇದಿಕೆಗೆ ಬ್ಯಾರಿಕೇಡ್​ ಅಳವಡಿಸಲಾಗಿದ್ದು, ಜನಸಂದಣಿ ವೇಳೆ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪಾರ್ಥಿವ ಶರೀರ ಇರಿಸುವ ವೇದಿಕೆಗೆ ಹೂವಿನ ಅಲಂಕಾರ ಮಾಡಲಾಗಿದೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದು, ಮಲ್ಯ ಆಸ್ಪತ್ರೆ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಸ್ಟೇಡಿಯಂ ಒಳಗೆ ಬಿಡುವಂತೆ ಅಭಿಮಾನಿಗಳ ಒತ್ತಾಯಿಸಿದ್ದಾರೆ.

  • 29 Oct 2021 06:17 PM (IST)

    ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಆಮೆಜಾನ್ ಪ್ರೈಮ್ ವಿಡಿಯೋ

    ಪುನೀತ್ ನಿಧನಕ್ಕೆ ಆಮೆಜಾನ್ ಪ್ರೈಮ್ ಒಟಿಟಿ ಸಂತಾಪ ಸೂಚಿಸಿದೆ. ಅಪ್ಪು ಅಭಿನಯದ ‘ಯುವರತ್ನ’ ಆಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾದ ಒಂದು ವಾರದ ನಂತರ ತೆರೆಕಂಡಿತ್ತು.

  • 29 Oct 2021 06:15 PM (IST)

    46ನೇ ಹುಟ್ಟುಹಬ್ಬವನ್ನು ಮೂಡಿಗೆರೆಯ ರಾಮೇಶ್ವರ ದೇವಸ್ಥಾನದಲ್ಲಿ ಆಚರಿಸಿದ್ದ ಪುನೀತ್

    ಪುನೀತ್ ತಮ್ಮ ಈ ಬಾರಿಯ 46ನೇ ಹುಟ್ಟುಹಬ್ಬವನ್ನು ಮೂಡಿಗೆರೆಯ ನಿಡುವಾಳೆಯ ರಾಮೇಶ್ವರ ದೇವಸ್ಥಾನದಲ್ಲಿ ಪತ್ನಿ ಅಶ್ವಿನಿಯವರೊಂದಿಗೆ ಆಚರಿಸಿದ್ದರು. ಈ ಕುರಿತು ಊರಿನ ಅಭಿಮಾನಿ ಸಂತೋಷ್ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘‘ಈ ಬಾರಿ ಹುಟ್ಟುಹಬ್ಬವನ್ನು ನಮ್ಮ ಊರಿನ ರಾಮೇಶ್ವರ ದೇವಸ್ಥಾನದಲ್ಲಿ ಆಚರಿಸಿದರು. ಈ ವೇಳೆ ನನ್ನ ಮಗನನ್ನ ಎತ್ತಿ ಮುದ್ದಾಡಿದ್ರು. ಸಿನಿಮಾದವರು ಅಂದ್ರೆ ಜನಸಾಮಾನ್ಯರ ಜೊತೆ ಬೇರೆಯಲ್ಲ ಅಂದುಕೊಂಡಿದ್ದೆ. ಅದೇ ಅಪ್ಪು ಸರ್ ನಮ್ಮೆಲ್ಲರ ಜೊತೆ ಚೆನ್ನಾಗಿ ಬೆರೆತರು’’ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

  • 29 Oct 2021 06:09 PM (IST)

    ಪುನೀತ್ ನಿಧನಕ್ಕೆ ಸಾಣೆಹಳ್ಳಿ ಶ್ರೀಗಳ ಸಂತಾಪ

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯಶ್ರೀ ಸಂತಾಪ ಸೂಚಿಸಿದ್ದಾರೆ.

  • 29 Oct 2021 06:07 PM (IST)

    ನಾಳೆ ನಡೆಯಬೇಕಿದ್ದ ಬೆಂಗಳೂರು ನಗರ ವಿವಿ ಎಂಬಿಎ ಪರೀಕ್ಷೆ ಮುಂದೂಡಿಕೆ

    ಬೆಂಗಳೂರು ನಗರ ವಿವಿಯ MBA ಅಂತಿಮ ವರ್ಷದ ವಿದ್ಯಾರ್ಥಿಗಳ ಕೊನೆ ಪರೀಕ್ಷೆ ಮುಂದೂಡಲಾಗಿದೆ. 30 ಕೇಂದ್ರಗಳಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ನಟ ಪುನೀತ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ MBA ಪರೀಕ್ಷೆ ಮುಂದೂಡಲಾಗಿದ್ದು, ಆ ಪರೀಕ್ಷೆ ಮಂಗಳವಾರ ನಡೆಯಲಿದೆ.

    ವಿವಿ, ಕಾಲೇಜುಗಳಿಗೆ ರಜೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ, ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಟಿವಿ9ಗೆ ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜ ಗಾಂಧಿ ಹೇಳಿಕೆ ನೀಡಿದ್ದಾರೆ.

  • 29 Oct 2021 06:03 PM (IST)

    ಪುನೀತ್ ಅಗಲುವಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ: ಡಿವಿ ಸದಾನಂದ ಗೌಡ

    ನಟ ಪುನೀತ್​ ನಿಧನಕ್ಕೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸಂತಾಪ ಸೂಚಿಸಿದ್ದು, ಪುನೀತ್​​ ಇಲ್ಲ ಅನ್ನುವುದಕ್ಕೆ ನಂಬಲು ಸಾಧ್ಯವಾಗುತ್ತಿಲ್ಲ. ಪುನಿತ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಪುನೀತ್​​ ಸ್ಥಾನವನ್ನ ತುಂಬಲು ಯಾರಿಂದಲು ಸಾಧ್ಯವಿಲ್ಲ ಎಂದು ಶೋಕ ವ್ಯಕ್ತಪಡಿಸಿದ್ಧಾರೆ.

    ನಟ ಪುನೀತ್ ನಿಧನಕ್ಕೆ ಸಂಸದ ಡಿ.ಕೆ.ಸುರೇಶ್​, ದೇಶದ ಕನ್ನಡಾಭಿಮಾನಿಗಳಿಗೆ ಆತಂಕವುಂಟು ಮಾಡಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

  • 29 Oct 2021 06:02 PM (IST)

    ಯದುವೀರ್ ಒಡೆಯರ್ ಸಂತಾಪ

    ನಟ ಪುನೀತ್ ನಿಧನಕ್ಕೆ ಯದುವೀರ್​ ಒಡೆಯರ್​ ಸಂತಾಪ ಸೂಚಿಸಿದ್ದು, ಪುನೀತ್​ ನಮ್ಮನ್ನೆಲ್ಲ ಅಗಲಿದ್ದು ಅತೀವ ದುಃಖವನ್ನ ತಂದಿದೆ. ಚಾಮುಂಡೇಶ್ವರಿ ದೇವಿ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಕುಟುಂಬಕ್ಕೆ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಅವರು ಹೇಳಿದ್ದಾರೆ.

  • 29 Oct 2021 06:00 PM (IST)

    ಪುನೀತ್ ಪತ್ನಿ ಅಶ್ವಿನಿಯವರ ತವರೂರು ಭಾಗಮನೆಯಲ್ಲಿ ನೀರವ ಮೌನ

    ಅಪ್ಪು ನಿಧನದ ಸುದ್ದಿ ಕೇಳಿ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಬಳಿಯ ಭಾಗಮನೆ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಭಾಗಮನೆ ನಟ ಪುನೀತ್ ರಾಜ್​ಕುಮಾರ್​ ಪತ್ನಿ ಅಶ್ವಿನಿಯವರ ಹುಟ್ಟೂರು. ಭಾಗಮನೆ ಗ್ರಾಮಕ್ಕೆ ಆಗಾಗ ಪುನೀತ್ ಭೇಟಿ ನೀಡುತ್ತಿದ್ದರು. ಪುನೀತ್​ ನಮ್ಮಿಂದ ದೂರವಾಗಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಭೇಟಿಯಾಗಿದ್ದೆ. ಸದ್ಯದಲ್ಲೇ ಭಾಗಮನೆ ಗ್ರಾಮಕ್ಕೆ ಬರುವುದಾಗಿ ಹೇಳಿದ್ದರು ಎಂದು ಟಿವಿ9ಗೆ ಅಶ್ವಿನಿಯವರ ಚಿಕ್ಕಪ್ಪನ ಮಗ ಭರತ್​ ಪ್ರತಿಕ್ರಿಯೆ ನೀಡಿದ್ದಾರೆ.

  • 29 Oct 2021 05:57 PM (IST)

    ಪೇಜಾವರ ಶ್ರೀ ಸಂತಾಪ

    ನಟ ಪುನೀತ್ ನಿಧನಕ್ಕೆ ಪೇಜಾವರ ಮಠದ ಶ್ರೀ ಸಂತಾಪ ಸೂಚಿಸಿದ್ದು, ಅವರ​ ಹಠಾತ್ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಪುನೀತ್​​ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದಿದ್ದಾರೆ.

  • 29 Oct 2021 05:56 PM (IST)

    ದೊಡ್ಡಗಾಜನೂರಿನಲ್ಲಿ ಚಿತ್ರಮಂದಿರ ಕಟ್ಟಿಸುವ ಪುನೀತ್ ಕನಸು ನನಸಾಗಲೇ ಇಲ್ಲ

    ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ನಿಧನದಿಂದ ದೊಡ್ಡಗಾಜನೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡಗಾಜನೂರು, ಡಾ.ರಾಜ್​ಕುಮಾರ್​ರವರ ಹುಟ್ಟೂರು. ಇತ್ತೀಚೆಗೆ ​ದೊಡ್ಡಆಲದ ಮರದ ಬಳಿ ಜಾಹೀರಾತಿನ ಶೂಟಿಂಗ್​ನಲ್ಲಿ ಪುನೀತ್ ಭಾಗವಹಿಸಿದ್ದರು. ದೊಡ್ಡಗಾಜನೂರಿನಲ್ಲಿ ಚಿತ್ರಮಂದಿರ ಕಟ್ಟಬೇಕೆಂಬ ಕನಸಿತ್ತು. ಕಳೆದ ಹದಿನೈದು ವರ್ಷಗಳಿಂದ ಚಿತ್ರ ಮಂದಿರ ನಿರ್ಮಾಣ ಅರ್ಧದಲ್ಲಿಯೇ ನಿಂತಿದೆ.

  • 29 Oct 2021 05:54 PM (IST)

    ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿದ ವ್ಯಾಪಾರಸ್ಥರು

    ನಟ ಪುನೀತ್ ನಿಧನದ ಹಿನ್ನಲೆಯಲ್ಲಿ ಬೀದಿ ಬದಿ ವ್ಯಾಪರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ತೆರಳುತ್ತಿದ್ದಾರೆ.

    ಕಂಠೀರವ ಕ್ರೀಡಾಂಗಣದ ಸುತ್ತ ಪುನೀತ್ ಅಭಿಮಾನಿಗಳು ಅಂತಿಮ ದರ್ಶನಕ್ಕೆ ಕಾದು ಕುಳಿತಿದ್ದಾರೆ.

  • 29 Oct 2021 05:50 PM (IST)

    ಪುನೀತ್ ನಿಧನಕ್ಕೆ ನಟ ಮೋಹನ್​ಲಾಲ್ ಹಾಗೂ ಕಮಲ್ ಹಾಸನ್ ಕಂಬನಿ

    ನಟ ಪುನೀತ್ ನಿಧನಕ್ಕೆ ಮೋಹನ್ ಲಾಲ್ ಕಂಬನಿಗರೆದಿದ್ದಾರೆ. ಟ್ವೀಟ್ ಮೂಲಕ ಅವರು ಸಂತಾಪ ಸೂಚಿಸಿದ್ದಾರೆ. ಮೈತ್ರಿ ಸಿನಿಮಾದಲ್ಲಿ ಪುನೀತ್ ಜತೆ ಮೋಹನ್ ಲಾಲ್ ನಟಿಸಿದ್ದರು.

    ಸಹೋದರನ ಸಾವು ತುಂಬಾ ನೋವುಂಟು ಮಾಡಿದೆ: ಕಮಲ್ ಹಾಸನ್ ನಟ ಪುನೀತ್ ನಿಧನಕ್ಕೆ ಕಮಲ್ ಹಾಸನ್ ಸಂತಾಪ ಸೂಚಿಸಿದ್ದು, ಸಹೋದರನ ಸಾವು ತುಂಬಾ ನೋವುಂಟು ಮಾಡಿದೆ ಎಂದು ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ.

  • 29 Oct 2021 05:48 PM (IST)

    ಅಂತಿಮ ದರ್ಶನ ಪಡೆದ ಸುದೀಪ್, ಉಪೇಂದ್ರ

    ಪುನೀತ್ ನಿವಾಸಕ್ಕೆ ನಟ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಆಗಮಿಸಿ, ಅಂತಿಮ ದರ್ಶನ ಪಡೆದಿದ್ದಾರೆ.

    ಪುನೀತ್ ನಿಧನಕ್ಕೆ ಶಾಸಕಿ, ನಟಿ ರೋಜಾ ಸಂತಾಪ: ಮೌರ್ಯ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದ್ದ ನಟಿ, ಶಾಸಕಿ ರೋಜಾ ಟ್ವೀಟ್ ಮೂಲಕ ಸಂಥಾಪ ಸೂಚಿಸಿದ್ದಾರೆ.

