‘ಕಬ್ಜ’ ಚಿತ್ರದಿಂದ ಆದ ನಷ್ಟು ಎಷ್ಟು? ಕೊನೆಗೂ ಮೌನ ಮುರಿದ ಆರ್​.ಚಂದ್ರು

ಆರ್. ಚಂದ್ರು ಅವರು ನಿರ್ಮಿಸಿ ನಿರ್ದೇಶಿಸಿದ ‘ಕಬ್ಜ’ ಚಿತ್ 2023ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬೃಹತ್ ನಷ್ಟ ಅನುಭವಿಸಿತು. ಚಿತ್ರದ ವೈಫಲ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಡಿದ ನಕಾರಾತ್ಮಕ ಪ್ರತಿಕ್ರಿಯೆಗಳ ಪಾತ್ರವನ್ನು ಚಂದ್ರು ವಿವರಿಸಿದ್ದಾರೆ. ಹೊಸ ಪ್ರಾಜೆಕ್ಟ್​ಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಕಬ್ಜ’ ಚಿತ್ರದಿಂದ ಆದ ನಷ್ಟು ಎಷ್ಟು? ಕೊನೆಗೂ ಮೌನ ಮುರಿದ ಆರ್​.ಚಂದ್ರು
ಚಂದ್ರು-ಉಪೇಂದ್ರ

Updated on: Sep 02, 2025 | 11:37 AM

ಆರ್. ಚಂದ್ರು ಅವರು ‘ಕಬ್ಜ’ ಹೆಸರಿನ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ಈ ಸಿನಿಮಾದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್​ಕುಮಾರ್ ಅಂತಹ ಘಟಾನುಘಟಿಗಳು ಇದ್ದರು. ಈ ಸಿನಿಮಾ ಹೀನಾಯ ವಿಮರ್ಶೆ ಪಡೆಯಿತು. ಈ ಚಿತ್ರದಿಂದ ತಮಗೆ ದೊಡ್ಡ ನಷ್ಟ ಉಂಟಾಗಿದೆ ಎಂದು ಆರ್​. ಚಂದ್ರು ಅವರು ಹೇಳಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳೇ ಕಳೆದಿವೆ. ಈ ವಿಚಾರದಲ್ಲಿ ಅವರು ಕೊನೆಗೂ ಮೌನ ಮುರಿದಿದ್ದಾರೆ.

ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಸಿನಿಮಾ ಮಾಡಿದರು. ಇದು ಅನೇಕರಿಗೆ ಸ್ಫೂರ್ತಿ ಆಯಿತು. ಆರ್​ ಚಂದ್ರು ಅವರು ಕೂಡ ಈ ಚಿತ್ರದಿಂದ ಸ್ಫೂರ್ತಿ ಪಡೆದರು. ಇದೇ ಮಾದರಿಯ ಚಿತ್ರವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದರು. ಆದರೆ, ಇದರಲ್ಲಿ ಅವರು ವಿಫಲರಾದರು. ಹಿರಿಯ ಸಿನಿಮಾ ಪತ್ರಕರ್ತ ಬಿ ಗಣಪತಿ ಅವರು ಈ ಚಿತ್ರದ ವಿಮರ್ಶೆ ಮಾಡಿದ್ದರು. ಸಿನಿಮಾ ಚೆನ್ನಾಗಿಲ್ಲ ಎಂದು ಓಪನ್ ಆಗಿ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಂದ್ರು ಅವರು ಗಣಪತಿ ವಿರುದ್ಧ ಕೇಸ್ ಕೂಡ ಹಾಕಿದ್ದರು. ಈಗ ಚಂದ್ರು ಅವರು ಗಣಪತಿ ಯೂಟ್ಯೂಬ್ ಚಾನೆಲ್​ನಲ್ಲಿಯೇ ಮಾತನಾಡಿದ್ದಾರೆ.

ಗಣಪತಿ ಅವರು ಮಾಡಿದ ವಿಮರ್ಶೆಯನ್ನು ಟ್ರೋಲ್​ ಪೇಜ್​ಗಳು ಕಟ್ ಮಾಡಿ ಹಂಚಿಕೊಂಡಿದ್ದರು. ಇದರ ತುಣುಕು ವೈರಲ್ ಆಗಿ ಕಲೆಕ್ಷನ್ ಕಡಿಮೆ ಆಯಿತು ಎಂಬುದು ಚಂದ್ರು ಆರೋಪ. ಈ ಕಾರಣದಿಂದಲೇ ಚಂದ್ರು ಅವರು ಗಣಪತಿ ವಿರುದ್ಧ ಕೇಸ್ ಹಾಕಿದ್ದರು.

ಇದನ್ನೂ ಓದಿ
‘ಕಿತ್ತೋಗಿರೋ ನನ್ಮಕ್ಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’; ಸುದೀಪ್ ಕಿವಿಮಾತು
ಪವನ್ ಕಲ್ಯಾಣ್ ಜನ್ಮದಿನ: 5 ಲಕ್ಷಕ್ಕೆ ಹರಾಜಾಯ್ತು ‘ಒಜಿ’ ಚಿತ್ರದ ಟಿಕೆಟ್
ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ಡಗಾರ್ ಪದ ಬಳಕೆ
ನಿಮ್ಮ ಲೈಫ್ ನಿಧಾನ ಎನಿಸುತ್ತಿದೆಯೇ? ಸುದೀಪ್ ಹೇಳಿದ ಈ ಜೀವನ ಪಾಠ ಕೇಳಿ

ಇದನ್ನೂ ಓದಿ:  ‘ಕಬ್ಜ 2’ ಬರಲ್ಲ ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿ ಉತ್ತರ ಕೊಟ್ಟ ಆರ್​. ಚಂದ್ರು

‘ಕೆಟ್ಟ ಸಿನಿಮಾ ಮಾಡಬೇಕು ಎಂದು ಯಾರೂ ಹೋಗಲ್ಲ. ಈ ಸಿನಿಮಾದಿಂದ ನನಗೆ ತುಂಬಾನೇ ದೊಡ್ಡ ಮಟ್ಟದಲ್ಲೇ ನಷ್ಟ ಉಂಟಾಗಿದೆ. ವಿಮರ್ಶೆ ಮಾಡಬೇಡಿ ಎಂದು ಹೇಳಿಲ್ಲ, ಸಿನಿಮಾ ಬಗ್ಗೆ ಇರೋ ಪಾಸಿಟಿವ್ ವಿಚಾರವನ್ನು ಹೇಳುವ ಅವಕಾಶ ಇತ್ತು’ ಎಂದು ಚಂದ್ರು ಹೇಳಿದ್ದಾರೆ.

‘ನಾನು ಯಾಕೆ ಸಿನಿಮಾ ಮಾಡಬೇಕು ಎಂದು ನನಗೆ ಅನಿಸಿತು. ಹೀಗಾಗಿ, ಬ್ಯಾನರ್ ಮಾಡಿಕೊಂಡು ಐದು ಸಿನಿಮಾ ಅನೌನ್ಸ್ ಮಾಡಿ ಬೇರೆಯವರಿಗೆ ನೀಡಿದೆ. ಸಿನಿಮಾ ಮಾಡೋದು ಬೇಡ ಎಂದು ಒಂದಷ್ಟು ಹಣವನ್ನು ಲೇಔಟ್ ಮೇಲೆ ಹಾಕಿದೆ. ಎರಡೇ ವರ್ಷಕ್ಕೆ ಹಣ ದ್ವಿಗುಣ ಆಗುತ್ತಿದೆ’ ಎಂದಿದ್ದಾರೆ ಚಂದ್ರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.