Puneeth Rajkumar: ಪುನೀತ್​ ಆಸ್ಪತ್ರೆಗೆ ಹೊರಟಾಗ ಮನೆಯಲ್ಲಿ ಮೂಡಿತ್ತು ಆತಂಕದ ವಾತಾವರಣ; ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

| Updated By: Digi Tech Desk

Updated on: Nov 02, 2021 | 3:15 PM

Puneeth Rajkumar House CCTV Footage: ಸಿಸಿಟಿವಿ ದೃಶ್ಯವಾಳಿಗಳಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಮೊದಲು ಮನೆಯಿಂದ ಹೊರ ಬಂದು ಕಾಯುತ್ತಿರುತ್ತಾರೆ. ಇದಾದ ಬೆನ್ನಲ್ಲೇ ಅವರ ಪತ್ನಿ ಮನೆಯಿಂದ ಹೊರ ಬರುತ್ತಾರೆ.

Puneeth Rajkumar: ಪುನೀತ್​ ಆಸ್ಪತ್ರೆಗೆ ಹೊರಟಾಗ ಮನೆಯಲ್ಲಿ ಮೂಡಿತ್ತು ಆತಂಕದ ವಾತಾವರಣ; ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ
ಪುನೀತ್​
Follow us on

ಪುನೀತ್​ ರಾಜ್​ಕುಮಾರ್ (Puneeth Rajkumar)​ ಮೃತಪಟ್ಟು ಐದು ದಿನಗಳು ಕಳೆದಿವೆ. ಇಂದು (ನವೆಂಬರ್​ 2) ಅವರ ಸಮಾಧಿಗೆ ಹಾಲುತುಪ್ಪ ಬಿಡುವ ಕಾರ್ಯ ಕೂಡ ನಡೆದಿದೆ. ಅವರನ್ನು ಕಳೆದುಕೊಂಡು ಇಷ್ಟು ದಿನವಾದರೂ ಅಭಿಮಾನಿಗಳ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಅವರು ಕಂಡಿದ್ದ ಕನಸು ಅವರ ಜತೆಗೆ ಮಣ್ಣಾಗಿದೆ. ಇದು ಸಾಕಷ್ಟು ನೋವು ತರಿಸಿದೆ. ಪುನೀತ್​ (Puneeth) ಮೃತಪಡುವ ದಿನ ಬೆಳಗ್ಗೆ ಜಿಮ್​ ಮಾಡಿದ್ದರು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಅವರು ಜಿಮ್​ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಈ ಗೊಂದಲಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಮಧ್ಯೆ ಅವರು ಆಸ್ಪತ್ರೆಗೆ ತೆರಳುವುದಕ್ಕೂ ಮೊದಲು ಮನೆಯಿಂದ ಕಾರು ಹತ್ತಿ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಈಗ ಟಿವಿ9ಗೆ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪುನೀತ್​ ರಾಜ್​ಕುಮಾರ್ (Puneeth Rajkumar House CCTV Footage)​ ಅವರು ಮೊದಲು ಮನೆಯಿಂದ ಹೊರ ಬಂದು ಕಾಯುತ್ತಿರುತ್ತಾರೆ. ಇದಾದ ಬೆನ್ನಲ್ಲೇ ಅವರ ಪತ್ನಿ ಮನೆಯಿಂದ ಹೊರ ಬರುತ್ತಾರೆ. ಇಬ್ಬರೂ ಕಾರು ಏರಿ ಮನೆಯಿಂದ ಹೊರಡುತ್ತಾರೆ. ಕಾರು ಹೊರಡುತ್ತಿದ್ದಂತೆ ಸೆಕ್ಯುರಿಟಿ ಸಿಬ್ಬಂದಿ ಮನೆಯ ಗೇಟ್​ ತೆರೆಯುತ್ತಾರೆ. ಇದಿಷ್ಟು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ. ಈ ದೃಶ್ಯಗಳಲ್ಲಿ ಎಲ್ಲರೂ ಆತಂಕ ಗೊಂಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.