  • 29 Oct 2021 05:44 PM (IST)

    ಸರ್ಕಾರದಿಂದ ರಜೆ ನೀಡುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ; ಸಚಿವ ಬಿಸಿ ನಾಗೇಶ್

    ಶಾಲೆಗೆ ರಜೆ ನೀಡುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

    ಖಾಸಗಿ ಶಾಲೆಗಳ ಒಕ್ಕೂಟವು ಶಾಲೆಗಳಿಗೆ ರಜೆಯನ್ನು ಘೋಷಿಸಿದೆ.

  • 29 Oct 2021 05:42 PM (IST)

    ವಿಕ್ರಂ ಆಸ್ಪತ್ರೆ ವೈದ್ಯ ಡಾ.ರಂಗನಾಥನ್ ನಾಯಕ್ ಹೇಳಿದ್ದೇನು?

    ನಟ ಪುನೀತ್ ನಿಧನದಿಂದ ನಮಗೆ ತುಂಬಾ ದುಃಖ ಆಗಿದೆ. ಜಿಮ್ ಮುಗಿದ ಬಳಿಕ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ನಟ ಪುನೀತ್ ನಮ್ಮ ಹಾಸ್ಪಿಟಲ್​ಗೆ ಬಂದಿದ್ದಾರೆ. ತಕ್ಷಣ ಎಮರ್ಜೆನ್ಸಿ ಟೀಂ ಪರಿಶೀಲನೆ ಮಾಡಲಾಯಿತು. ಆದರೆ ಎಮರ್ಜೆನ್ಸಿ ಟೀಮ್​​ನ ಚಿಕಿತ್ಸೆ ವೇಳೆ ಸ್ಪಂದಿಸಲಿಲ್ಲ. ಪುನೀತ್​ ಹಾರ್ಟ್​​ಲೈನ್ಸ್ ಕಂಪ್ಲೀಟ್ ಫ್ಲಾಟ್ ಆಗಿತ್ತು. 3 ಗಂಟೆಗಳ ಕಾಲ ನಟ ಪುನೀತ್​ಗೆ ಚಿಕಿತ್ಸೆ ನೀಡಲಾಯಿತು. ಆದರೂ ನಾವು ಅವರನ್ನ ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ.ರಂಗನಾಥನ್ ನಾಯಕ್ ಹೇಳಿಕೆ ನೀಡಿದ್ದಾರೆ.

  • 29 Oct 2021 05:40 PM (IST)

    3 ದಿನ ನವಯುಗ ಹೋಟೆಲ್ ಬಂದ್

    ಡಾ.ರಾಜ್​ ಕುಟುಂಬಕ್ಕೆ ಬಹಳ ಹತ್ತಿರವಾಗಿರುವ ನವಯುಗ ಹೋಟೆಲ್ ಮುಂಭಾಗ ಪುನೀತ್ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಗಿದೆ. ಈ ಹೋಟೆಲ್​ನ ಬಿರಿಯಾನಿ, ಕಬಾಬ್​ ಅಂದ್ರೆ ಅಪ್ಪುಗೆ ಪ್ರಿಯವಾಗಿತ್ತು. ನಿನ್ನೆಯೂ ಪುನೀತ್​ ಮನೆಗೆ ಊಟ ಕಳುಹಿಸಲಾಗಿತ್ತು. ದಶಕಗಳಿಂದ ಡಾ.ರಾಜ್ ಫ್ಯಾಮಿಲಿಗೆ ಫೇವರಿಟ್ ಹೋಟೆಲ್​ ಆಗಿತ್ತು. ಅಪ್ಪು ಆರೋಗ್ಯ ಸ್ಥಿತಿ ಗಂಭೀರವೆಂದು ಗೊತ್ತಾದ ತಕ್ಷಣ ಹೋಟೆಲ್ ಬಂದ್ ಮಾಡಲಾಗಿದೆ. ಇನ್ನು ಮೂರು ದಿನಗಳ ಕಾಲ ಹೋಟೆಲ್ ಬಂದ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

  • 29 Oct 2021 05:40 PM (IST)

    ಕಂಠೀರವ ಸ್ಟುಡಿಯೋದಲ್ಲೇ ಅಂತ್ಯಸಂಸ್ಕಾರಕ್ಕೆ ಕೆಲ ನಟರ ಚರ್ಚೆ

    ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲೇ ಮಾಡಬೇಕು ಎಂದು ಕೆಲ ನಟರು ಚರ್ಚೆ ನಡೆಸಲಾಗಿದೆ.

  • 29 Oct 2021 05:24 PM (IST)

    ಪುನೀತ್ ಹೋದ ಮೇಲೆ ಇನ್ನೇನೂ ಉಳಿದಿಲ್ಲ; ವಿಜಯ್ ಪ್ರಕಾಶ್ ಕಂಬನಿ

    ನಟ ಪುನೀತ್ ಹೋದ ಮೇಲೆ ಇನ್ನೇನೂ ಉಳಿದಿಲ್ಲ. ಪ್ರತಿ ಕನ್ನಡಿಗ ರಾಜಕುಮಾರನನ್ನು ಕಳೆದುಕೊಂಡಿದ್ದಾರೆ. ಜೀವನದಲ್ಲಿ ಎಲ್ಲಾ ಮುಗಿದಿದೆ ಎಂದು ಅನಿಸುತ್ತಿದೆ. ರಾಜ್‌ಕುಮಾರ್‌ರನ್ನು ಮನಸ್ಸಲ್ಲಿಟ್ಟುಕೊಂಡು ಬೊಂಬೆ ಹೇಳುತೈತೆ ಹಾಡನ್ನು ಹಾಡುತ್ತಿದ್ದೆ. ಇನ್ಮುಂದೆ ಪುನೀತ್‌ರನ್ನು ನೆನಸಿಕೊಂಡು ಹಾಡಬೇಕಾಗಿದೆ. ಇದನ್ನು ಅರಗಿಸಿಕೊಳ್ಳುವುದಕ್ಕೆ ನನ್ನಿಂದ ಆಗುತ್ತಿಲ್ಲ. ಅಣ್ಣಾವ್ರು, ಅಪ್ಪು ಸರ್ ವ್ಯಕ್ತಿಯ ರೂಪದಲ್ಲಿ ಹೋಗಿರಬಹುದು. ಆದರೆ ಶಕ್ತಿಯ ರೂಪದಲ್ಲಿ ನಮ್ಮ ಜೊತೆಯೇ ಇರುತ್ತಾರೆ ಎಂದು ಟಿವಿ9ಗೆ ಗಾಯಕ ವಿಜಯ್ ಪ್ರಕಾಶ್ ಹೇಳಿಕೆ ನೀಡಿದ್ಧಾರೆ.

  • 29 Oct 2021 05:21 PM (IST)

    ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ; ಕಮಲ್ ಪಂತ್ ಹೇಳಿಕೆ

    ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಬ್ಯಾರಿಕೇಡ್​ ಅಳವಡಿಸಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಟ ಪುನೀತ್ ಅಭಿಮಾನಿಗಳು ಶಾಂತ ರೀತಿಯಲ್ಲಿ ಸಹಕರಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

  • 29 Oct 2021 05:19 PM (IST)

    ಪುನೀತ್​ ನಿನ್ನೆ ನಮ್ಮ ಜೊತೆ ಆರಾಮವಾಗಿದ್ದರು; ಗುರುಕಿರಣ್ ಹೇಳಿಕೆ

    ನಿನ್ನೆ ರಾತ್ರಿ ಬರ್ತ್‌ಡೇ ಪಾರ್ಟಿಗೆ ಪುನೀತ್ ಬಂದಿದ್ದರು. ಪುನೀತ್ ರಾಜ್‌ಕುಮಾರ್‌ಗೆ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ಜತೆ ಪುನೀತ್ ರಾಜ್‌ಕುಮಾರ್ ಆರಾಮಾಗಿದ್ದರು ಎಂದು ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿಕೆ ನೀಡಿದ್ದಾರೆ.

  • 29 Oct 2021 05:18 PM (IST)

    ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರ ಸಂತಾಪ

    ಪುನೀತ್ ಪ್ರತಿಭಾನ್ವಿತ ನಟ, ಅದ್ಭುತ ವ್ಯಕ್ತಿತ್ವ ಹೊಂದಿದ್ದರು. ವಿಧಿಯ ಕ್ರೂರತೆ ಪುನೀತ್‌ರನ್ನು ನಮ್ಮಿಂದ ದೂರ ಮಾಡಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ನಟ ಪುನೀತ್ ನಿಧನಕ್ಕೆ ಟ್ವೀಟ್ ಮೂಲಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ಧಾರೆ.

    ಪುನೀತ್ ನಿಧನಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರಶ್ರೀ ಸಂತಾಪ ಸೂಚಿಸಿದ್ದಾರೆ. ಗಾಯಕ ಅರ್ಜುನ್ ಇಟಗಿ ಕಂಬನಿ ಮಿಡಿದಿದ್ದಾರೆ.

  • 29 Oct 2021 05:18 PM (IST)

    ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ಮದ್ಯ ಮಾರಾಟ ಬಂದ್

    ನಟ ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಬೆಂ.ನಗರ ಡಿಸಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

  • 29 Oct 2021 05:17 PM (IST)

    ಅಮೇರಿಕಾದಿಂದ ಮರಳುತ್ತಿರುವ ಪುನೀತ್ ಪುತ್ರಿ ದ್ರಿತಿ

    2 ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಪುನೀತ್ ಮಗಳು ದ್ರಿತಿ ಅಮೇರಿಕಾದಿಂದ ಆಗಮಿಸುತ್ತಿದ್ದಾರೆ. ನಾಳೆ ಇಡೀ ದಿನ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್‌ ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯ ಸಂಸ್ಕಾರ ನಡೆಯಲಿದೆ.

  • 29 Oct 2021 05:04 PM (IST)

    ಫೋತೀಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಪುನೀತ್; ಮಳಿಗೆ ಮುಚ್ಚಿ ಸಂತಾಪ

    ಪೋತೀಸ್ ಮಳಿಗೆಯನ್ನು ಕ್ಲೋಸ್ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಸಂತಾಪ ಸೂಚಿಸಲಾಗಿದೆ. ಕಳೆದ 3 ವರ್ಷಗಳಿಂದ ಪುನೀತ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಒಂದು ದಿನದ ಮಟ್ಟಿಗೆ ಅಂಗಡಿ ಕ್ಲೋಸ್ ಮಾಡಿ ಮ್ಯಾನೇಜ್ಮೆಂಟ್ ಸಂತಾಪ ಸೂಚಿಸಿದೆ.

  • 29 Oct 2021 05:02 PM (IST)

    ನಿರ್ದೇಶಕ ರಾಜಮೌಳಿ ಸಂತಾಪ

    ನಟ ಪುನೀತ್ ನಿಧನಕ್ಕೆ ನಿರ್ದೇಶಕ ರಾಜಮೌಳಿ ಸಂತಾಪ ಸೂಚಿಸಿದ್ದಾರೆ.

  • 29 Oct 2021 05:01 PM (IST)

    ಬೀದರ್: ಅಪ್ಪು ಅಮರ್ ರಹೇ ಎಂದು ಶ್ರದ್ಧಾಂಜಲಿ ಅರ್ಪಿಸುತ್ತಿರುವ ಅಭಿಮಾನಿಗಳು

    ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಬೀದರ್​​ನಲ್ಲಿ ಅಪ್ಪು ಅಭಿಮಾನಿಗಳು ಶ್ರದ್ಧಾಂಜಲಿ ಕೋರಿದ್ದಾರೆ. ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಕಟೌಟ್ ಹಾಕಿ, ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಶ್ರದ್ಧಾಂಜಲಿ ಕೋರಲಾಗಿದೆ. ಈ ವೇಳೆ ಅಪ್ಪು ಅಮರ ರಹೆ ಎಂದು ಘೋಷಣೆ ಕೂಗುವ ಮೂಲಕ ನಟನಿಗೆ ಅಂತಿಮ ನಮನ ಸಲ್ಲಿಸಲಾಗಿದೆ.

    ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಗಲಿದ ನೆಚ್ಚಿನ ನಟನಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

  • 29 Oct 2021 04:57 PM (IST)

    ಭಾನುವಾರ ನಡೆಯಲಿದೆ ಪುನೀತ್ ಅಂತ್ಯಕ್ರಿಯೆ

    ಹೃದಯಾಘಾತದಿಂದ ನಿಧನರಾಗಿರುವ ನಟ ಪುನೀತ್ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.

  • 29 Oct 2021 04:56 PM (IST)

    ಪುನೀತ್ ನೆನೆಸಿಕೊಂಡು ನಟಿ ರಮ್ಯಾ ಭಾವುಕ ಮಾತು

    ಪುನೀತ್ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಸಂಸದೆ, ನಟಿ ರಮ್ಯಾ ಕಂಬನಿಗರೆದಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಅವರು, ನಟ ಪುನೀತ್ ಸಾವಿನ ಸುದ್ದಿ ನಂಬಲು ಆಗುತ್ತಿಲ್ಲ. ನಾನು ಶಾಕ್‌ನಲ್ಲಿ ಇದ್ದೇನೆ. ಜೀವನ, ಮರಣ ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ಭಾವುಕತರಾಗಿದ್ದಾರೆ. ಅಪ್ಪು ಫಿಟ್‌ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸ್ತಿದ್ರು. ಪುನೀತ್ ಎಂದೂ ವರ್ಕೌಟ್ ಮಿಸ್ ಮಾಡ್ತಿರಲಿಲ್ಲ. ನನಗೆ ವರ್ಕೌಟ್ ಮಾಡುವಂತೆ ಹೇಳುತ್ತಿದ್ದರು ಎಂದು ಪುನೀತ್ ಅವರೊಂದಿಗಿನ ನೆನಪನ್ನು ರಮ್ಯಾ ಸ್ಮರಿಸಿಕೊಂಡಿದ್ದಾರೆ.

