AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಉಸಿರು ಇರೋ ತನಕ ಬುಲ್​ಬುಲ್ ಅಂತ ಕರೆಯಿರಿ, ದರ್ಶನ್​ಗೆ ನಾನು ಋಣಿ: ರಚಿತಾ ರಾಮ್

ನಟಿ ರಚಿತಾ ರಾಮ್ ಅವರು ಸ್ಟಾರ್​ ಹೀರೋಯಿನ್ ಆಗಿ ಮಿಂಚಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಮೊದಲು ಅವಕಾಶ ಕೊಟ್ಟವರನ್ನು ಇಂದಿಗೂ ಸ್ಮರಿಸುತ್ತಾರೆ ರಚಿತಾ ರಾಮ್. ದರ್ಶನ್​ ಅವರನ್ನು ತಮ್ಮ ಗಾಡ್​ಫಾದರ್​ ಎಂದು ರಚಿತಾ ಕರೆದಿದ್ದಾರೆ.

ನನ್ನ ಉಸಿರು ಇರೋ ತನಕ ಬುಲ್​ಬುಲ್ ಅಂತ ಕರೆಯಿರಿ, ದರ್ಶನ್​ಗೆ ನಾನು ಋಣಿ: ರಚಿತಾ ರಾಮ್
Rachita Ram, Darshan
ಮದನ್​ ಕುಮಾರ್​
|

Updated on: Mar 12, 2025 | 4:58 PM

Share

ನಟ ದರ್ಶನ್ ಮೇಲೆ ರಚಿತಾ ರಾಮ್ (Rachita Ram) ಅವರಿಗೆ ಅಪಾರ ಗೌರವ ಇದೆ. ಚಿತ್ರರಂಗದಲ್ಲಿ ರಚಿತಾ ರಾಮ್ ಅವರಿಗೆ ಮೊದಲು ಅವಕಾಶ ನೀಡಿದ್ದೇ ದರ್ಶನ್. ರಚಿತಾ ನಟಿಸಿದ ಮೊದಲ ಸಿನಿಮಾ ‘ಬುಲ್​ಬುಲ್’. ಆ ಸಿನಿಮಾ 2013ರಲ್ಲಿ ತೆರೆಕಂಡಿತು. ಮೊದಲ ಸಿನಿಮಾದಲ್ಲೇ ದರ್ಶನ್​ (Darshan) ಜೊತೆ ನಾಯಕಿಯಾಗಿ ನಟಿಸುವ ಅವಕಾಶ ರಚಿತಾ ರಮ್ ಅವರಿಗೆ ಸಿಕ್ಕಿತು. ಆ ಅವಕಾಶ ನೀಡಿದ್ದಕ್ಕೆ ತಾವು ಕೊನೆವರೆಗೂ ದರ್ಶನ್ ಅವರಿಗೆ ಚಿರಋಣಿ ಆಗಿರುವುದಾಗಿ ರಚಿತಾ ರಾಮ್ ಹೇಳಿದ್ದಾರೆ. ‘ಜೀ ಕನ್ನಡ’ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್​’ (Bharjari Bachelors) ಶೋನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ದರ್ಶನ್ ಸರ್ ಒಂದು ಮಾತು ಹೇಳುತ್ತಿದ್ದರು. ಅವರ ವೃತ್ತಿ ಜೀವನದಲ್ಲಿ ಹೀರೋಯಿನ್ ಹೆಸರೇ ಶೀರ್ಷಿಕೆ ಆದಂತಹ ಸಿನಿಮಾವನ್ನು ಮಾಡಿಲ್ಲ. ಎಲ್ಲ ಸಿನಿಮಾಗೂ ಹೀರೋ ಕೇಂದ್ರಿತ ಟೈಟಲ್ ಇರುತ್ತಿತ್ತು. ಮೊದಲ ಬಾರಿಗೆ ಬುಲ್​ಬುಲ್ ಅಂತ ಹೀರೋಯಿನ್ ಸೆಂಟ್ರಿಕ್ ಟೈಟಲ್ ಇದೆ. ಹಾಗಾಗಿ ನೀನು ಎಷ್ಟೊಂದು ಲಕ್ಕಿ ಅಂತ ನನಗೆ ಹೇಳುತ್ತಿದ್ದರು’ ಎಂದಿದ್ದಾರೆ ರಚಿತಾ ರಾಮ್.

