ಈ ವರ್ಷವೇ ರಚಿತಾ ರಾಮ್ ಮದುವೆ: ಅಪ್​ಡೇಟ್ ಕೊಟ್ಟ ರವಿಚಂದ್ರನ್

Rachita Ram: ನಟಿ ರಚಿತಾ ರಾಮ್ ಕನ್ನಡದ ಬಲು ಬೇಡಿಕೆಯ ನಟಿಯರಲ್ಲಿ ಒಬ್ಬರು. ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ರಚಿತಾ ರಾಮ್ ಹೊಂದಿದ್ದಾರೆ. ರಚಿತಾ ರಾಮ್ ಸಿನಿಮಾಗಳ ಜೊತೆಗೆ ಅವರ ಮದುವೆ ಬಗ್ಗೆಯೂ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಅಭಿಮಾನಿಗಳಂತೂ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಈ ವರ್ಷವೇ ರಚಿತಾ ರಾಮ್ ಮದುವೆ: ಅಪ್​ಡೇಟ್ ಕೊಟ್ಟ ರವಿಚಂದ್ರನ್
Rachita Ram
Edited By:

Updated on: Apr 13, 2025 | 9:52 AM

ರಚಿತಾ ರಾಮ್ (Rachita Ram) ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಈಗ 32 ವರ್ಷ. ಅವರು ಇನ್ನೂ ಮದುವೆ ಆಗಿಲ್ಲ ಏಕೆ ಎಂಬುದು ಅನೇಕರ ಪ್ರಶ್ನೆ. ಅವರು ಲವ್ ವಿಚಾರದಲ್ಲಿ ಯಾರ ಜೊತೆಯೂ ಸುದ್ದಿ ಆಗಿಲ್ಲ. ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತವೆ. ಆದರೆ, ಇದಕ್ಕೆ ಅವರು ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಈಗ ಅವರ ಮದುವೆ ಬಗ್ಗೆ ರವಿಚಂದ್ರನ್ (Ravichandran) ಅವರು ಮಾಹಿತಿ ನೀಡಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಈ ಬಗ್ಗೆ ಚರ್ಚೆ ಆಗಿದೆ.

ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ, ಧನಂಜಯ್, ಮಲೈಕಾ ವಸುಪಾಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಈ ತಂಡ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಆಗಮಿಸಿದೆ. ಈ ವೇಳೆ ಬ್ಯಾಚುಲರ್ಸ್ ಜೀವನ ಹಾಗೂ ಮದುವೆ ಬಳಿಕದ ಜೀವನದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಒಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ.

‘ಮದುವೆ ಮೊದಲ ಜೀವನ, ಮದುವೆ ಬಳಿಕದ ಜೀವನ ಹೇಗಿದೆ’ ಎಂದು ಧನಂಜಯ್ ಅವರಿಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಡಾಲಿ, ‘ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು’ ಎಂದರು ಧನಂಜಯ್.  ‘ಇಲ್ಲೇನೋ ಸಮಸ್ಯೆ ಇದೆ’ ಎಂದರು ಆ್ಯಂಕರ್ ನಿರಂಜನ್.

ಇದನ್ನೂ ಓದಿ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ
ಮಹೇಶ್ ಬಾಬು ಜೊತೆ ನಟಿಸಿದರೂ ಸಿಗದ ಅದೃಷ್ಟ; ಈಗ ಗೂಗಲ್​ನಲ್ಲಿ ಕೆಲಸ
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ: ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ

‘ಬ್ಯಾಚುಲರ್ ಜೀವನ ಒಂದು ಚಾಪ್ಟರ್, ಮದುವೆ ಬಳಿಕದ ಜೀವನ ಒಂದು ಚಾಪ್ಟರ್. ಮಗು ಆದಮೇಲೆ ಒಂದು ಚಾಪ್ಟರ್’ ಎಂದಿದ್ದಾರೆ ರವಿಚಂದ್ರನ್. ‘ರಚಿತಾ ರಾಮ್ ಅವರು ಇನ್ನೂ ಬ್ಯಾಚುಲರ್​ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದು ಡಾಲಿ ಧನಂಜಯ್ ಹೇಳಿದರು. ‘ಈ ವರ್ಷ ಅವರು ಮದುವೆ ಆಗುತ್ತಿದ್ದಾರೆ’ ಎಂದು ರವಿಚಂದ್ರನ್ ಘೋಷಣೆ ಮಾಡಿಯೇ ಬಿಟ್ಟರು. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಯಿತು.

ಇದನ್ನು ರವಿಚಂದ್ರನ್ ಅವರು ಹಾಸ್ಯಕ್ಕೆ ಹೇಳಿದ್ದಾರೋ ಅಥವಾ ನಿಜವನ್ನು ಹಾಸ್ಯದ ರೂಪದಲ್ಲಿ ಹೇಳಿದ್ದಾರೋ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us