James: ಪುನೀತ್ ಧ್ವನಿಯಲ್ಲಿಯೇ ಪ್ರದರ್ಶನ ಕಾಣಲಿದೆ ‘ಜೇಮ್ಸ್’; ಹೇಗೆ? ಎಂದಿನಿಂದ? ಅಪ್ಪು ಅಭಿಮಾನಿಗಳಿಗಿದು ಖುಷಿಯ ವಿಚಾರ

| Updated By: shivaprasad.hs

Updated on: Apr 17, 2022 | 8:16 PM

Puneeth Rajkumar | Chetan Kumar: ಪುನೀತ್ ರಾಜ್​ಕುಮಾರ್ ನಟನೆಯ ‘ಜೇಮ್ಸ್’ ಚಿತ್ರವು ತೆರೆಕಂಡು 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿದೆ. ಈ ಸಂದರ್ಭ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದು, ಪುನೀತ್ ಧ್ವನಿಯಲ್ಲಿಯೇ ‘ಜೇಮ್ಸ್’ ಚಿತ್ರವನ್ನು ಪ್ರದರ್ಶಿಸುವುದಾಗಿ ಹೇಳಿದೆ.

James: ಪುನೀತ್ ಧ್ವನಿಯಲ್ಲಿಯೇ ಪ್ರದರ್ಶನ ಕಾಣಲಿದೆ ‘ಜೇಮ್ಸ್’; ಹೇಗೆ? ಎಂದಿನಿಂದ? ಅಪ್ಪು ಅಭಿಮಾನಿಗಳಿಗಿದು ಖುಷಿಯ ವಿಚಾರ
ಪುನೀತ್ ರಾಜ್​ಕುಮಾರ್
Follow us on

ಬೆಂಗಳೂರು: ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ (James Movie) ಚಿತ್ರ ಮಾರ್ಚ್ 17ರಂದು ತೆರೆಕಂಡಿತ್ತು. ಪುನೀತ್ ನಾಯಕರಾಗಿ ನಟಿಸಿದ್ದ ಕೊನೆಯ ಚಿತ್ರ ಅವರ ಜನ್ಮದಿನದಂದು ರಿಲೀಸ್ ಆಗಿದ್ದಲ್ಲದೇ, ಅಭಿಮಾನಿಗಳಿಂದ ಪ್ರೀತಿಯ ಸ್ವಾಗತ ಪಡೆದುಕೊಂಡಿತ್ತು. ಇದೀಗ ಚಿತ್ರವು ತೆರೆಕಂಡು 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿದೆ. ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ ‘ಜೇಮ್ಸ್’ ಚಿತ್ರವನ್ನು ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದರು. ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದರು. ಏಪ್ರಿಲ್ 14ರಂದು ‘ಜೇಮ್ಸ್’ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಅದಾಗ್ಯೂ ಕೂಡ 50 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಜೇಮ್ಸ್ ಸಿನಿಮಾ ಈಗಲೂ ಪ್ರದರ್ಶನವಾಗುತ್ತಿದೆ. ಇದೀಗ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ಅಪ್ಪು ನಟಿಸಿದ್ದ ಜೇಮ್ಸ್ ಚಿತ್ರದ ಪಾತ್ರಕ್ಕೆ ಪುನೀತ್ ಅವರ ಧ್ವನಿಯನ್ನು ಸೇರಿಸಲಾಗುತ್ತಿದೆ. ಪುನೀತ್ ಅವರ ಧ್ವನಿಯಲ್ಲಿಯೇ ‘ಜೇಮ್ಸ್’ ಪ್ರದರ್ಶನ ಕಾಣಲಿದೆ.

ತಂತ್ರಜ್ಞಾನ ಬಳಸಿ ಇಂತದ್ದೊಂದು ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ. ಇದೇ ಶುಕ್ರವಾರದಿಂದ ಅಭಿಮಾನಿಗಳು ಹೊಸ ರೂಪದಲ್ಲಿ ಜೇಮ್ಸ್ ಅನ್ನು ಕಣ್ತುಂಬಿಕೊಳ್ಳಬಹುದು. ಏಪ್ರಿಲ್ 22ರಿಂದ ಅಪ್ಪು ಧ್ವನಿಯನ್ನು ‘ಜೇಮ್ಸ್’ ಚಿತ್ರಕ್ಕೆ ಸೇರಿಸಲಾಗುತ್ತಿದ್ದು, ಅಂದಿನಿಂದ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ‘ಜೇಮ್ಸ್’ ಲಭ್ಯವಾಗಲಿದೆ. ಈ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಜೇಮ್ಸ್ ಚಿತ್ರಕ್ಕೆ ಪುನೀತ್ ಧ್ವನಿ ನೀಡಿದ್ದು ಹೇಗೆ?