ಇತ್ತೀಚೆಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದ ಪುನೀತ್​ ಅಂಗರಕ್ಷಕ ಛಲಪತಿ ಅವರು ಇದೇ ಘಟನೆಯನ್ನು ವಿವರಿಸಿದ್ದರು. ‘ಅಕ್ಕ (ಪುನೀತ್​ ಪತ್ನಿ ಅಶ್ವಿನಿ) ಮತ್ತು ಪುನೀತ್​ ಹೊರಹೋಗುತ್ತಿದ್ದೇವೆ ಎಂದರು. ನಾನು ಕಾರು ಹತ್ತಿಸಿ ನಾನೂ ಹತ್ತೋಕೆ ಹೋದೆ. ನೀವು ಇಲ್ಲೇ ಇರಿ ನಾವು ಬರುತ್ತೇವೆ ಎಂದು ಬಾಸ್​ ಹೇಳಿದರು. ಹಾಗಾಗಿ ನಾನು ಮನೆಯಲ್ಲೇ ಇದ್ದೆ. ನಂತರ ಅವರು ಬರಲೇ ಇಲ್ಲ’ ಎಂದು ಕಣ್ಣೀರು ಹಾಕಿದ್ದರು. ಸಿಸಿಟಿವಿ ದೃಶ್ಯಾವಳಿಗಳಿಗೂ ಛಲಪತಿ ಹೇಳಿದ ಮಾತಿಗೂ ತಾಳೆ ಆಗಿದೆ.

ಇನ್ನು, ಪುನೀತ್​ ಆಸ್ಪತ್ರೆಗೆ ಬಂದಾಗ ಸಹಜವಾಗಿದ್ದರು ಎಂದು ವೈದ್ಯರು ತಿಳಿಸಿದ್ದರು. ಸಿಸಿಟಿವಿ ದೃಶ್ಯಗಳಲ್ಲೂ ಅವರು ಸಹಜವಾಗಿದ್ದಿದ್ದು ಕಂಡು ಬಂದಿತ್ತು. ಆದರೆ ಎಲ್ಲರೂ ತರಾತುರಿಯಲ್ಲಿದ್ದರು. ‘ಪುನೀತ್ ಅವರು ತಮ್ಮ ನಿಯಮಿತ ಜಿಮ್ ಸೆಷನ್ ಅನ್ನು ಪೂರ್ಣಗೊಳಿಸಿ, ನಂತರ ಬಾಕ್ಸಿಂಗ್ ಮತ್ತು ಸ್ಟೀಮ್ ಸೆಷನ್​ ಪೂರ್ಣಗೊಳಿಸಿದರು. ಇದಾದ ನಂತರ ಅವರಿಗೆ ತುಂಬಾನೇ ದಣಿವಾದಂತೆ ಭಾಸವಾಗಿತ್ತು. ತೀವ್ರ ಹೃದಯ ಸ್ತಂಭನದಿಂದ ಅವರು ಮೃತಪಟ್ಟಿರಬಹುದು. ಏಕಾಏಕಿ ಈ ರೀತಿ ಸಾವು ಸಂಭವಿಸುವ ಸಾಧ್ಯತೆ ದೈಹಿಕ ಚಟುವಟಿಕೆಯ ಸಮಯದಲ್ಲಿ, ಆಟ ಆಡುವ ಸಂದರ್ಭದಲ್ಲಿ ಅಥವಾ ದೈಹಿಕವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚಿರುತ್ತದೆ’ ಎಂದು ಡಾ. ರಮಣ್ ರಾವ್​ ಹೇಳಿದ್ದರು​.

ಇದನ್ನೂ ಓದಿ: ‘ಪುನೀತ್ ಜಿಮ್​ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ

Published On - 2:36 pm, Tue, 2 November 21