    ಪುನೀತ್‌ರಾಜ್‌ಕುಮಾರ್ ತುಂಬಾ ಸರಳ ನಟರಾಗಿದ್ದರು. ಅಭಿಮಾನಿಗಳ ಜೊತೆ ಸ್ನೇಹಿತರಂತೆ ಇರುತ್ತಿದ್ದರು. ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುತ್ತಿದ್ದರು. ಶೂಟಿಂಗ್ ವೇಳೆ ನಾನು ರೀಟೇಕ್ ತೆಗೆದುಕೊಳ್ಳುತ್ತಿದ್ದೆ. ಆಗ ಪುನೀತ್ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ನಮಗೆ ಪುನೀತ್ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಮಗುವಿನಂತೆ ಇರುತ್ತಿದ್ದರು ಎಂದು ರಮ್ಯಾ ಪುನೀತ್ ಅವರನ್ನು ನೆನಪಿಸಿಕೊಂಡಿದ್ಧಾರೆ.

  • 29 Oct 2021 04:46 PM (IST)

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ

    ನಟ ಪುನೀತ್​ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

  • 29 Oct 2021 04:46 PM (IST)

    ಪುನೀತ್ ನಿಧನಕ್ಕೆ ನಾಡಿನ ಚಿಂತಕರು, ಗಣ್ಯರಿಂದ ಕಂಬನಿ

    ಬೆಂಗಳೂರಿನ ಸದಾಶಿವನಗರದಲ್ಲಿ ಪುನೀತ್​ ಪಾರ್ಥಿವ ಶರೀರಕ್ಕೆ ಮಲ್ಲಿಕಾರ್ಜುನ ಖರ್ಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ನಟ ಮಂಡ್ಯ ರಮೇಶ್ ಸಂತಾಪ: ಸರಳ ಸಜ್ಜನಿಕೆಯ ಪುನೀತ್ ಅಗಲಿಕೆ ನುಂಗಲಾರದ ತುತ್ತು. ಇಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ ನೂರ್ಕಾಲ ಬದುಕಬೇಕಾಗಿತ್ತು. ಪುನೀತ್ ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಮೈಸೂರಿನಲ್ಲಿ ನಟ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ಧಾರೆ.

    ಪುನೀತ್ ಅಗಲುವಿಕೆಗೆ ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ: ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರದೃಷ್ಟಕರ ಎಂದು ಸುತ್ತೂರು ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

  • 29 Oct 2021 04:40 PM (IST)

    ತವರೂರು ದೊಡ್ಡ ಗಾಜನೂರಿನಲ್ಲಿ ನೀರವ ಮೌನ

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧ‌ನದ ಕಾರಣ, ತವರೂರು ದೊಡ್ಡ ಗಾಜನೂರಿನಲ್ಲಿ ನೀರವ ಮೌನ ಆವರಿಸಿದೆ. ಪುನೀತ್ ರಾಜ್ ಕುಮಾರ್ ಅಗಲಿಕೆ ಸಹಿಸಿಕೊಳ್ಳಲಾಗದೆ ಅಭಿಮಾನಿಗಳು, ಸ್ನೇಹಿತರು ದುಃಖಿಸುತ್ತಿದ್ದಾರೆ.

  • 29 Oct 2021 04:38 PM (IST)

    ಪುನೀತ್ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ನಟ ಧನುಷ್ ಕಂಬನಿ

    ನಟ ಪುನೀತ್​ ನಿಧನಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​​ ಸಂತಾಪ ಸೂಚಿಸಿದ್ಧಾರೆ. ತಮಿಳು ನಟ ಧನುಷ್ ಕೂಡ ಕಂಬನಿ ಮಿಡಿದಿದ್ದಾರೆ.

    ನಟ ಪುನೀತ್ ನಿಧನಕ್ಕೆ ಮಾಜಿ ಸಿಎಂ ಶೆಟ್ಟರ್ ಸಂತಾಪ ಸೂಚಿಸಿದ್ದು, ಪುನೀತ್ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಆಗಿದೆ ಎಂದು ದುಃಖಿಸಿದ್ದಾರೆ.

  • 29 Oct 2021 04:37 PM (IST)

    ಪುನೀತ್​ರನ್ನು ಚೆನ್ನಾಗಿ ಕಳುಹಿಸಿಕೊಡಬೇಕು, ಶಾಂತಿ ಕಾಪಾಡಿ ಎಂದು ಮನವಿ ಮಾಡಿದ ರಾಘವೇಂದ್ರ ರಾಜಕುಮಾರ್

    ನಟ ಪುನೀತ್​ರನ್ನ ನಾವು ಚೆನ್ನಾಗಿ ಕಳುಹಿಸಿಕೊಡಬೇಕು. ಎಲ್ಲರೂ ಶಾಂತಿಯನ್ನ ಕಾಪಾಡಿಕೊಳ್ಳಬೇಕು. ನೀವು ಸಹಕಾರ ನೀಡಬೇಕೆಂದರೆ ಎಲ್ಲರೂ ನನ್ನ ಜತೆಗಿರಬೇಕು. ಶಾಂತಿ ಕಾಪಾಡಬೇಕು. ಶಾಂತಿ ಕದಡುವ ಕೆಲಸ ಮಾಡಬೇಡಿ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ್ತೇವೆ ಎಂದು ಅಭಿಮಾನಿಗಳಲ್ಲಿ ರಾಘವೇಂದ್ರ ರಾಜ್​ಕುಮಾರ್​ ಮನವಿ ಮಾಡಿದ್ದಾರೆ.

    ನಟ ಪುನೀತ್​ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪುನೀತ್​​ ಪಾರ್ಥಿವ ಶರೀರ ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಸಹೋದರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಕ್ಕಳು ಕಣ್ಣೀರಿಟ್ಟಿದ್ದಾರೆ.

  • 29 Oct 2021 04:30 PM (IST)

    ಮಂಡ್ಯ: ರಸ್ತೆಯಲ್ಲೇ ಕಣ್ಣೀರಿಟ್ಟ ಅಭಿಮಾನಿಗಳು

    ಮಂಡ್ಯ: ಪುನೀತ್ ರಾಜಕುಮಾರ್ ನಿಧನದಿಂದ ದುಃಖಗೊಂಡಿರುವ ಅಭಿಮಾನಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಣ್ಣೀರಿಡುತ್ತಿದ್ದಾರೆ. ಅವರು ರಸ್ತೆಗೆ ಇಳಿಯುತ್ತಿದ್ದಂತೆ ಅಭಿಮಾನಿಯೊಬ್ಬನನ್ನು ಸಿಪಿಐ ಸಂತೋಷ್ ಕುಮಾರ್ ಜೀಪಿನ ಬಳಿಗೆ ಕರೆತಂದಿದ್ದಾರೆ. ಇದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಪಸ್ ಕಳಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ಕಳುಹಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ.

  • 29 Oct 2021 04:27 PM (IST)

    ಪುನೀತ್ ನಿಧನಕ್ಕೆ ತಾರೆಯರ ಕಂಬನಿ; ಸಂತಾಪ ಸೂಚಿಸಿದ ಪಾರ್ವತಿ, ಎರಿಕಾ

    ಪುನೀತ್ ನಿಧನಕ್ಕೆ ಖ್ಯಾತ ತಾರೆಯರು ಕಂಬನಿ ಮಿಡಿದಿದ್ದಾರೆ. ಟ್ವೀಟ್ ಮೂಲಕ ಅವರು ಸಂತಾಪ ಸೂಚಿಸಿದ್ಧಾರೆ.

  • 29 Oct 2021 04:24 PM (IST)

    ನಟಿಯರಾದ ರಶ್ಮಿಕಾ ಮಂದಣ್ಣ, ತ್ರಿಷಾ, ಹನ್ಸಿಕಾ ಕಂಬನಿ

    ದಕ್ಷಿಣ ಭಾರತದ ಖ್ಯಾತ ನಟಿಯರಾದ ರಶ್ಮಿಕಾ ಮಂದಣ್ಣ, ತ್ರಿಷಾ ಕೃಷ್ಣನ್, ಹನ್ಸಿಕಾ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

  • 29 Oct 2021 04:22 PM (IST)

    ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್; ಸಂತಾಪ ಸೂಚಿಸಿದ ಚಿರಂಜೀವಿ, ಜ್ಯೂ.ಎನ್​ಟಿಆರ್

    ಪುನೀತ್ ನಿಧನಕ್ಕೆ ಚಿರಂಜೀವಿ, ಮಹೇಶ್ ಬಾಬು, ಜ್ಯೂ ಎನ್​ಟಿಆರ್ ಸೇರಿದಂತೆ ಟಾಲಿವುಡ್ ತಾರೆಯರು ಕಂಬನಿ ಮಿಡಿದಿದ್ದಾರೆ.

  • 29 Oct 2021 04:18 PM (IST)

    ಪುನೀತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಬಿಗಿ ಬಂದೋಬಸ್ತ್

    ಕಂಠೀರವದಲ್ಲಿ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 6 ಎಸಿಪಿಗಳು, 20 ಇನ್ಸ್​ಪೆಕ್ಟರ್​ಗಳು, 4 ಡಿಸಿಪಿಗಳು ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ 550ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

  • 29 Oct 2021 04:17 PM (IST)

    ಅಂತಾರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಹಾಗೂ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಂತಾಪ

    ಪುನೀತ್ ಅಕಾಲಿಕ ಮರಣ ನಿಜಕ್ಕೂ ನಂಬಲು ಆಗಲಿಲ್ಲ. ಪುನೀತ್ ಬಹಳ ಸರಳ‌ ಸಜ್ಜನಿಕೆಯ ವ್ಯಕ್ತಿ. ಅವರ ತಂದೆಯ ಮೌಲ್ಯಗಳನ್ನ ಹೊಂದಿದ್ದರು. ಪುನೀತ್ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಕಂಬನಿ ಮಿಡಿದಿದ್ದಾರೆ.

    ನಟ ಪುನೀತ್ ನಿಧನಕ್ಕೆ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಂತಾಪ ಸೂಚಿಸಿದ್ದು, ಪುನೀತ್ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಪುನೀತ್ ನನ್ನ ಆತ್ಮೀಯ ಸ್ನೇಹಿತ, ಹಿತೈಷಿಯಾಗಿದ್ದರು. ನಾವು ಒಬ್ಬ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದಿದ್ದಾರೆ.

  • 29 Oct 2021 04:15 PM (IST)

    ಮನೆಯೊಳಗೆ ಕುಟುಂಬಸ್ಥರಿಗಷ್ಟೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ

    ಕುಟುಂಬಸ್ಥರಿಗಷ್ಟೆ ಮನೆಯೊಳಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸಿದ್ದರಾಮಯ್ಯ, ಅಶ್ವತ್ ನಾರಾಯಣ್,ಮಧು ಬಂಗಾರಪ್ಪ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.

  • 29 Oct 2021 04:13 PM (IST)

    ಪುನೀತ್ ಅಗಲುವಿಕೆಗೆ ನಿರ್ಮಾಲಾನಂದನಾಥ ಸ್ವಾಮೀಜಿ ಸಂತಾಪ

    ಆದಿ ಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಾಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಪುನೀತ್ ಇನ್ನಿಲ್ಲವಾದ್ದು ಅತ್ಯಂತ ನೋವಿನ ಸಂಗತಿ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್, ರಾಷ್ಟ್ರ, ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರವಾಗಿದ್ದರು. ಯುವನಟರಿಗೆ ಮಾದರಿಯಾಗಿದ್ದರು. ನಟರಾಗಿ, ಹಿನ್ನಲೆ ಗಾಯಕರಾಗಿ, ಚಿತ್ರ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದ ಬಹುದೊಡ್ಡ ಆಸ್ತಿಯಾಗಿದ್ದರು. ಚಿತ್ರರಂಗದ ಬಹುದೊಡ್ಡ ಆಸ್ತಿಯಾಗಿದ್ದ ಅವರ ನಿಧನದಿಂದ ಕನ್ನಡ ನಾಡು ಓರ್ವ ಸಾಂಸ್ಕೃತಿಕ ರಾಯಭಾರಿಯನ್ನ ಕಳೆದುಕೊಂಡಂತಾಗಿದೆ. ಭಗವಂತನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಖವನ್ನ ಸಹಿಸುವ ಶಕ್ತಿ ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.

  • 29 Oct 2021 04:11 PM (IST)

    ರಾಜ್ಯಾದ್ಯಂತ ಚಿತ್ರಪ್ರದರ್ಶನ ರದ್ದು

    ಪುನೀತ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿತ್ರಪ್ರದರ್ಶನ ರದ್ದಾಗಿದೆ ಎಂದು ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಮಹಾ ಮಂಡಲ್ ಉಪಾಧ್ಯಕ್ಷ ರಾಜಾರಾಮ್ ಹೇಳಿಕೆ ನೀಡಿದ್ದಾರೆ.

