ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಟ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನ ಯುವರತ್ನ ಸಿನಿಮಾ ಏ.1ರಂದು ತೆರೆಕಾಣಲು ಸಜ್ಜಾಗಿದೆ. ಅದಕ್ಕೂ ಮುನ್ನ ಇಡೀ ಯುವರತ್ನ ತಂಡ ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಪುನೀತ್ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಅಲ್ಲಿರುವ ತಮ್ಮ ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದಾರೆ. ಹಾಗಾದರೆ ಯಾವ ಯಾವ ಊರಿಗೆ ಅಪ್ಪು ಭೇಟಿ ನೀಡಲಿದ್ದಾರೆ? ಅವರು ನಿಮ್ಮ ಊರಿಗೆ ಬರುವ ದಿನಾಂಕ ಯಾವುದು? ಇಲ್ಲಿದೆ ವೇಳಾ ಪಟ್ಟಿ.
ಈ ಬಾರಿ ಹುಟ್ಟುಹಬ್ಬದ ದಿನ ಪುನೀತ್ ತಮ್ಮ ಮನೆ ಬಳಿ ಯಾವುದೇ ಅಭಿಮಾನಿಗಳನ್ನೂ ಭೇಟಿ ಆಗಿರಲಿಲ್ಲ. ಅದರ ಬದಲಿಗೆ ತಾವೇ ತಮ್ಮ ಅಭಿಮಾನಿಗಳ ಊರಿಗೆ ತೆರಳಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಮೈಸೂರಿನಲ್ಲಿ ನಡೆಯಬೇಕಿದ್ದ ಯುವಸಂಭ್ರಮ (ಪ್ರೀ-ರಿಲೀಸ್) ಕಾರ್ಯಕ್ರಮವನ್ನು ರದ್ದು ಮಾಡಿಕೊಂಡು, ರಾಜ್ಯದ ಪ್ರತಿ ಜಿಲ್ಲೆಗೂ ತಾವೇ ಭೇಟಿ ನೀಡುವುದಾಗಿ ತಿಳಿಸಿದ್ದರು. ಈಗ ಅವರ ಶೆಡ್ಯೂಲ್ ಹೇಗಿದೆ ಎಂಬ ಮಾಹಿತಿ ಕೂಡ ಹೊರ ಬಿದ್ದಿದೆ.
ಮೊದಲ ಹಂತವಾಗಿ ಮಾ.21ರಿಂದ 23ರವರೆಗೆ ಯುವಸಂಭ್ರಮ ಯಾತ್ರೆ ಶುರು ಆಗಲಿದೆ. 21ರಂದು ಕಲಬುರಗಿ, ಬೆಳಗಾವಿ ಮತ್ತು ಹುಬ್ಬಳಿಗೆ ಅಪ್ಪು ಭೇಟಿ ನೀಡಲಿದ್ದಾರೆ. ಕಲಬುರಗಿಯ ಏಷಿಯನ್ ಮಾಲ್ ಪಕ್ಕ ಬೆಳಗ್ಗೆ 10.30ಕ್ಕೆ, ಬೆಳಗಾವಿಯಲ್ಲಿ ಐನಾಕ್ಸ್ ಚಂದನ್ ಪಾರ್ಕಿಂಗ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಹಾಗೂ ಹುಬ್ಬಳಿಯ ಅರ್ಬನ್ ಓಯಾಸಿಸ್ ಮಾಲ್ ಹತ್ತಿರ ಸಂಜೆ 4.30ಕ್ಕೆ ಪುನೀತ್ ಅಭಿಮಾನಿಗಳಿಗೆ ಸಿಗಲಿದ್ದಾರೆ.
ಎರಡರನೇ ದಿನ (ಮಾ.22) ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿಗೆ ಪುನೀತ್ ಬರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಬಳ್ಳಾರಿಯ ದುರ್ಗಾಂಬ ದೇವಸ್ಥಾನ, ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣ ಮತ್ತು ಸಂಜೆ 4.30ಕ್ಕೆ ತುಮಕೂರಿನ ಎಸ್ಐಟಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಅಭಿಮಾನಿಗಳನ್ನು ಪುನೀತ್ ಭೇಟಿ ಆಗಲಿದ್ದಾರೆ.
ಮಾ.23ರಂದು ಮೈಸೂರು ಮತ್ತು ಮಂಡ್ಯದಲ್ಲಿ ಯುವರತ್ನ ಟೀಮ್ ಹಾಜರಿ ಹಾಕಲಿದೆ. ಮೈಸೂರು ಮಾನಸ ಗಂಗೋತ್ರಿ ಕ್ಯಾಂಪಸ್ನ ಓಪನ್ ಏರ್ ಥಿಯೇಟರ್ನಲ್ಲಿ ಬೆಳಗ್ಗೆ 10 ಗಂಟೆಗೆ ಪುನೀತ್ ಆಗಮಿಸಲಿದ್ದಾರೆ. ಮಂಡ್ಯದ ಸಿಲ್ವರ್ ಬ್ಯುಬ್ಲಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ‘ಪವರ್ ಸ್ಟಾರ್’ ತಮ್ಮ ಅಭಿಮಾನಿಗಳ ಜೊತೆ ಬೆರೆಯಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ.
ನಿಮ್ಮೂರಲ್ಲಿ ಸಂಭ್ರಮಿಸಿ ಯುವರತ್ನನ ಜೊತೆ.
ಯುವಸಂಭ್ರಮ with @PuneethRajkumar, @SanthoshAnand15, @Dhananjayaka & team.#Yuvarathnaa Roadmap loaded?#Yuvasambhrama @VKiragandur @hombalefilms pic.twitter.com/ZIfeW4QsJq
— Hombale Films (@hombalefilms) March 19, 2021
ಇಷ್ಟೇ ಅಲ್ಲದೆ, ಇನ್ನಷ್ಟು ಜಿಲ್ಲೆಗಳಿಗೆ ಯುವರತ್ನ ತಂಡದ ಜೊತೆ ಪುನೀತ್ ರಾಜ್ಕುಮಾರ್ ಭೇಟಿ ನೀಡಲಿದ್ದಾರೆ. ಅವರ ವೇಳಾಪಟ್ಟಿಯನ್ನು ಚಿತ್ರತಂಡ ಶೀಘ್ರವೇ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್ ರಾಜ್ಕುಮಾರ್ ಹೀಗೆ ಅಂದಿದ್ಯಾಕೆ?
Yuvarathnaa Trailer: ಕೌಂಟರ್ ಕೊಟ್ರೆ ಎನ್ಕೌಂಟರ್; ಯುವರತ್ನ ಟ್ರೇಲರ್ನಲ್ಲಿ ಮಿಂಚಿದ ಪುನೀತ್ ರಾಜ್ಕುಮಾರ್
Published On - 8:08 am, Sun, 21 March 21