ದೊಡ್ಮನೆಯವರ ಗುಣವನ್ನು ಬಾಯ್ತುಂಬ ಹೊಗಳಿದ ಧ್ರುವ; ‘ಮಾರ್ಟಿನ್’ಗಾಗಿ ಮುಂದಕ್ಕೆ ಹೋದ ‘ಭೈರತಿ’
ಧ್ರುವ ಸರ್ಜಾ ಅವರು ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಏರಿದ್ದಾರೆ. ಇದರಲ್ಲಿ ಶಿವರಾಜ್ಕುಮಾರ್ ಮುಖ್ಯ ಜಡ್ಜ್ ಆಗಿದ್ದಾರೆ. ‘ಮಾರ್ಟಿನ್’ ಸಿನಿಮಾ ಪ್ರಮೋಷನ್ಗೆ ಧ್ರುವ ಸರ್ಜಾ ಅವರು ‘ಡಿಕೆಡಿ’ ವೇದಿಕೆ ಏರಿದ್ದಾರೆ. ವೇದಿಕೆಗೆ ಬರುವಾಗ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿಕೊಂಡೇ ಬಂದಿದ್ದಾರೆ. ಅವರ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನು ಆಡಿದರು.
ದೊಡ್ಮನೆಯ ಬಗ್ಗೆ ಸ್ಯಾಂಡಲ್ವುಡ್ನಲ್ಲಿರುವ ಬಹುತೇಕರಿಗೆ ಗೌರವ ಇದೆ. ಅವರ ಬೆಂಬಲದಿಂದ ಅನೇಕರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ನೀಡಿದ ಅವಕಾಶದಿಂದ ಚಿತ್ರರಂಗದಲ್ಲಿ ನೆಲೆಕಂಡುಕೊಂಡ ಅನೇಕರು ಇದ್ದಾರೆ. ಅವರ ಅನೇಕರನ್ನು ಬೆಳೆಸಿದ್ದಾರೆ. ಶಿವಣ್ಣ ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈಗ ‘ಮಾರ್ಟಿನ್ ಚಿತ್ರಕ್ಕಾಗಿ ಶಿವರಾಜ್ಕುಮಾರ್ ಅವರು ‘ಭೈರತಿ ರಣಗಲ್’ ಚಿತ್ರದ ರಿಲೀಸ್ನ ಒಂದು ತಿಂಗಳು ಮುಂದಕ್ಕೆ ಹಾಕಿಕೊಂಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.
ಧ್ರುವ ಸರ್ಜಾ ಅವರು ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಏರಿದ್ದಾರೆ. ಇದರಲ್ಲಿ ಶಿವರಾಜ್ಕುಮಾರ್ ಮುಖ್ಯ ಜಡ್ಜ್ ಆಗಿದ್ದಾರೆ. ‘ಮಾರ್ಟಿನ್’ ಸಿನಿಮಾ ಪ್ರಮೋಷನ್ಗೆ ಧ್ರುವ ಸರ್ಜಾ ಅವರು ‘ಡಿಕೆಡಿ’ ವೇದಿಕೆ ಏರಿದ್ದಾರೆ. ವೇದಿಕೆಗೆ ಬರುವಾಗ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿಕೊಂಡೇ ಬಂದಿದ್ದಾರೆ. ಅವರ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನು ಆಡಿದರು. ಶಿವರಾಜ್ಕುಮಾರ್ ಒಳ್ಳೆತನವನ್ನು ಧ್ರುವ ಕೊಂಡಾಡಿದರು.
ಇದನ್ನೂ ಓದಿ: ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ನೇರವಾಗಿ ಉತ್ತರ ನೀಡಿದ ಧ್ರುವ ಸರ್ಜಾ
‘ಹಾರ್ಡ್ವರ್ಕರ್, ಡ್ಯಾನ್ಸ್, ಆ್ಯಕ್ಷನ್ ಒಳ್ಳೆಯದಾಗಿ ಮಾಡ್ತಾರೆ. ಯಂಗ್ಸ್ಟರ್ಸ್ನಲ್ಲಿ ಧ್ರುವ, ಅಪ್ಪು ಒಳ್ಳೆಯ ಡ್ಯಾನ್ಸರ್ಸ್ ಅನ್ನೋ ಖುಷಿ ನನಗೆ ಇದೆ’ ಎಂದರು ಶಿವಣ್ಣ. ‘ಭೈರತಿ ರಣಗಲ್ ಅಕ್ಟೋಬರ್ 4ಕ್ಕೆ ರಿಲೀಸ್ ಆಗಬೇಕಿತ್ತು. ನಾನು ಕರೆ ಮಾಡಿ ಅಣ್ಣ ನಮ್ಮ ಸಿನಿಮಾಗೆ ಥಿಯೇಟರ್ ಸಮಸ್ಯೆ ಆಗುತ್ತದೆ ಎಂದೆ. ನಾನು ಕಾಲ್ ಮಾಡ್ತೀನಿ ಎಂದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
View this post on Instagram
‘ಶಿವಣ್ಣನೇ ಮತ್ತೆ ಕರೆ ಮಾಡಿದರು. ನೀವು ನನ್ನ ಕುಟುಂಬ. ಒಂದು ತಿಂಗಳು ಮುಂದಕ್ಕೆ ಹೋಗುತ್ತೇವೆ. ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ ಎಂದರು. ನಾವು ಇಂಡಸ್ಟ್ರಿನ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಅವರು ಇಂಡಸ್ಟ್ರಿನ ಮೇಲಕ್ಕೆ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಇದನ್ನು ನಾವು ಹತ್ತಿಕೊಂಡು ಹೋದರೆ ಸಾಕಾಗಿದೆ’ ಎಂದರು ಧ್ರುವ. ಆ ಬಳಿಕ ಶಿವಣ್ಣನ ಕಾಲಿಗೆ ಅವರು ನಮಸ್ಕರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Fri, 4 October 24