  • 29 Oct 2021 04:04 PM (IST)

    ಪುನೀತ್ ಮನೆ ಬಳಿ ಬರದಂತೆ ಸರ್ಕಾರದ ಮನವಿ

    ಪುನೀತ್ ಮನೆ ಬಳಿ ಬರದಂತೆ ಜನರಿಗೆ ಸರ್ಕಾರ ಮನವಿ ಮಾಡಿದ್ದು, ಕಂಠೀರವ ಸ್ಟೇಡಿಯಂಗೆ ಬರಲು ತಿಳಿಸಿದೆ. ನಟ ಪುನೀತ್ ರಾಜಕುಮಾರ್‌ ಅಂತಿಮ ದರ್ಶನಕ್ಕೆ ಸಂಜೆ 5ರಿಂದ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

    ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪುನೀತ್ ಫಾರ್ಮ್​​ ಹೌಸ್​ಗೆ ಪೊಲೀಸರು‌, ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.

  • 29 Oct 2021 04:02 PM (IST)

    ಪುನೀತ್ ನಿಧನಕ್ಕೆ ಗಣ್ಯರ ಸಂತಾಪ

    ನಟ ಪುನೀತ್​ ನಿಧನಕ್ಕೆ ಸಚಿವ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದು, ‘‘ಪುನೀತ್ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ. ಇಂದು ನಾವು ಬಹುದೊಡ್ಡ ಆಸ್ತಿಯನ್ನ ಕಳೆದುಕೊಂಡಿದ್ದೇನೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ’’ ಎಂದು ಹೇಳಿದ್ದಾರೆ.

    ನಟ ಪುನೀತ್​ ನಿಧನಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಂತಾಪ ಸೂಚಿಸಿದ್ದು, ‘‘ನಟ ಪುನೀತ್ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಪುನೀತ್​ರನ್ನು ಕಳೆದುಕೊಂಡು ರಾಜ್ಯದ ಜನ ದುಃಖಿತರಾಗಿದ್ದಾರೆ. ಪುನೀತ್​ ರಾಜ್​ಕುಮಾರ್​ ಆತ್ಮಕ್ಕೆ ಆ ಭಗವಂತ ಶಾಂತಿ ಸಿಗಲಿ’’ ಎಂದು ಕಂಬನಿ ಮಿಡಿದಿದ್ದಾರೆ.

    ನಟ ಪುನೀತ್​ ನಿಧನಕ್ಕೆ ನಿರ್ಮಲಾನಂದನಾಥಶ್ರೀ ಸಂತಾಪ ಸೂಚಿಸಿದ್ದಾರೆ.

  • 29 Oct 2021 04:00 PM (IST)

    ಗರುಡ ಮಾಲ್ ಬಂದ್ ಮಾಡಿ ಸಂತಾಪ

    ನಟ ಪುನೀತ್​ ನಿಧನ ಹಿನ್ನೆಲೆಯಲ್ಲಿಅಶೋಕ ನಗರದಲ್ಲಿರುವ ಗರುಡಾ ಮಾಲ್​ ಕ್ಲೋಸ್​ ಮಾಡುವ ಮೂಲಕ ಸಂತಾಪ ಸೂಚಿಸಲಾಗಿದೆ.

  • 29 Oct 2021 03:58 PM (IST)

    ದಾವಣಗೆರೆ: ಪುನೀತ್ ಅಂತಿಮ ನಮನ ಕಾರ್ಯಕ್ರಮ ನೋಡಲು ಕರೆಂಟ್ ನೀಡುವಂತೆ ಪ್ರತಿಭಟನೆ

    ದಾವಣಗೆರೆ ಯ ಬಹುತೇಕ ಕಡೆ ಕೈಕೊಟ್ಟ ವಿದ್ಯುತ್ ಕೈಕೊಟ್ಟಿದ್ದು, ಪುನೀತ್ ವಿಧಿವಶವಾದ ಸುದ್ದಿ ನೋಡಲು ವಿದ್ಯುತ್ ಪೂರೈಕೆ ಮಾಡಲು ಆಗ್ರಹಿಸಿ, ಶಿವರಾಜ್ ಕುಮಾರ ಅಭಿಮಾನಿಗಳಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.

  • 29 Oct 2021 03:56 PM (IST)

    ಸಿಎಂ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳಿನ ಕಾರ್ಯಕ್ರಮಗಳು ರದ್ದು

    ಚಿಕ್ಕಮಗಳೂರು ಜಿಲ್ಲೆಗೆ ನಾಳೆ ಪ್ರವಾಸ ಮಾಡಿ, ಶೃಂಗೇರಿ ಶಾರದಾಂಬೆ ದರ್ಶನ ಪಡೆಯಬೇಕಿದ್ದ ಸಿಎಂ ಬೊಮ್ಮಾಯಿ ಪ್ರವಾಸ ರದ್ದಾಗಿದೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ, ನಾಳಿನ ಶಿವಮೊಗ್ಗ ಪ್ರವಾಸ ರದ್ದುಗೊಳಿಸಿದ್ದಾರೆ. ಅವರು ಹಿಂದುಳಿದ ಜಾತಿಗಳ ಒಕ್ಕೂಟ ಸತ್ಯಾಗ್ರಹದಲ್ಲಿ ಭಾಗವಹಿಸಬೇಕಿತ್ತು.

  • 29 Oct 2021 03:53 PM (IST)

    ಕಂಬನಿ ಮಿಡಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

    ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾನ್ವಿತ ನಟ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇನ್ನೂ ಕೊಡುಗೆ ನೀಡಬೇಕಿದ್ದ ಪುನೀತ್, ನಿಧನದ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಲವಾರು ಉತ್ತಮ ಸಿನಿಮಾಗಳನ್ನು ನೀಡಿರುವ ಪುನೀತ್​, ಅವರ ತಂದೆಯಂತೆ ಸರಳವಾಗಿದ್ದರು. ಅವರು​ ಸಂಪೂರ್ಣ ಆರೋಗ್ಯವಂತರಾಗಿದ್ದರು. ಪುನೀತ್​ ನಿಧನ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅವರನ್ನು ನಾವೆಲ್ಲರೂ ಗೌರವಯುತವಾಗಿ ಕಳಿಸಿಕೊಡೋಣ. ಅಪ್ಪು ಹೆಸರಿಗೆ ಕಪ್ಪುಚುಕ್ಕೆ ಬರದಂತೆ ನಾವು ನೋಡಿಕೊಳ್ಳಬೇಕು ಎಂದು ವಿಕ್ರಂ ಆಸ್ಪತ್ರೆ ಬಳಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

  • 29 Oct 2021 03:49 PM (IST)

    ಇಂದು ಪುನೀತ್​ರನ್ನು ಭೇಟಿಯಾಗಬೇಕಿತ್ತು; ಕಂಬನಿ ಮಿಡಿದ ಸಿಎಂ ಬೊಮ್ಮಾಯಿ

    ವಿಕ್ರಂ ಆಸ್ಪತ್ರೆ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ‘‘ನಟ ಪುನೀತ್​ ನಿಧನದ ಸುದ್ದಿ ನಮಗೆ ಆಘಾತವನ್ನು ತಂದಿದೆ. ಆಸ್ಪತ್ರೆಯಲ್ಲಿ ಎಲ್ಲ ಪ್ರಯತ್ನ ಮಾಡಿದ್ರೂ ಉಳಿಸಿಕೊಳ್ಳಲಾಗಲಿಲ್ಲ. ನಟ ಪುನೀತ್​ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ನಿನ್ನೆ ನಟ ಪುನೀತ್​ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂದು ನನ್ನ ಭೇಟಿಗೆ ಸಮಯ ಸಹ ನಿಗದಿ ಮಾಡಲಾಗಿತ್ತು. ಕನ್ನಡ ರಾಜ್ಯೋತ್ಸವದ ಕುರಿತು ಖಾಸಗಿ ವೆಬ್​ಸೈಟ್​​ ಲಾಂಚ್ ಮಾಡುವ ಬಗ್ಗೆ ನನ್ನ ಭೇಟಿಯಾಗಬೇಕಿತ್ತು. ಆದ್ರೆ ಆ ವಿಧಿಯಾಟ ಬೇರೆಯೇ ಆಗಿತ್ತ. ಪುನೀತ್​​ ತಮ್ಮ ತಂದೆಯ ಗುಣಗಳನ್ನೇ ಅಳವಡಿಸಿಕೊಂಡಿದ್ದರು ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

    ಅಭಿಮಾನಿಗಳು ಶಾಂತಿ ಕಾಪಾಡಿಕೊಳ್ಳಬೇಕು. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಶಾಂತಿಯಿಂದ ನಟ ಪುನೀತ್​ರನ್ನ ನಾವು ಬೀಳ್ಕೊಡೋಣ ಎಂದು ಅವರು ಕರೆ ನೀಡಿದ್ದಾರೆ.

  • 29 Oct 2021 03:49 PM (IST)

    ದುಃಖದಲ್ಲಿ ಮುಳುಗಿರುವ ಪುನೀತ್ ಮಹಿಳಾ ಅಭಿಮಾನಿಗಳು

    ಗದಗ ನಗರಕ್ಕೆ ಬರ್ತೀನಿ ಅಂದಿದ್ದ ನಟ ಪುನೀತ್ ಇಲ್ಲ ಅಂತ ಕಣ್ಣೀರು ಎಂದು ನೆಚ್ಚಿನ ನಟನ ಕಳೆದುಕೊಂಡ ದುಃಖದಲ್ಲಿ ಮಹಿಳಾ ಅಭಿಮಾನಿ ರೇಖಾ ಬಂಗಾರಶೆಟ್ಟರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಒಮ್ಮೆಯಾದರೂ ಭೇಟಿಯಾಗಬೇಕು ಅನ್ನೋ ಕನಸಿತ್ತು. ಈಗ ಅವರ ನಿಧನದಿಂದ ನನ್ನ ಕನಸು ಕಮರಿದೆ ಅಂತ ಅವರು ಕಣ್ಣೀರು ಹಾಕಿದ್ದಾರೆ. ಗದಗ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘದ ಮಹಿಳೆಯರು ಕೂಡ ಅಪಾರ ದುಃಖ ವ್ಯಕ್ತಪಡಿಸಿದ್ದಾರೆ.

  • 29 Oct 2021 03:48 PM (IST)

    ಸಂಜೆ 5ರಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ

    ನಟ ಪುನೀತ್ ರಾಜಕುಮಾರ್‌ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಸಂಜೆ 5ರಿಂದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

    ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಂತಾಪ ಪುನೀತ್ ರಾಜಕುಮಾರ್ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.

    ಪೇಜಾವರ ಶ್ರೀ ಸಂತಾಪ ಸ್ಯಾಂಡಲ್​ವುಡ್ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ.

  • 29 Oct 2021 03:43 PM (IST)

    ಮಾಜಿ ಸಿಎಂ ಬಿಎಸ್​ವೈ, ಸಂಸದ ಜಿಎಂ ಸಿದ್ಧೇಶ್ವರ ಸಂತಾಪ

    ವಿಕ್ರಂ ಆಸ್ಪತ್ರೆ ಬಳಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು, ‘‘ನಟ ಪುನೀತ್ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ನಟ ಪುನೀತ್​ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟ. ನಟ ಪುನೀತ್​ ಆತ್ಮಕ್ಕೆ ಆ ದೇವರು ಶಾಂತಿಯನ್ನ ಕರುಣಿಸಲಿ ಎಂದು ನುಡಿದಿದ್ದಾರೆ.

    ಕನ್ನಡಿಗರ ಪ್ರೀತಿಯ ಅಪ್ಪು, ಖ್ಯಾತ ಚಿತ್ರನಟ ಹಾಗೂ ಆತ್ಮೀಯರಾದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ದಿಗ್ಭ್ರಮೆ ಮೂಡಿಸಿದೆ. ಪುನೀತ್ ಅವರು ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಅಣ್ಣಾವ್ರ ಕುಟುಂಬಕ್ಕೆ, ಅವರ ಅಸಂಖ್ಯಾತ ಅಭಿಮಾನಿ ದೇವರುಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದಾವಣಗೆರೆ ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.

    ಪುನೀತ್ ರಾಜ್‍ಕುಮಾರ್ ನಿಧನಕ್ಕೆ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಕಂಬನಿ ಮಿಡಿದಿದ್ದಾರೆ.

  • 29 Oct 2021 03:34 PM (IST)

    ವಿಕ್ರಂ ಆಸ್ಪತ್ರೆಯಿಂದ ಪುನೀತ್ ನಿವಾಸಕ್ಕೆ ಪಾರ್ಥಿವ ಶರೀರ ಸ್ಥಳಾಂತರ

    ವಿಕ್ರಂ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸಕ್ಕೆ ಸ್ಥಳಾಂತರ ಮಾಡಲಾಗಿದೆ. ಆ್ಯಂಬುಲೆನ್ಸ್​ ಮೂಲಕ ಮನೆಗೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗಿದೆ.

  • 29 Oct 2021 03:32 PM (IST)

    ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನ ಅಪಾರ ದುಃಖ ತಂದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ.

