ಚಂದನವನದ ನಟ- ನಟಿಯರು ತಮ್ಮ ಮನೆತನದ ದೇವಸ್ಥಾನಗಳಿಗೆ ತೆರಳಿ ಪ್ರತಿ ವರ್ಷವೂ ಪೂಜೆ ಸಲ್ಲಿಸುತ್ತಾರೆ. ಎಷ್ಟೇ ಕಷ್ಟದ ಸಂದರ್ಭ ಬಂದರೂ ಆ ಸಂಪ್ರದಾಯವನ್ನು ತಪ್ಪಿಸುವುದಿಲ್ಲ. ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಇದಕ್ಕೆ ಹೊರತಲ್ಲ. ಅವರು ಶನಿವಾರ, ತಮ್ಮ ಆರಾಧ್ಯ ದೈವ ಮೇಲುಕೋಟೆಗೆ ತೆರಳಿ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದಿದ್ದಾರೆ. ನಾಮಧರಿಸಿ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ದೇವರ ದರ್ಶನ ಮಾಡಿರುವ ರಚಿತಾ, ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರತೀ ವರ್ಷವೂ ಆಗಮಿಸಿ ದೇವರ ದರ್ಶನ ಪಡೆಯುವ ರಚಿತಾ, ಈ ವರ್ಷವೂ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಶ್ರೇಷ್ಠ ಗುರುಪರಂಪರೆಯ ಯತಿರಾಜದಾಸರ್ ಶ್ರೀನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ, ಅವರ ಸಲಹೆಯಂತೆ ರಚಿತಾ ಶ್ರೀ ದೇವರ ದರ್ಶನ ಮಾಡಿದ್ದಾರೆ. ಇದೇ ವೇಳೆ ರಚಿತಾ ದೇವರಿಗೆ ತಾವು ಸಮರ್ಪಿಸಲು ಬಯಸಿದ್ದ ಕಾಣಿಕೆಯನ್ನೂ ಅರ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಮೇಲುಕೋಟೆ ಪ್ರಯಾಣದ ಸಂದರ್ಭದ ಚಿತ್ರವೊಂದನ್ನು ರಚಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿತ್ರಕ್ಕೆ ರಚಿತಾ, ‘ಮುಂಜಾನೆಯ ಒಂದು ಸಣ್ಣ ಧನಾತ್ಮಕ ಯೋಚನೆ ನಿಮ್ಮ ಇಡೀ ದಿನವನ್ನು ಬದಲಾಯಿಸುತ್ತದೆ. ಆದ್ದರಿಂದ ಧನಾತ್ಮಕ ಯೋಚನೆಗಳೊಂದಿಗೆ ದಿನವನ್ನು ಆರಂಭಿಸಿ’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ರಚಿತಾ ಅವರು ನಟಿಸುತ್ತಿದ್ದ ಚಿತ್ರವೊಂದರಲ್ಲಿ ಘಟಿಸಿದ ಘಟನೆ ಕರ್ನಾಟಕದಲ್ಲಿ ಬಹಳಷ್ಟು ಚರ್ಚೆಯಾಗಿತ್ತು. ಈ ಎಲ್ಲದರ ನಡುವೆ ರಚಿತಾ ಧನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
‘ಹಂಸಲೇಖ, ನಾನು ಗುಡ್ ಫ್ರೆಂಡ್ಸ್ ಅಲ್ಲವೇ ಅಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದ ರವಿಚಂದ್ರನ್
(Rachita Ram shares new pic after she visited to Melukote Cheluva Narayana Swamy temple)
Published On - 7:33 pm, Sun, 12 September 21