‘ಜೇಮ್ಸ್​’ ಮೊದಲ ಲಿರಿಕಲ್​ ಸಾಂಗ್​ ‘ಟ್ರೇಡ್​ಮಾರ್ಕ್​’ ಬಿಡುಗಡೆಗೆ ದಿನಾಂಕ ನಿಗದಿ; ಹೆಚ್ಚಿತು ಫ್ಯಾನ್ಸ್​ ಕಾತರ

| Updated By: ಮದನ್​ ಕುಮಾರ್​

Updated on: Feb 26, 2022 | 12:19 PM

James Trademark lyrical Video: ‘ಜೇಮ್ಸ್​’ ಚಿತ್ರದ ‘ಟ್ರೇಡ್​ಮಾರ್ಕ್​’ ಹಾಡಿನ ಲಿರಿಕಲ್​ ವಿಡಿಯೋ ಮಾ.1ರಂದು ಬೆಳಗ್ಗೆ 11.11ಕ್ಕೆ ಬಿಡುಗಡೆ ಆಗಲಿದೆ. ಅದಕ್ಕಾಗಿ ಸಿನಿಪ್ರಿಯರು ಕಾದಿದ್ದಾರೆ.

‘ಜೇಮ್ಸ್​’ ಮೊದಲ ಲಿರಿಕಲ್​ ಸಾಂಗ್​ ‘ಟ್ರೇಡ್​ಮಾರ್ಕ್​’ ಬಿಡುಗಡೆಗೆ ದಿನಾಂಕ ನಿಗದಿ; ಹೆಚ್ಚಿತು ಫ್ಯಾನ್ಸ್​ ಕಾತರ
ಪುನೀತ್​ ರಾಜ್​ಕುಮಾರ್
Follow us on

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿನಯದ ‘ಜೇಮ್ಸ್​’ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ಮತ್ತು ಟೀಸರ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಈಗ ಈ ಚಿತ್ರದ ಮೊದಲ ಲಿರಿಕಲ್​ ಸಾಂಗ್​ ನೋಡುವ ಸಮಯ ಹತ್ತಿರವಾಗಿದೆ. ಅದಕ್ಕಾಗಿ ದಿನಾಂಕ ಕೂಡ ಫಿಕ್ಸ್​ ಆಗಿದೆ. ನಿರ್ದೇಶಕ ಚೇತನ್​ ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಜೇಮ್ಸ್​’ (James Kannada Movie) ಚಿತ್ರದ ‘ಟ್ರೇಡ್​ಮಾರ್ಕ್​’ ಹಾಡಿನ ಲಿರಿಕಲ್​ ವಿಡಿಯೋ ಮಾ.1ರಂದು ಬೆಳಗ್ಗೆ 11.11ಕ್ಕೆ ಬಿಡುಗಡೆ ಆಗಲಿದೆ. ಈ ವಿಷಯವನ್ನು ‘ಪಿಆರ್​ಕೆ ಆಡಿಯೋ’ (PRK Audio) ಸೋಶಿಯಲ್​ ಮೀಡಿಯಾ ಖಾತೆ ಮೂಲಕ ತಿಳಿಸಲಾಗಿದೆ. ಮೊದಲ ರಿಲಿಕಲ್​ ವಿಡಿಯೋ ನೋಡಲು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮಾ.17ರಂದು ಪುನೀತ್​ ಜನ್ಮದಿನ. ಆ ಪ್ರಯುಕ್ತ ‘ಜೇಮ್ಸ್​’ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಭರ್ಜರಿ ಆ್ಯಕ್ಷನ್​ ಮೆರೆದಿದ್ದಾರೆ ಎಂಬುದಕ್ಕೆ ಈಗಾಗಲೇ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ನಂತರ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳ ಮನಗೆಲ್ಲಲಾಯಿತು. 1 ನಿಮಿಷ 27 ಸೆಕೆಂಡ್​ಗಳ ಟೀಸರ್​ನಲ್ಲಿ ‘ಜೇಮ್ಸ್​​’ ಪಾತ್ರದ ಒಂದು ಸಣ್ಣ ಪರಿಚಯ ನೀಡಲಾಗಿತ್ತು. ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದೆ ಎಂಬುದನ್ನು ಟೀಸರ್ ನೋಡಿದ ಯಾರಾದರೂ ಊಹಿಸಬಹುದು. ಈ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಶಿವರಾಜ್​ಕುಮಾರ್​ ಕಂಠದಾನ ಮಾಡಿದ್ದು, ಒಂದು ಪವರ್​ಫುಲ್ ಡೈಲಾಗ್ ಕೂಡ ಟೀಸರ್​ನಲ್ಲಿ ಹೈಲೈಟ್​ ಆಗಿದೆ. ‘ಭಾವನೆಗಳು ಬ್ಯುಸಿನೆಸ್​ಗಿಂತ ದೊಡ್ಡದು- ಜೇಮ್ಸ್’ ಎಂಬ ಬರಹವನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಡಾರ್ಕ್ ಮಾರ್ಕೆಟ್ ಕುರಿತ ಕತೆಯನ್ನು ಚಿತ್ರ ಒಳಗೊಂಡಿರಲಿದೆ ಎಂಬ ಸುಳಿವೂ ಕೂಡ ಟೀಸರ್​ ಮೂಲಕ ಸಿಕ್ಕಿದೆ. ಇಷ್ಟೆಲ್ಲ ಅಂಶಗಳನ್ನು ಹೊಂದಿರುವ ಟೀಸರ್​ ಮೋಡಿ ಮಾಡುತ್ತಿದೆ. ಈಗ ಲಿರಿಕಲ್​ ವಿಡಿಯೋ ಹೇಗಿರಲಿದೆ ಎಂಬುದನ್ನು ನೋಡುವ ಸಮಯ ಸಮೀಪ ಆಗಿದೆ.

ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ‘ಜೇಮ್ಸ್​​’ಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಮೊದಲಾದವರು ಬಣ್ಣಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರುವುದು ಖಚಿತವಾಗಿದ್ದು, ಕೊನೇ ಹಂತದ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

ಪುನೀತ್​-ರಾಜೇಶ್​ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ

Published On - 12:03 pm, Sat, 26 February 22