    ಕನ್ನಡ ಚಿತ್ರರಂಗದಲ್ಲಿ, “ಪವರ್ ಸ್ಟಾರ್” ಎಂದೇ ಖ್ಯಾತರಾಗಿದ್ದ, ಜನಾನುರಾಗಿ ಹಾಗೂ ಶ್ರೇಷ್ಠ ನಟ ಪುನೀತ್ ರಾಜಕುಮಾರ್, ಅವರ ಹಠಾತ್ ನಿಧನ, ಅಪಾರವಾದ ನೋವು ಹಾಗೂ ದುಃಖ ತಂದಿದೆ. ಬರ ಸಿಡಿಲಿನಂತೆ ಬಂದೆರಗಿದ ಪುನೀತ್ ರಾಜಕುಮಾರ್ ರವರ ಹಠಾತ್ ನಿಧನದ ಸುದ್ದಿಯಿಂದ ಇಡೀ ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗ ಹಾಗೂ ನಾಡಿನ ಜನತೆ, ಆಘಾತಗೊಂಡಿದ್ದು ನಾಡಿನಾದ್ಯಂತ, ದುಃಖದ ಛಾಯೆ ಆವರಿಸಿದೆ. ಕನ್ನಡ ಚಿತ್ರ ಜಗತ್ತಿನ, ಮೇರು ನಟರಾಗಿದ್ದ, ಡಾ: ರಾಜಕುಮಾರ್ ಅವರ ಪುತ್ರರೂ ಆಗಿದ್ದ, ಪುನೀತ್ ರಾಜಕುಮಾರ್, ತಮ್ಮ ಸಹಜ ಅಭಿನಯ ಚಾತುರ್ಯದಿಂದ, ಸದಭಿರುಚಿಯ ಹಾಗೂ ವೈಚಾರಿಕ ನೆಲೆಯುಳ್ಳ ಮಾದರಿ ಪಾತ್ರಗಳಲ್ಲಿ ಅಭಿನಯಿಸಿ, ನಾಡಿನ ಮೂಲೆ ಮೂಲೆಯಲ್ಲಿಹಾಗೂ ನಾಡಿನ ಹೊರಗೂ, ಅಭಿಮಾನಿಗಳ ಸಾಗರವನ್ನೇ, ಹೊಂದಿದ್ದರು. ಪುನೀತ್ ರಾಜಕುಮಾರ್ ರವರು, ಇನ್ನಿಲ್ಲ ಎಂಬ ಸುದ್ದಿಯನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಮೃತರ ಕುಟುಂಬದ ಸದಸ್ಯರಿಗೆ, ಹಾಗೂ ಅವರ ಅಪಾರ ಪ್ರಮಾಣದ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ, ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • 29 Oct 2021 03:30 PM (IST)

    ಮೈಸೂರು: ಚಿತ್ರಪ್ರದರ್ಶನ ಸ್ಥಗಿತಗೊಳಿಸಲು ಅಭಿಮಾನಿಗಳ ಆಗ್ರಹ

    ವುಡ್‌ಲ್ಯಾಂಡ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಕಣ್ಣೀರಿಡುತ್ತಲೇ ಚಿತ್ರಮಂದಿರದ ಬಾಗಿಲು ಬಡಿದು, ಪಾಪ್ಕಾರ್ನ್ ಗಾಡಿಯ ಗ್ಲಾಸ್ ಒಡೆದ ಘಟನೆ ವರದಿಯಾಗಿದೆ.

  • 29 Oct 2021 03:29 PM (IST)

    ನಾಳೆ ಪುನೀತ್ ಅಂತ್ಯಕ್ರಿಯೆ; ಸಚಿವ ಆರ್ ಅಶೋಕ್ ಮಾಹಿತಿ

    ವಿಕ್ರಂ ಆಸ್ಪತ್ರೆ ಬಳಿ ಕಂದಾಯ ಸಚಿವ ಅಶೋಕ್​ ಹೇಳಿಕೆ ನೀಡಿದ್ದು, ‘‘ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ಪುನೀತ್ ದಾಖಲಾಗಿದ್ದರು. ನಟ ಪುನೀತ್​​ ನಮ್ಮನ್ನಗಲಿರುವುದು ತೀವ್ರ ನೋವಿನ ಸಂಗತಿ. ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್​ ಅಂತ್ಯಕ್ರಿಯೆಯನ್ನು ನಡೆಸಲಾಗುವುದು. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಕುಟುಂಬಸ್ಥರ ಆಸೆಯಂತೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ದೇವರು ನಟ ಪುನೀತ್​ ಆತ್ಮಕ್ಕೆ ಶಾಂತಿಯನ್ನ ಕರುಣಿಸಲಿ. ನಟ ಪುನೀತ್​ ಅಭಿಮಾನಿಗಳು ಶಾಂತಿಯನ್ನ ಕಾಪಾಡಬೇಕು. ನಾಳೆ ಅಂತ್ಯಕ್ರಿಯೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಕುಟುಂಬಸ್ಥರ ಬಳಿ ಚರ್ಚಿಸಿ ಸಮಯ ನಿಗದಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.

  • 29 Oct 2021 03:27 PM (IST)

    ನಗರದ ಜಿಮ್ ಸೆಂಟರ್ ಕ್ಲೋಸ್ ಮಾಡಲು ಮಾಲೀಕರ ನಿರ್ಧಾರ

    ನಟ ಪುನಿತ್ ನಿಧನಕ್ಕೆ ನಗರದ ಜಿಮ್ ಸೆಂಟರ್ ಕ್ಲೋಸ್ ಮಾಡಲು ಮಾಲಿಕರು ಮುಂದಾಗಿದ್ದಾರೆ.

  • 29 Oct 2021 03:26 PM (IST)

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂತಾಪ

    ನಟ ಪುನೀತ್ ನಿಧನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂತಾಪ ಸೂಚಿಸಿದ್ದಾರೆ.

  • 29 Oct 2021 03:25 PM (IST)

    ಪುನೀತ್ ನಿಧನಕ್ಕೆ ನಟಿ ರಮ್ಯಾ ಸಂತಾಪ

    ಪುನೀತ್ ರಾಜ್​​ಕುಮಾರ್ ನಿಧನಕ್ಕೆ ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಕೆಲವು ನೋವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗಲ್ಲ. ‘ಮಿಸ್ ಯೂ ಅಪ್ಪು’ ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದಾರೆ.

  • 29 Oct 2021 03:23 PM (IST)

    ಪುನೀತ್​ ನಿಧನಕ್ಕೆ ಗಣ್ಯರ ಸಂತಾಪ

    ಪುನೀತ್ ರಾಜ್‌ಕುಮಾರ್ ನಿಧನಕ್ಕೆ ವಿಧಾನಪರಿಷತ್​ನ ಮಾಜಿ ಸದಸ್ಯ ಟಿ.ಎ.ಶರವಣ ಸಂತಾಪ ಸೂಚಿಸಿದ್ಧಾರೆ. ಎಂಎಲ್​ಸಿ, ಒಲಿಂಪಿಕ್ಸ್​ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಕೂಡ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

  • 29 Oct 2021 03:21 PM (IST)

    ಪುನೀತ್ ವ್ಯಕ್ತಿತ್ವ ಸ್ಮರಿಸಿದ ಡಿಕೆ ಶಿವಕುಮಾರ್

    ನನ್ನ ಬಾಲ್ಯ ಸ್ನೇಹಿತ, ನೆರೆ ಮನೆಯ ಪುನೀತ್ ಇನ್ನಿಲ್ಲ. ಇದನ್ನು ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ. ವಿಧಿ ಎಷ್ಟು ಕ್ರೂರಿ ಎನ್ನುವುದಕ್ಕೆ ಇದೇ ಸಾಕ್ಷಿ. ಪುನೀತ್‌ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ. ರಾಜಕೀಯಕ್ಕೆ ಕರೆತರಲು ಪ್ರಯತ್ನಿಸಿದ್ದೆವು. ಆದರೆ ಅವರು ರಾಜಕೀಯಕ್ಕೆ ಬರಲು ಇಷ್ಟಪಡಲಿಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುನೀತ್ ವ್ಯಕ್ತಿತ್ವವನ್ನು ಸ್ಮರಿಸಿಕೊಂಡಿದ್ದಾರೆ.

  • 29 Oct 2021 03:19 PM (IST)

    ಅಪ್ಪು ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್

    ನಟ ಪುನೀತ್ ನಿಧನಕ್ಕೆ ತೆಲುಗಿನ ಖ್ಯಾತ ನಟರಾದ ಮಹೇಶ್ ಬಾಬು, ಚಿರಂಜೀವಿ ಸಂತಾಪ ಸೂಚಿಸಿದ್ಧಾರೆ. ತೆಲುಗು ಸೂಪರ್ ಸ್ಟಾರ್ ಮಹೇಶ್‌ಬಾಬು ಸಂತಾಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಮಹೇಶ್‌ಬಾಬು

  • 29 Oct 2021 03:18 PM (IST)

    ಪುನೀತ್ ನಿಧನದ ಹಿನ್ನೆಲೆ; ಜಿಲ್ಲಾ ಪ್ರವಾಸ ಮುಂದೂಡಿದ ಸಿಎಂ

    ಪುನೀತ್ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹಾಸನ ಜಿಲ್ಲೆ ಪ್ರವಾಸ ಮುಂದೂಡಿಕೆಯಾಗಿದೆ.

  • 29 Oct 2021 03:17 PM (IST)

    ಶಾಸಕ ಹರತಾಳು ಹಾಲಪ್ಪ ಕಣ್ಣೀರು

    ಶಿವಮೊಗ್ಗದಲ್ಲಿ ಸಾಗರ ಶಾಸಕ ಹರತಾಳ ಹಾಲಪ್ಪ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪುನೀತ್ ಕಳೆದ ವಾರ ನನ್ನ ಮಗಳ ಮದುವೆಗೆ ಬಂದಿದ್ದರು. ಮೂರು ದಿನಗಳ ಕಾಲ ಮದುವೆಗೆ ಬಂದಿದ್ದರು. ಅವರಿಗೆ ಹೀಗಾಗಿರುವುದು ಸುದ್ದಿ ಕೇಳಿ ತುಂಬಾ ನೋವಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.

  • 29 Oct 2021 03:15 PM (IST)

    ಪುನೀತ್ ದರ್ಶನಕ್ಕೆ ಆಗಮಿಸಲಿರೋ ಸುದೀಪ್, ಉಪೇಂದ್ರ

    ಸ್ಯಾಂಡಲ್​ವುಡ್ ನಟರಾದ ಸುದೀಪ್, ಉಪೆಂದ್ರ ಚಿತ್ರೀಕರಣಕ್ಕಾಗಿ ಹೈದರಾಬಾದ್​ನಲ್ಲಿದ್ದರು. ಸಂಜೆ 4.30 ಫ್ಲೈಟ್‌ಗೆ ಅವರು ಬರುವ ನಿರೀಕ್ಷೆ ಇದೆ. ಶೂಟಿಂಗ್​ನಲ್ಲಿದ್ದ ನಟ ರಕ್ಷಿತ್ ಶೆಟ್ಟಿ ಆಗಮಿಸಿದ್ದಾರೆ.

  • 29 Oct 2021 03:14 PM (IST)

    ವಿಕ್ರಂ ಆಸ್ಪತ್ರೆಯ ಬಳಿ ಮುಗಿಲುಮುಟ್ಟಿದ ಅಭಿಮಾನಿಗಳ ಆಕ್ರಂದನ

    ವಿಕ್ರಂ ಆಸ್ಪತ್ರೆ ಬಳಿ ಅಭಿಮಾನಿಗಳ‌ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯ ಒಳನುಗ್ಗಲು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ. ಅಪ್ಪು ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ಡಾಕ್ಟರ್​ಗಳು ಹೇಳದ ಹಿನ್ನೆಲೆಯಲ್ಲಿ ಕೌಪೌಂಡ್ ಹಾರಲು ಅಭಿಮಾನಿಗಳು ಮುಂದಾಗಿದ್ದಾರೆ. ಆಸ್ಪತ್ರೆಯ ಸುತ್ತಲು ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

  • 29 Oct 2021 03:12 PM (IST)

    ಪುನೀತ್ ನಿಧನಕ್ಕೆ ಸದಾಶಿವ ಶೆಣೈ ಸಂತಾಪ

    ನಟ ಪುನೀತ್ ರಾಜ್​ಕುಮಾರ್​ ನಿಧನಕ್ಕೆ ಮಾಧ್ಯಮ ಅಕಾಡೆಮಿ & ಪ್ರೆಸ್​ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಸಂತಾಪ ಸೂಚಿಸಿದ್ದಾರೆ.

  • 29 Oct 2021 03:04 PM (IST)

    ಸಂತಾಪ ಸೂಚಿಸಿದ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಕೆಎಸ್ ಈಶ್ವರಪ್ಪ

    ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದರು. ನಾಡು-ನುಡಿ ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದರಿಂದ ಕನ್ನಡ ನಾಡು ಅಕ್ಷರಶಃ ಬಡವಾಗಿದೆ’ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಮ್ಮ ಶೋಕಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.

    ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕನ್ನಡ ಚಲನಚಿತ್ರರಂಗ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

  • 29 Oct 2021 03:03 PM (IST)

    ಪುನೀತ್ ನಿಧನ ಆಘಾತಕಾರಿ; ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ

    ಕನ್ನಡ ಚಿತ್ರರಂಗದ ಪ್ರತಿಭಾವಂತ ಮತ್ತು ಪ್ರಖ್ಯಾತ ನಟರಾದ ಡಾ. ರಾಜ್‍ಕುಮಾರ್ ಅವರ ಪುತ್ರರಾದ ಪುನೀತ್ ಅವರು “ಅಪ್ಪು’ ಎಂದೇ ಖ್ಯಾತಿ ಪಡೆದಿದ್ದು ಕನ್ನಡಿಗರ ಕಣ್ಮಣಿ ಎನಿಸಿದ್ದರು. ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ. ನಾಡಿನ ಸಮಸ್ತ ಕನ್ನಡಿಗರಿಗೆ ಈ ವಿಷಯ ಆಘಾತವನ್ನು ತಂದಿದೆ. ಈ ಸಂದರ್ಭದಲ್ಲಿ ಜನರು ಶಾಂತಿ- ಸಂಯಮದಿಂದ ವರ್ತಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.

