AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೇಮ್ಸ್​’ ಸಿನಿಮಾ ಬಗ್ಗೆ ಹರಡಿದೆ ಹಲವು ಗಾಸಿಪ್​; ಎಲ್ಲದಕ್ಕೂ ನಿರ್ಮಾಪಕರಿಂದಲೇ ಬಂತು ಸೂಕ್ತ ಸ್ಪಷ್ಟನೆ

ಪುನೀತ್​ ರಾಜ್​ಕುಮಾರ್​ ನಟನೆಯ ‘ಜೇಮ್ಸ್​’ ಸಿನಿಮಾ ಬಗ್ಗೆ ಕೆಲವು ಗಾಸಿಪ್​ ಹಬ್ಬಿದೆ. ‘ದಯವಿಟ್ಟು ಅನಧಿಕೃತವಾದಂತಹ ಸಂದೇಶಗಳಿಗೆ ಕಿವಿಗೊಡಬೇಡಿ’ ಎಂದು ನಿರ್ಮಾಪಕರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ಜೇಮ್ಸ್​’ ಸಿನಿಮಾ ಬಗ್ಗೆ ಹರಡಿದೆ ಹಲವು ಗಾಸಿಪ್​; ಎಲ್ಲದಕ್ಕೂ ನಿರ್ಮಾಪಕರಿಂದಲೇ ಬಂತು ಸೂಕ್ತ ಸ್ಪಷ್ಟನೆ
‘ಜೇಮ್ಸ್’ ಸಿನಿಮಾ
TV9 Web
| Updated By: ಮದನ್​ ಕುಮಾರ್​|

Updated on: Feb 26, 2022 | 1:22 PM

Share

ಈ ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾಗಳ ಪೈಕಿ ‘ಜೇಮ್ಸ್​’ (James Kannada Movie) ಚಿತ್ರಕ್ಕೆ ಮೊದಲ ಸ್ಥಾನ ಇದೆ ಎಂದರೂ ತಪ್ಪಿಲ್ಲ. ಅಷ್ಟರಮಟ್ಟಿಗೆ ಈ ಸಿನಿಮಾ ಕ್ರೇಜ್​ ಸೃಷ್ಟಿ ಮಾಡಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಎಂಬ ಕಾರಣದಿಂದಲೂ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ವಿಶೇಷವಾದ ನಿರೀಕ್ಷೆ ಇದೆ. ಅದರಲ್ಲೂ ಟೀಸರ್​ ಬಿಡುಗಡೆ ಆದ ಬಳಿಕ ‘ಜೇಮ್ಸ್​’ ಮೇಲಿದ್ದ ಕೌತುಕ ದುಪ್ಪಟ್ಟಾಯಿತು. ಈಗ ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಚಂದನವನದ ಯಶಸ್ವಿ ನಿರ್ದೇಶಕ ಚೇತನ್​ ಕುಮಾರ್​ ಅವರು ಆ್ಯಕ್ಷನ್​-ಕಟ್​ ಹೇಳಿರುವ ಈ ಸಿನಿಮಾದ ಪ್ರಚಾರ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಬಿಡುಗಡೆಗೂ ಮೊದಲು ಒಂದು ಅದ್ದೂರಿ ಕಾರ್ಯಕ್ರಮ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಆದರೆ ಆ ಪ್ರೀ-ರಿಲೀಸ್​ (James Movie Pre-Release Event) ಕಾರ್ಯಕ್ರಮದ ಬಗ್ಗೆ ಕೆಲವು ಗಾಸಿಪ್​ಗಳು ಹಬ್ಬಿದೆ. ಕೇಳಿಬಂದಿರುವ ಎಲ್ಲ ಅಂತೆ-ಕಂತೆಗಳಿಗೆ ಈಗ ಸ್ವತಃ ಈ ಚಿತ್ರದ ನಿರ್ಮಾಪಕರಿಂದ ಸ್ಪಷ್ಟನೆ ಸಿಕ್ಕಿದೆ. ಆ ಮೂಲಕ ಎಲ್ಲ ಗಾಸಿಪ್​ಗಳಿಗೆ ತೆರೆ ಎಳೆಯಲಾಗಿದೆ.