ವಾಯ್ಸ್ ಮಿಕ್ಸಿಂಗ್ ತಂತ್ರಜ್ಞ ಅಪ್ಪು ಮಾತನಾಡುತ್ತಾ ಇದರ ಹಿಂದಿನ ಹಿನ್ನೆಲೆಯನ್ನು ತೆರೆದಿಟ್ಟಿದ್ದಾರೆ. ‘‘ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ರೀಸರ್ಚ್ ಮಾಡುತ್ತಿದ್ದೆವು. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಅದೇ ಕಲಾವಿದರ ವಾಯ್ಸ್ ಇದ್ರೆ ಹೇಗಿರುತ್ತೆ ಅಂತ ಟ್ರೈ ಮಾಡುತ್ತಿದ್ದೆವು. ಶ್ರೀಕಾಂತ್ ಸರ್ ಹೇಳಿದ್ರು, ಜೇಮ್ಸ್‌ ಸಿನಿಮಾ ಬಗ್ಗೆ ಪರಿಸ್ಥಿತಿಯ ಬಗ್ಗೆ.. ಆಗ ನಾವು ಈ ಪ್ರಯತ್ನಕ್ಕೆ ಕೈ ಹಾಕಿದೆವು.’’

‘‘ಸಿನಿಮಾ ರಿಲೀಸ್​ಗೂ ಮೊದಲೇ ಕೇಳಿದ್ದರು. ಆದರೆ ಆ ಸಮಯದಲ್ಲಿ ಅದನ್ನು ಮಾಡೋಕೆ ಸಾಧ್ಯವಾಗಲಿಲ್ಲ. ಕಾರಣ ನಾವು ಆಗಷ್ಟೇ ಪ್ರಯತ್ನ ನಡೆಸುತ್ತಿದ್ದೆವು. ಹಾಗಾಗಿ ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಿದೆ. ನಟ ಪ್ರಭಾಸ್ ಸರ್ ಜೊತೆ ನಾವು ‘ಆದಿಪುರುಷ್’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದೆವು. ಈಗ ಪ್ರಭಾಸ್ ಬಳಿ ಅನುಮತಿ ಪಡೆದು, ಆದಿ ಪುರುಷ್ ಕೆಲಸ ನಿಲ್ಲಿಸಿ, ಜೇಮ್ಸ್ ಸಿನಿಮಾ ಕೈಗೆತ್ತಿಕೊಂಡಿದ್ದೇವೆ. ಈಗ ನಮಗೆ ಖುಷಿ ಆಗುತ್ತಿದೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಜೇಮ್ಸ್ ತಂಡಕ್ಕೆ ಧನ್ಯವಾದ’’ ಎಂದು ವಾಯ್ಸ್ ಮಿಕ್ಸಿಂಗ್ ತಂತ್ರಜ್ಞರು ಹೇಳಿದ್ದಾರೆ.

ಅಂದಹಾಗೆ ಧ್ವನಿ ತಂತ್ರಜ್ಞರು ಹಲವು ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಇದು ಅವರಿಗೆ ಸಿಕ್ಕ ಮೊದಲ ಜಯವಾಗಿದೆ. ಈ ಬಗ್ಗೆಯೂ ಚಿತ್ರತಂಡ ಸಂತಸ ಹಂಚಿಕೊಂಡಿದೆ.

ಈ ಬಗ್ಗೆ ಲೈವ್ ಸುದ್ದಿಗೋಷ್ಠಿಯನ್ನು ನೀವು ಇಲ್ಲಿ ವೀಕ್ಷಿಸಬಹುದು:

ಇದನ್ನೂ ಓದಿ: 3 ದಿನ ಸಾರಿ ಕೇಳಿದ್ರು ಪುನೀತ್​; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್​’ ವಿಲನ್​

ಪುನೀತ್ ರಾಜ್​ಕುಮಾರ್ ಹೆಸರಿಗೆ ಮತ್ತೊಂದು ಪ್ರಶಸ್ತಿ

Published On - 8:11 pm, Sun, 17 April 22