  • 29 Oct 2021 03:01 PM (IST)

    ಅಭಿಮಾನಿಗಳು ಶಿಸ್ತಿನಿಂದ ವರ್ತಿಸಿ: ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

    ಪುನೀತ್ ರಾಜ್ ಕುಮಾರ್  ಅಗಲಿರುವ ಕುರಿತು ಇನ್ನೂ ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಕೆಲವು ಮಾಧ್ಯಮಗಳಲ್ಲಿ ಅವರು ಆಗಲಿದ್ದಾರೆ ಎಂದು ಬಂದಿದೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ನಟನಾಗಿ ಅವರು ಗುರುತಿಸಿಕೊಂಡಿದ್ದರು. ಎಲ್ಲ ಕಾನೂನು ಸುವ್ಯವಸ್ಥೆ ಮಾಡಲಾಗುತ್ತಿದೆ. ಮಾಜಿ ಸಿಎಂ ಬಿಎಸ್ ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಅಲ್ಲಿಯೇ ಇದ್ದಾರೆ. ಅಭಿಮಾನಿಗಳು ತಾಳ್ಮೆಯಿಂದ ಶಿಸ್ತಿನಿಂದ ವರ್ತಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

  • 29 Oct 2021 02:58 PM (IST)

    ಪುನೀತ್ ನಿವಾಸಕ್ಕೆ ಡಿಕೆ ಶಿವಕುಮಾರ್ ಹಾಗೂ ಸಚಿವ ಮಾಧುಸ್ವಾಮಿ ಆಗಮನ

    ಪುನೀತ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಆಗಮಿಸಿದ್ದಾರೆ.

  • 29 Oct 2021 02:57 PM (IST)

    ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ

    ಸಂಜೆ ಐದು ಗಂಟೆ ಬಳಿಕ ನಟ ಪುನೀತ್ ಮೃತದೇಹ ಕಂಠೀರವ ಕ್ರೀಡಾಗಂಣಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಸಂಜೆ ಬಳಿಕವೇ ಅಭಿಮಾನಿಗಳ ದರ್ಶನಕ್ಕೆ ಪ್ರಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

  • 29 Oct 2021 02:55 PM (IST)

    ಕೊಪ್ಪಳ: ಸಚಿವ ಹಾಲಪ್ಪ ಆಚಾರ್ ಕಂಬನಿ

    ನಟ ಪುನೀತ್ ರಾಜಕುಮಾರ್ ನಿಧನ‌ಕ್ಕೆ ಗಣಿ,‌ಭೂ ವಿಜ್ಞಾನ‌ ಸಚಿವ ಹಾಲಪ್ಪ‌ ಆಚಾರ ಸಂತಾಪ ಸೂಚಿಸಿದ್ದಾರೆ. ಈ ದಿನ ಕರಾಳ‌ ದಿನ ಎಂಬ ಭಾವನೆ ಬರ್ತಿದೆ. ಯುವ ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ. ಹೃದಯಾಘಾತದಿಂದ ಆಕಸ್ಮಿಕವಾಗಿ ಅಗಲಿಕೆ ನೋವು ತಂದಿದೆ. ಪುನೀತ್ ಅಪ್ರತಿಮ‌ ಕಲಾವಿದ. ಅವರ‌ ತಂದೆಯಷ್ಟೇ ಪ್ರತಿಭೆ ಪುನೀತ್‌ರಾಜಕುಮಾರ್ ಅವರಿಗೆ ಇತ್ತು. ಅಪ್ಪನನ್ನೂ ಮೀರಿಸುವ ಕಲಾ ಶಕ್ತಿ ಪುನೀತ್ ಗೆ ಇತ್ತು. ಯುವ ಪ್ರತಿಭೆಯನ್ನು ಕಳೆದುಕೊಂಡಿದ್ದು ಕರ್ನಾಟಕ ಕಲಾ ಕ್ಷೇತ್ರಕ್ಕೆ ಆಘಾತ. ಇಡೀ ರಾಜ್ಯದ ಕಲಾ ಅಭಿಮಾನಿಗಳಿಗೆ ದೇವರು ದುಖಃ ಸಹಿಸುವ ಶಕ್ತಿ ನೀಡಲಿ. ಪುನೀತ್ ಕುಟುಂಬಕ್ಕೂ ದುಃಖ ಸಹಿಸುವ ಶಕ್ತಿ ದೇವರು ನೀಡಲಿ. ಇವತ್ತು ಕರಾಳ ದಿನ ಎಂದು ನಾನು ಭಾವಿಸುತ್ತೇನೆ ಎಂದು ಕೊಪ್ಪಳದಲ್ಲಿ ‌ಹಾಲಪ್ಪ ಆಚಾರ್ ದುಃಖ ವ್ಯಕ್ತಪಡಿಸಿದ್ದಾರೆ.

  • 29 Oct 2021 02:52 PM (IST)

    ಪುನೀತ್ ನಿಧನಕ್ಕೆ ಖ್ಯಾತ ಕ್ರಿಕೆಟಿಗರ ಕಂಬನಿ

    ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ. ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಆರ್.ವಿನಯ್ ಕುಮಾರ್‌ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

  • 29 Oct 2021 02:51 PM (IST)

    ಕಂಠೀರವ ಕ್ರೀಡಾಂಗಣದಲ್ಲಿ ಬಿಗಿ ಭದ್ರತೆ

    ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗುತ್ತಿದ್ದು, ಸ್ಥಳಕ್ಕೆ ಬೆಂಗಳೂರು ನಗರ ಡಿಸಿ ಮಂಜುನಾಥ್ ಆಗಮಿಸಿದ್ದಾರೆ. ಕೈಗೊಂಡಿರುವ ಸಿದ್ಧತೆಗಳ ಕುರಿತು ಅವರು ಪರಿಶೀಲಿಸುತ್ತಿದ್ದಾರೆ.

  • 29 Oct 2021 02:50 PM (IST)

    ಪುನೀತ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

    ಬೆಂಗಳೂರಿನ ಸದಾಶಿವನಗರದ ಮನೆಗೆ ಪುನೀತ್ ಅಂತಿಮ ದರ್ಶನಕ್ಕೆ ಹೂವುಗಳನ್ನು ತಂದು ಸಿದ್ಧತೆ ಮಾಡಲಾಗುತ್ತಿದೆ.

  • 29 Oct 2021 02:49 PM (IST)

    ಪುನೀತ್ ನಿವಾಸಕ್ಕೆ ಸುಮಲತಾ ಹಾಗೂ ದರ್ಶನ್ ಆಗಮನ

    ಪುನೀತ್ ನಿವಾಸಕ್ಕೆ ಬಂದ ಸಂಸದೆ ಸುಮಲತಾ ಹಾಗೂ ನಟ ದರ್ಶನ್ ಆಗಮಿಸಿದ್ದಾರೆ.

  • 29 Oct 2021 02:48 PM (IST)

    ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಾಪ

    ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಸಂತಾಪ ಸೂಚಿಸಿದ್ದಾರೆ.

  • 29 Oct 2021 02:47 PM (IST)

    ಪುನೀತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ; ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

    ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪುನೀತ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪುನೀತ್ ರಾಜ್‌ಕುಮಾರ್ ಕನ್ನಡಿಗರ ಮನೆ ಮಗನಂತಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

  • 29 Oct 2021 02:46 PM (IST)

    ನಮ್ಮ ಜೊತೆ ಮಗುವಿನಂತೆ ಇದ್ದ ಪುನೀತ್; ಉಮಾಶ್ರೀ ಕಂಬನಿ

    ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಉಮಾಶ್ರೀ ಸಂತಾಪ ವ್ಯಕ್ತಪಡಿಸಿದ್ದು, ನಟ ಪುನೀತ್ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಬಾಲನಟನಾಗಿದ್ದಾಗ ನಮ್ಮ ಜತೆ ಮಗುವಂತೆ ಇರುತ್ತಿದ್ದ. ಪುನೀತ್ ರಾಜ್‌ಕುಮಾರ್ ಸಾಧನೆ ಬಹಳ ದೊಡ್ಡದು ಎಂದು ದುಃಖ ವ್ಯಕ್ತಪಡಿಸಿದ್ದಾರೆ.

  • 29 Oct 2021 02:45 PM (IST)

    ಪುನೀತ್ ಅಗಲುವಿಕೆಗೆ ಕಂಬನಿ ಮಿಡಿದ ಡಿಕೆ ಶಿವಕುಮಾರ್

    ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ಪುನೀತ್ ಇನ್ನಿಲ್ಲವೆಂಬ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ರಾಜ್‌ಕುಮಾರ್ ನನ್ನ ಸಹೋದರನಂತೆ ಇದ್ದಂತೆ. ವಿಧಿ ಬಹಳ ಕ್ರೂರಿ. ಪುನೀತ್ ಅವರ ಅಗಲಿಕೆ ಕೇವಲ ಚಿತ್ರರಂಗಕ್ಕಷ್ಟೇ ಅಲ್ಲ. ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ಡಿಕೆಶಿ ಕಂಬನಿ ಮಿಡಿದಿದ್ದಾರೆ.

  • 29 Oct 2021 02:44 PM (IST)

    ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಸಂತಾಪ

    ನಟ ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಪುನೀತ್ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಪುನೀತ್ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಯುವರತ್ನನನ್ನು ಕಳೆದುಕೊಂಡ ಕರುನಾಡು ಬರಿದಾಗಿದೆ. ದೇವರು ಪುನೀತ್ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

  • 29 Oct 2021 02:41 PM (IST)

    ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಕೋಡಿಹಳ್ಳಿ ಚಂದ್ರಶೇಖರ್

    ಪ್ರತಿಭಾವಂತರಾದ ಪುನೀತ್, ಕಲೆಯಲ್ಲಿ ಅವರ ತಂದೆಯ ದಾರಿಯಲ್ಲಿ ಸಾಗುತ್ತಿದ್ದರು. ನಮಗಿಂತ ಚಿಕ್ಕವನು,ಕನ್ನಡದ ಮೇರು ಶಿಖರ ಏರಬೇಕೆಂದು ಬಯಕೆ ಇಟ್ಟುಕೊಂಡು ನಡೆಯುತ್ತಿದ್ದ ನಟ. ಪುನೀತ್ ಅಗಲಿಕೆಯಿಂದ ಇಡೀ ಕರ್ನಾಟಕಕ್ಕೆ ದುಃಖವಾಗಿದೆ. ನಾಡಿನ ರೈತರ ಪರವಾಗಿ ನಾವು ಸಂತಾಪ ಮಾಡಿದ್ದೇವೆ. ಅವರ ಕಲಾಕ್ಷೇತ್ರದ ಬೆಳವಣಿಗೆ, ಅವರ ಬದುಕು ಇನ್ನು ಬೇಕಾಗಿತ್ತು ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದಿದ್ದಾರೆ.

  • 29 Oct 2021 02:35 PM (IST)

    ತಂದೆಯ ಹಾದಿಯಲ್ಲೇ ಪುನೀತ್ ನೇತ್ರದಾನ

    ತಂದೆಯಂತೆ ತಾವೂ ಕೂಡ ನೇತ್ರದಾನ ಮಾಡುವ ಮೂಲಕ ಪುನೀತ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

  • 29 Oct 2021 02:34 PM (IST)

    ಸಂತಾಪ ಸೂಚಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

    ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ S.M.ಕೃಷ್ಣ ಸಂತಾಪ ಸೂಚಿಸಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಅವರು ಪುನೀತ್ ನಮ್ಮನ್ನು ಅಗಲಿರುವುದು ಅತ್ಯಂತ ದುಃಖದ ವಿಷಯ. ಸರಳ, ಸೌಜನ್ಯಕ್ಕೆ ಹೆಸರಾಗಿದ್ದ ಪುನೀತ್ ಅಗಲಿಕೆ ತುಂಬಲಾರದ ನಷ್ಟ ಎಂದು ದುಃಖ ವ್ಯಕ್ತಪಡಿಸಿದ್ಧಾರೆ.

  • 29 Oct 2021 02:32 PM (IST)

    ಇಹಲೋಕ ತ್ಯಜಿಸಿದ ಪುನೀತ್

    ನಟ ಪುನೀತ್ ಇಹಲೋಕ ತ್ಯಜಿಸಿದ್ದಾರೆ.

  • 29 Oct 2021 02:27 PM (IST)

    ಮಂಡ್ಯದಲ್ಲಿ ಸಿನಿಮಾ ಪ್ರದರ್ಶನ ರದ್ದು

    ನಟ ಪುನೀತ್ ರಾಜಕುಮಾರ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಪುನೀತ್ ಅಭಿಮಾನಿಗಳ ಕಣ್ಣೀರು ಹಾಕುತ್ತಿದ್ದಾರೆ. ಮಂಡ್ಯದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ.

  • 29 Oct 2021 02:21 PM (IST)

    ವಿಕ್ರಂ ಆಸ್ಪತ್ರೆಗೆ ಮಾಜಿ ಸಿಎಂ ಬಿಎಸ್​ವೈ ಭೇಟಿ

    ವಿಕ್ರಂ ಆಸ್ಪತ್ರೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿದ್ದಾರೆ.