ಇದನ್ನೂ ಓದಿ
Image
ರಚಿತಾ​ಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ದರ್ಶನ್; ನಟಿಯ ಪ್ರತಿಕ್ರಿಯೆ ಏನು?
Image
‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಿಮಗೆ ಬೀಳಲ್ಲ’; ನೇರವಾಗಿ ಹೇಳಿದ ರಚಿತಾ
Image
ಯಾರ ಜೊತೆಗೂ ಹೋಗಿ ಇರಲ್ಲ ಎಂದು ರಚಿತಾ ರಾಮ್ ಹೇಳಿದ್ದರ ಹಿಂದಿನ ವಿವಾದವೇನು?
Image
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
View this post on Instagram

A post shared by Zee Kannada (@zeekannada)

‘ಒಂದಷ್ಟು ವರ್ಷಗಳ ತನಕ ನನ್ನನ್ನು ಬುಲ್​ಬುಲ್ ಅಂತ ಕರೆಯುತ್ತಿದ್ದರು ಅಂತ ನೀವು ಹೇಳಿದ್ರಿ. ಇಲ್ಲ.. ಈಗಲೂ ಕೂಡ ಜನರು ನನ್ನನ್ನು ಬುಲ್​ಬುಲ್​ ಅಂತಾನೇ ಕರೆಯುವುದು. ಉಸಿರು ಇರುವವರೆಗೂ ನನಗೆ ಬುಲ್​ಬುಲ್​ ಅಂತಾನೇ ಕರೆದರೆ ಖುಷಿ. ನನ್ನ ತಂಡಕ್ಕೆ, ದರ್ಶನ್​ ಸರ್​ಗೆ, ದರ್ಶನ್​ ಅವರ ಅಭಿಮಾನಿಗಳಿಗೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ’ ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ.

‘ನಾನು ಪುಣ್ಯವಂತೆ. ನನ್ನ ಗಾಡ್​ಫಾದರ್​ಗೆ ನಾನು ಧನ್ಯವಾದ ಹೇಳುತ್ತಾನೆ’ ಎಂದು ರಚಿತಾ ರಾಮ್ ಅವರು ‘ಭರ್ಜರಿ ಬ್ಯಾಚುಲರ್ಸ್​’ ವೇದಿಕೆಯಿಂದಲೇ ದರ್ಶನ್​ ಅವರಿಗೆ ನಮಸ್ಕಾರ ಮಾಡಿದ್ದಾರೆ. ರಚಿತಾ ರಾಮ್ ಅವರ ಮಾತು ಕೇಳಿ ದರ್ಶನ್ ಅಭಿಮಾನಿಗಳಿಗೆ ಖುಷಿ ಆಗಿದೆ. ಅವಕಾಶ ಕೊಟ್ಟವರನ್ನು ಎಂದಿಗೂ ಮರೆಯದ ರಚಿತಾ ಗುಣವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಬುಲ್​ಬುಲ್’ ಬಳಿಕ ‘ಅಂಬರೀಶ’, ‘ಕ್ರಾಂತಿ’, ‘ಜಗ್ಗುದಾದ’ ಸಿನಿಮಾಗಳಲ್ಲಿ ದರ್ಶನ್ ಜೊತೆ ರಚಿತಾ ರಾಮ್ ತೆರೆ ಹಂಚಿಕೊಂಡರು.

ಇದನ್ನೂ ಓದಿ: ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ಡಿ ಬಾಸ್

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾಗ ರಚಿತಾ ರಾಮ್ ಅವರು ಹೋಗಿ ಮಾತನಾಡಿಸಿಕೊಂಡು ಬಂದಿದ್ದರು. ಆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದಾಗಲೂ ಕೂಡ ಅವರು ದರ್ಶನ್ ಕೊಟ್ಟ ಅವಕಾಶವನ್ನು ಸ್ಮರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.