ಚಂದನವನದಲ್ಲಿ ಪ್ರೀ-ರಿಲೀಸ್​ ಇವೆಂಟ್​ನ ಟ್ರೆಂಡ್​ ಜೋರಾಗಿದೆ. ಸಿನಿಮಾದ ಬಿಡುಗಡೆಗೂ ಮುನ್ನ ವಿಶೇಷ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಒಂದು ದೊಡ್ಡ ಕಾರ್ಯಕ್ರಮ ಮಾಡುವ ಪದ್ಧತಿಯನ್ನು ಎಲ್ಲ ಚಿತ್ರತಂಡಗಳು ಫಾಲೋ ಮಾಡುತ್ತಿವೆ. ಅದೇ ರೀತಿ ‘ಜೇಮ್ಸ್​’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಕೂಡ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಆದರೆ ಈ ಕಾರ್ಯಕ್ರಮದ ಸ್ಥಳ, ದಿನಾಂಕ ಮತ್ತು ಅತಿಥಿಗಳ ಕುರಿತು ಕೆಲವು ಅಂತೆ-ಕಂತೆಗಳು ಹಬ್ಬಿವೆ. ಅವುಗಳನ್ನು ನಿರ್ಮಾಪಕರು ತಳ್ಳಿ ಹಾಕಿದ್ದಾರೆ.

‘ಎಲ್ಲರಿಗೂ ನಮಸ್ಕಾರ.. ನಮ್ಮ ಜೇಮ್ಸ್​ ಸಿನಿಮಾದ ಸ್ಥಳ, ದಿನಾಂಕ ಹಾಗೂ ಅತಿಥಿಗಳ ಬಗ್ಗೆ ಪರಿಪೂರ್ಣವಾದಂತಹ ಮಾಹಿತಿಯನ್ನು ಹಾಗೂ ಮುಂಬರುವ ಎಲ್ಲ ಕಾರ್ಯಕ್ರಮದ ಮಾಹಿತಿಯನ್ನು ಚಿತ್ರತಂಡ ಆದಷ್ಟು ಬೇಗ ಹೊರಹಾಕಲಿದೆ. ದಯವಿಟ್ಟು ಅನಧಿಕೃತವಾದಂತಹ ಸಂದೇಶಗಳಿಗೆ ಕಿವಿಗೊಡಬೇಡಿ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಆಶೀರ್ವಾದ ಸದಾ ನಮಗೆ ಶ್ರೀರಕ್ಷೆ’ ಎಂದು ಕಿಶೋರ್​ ಪ್ರೊಡಕ್ಷನ್ಸ್​ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ.

ಮಾ.1ರಂದು ‘ಜೇಮ್ಸ್’ ಮೊದಲ ರಿಲಿಕಲ್​ ವಿಡಿಯೋ:

‘ಜೇಮ್ಸ್’ ಸಿನಿಮಾದ ಪೋಸ್ಟರ್​ ಮತ್ತು ಟೀಸರ್​ ಕಂಡು ಫ್ಯಾನ್ಸ್​ ಈಗಾಗಲೇ ಫಿದಾ ಆಗಿದ್ದಾರೆ. ಈಗ ಈ ಚಿತ್ರದ ಮೊದಲ ಲಿರಿಕಲ್​ ಸಾಂಗ್​ ನೋಡುವ ಸಮಯ ಹತ್ತಿರವಾಗಿದೆ. ಅದಕ್ಕಾಗಿ ದಿನಾಂಕ ಕೂಡ ಫಿಕ್ಸ್​ ಆಗಿದೆ. ನಿರ್ದೇಶಕ ಚೇತನ್​ ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಜೇಮ್ಸ್​’ ಚಿತ್ರದ ‘ಟ್ರೇಡ್​ಮಾರ್ಕ್​’ ಹಾಡಿನ ಲಿರಿಕಲ್​ ವಿಡಿಯೋ ಮಾ.1ರಂದು ಬೆಳಗ್ಗೆ 11.11ಕ್ಕೆ ಬಿಡುಗಡೆ ಆಗಲಿದೆ. ಈ ವಿಷಯವನ್ನು ‘ಪಿಆರ್​ಕೆ ಆಡಿಯೋ’ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ತಿಳಿಸಲಾಗಿದೆ. ಮೊದಲ ರಿಲಿಕಲ್​ ವಿಡಿಯೋ ನೋಡಲು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮಾ.17ರಂದು ಪುನೀತ್​ ಜನ್ಮದಿನ. ಆ ಪ್ರಯುಕ್ತ ‘ಜೇಮ್ಸ್​’ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

James: ‘ಜೇಮ್ಸ್​​ನಲ್ಲಿ ಅಪ್ಪುನ ಕಣ್ತುಂಬ ನೋಡಬೇಕು’; ಮನದಿಂಗಿತ ಹೇಳಿಕೊಂಡ ವಿಜಯ್ ರಾಘವೇಂದ್ರ

‘ಜೇಮ್ಸ್​ ಚಿತ್ರವನ್ನು ನಾನು ಪ್ರಚಾರ ಮಾಡಿದ್ರೆ ತುಂಬಾ ಚೀಪ್​ ಆಗತ್ತೆ, ಅದನ್ನು ಅಭಿಮಾನಿಗಳು ನೋಡಿಕೊಳ್ತಾರೆ’

ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