  • 29 Oct 2021 02:20 PM (IST)

    ಪುನೀತ್ ನಿವಾಸಕ್ಕೆ ಯಶ್, ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಕಲಾವಿದರ ಭೇಟಿ

    ನಟ ಪುನೀತ್ ನಿವಾಸಕ್ಕೆ ಕಲಾವಿದರಾದ ಯಶ್, ರಾಕ್‌ಲೈನ್ ವೆಂಕಟೇಶ್, ಜಯಮಾಲಾ, ಅನುಪ್ರಭಾಕರ್ ಸೇರಿದಂತೆ ಹಲವರು ಆಗಮಿಸುತ್ತಿದ್ಧಾರೆ.

  • 29 Oct 2021 02:14 PM (IST)

    ಪುನೀತ್ ನಿವಾಸಕ್ಕೆ ಗೀತಾ ಶಿವರಾಜ್ ಕುಮಾರ್ ಭೇಟಿ

    ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಗೀತಾ ಶಿವರಾಜ್‌ಕುಮಾರ್ ಭೇಟಿ ನೀಡಿದ್ದಾರೆ.

  • 29 Oct 2021 02:10 PM (IST)

    ಪುನೀತ್ ನಿವಾಸದ ಬಳಿ ಸಂಚಾರ ಬದಲಾವಣೆಗೆ ಮುಂದಾದ ಪೊಲೀಸರು

    ಪುನೀತ ನಿವಾಸದ ಬಳಿಯಲ್ಲಿ ಸಂಚಾರ ಬದಲಾವಣೆಗೆ ಪೊಲೀಸರು ಮುಂದಾಗಿದ್ದಾರೆ. ಸ್ಥಳಕ್ಕೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಭೇಟಿ ನೀಡಿದ್ದಾರೆ.

  • 29 Oct 2021 02:09 PM (IST)

    ಕೊಪ್ಪಳ: ಪುನೀತ್ ಅನಾರೋಗ್ಯದ ಸುದ್ದಿ ಕೇಳಿ ಮೌನಕ್ಕೆ ಶರಣಾದ ಕೊಪ್ಪಳದ ಜನತೆ

    ಪುನೀತ್ ಅನಾರೋಗ್ಯದ​ ಸುದ್ದಿ ಕೇಳಿ ಕೊಪ್ಪಳ ಜನತೆ ಮೌನಕ್ಕೆ ಶರಣಾಗಿದ್ದಾರೆ. ಒಂದು ತಿಂಗಳ ಹಿಂದೆ ಕೊಪ್ಪಳದ ಪ್ರವಾಸಿ ತಾಣಗಳಿಗೆ ಅಪ್ಪು ಭೇಟಿ ಮಾಡಿದ್ದರು.

  • 29 Oct 2021 02:08 PM (IST)

    ಆಸ್ಪತ್ರೆಗೆ ಪುನೀತ್ ಪುತ್ರಿ ಆಗಮನ

    ನಟ ಪುನೀತ್‌ರಾಜ್‌ಕುಮಾರ್ ಆರೋಗ್ಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ, ವಿಕ್ರಂ ಆಸ್ಪತ್ರೆಗೆ ನಟ ಪುನೀತ್ ಪುತ್ರಿ ಆಗಮಿಸಿದ್ದಾರೆ.

  • 29 Oct 2021 02:07 PM (IST)

    ಆಸ್ಪತ್ರೆಯಿಂದ ನಿರ್ಗಮಿಸುತ್ತಿರುವ ಶಿವರಾಜ್ ಕುಮಾರ್

    ವಿಕ್ರಂ ಆಸ್ಪತ್ರೆಯಿಂದ ನಟ ಶಿವರಾಜ್​ ಕುಮಾರ್ ನಿರ್ಗಮಿಸಿದ್ಧಾರೆ.

  • 29 Oct 2021 02:03 PM (IST)

    ಪುನೀತ್ ಆರೋಗ್ಯದ ಕುರಿತು ವೈದ್ಯರ ಮಾಹಿತಿ

  • 29 Oct 2021 02:01 PM (IST)

    ಆಸ್ಪತ್ರೆ ಬಳಿ ಹೆಚ್ಚುವರಿಯಾಗಿ ಕೆಎಸ್​​ಆರ್​ಪಿ ವಾಹನಗಳ ಆಗಮನ

    ಆಸ್ಪತ್ರೆ ಬಳಿ ಹೆಚ್ಚುವರಿಯಾಗಿ ಕೆಎಸ್​​ಆರ್​ಪಿ ವಾಹನಗಳು ಆಗಮಿಸುತ್ತಿವೆ. ೧೦೦ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

  • 29 Oct 2021 02:00 PM (IST)

    ಗದಗ: ,ಮಾಲೀಕರಿಗೆ ಕೈಮುಗಿದು ಕೇಳಿಕೊಂಡು ಚಿತ್ರಮಂದಿರ ಬಂದ್ ಮಾಡಿಸಿದ ಅಭಿಮಾನಿಗಳು

    ನಟ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ, ಗದಗದಲ್ಲಿ ಚಿತ್ರಮಂದಿರ​ವನ್ನು ಅಭಿಮಾನಿಗಳು ಬಂದ್ ಮಾಡಿಸಿದ್ದಾರೆ. ಮಾಲೀಕರಿಗೆ ಕೈಮುಗಿದು ಬಂದ್ ಮಾಡುವಂತೆ ಅಭಿಮಾನಿಗಳು​ ಕೇಳಿಕೊಂಡು, ಬಂದ್ ಮಾಡಿಸಲಾಗಿದೆ.

  • 29 Oct 2021 01:59 PM (IST)

    ಪುನೀತ್ ಆರೋಗ್ಯ ಗಂಭೀರ ಹಿನ್ನೆಲೆ; ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

    ನಟ ಪುನೀತ್‌ರಾಜ್‌ಕುಮಾರ್ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರಿನಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಭದ್ರತೆಗಾಗಿ ಎಲ್ಲ ಪೊಲೀಸರನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಡಿಎಸ್‌ಪಿ, ಸಿಪಿಐ, ಪಿಐ, ಪಿಎಸ್‌ಐಗಳಿಗೆ ಸೂಚನೆ ನೀಡಲಾಗಿದೆ.

  • 29 Oct 2021 01:57 PM (IST)

    ಕೆಲವೇ ಹೊತ್ತಿನಲ್ಲಿ ಸಿಎಂ ಬೊಮ್ಮಾಯಿ ಹಾಗೂ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ

    ಕೆಲವೇ ಹೊತ್ತಿನಲ್ಲಿ ಸಿಎಂ ಬೊಮ್ಮಾಯಿ ನಟ ಶಿವರಾಜ್‌ಕುಮಾರ್ ಜತೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಬಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

  • 29 Oct 2021 01:56 PM (IST)

    ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

    ನಟ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ, ಸಾಗರದಿಂದ ಬೆಂಗಳೂರಿನತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಯಾಣ ಬೆಳೆಸಿದ್ದಾರೆ.

  • 29 Oct 2021 01:55 PM (IST)

    ಪುನೀತ್ ನಿವಾಸಕ್ಕೆ ಕಮಲ್ ಪಂತ್ ಭೇಟಿ

    ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ನೀಡಿದ್ದಾರೆ. ನಟ ಪುನೀತ್ ನಿವಾಸದ ಬಳಿ ಭದ್ರತೆಯ ಬಗ್ಗೆ ಕಮಲ್ ಪಂತ್ ಪರಿಶೀಲನೆ ನಡೆಸಿದ್ದಾರೆ. ಪುನೀತ್ ಮನೆಗೆ ನಟ ಯಶ್, ರಾಕ್‌ಲೈನ್ ವೆಂಕಟೇಶ್ ಭೇಟಿ ನೀಡಿದ್ಧಾರೆ.

  • 29 Oct 2021 01:52 PM (IST)

    ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ

    ವಿಕ್ರಂ ಆಸ್ಪತ್ರೆಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ಧಾರೆ.

  • 29 Oct 2021 01:51 PM (IST)

    ಪುನೀತ್ ಅಸ್ವಸ್ಥಗೊಂಡ ಹಿನ್ನೆಲೆ; ಬೆಳಗಾವಿಯಲ್ಲಿ ನಡೆಯುತ್ತಿದ್ದ ಕೆಎಂಎಫ್ ಕಾರ್ಯಕ್ರಮ ಸ್ಥಗಿತ

    ನಟ ಪುನೀತ್ ರಾಜಕುಮಾರ್ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ನಡೆಯುತ್ತಿದ್ದ ಕೆಎಂಎಫ್ ಕಾರ್ಯಕ್ರಮ ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಕೆಎಂಎಫ್ ಕಾರ್ಯಕ್ರಮ ಬೇಗ ಮುಗಿಸಲು ನಿರ್ದೇಶನ ಬಂದಿದೆ ಎಂದು ಬೆಳಗಾವಿಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಥಿ ನಿಲಯದ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯುತ್ತಿತ್ತು. ಪುನೀತ್ ರಾಜಕುಮಾರ್ ನಂದಿನಿ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅವರ ಆರೋಗ್ಯ ಕ್ಷೀಣ ಹಿನ್ನೆಲೆ ಕಾರ್ಯಕ್ರಮ ಮುಗಿಸುತ್ತಿದ್ದೇವೆ ಎಂದ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

  • 29 Oct 2021 01:49 PM (IST)

    ವಿಕ್ರಂ ಆಸ್ಪತ್ರೆಯ ಸುತ್ತ ಅವಧಿಗೂ ಮುನ್ನವೇ ಕಾಲೇಜು ಬಂದ್

    ನಟ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ, ವಿಕ್ರಂ ಆಸ್ಪತ್ರೆಯ ಸುತ್ತಮುತ್ತ ಬಿಗಿಭದ್ರತೆ ಇದ್ದು, ವಿಕ್ರಂ ಆಸ್ಪತ್ರೆ ಬಳಿಯ ಕಾಲೇಜ್ ಅವಧಿಗೂ ಮುನ್ನವೇ ಬಂದ್ ಮಾಡಲಾಗಿದೆ.

  • 29 Oct 2021 01:47 PM (IST)

    ಗದಗ: ಪುನೀತ್ ಅಸ್ವಸ್ಥಗೊಂಡ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರು; ಗುಣಮುಖರಾಗಲು ಪ್ರಾರ್ಥನೆ

    ಪುನೀತ್ ರಾಜಕುಮಾರ ಆರೋಗ್ಯ ಸ್ಥಿತಿ ಗಂಭೀರಗೊಂಡ ಸುದ್ದಿ ಕೇಳಿ ಗದಗದಲ್ಲಿ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಮಠದ ಆವರಣದಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಪುನೀತ್ ರಾಜಕುಮಾರ ಆರೋಗ್ಯ ಶೀಘ್ರ ಗುಣ ಮುಖವಾಗಲೀ ಎಂದು ಅವರು ಪ್ರಾರ್ಥಿಸಿದ್ದಾರೆ.

  • 29 Oct 2021 01:45 PM (IST)

    ಬಿಗಿ ಪೊಲೀಸ್ ಭದ್ರತೆ ನಿಯೋಜನೆ

    ನಟ ಪುನೀತ್ ರಾಜ್‌ಕುಮಾರ್ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಬೆಂಗಳೂರಿನ 8ನೇ ಮೈಲಿಯ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

  • 29 Oct 2021 01:44 PM (IST)

    ಆಸ್ಪತ್ರೆಗೆ ಭೇಟಿ ನೀಡಿದ ಸುಧಾರಾಣಿ, ಯೋಗರಾಜ್ ಭಟ್

    ವಿಕ್ರಂ ಆಸ್ಪತ್ರೆಗೆ ನಟಿ ಸುಧಾರಾಣಿ, ನಿರ್ದೇಶಕ ಯೋಗರಾಜ್‌ ಭಟ್ ಭೇಟಿ ನೀಡಿದ್ದಾರೆ.

  • 29 Oct 2021 01:42 PM (IST)

    ಪುನೀತ್ ಕುಟುಂಬಸ್ಥರ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ

    ರಾಜ್‌ಕುಮಾರ್ ಕುಟುಂಬಸ್ಥರ ಜತೆ ಸಿಎಂ ಮಾತುಕತೆ ನಡೆಸಿದ್ದಾರೆ. ಶಿವರಾಜ್‌ಕುಮಾರ್ ಜತೆ ಬೊಮ್ಮಾಯಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚರ್ಚಸಿಸುತ್ತಿದ್ದಾರೆ.

  • 29 Oct 2021 01:41 PM (IST)

    ಶಾಸಕ ಭೈರತಿ ಬಸವರಾಜ್ ಭೇಟಿ

    ಆಸ್ಪತ್ರೆಗೆ ಶಾಸಕ ಬೈರತಿ ಸುರೇಶ್ ಭೇಟಿ ನೀಡಿದ್ದಾರೆ.

  • 29 Oct 2021 01:40 PM (IST)

    ಪುನೀತ್ ಆರೋಈಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ: ಆಸ್ಪತ್ರೆ ವೈದ್ಯ ಡಾ.ರಂಗನಾಥ್ ಮಾಹಿತಿ

    ಪುನೀತ್ ರಾಜ್​​ಕುಮಾರ್ ಸ್ಥಿತಿ ತುಂಬಾ ಗಂಭೀರವಾಗಿದೆ. ಪುನೀತ್ ಆರೋಗ್ಯದ ಬಗ್ಗೆ ನಾವು ಏನೂ ಹೇಳಲಾಗಲ್ಲ ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ.ರಂಗನಾಥ್ ನಾಯಕ್ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 11.30ಕ್ಕೆ ನಟ ಪುನೀತ್​ ಆಸ್ಪತ್ರೆಗೆ ದಾಖಲಾಗಿದ್ದರು. ಪುನೀತ್​ ಆಸ್ಪತ್ರೆಗೆ ಬಂದಾಗಲೇ ಆರೋಗ್ಯ ಗಂಭೀರವಾಗಿತ್ತು. ತಕ್ಷಣವೇ ನಾವು ನಟ ಪುನೀತ್‌ಗೆ ಚಿಕಿತ್ಸೆ ಆರಂಭಿಸಿದ್ದೆವು. ಆದರೆ ಪುನೀತ್ ಆರೋಗ್ಯ ಬಗ್ಗೆ ನಾವು ಏನೂ ಹೇಳಲಾಗಲ್ಲ. ಅರ್ಧ ಗಂಟೆ ಬಳಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ.ರಂಗನಾಥ್ ನಾಯಕ್ ಹೇಳಿದ್ದಾರೆ.

