ನಟಿ ರಾಧಿಕಾ ಪಂಡಿತ್ (Radhika Pandit) ಹಾಗೂ ಯಶ್ (Yash) ದಂಪತಿಯ ಮಗಳು ಆಯ್ರಾ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಅವಳ ಬಗ್ಗೆ ಹೊಸಹೊಸ ವಿಚಾರ ತಿಳಿದುಕೊಳ್ಳಬೇಕು ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ರಾಧಿಕಾ ಪಂಡಿತ್ ