ಕಳೆದ ವಾರ (ಸೆ.27) ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ದೇವರ’ ಸಿನಿಮಾ ಬಿಡುಗಡೆ ಆಗಿತ್ತು. ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್ ನಟನೆಯ ಈ ಸಿನಿಮಾ ಆರಂಭದಲ್ಲಿ ಅಬ್ಬರಿಸಿತಾದರೂ ಮೂರು ದಿನ ಕಳೆದ ಬಳಿಕ ಹವಾ ಕಡಿಮೆ ಆಯಿತು. ಪರಿಣಾಮವಾಗಿ ಹೊಸ ಸಿನಿಮಾಗಳ ಕಡೆಗೆ ಜನರು ಗಮನ ಹರಿಸುವಂತಾಗಿದೆ. ಈ ವಾರ ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಜೊತೆ ಹೊಸಬರ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..
ರಾಧಿಕಾ ಕುಮಾರಸ್ವಾಮಿ ಅವರು ‘ಭೈರಾದೇವಿ’ ಸಿನಿಮಾದಲ್ಲಿ ಡಿಫರೆಂಟ್ ಆದಂತಹ ಪಾತ್ರ ಮಾಡಿದ್ದಾರೆ. ಸೂಪರ್ ನ್ಯಾಚುರಲ್ ಕಹಾನಿ ಇರುವ ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಸ್ವತಃ ರಾಧಿಕಾ ಕುಮಾರಸ್ವಾಮಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್ 3ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಶ್ರೀ ಜೈ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಗೆಟಪ್ ಗಮನ ಸೆಳೆದಿದೆ. ಆ ಕಾರಣದಿಂದ ಅವರ ಅಭಿಮಾನಿಗಳ ವಯಲದಲ್ಲಿ ಈ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಯಿತು.
ಅಕ್ಟೋಬರ್ 4ರಂದು ಕನ್ನಡದ ‘ಗೋಪಿಲೋಲ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಮಂಜುನಾಥ್ ಅರಸು, ನಿಮಿಷಾ, ಎಸ್. ನಾರಾಯಣ್, ಪದ್ಮಾ ವಾಸಂತಿ, ಡಿಂಗ್ರಿ ನಾಗರಾಜ್ ಮುಂತಾದವರು ನಟಿಸಿದ್ದಾರೆ. ಆರ್. ರವೀಂದ್ರ ಅವರು ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ‘ಜನಕ’ ಸಿನಿಮಾ ಕೂಡ ಅ.4ಕ್ಕೆ ತೆರೆಕಾಣುತ್ತಿದೆ. ಹೊಸ ನಟ ರಕ್ಷಿತ್ ಮನೋಜ್ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ.
ಇದನ್ನೂ ಓದಿ: ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ ಕುಮಾರಸ್ವಾಮಿ
ಡಾ. ರಾಜ್ಕುಮಾರ್ ಅವರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಹಾಗೂ ಪ್ರೀತಂ ಅವರು ‘ಮಿಂಚುಹುಳ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೆ ಮಹೇಶ್ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರ ಕೂಡ ಅಕ್ಟೋಬರ್ 4ಕ್ಕೆ ತೆರೆಗೆ ಬರುತ್ತಿವೆ. ತೆಲುಗಿನಲ್ಲಿ ‘ಸ್ವ್ಯಾಗ್’, ತಮಿಳಿನಲ್ಲಿ ‘ಅರಗನ್’ ಚಿತ್ರಗಳು ಕೂಡ ಈ ವಾರ ಪೈಪೋಟಿಗೆ ಇಳಿಯುತ್ತಿವೆ.
ಮುಂದಿನ ವಾರ ಕೆಲವು ಬಹುನಿರೀಕ್ಷಿಯ ಸಿನಿಮಾಗಳು ರಿಲೀಸ್ ಆಗಲಿವೆ. ರಜನಿಕಾಂತ್ ಅಭಿನಯದ ‘ವೆಟ್ಟಯ್ಯನ್’ ಸಿನಿಮಾ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗಲಿದೆ. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ಕ್ಕೆ ತೆರೆಕಾಣಲಿದೆ. ಅದೇ ದಿನ ಆಲಿಯಾ ಭಟ್ ನಟನೆಯ ‘ಜಿಗ್ರಾ’ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.