  • 29 Oct 2021 01:39 PM (IST)

    ಆಸ್ಪತ್ರೆಗೆ ದರ್ಶನ್ ಭೇಟಿ

    ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಬಳಿ ಅಭಿಮಾನಿಗಳ ಜಮಾವಣೆ ಹಿನ್ನೆಲೆಯಲ್ಲಿ, ಮಿಲ್ಲರ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

  • 29 Oct 2021 01:38 PM (IST)

    ಗಾಜನೂರಿಗೆ ಹೋಗಿಬರಬೇಕು ಎಂದುಕೊಂಡಿದ್ದ ಪುನೀತ್

    ಇಂದು ಊರಾದ ಗಾಜನೂರಿಗೆ ಹೋಗಿ, ಸೋಮವಾರ ಬರೋದಾಗಿ ತಮ್ಮ ಆಪ್ತರ ಬಳಿ ಪುನೀತ್‌ ರಾಜ್‌ಕುಮಾರ್ ಹೇಳಿಕೊಂಡಿದ್ದರು.

  • 29 Oct 2021 01:36 PM (IST)

    ಆಸ್ಪತ್ರೆಯ ಮುಂದೆ ನಟಿ ಶೃತಿ ಕಣ್ಣಿರು

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರಗೊಂಡು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ವಿಕ್ರಂ ಆಸ್ಪತ್ರೆಗೆ ನಟಿ ಶೃತಿ ಭೇಟಿ ನೀಡಿದ್ದಾರೆ. ಅವರು ಕಣ್ಣೀರು ಹಾಕುತ್ತಲೇ ಆಸ್ಪತ್ರೆಯ ಒಳಗೆ ತೆರಳಿದ್ದಾರೆ.

  • 29 Oct 2021 01:35 PM (IST)

    ಆಸ್ಪತ್ರೆಯ ಮುಂದೆ ಜಮಾಯಿಸಿದ ಅಭಿಮಾನಿಗಳು

    ಆಸ್ಪತ್ರೆಯ ಬಳಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಸ್ಪತ್ರೆಯ ಬಳಿ ಅಭಿಮಾನಿಗಳು ಜಮಾಯಿಸುತ್ತಿದ್ದು, ಕಣ್ಣೀರು ಸುರಿಸುತ್ತಿದ್ಧಾರೆ.

  • 29 Oct 2021 01:34 PM (IST)

    ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟ ಪ್ರೇಮ್

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರಗೊಂಡ ಸುದ್ದಿ ಕೇಳಿ, ನನಗೆ ಶಾಕ್ ಆಗಿದೆ. ಹೀಗಾಗಿ ಕೂಡಲೇ ನಾನು ಬೆಂಗಳೂರಿಗೆ ಹೋಗ್ತಿದ್ದೇನೆ ಎಂದು ನಟ ಲವ್ಲಿ ಸ್ಟಾರ್ ಪ್ರೇಮ್ ಹೇಳಿಕೆ ನೀಡಿದ್ದಾರೆ.

  • 29 Oct 2021 01:33 PM (IST)

    ಪುನೀತ್ ಅಸ್ವಸ್ಥಗೊಂಡ ಮಾಹಿತಿ ಕೇಳಿ ದುಃಖ ವ್ಯಕ್ತಪಡಿಸಿದ ಮಾಸ್ಟರ್ ಆನಂದ್

    ಪುನೀತ್ ಆರೋಗ್ಯದ ಕುರಿತ ಮಾಹಿತಿಯಿಂದ ಆಘಾತಕ್ಕೊಳಗಾಗಿರುವ ನಟ ಮಾಸ್ಟರ್ ಆನಂದ್, ಏನು ಮಾತನಾಡಬೇಕೆಂದು ನನಗೆ ಗೊತ್ತಾಗುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

  • 29 Oct 2021 01:31 PM (IST)

    ವಿಕ್ರಂ ಆಸ್ಪತ್ರೆಯ ಮುಂಭಾಗ ಬ್ಯಾರಿಕೇಡ್ ಅಳವಡಿಕೆ

    ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಿಕ್ರಂ ಆಸ್ಪತ್ರೆಯ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

  • 29 Oct 2021 01:29 PM (IST)

    ಆಸ್ಪತ್ರೆಗೆ ಕಮಲ್ ಪಂತ್ ಭೇಟಿ

    ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ನೀಡಿದ್ದಾರೆ.

  • 29 Oct 2021 01:28 PM (IST)

    ವಿಕ್ರಂ ಆಸ್ಪತ್ರೆಯ ಮುಂಭಾಗ ವಾಹನ ಸಂಚಾರ ಬಂದ್

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಟ ಪುನೀತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಮುಂಭಾಗದ ರಾಜಭವನದಿಂದ ವಿಕ್ರಂ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

  • 29 Oct 2021 01:27 PM (IST)

    ಟ್ರಾಫಿಕ್ ಜಂಟಿ ಪೋಲಿಸ್ ಆಯುಕ್ತ ಟ್ರಾಫಿಕ್ ರವಿಕಾಂತೇಗೌಡ ಆಸ್ಪತ್ರೆಗೆ ಭೇಟಿ

    ಟ್ರಾಫಿಕ್ ಜಂಟಿ ಪೋಲಿಸ್ ಆಯುಕ್ತ ಟ್ರಾಫಿಕ್ ರವಿಕಾಂತೇಗೌಡ ವಿಕ್ರಂ ಆಸ್ಪತ್ರೆಗೆ ಆಗಮಿಸಿದ್ದಾರೆ.

  • 29 Oct 2021 01:26 PM (IST)

    ಆಸ್ಪತ್ರೆಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಆಗಮನ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ನಟ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ ಆಗಮಿಸಿದ್ದಾರೆ.

  • 29 Oct 2021 01:26 PM (IST)

    ಆಸ್ಪತ್ರೆಗೆ ಆಗಮಿಸಲಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡದಿ ತೋಟದ ಮನೆಯಿಂದ ವಿಕ್ರಂ ಆಸ್ಪತ್ರೆಗೆ ಆಗಮಿಸಲಿದ್ದಾರೆ.

  • 29 Oct 2021 01:23 PM (IST)

    ಆಸ್ಪತ್ರೆಗೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಆಗಮಿಸಲಿದ್ದಾರೆ.

  • 29 Oct 2021 01:22 PM (IST)

    ಕಣ್ಣೀರಿಡುತ್ತಿರುವ ಪುನೀತ್ ಕುಟುಂಬಸ್ಥರು; ನಾಗವಾರದಿಂದ ಆಗಮಿಸಲಿರುವ ಶಿವರಾಜ್ ಕುಮಾರ್

    ಪುನೀತ್ ಅಸ್ವಸ್ಥರಾಗಿರುವ ಸುದ್ದಿ ಕೇಳಿ ಕುಟುಂಬಸ್ಥರು ಕಣ್ಣೀರಿಡುತ್ತಲೇ ಆಗಮಿಸಿದ್ದಾರೆ. ತಮ್ಮನ ಆರೋಗ್ಯ ಮಾಹಿತಿ ತಿಳಿದು ಶಿವರಾಜ್ ಕುಮಾರ್ ನಾಗವಾರದಿಂದ ಆಗಮಿಸುತ್ತಿದ್ದಾರೆ.

  • 29 Oct 2021 01:20 PM (IST)

    ಆಸ್ಪತ್ರೆಗೆ ಯಶ್, ರಾಕ್​ಲೈನ್ ವೆಂಕಟೇಶ್ ಆಗಮನ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಆಸ್ಪತ್ರೆಯತ್ತ ಕಲಾವಿದರು, ನಿರ್ಮಾಪಕರು ದೌಡಾಯಿಸುತ್ತಿದ್ದಾರೆ. ನಟ ಯಶ್, ರಾಕ್ ಲೈನ್ ವೆಂಕಟೇಶ್ ಆಗಮಿಸಿದ್ದು, ರಾಕ್ ಲೈನ್ ವೆಂಕಟೇಶ್ ಕಣ್ಣೀರಿಡುತ್ತಲೇ ಬಂದಿದ್ದಾರೆ.

  • 29 Oct 2021 01:18 PM (IST)

    ಪುನೀತ್ ಆರೋಗ್ಯ ಚೇತರಿಕೆಗೆ ಮನವಿ ಮನಾಡೋಣ; ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮನವಿ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಪುನೀತ್ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡೋಣ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮನವಿ ಮಾಡಿದ್ದಾರೆ.

  • 29 Oct 2021 01:17 PM (IST)

    ವಿಕ್ರಂ ಆಸ್ಪತ್ರೆಗೆ ನಟ ರವಿಚಂದ್ರನ್ ಆಗಮನ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ನಟ ರವಿಚಂದ್ರನ್ ಭೇಟಿ ನೀಡಿದ್ದಾರೆ.

  • 29 Oct 2021 01:14 PM (IST)

    ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಆಗಮನ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಟ ಪುನೀತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ರಂ ಆಸ್ಪತ್ರೆಗೆ ಹಿರಿಯ ಪೊಲೀಸ್ ಆಧಿಕಾರಿಗಳು ಆಗಮಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಭೇಟಿ ನೀಡಿದ್ಧಾರೆ.

  • 29 Oct 2021 01:13 PM (IST)

    ಪುನೀತ್ ಮನೆಯ ಎರಡು ಕಡೆ ರಸ್ತೆ ಸಂಪೂರ್ಣ ಬ್ಲಾಕ್

    ಪುನೀತ್‌ರಾಜ್‌ಕುಮಾರ್ ಮನೆಯ ಎರಡು ಕಡೆ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದ್ದು, ವಾಹನ ಓಡಾಟ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪುನೀತ್‌ರಾಜ್‌ಕುಮಾರ್ ನಿವಾಸದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

  • 29 Oct 2021 01:12 PM (IST)

    ಜಿಮ್ ಮಾಡುವ ವೇಳೆ ಅಸ್ವಸ್ಥಗೊಂಡಿದ್ದ ಪುನೀತ್

    ಜಿಮ್ ಮಾಡುವ ವೇಳೆ ನಟ ಪುನೀತ್ ಅಸ್ವಸ್ಥರಾಗಿದ್ದರು. ಇಂದು ಬೆಳಗ್ಗೆ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ರಮಣಶ್ರೀ ಆಸ್ಪತ್ರೆಯಲ್ಲಿದ್ದಾಗ ಪುನೀತ್ ಸ್ಥಿತಿ ಗಂಭೀರವಾಗಿದ್ದು, ಬಳಿಕ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 29 Oct 2021 01:10 PM (IST)

    ಹೆಚ್ಚುವರಿ ಪೋಲಿಸ್ ಆಯುಕ್ತ ಮುರುಗನ್ ಆಗಮನ

    ಹೆಚ್ಚುವರಿ ಪೋಲಿಸ್ ಆಯುಕ್ತ ಮುರುಗನ್ ಆಗಮನ ವಿಕ್ರಮ್ ಆಸ್ಪತ್ರೆಗೆ ಆಗಮಿಸಿದ್ಧಾರೆ. ಈಗಾಗಲೇ ವಿಕ್ರಮ್ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮಿಲ್ಲರ್ಸ್ ರೋಡ್ ಸಂಚಾರ ಬಂದ್ ಮಾಡಿದ ಪೊಲೀಸರು, ಬ್ಯಾರಿಕೇಡ್ ಹಾಕಿ ಭದ್ರತಾ ಕ್ರಮ ಕೈಗೊಂಡಿದ್ದಾರೆ.

  • 29 Oct 2021 01:07 PM (IST)

    ಆಸ್ಪತ್ರೆಗೆ ಆಗಮಿಸಿದ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ

    ನಟ​​ ಪುನೀತ್​ ರಾಜ್​ಕುಮಾರ್​ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶಿವರಾಜ್​​ ಕುಮಾರ್​ ಪುತ್ರಿ ನಿವೇದಿತಾ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಭಜರಂಗಿ-2 ಚಿತ್ರ ವೀಕ್ಷಿಸುತ್ತಿದ್ದ ನಿವೇದಿತಾ, ಧೀರನ್ ಚಿತ್ರವೀಕ್ಷಣೆ ಅರ್ಧಕ್ಕೇ ಬಿಟ್ಟು ಆಸ್ಪತ್ರೆಗೆ ಬಂದಿದ್ದಾರೆ.

  • 29 Oct 2021 01:05 PM (IST)

    ಪುನೀತ್ ಆರೋಗ್ಯದ ಕುರಿತ ಮಾಹಿತಿ ಇಲ್ಲಿ ಲಭ್ಯವಿದೆ

  • Published On - Oct 29,2021 1:00 PM

    Follow us
    ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
    ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
    ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
    ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
    ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
    ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
    ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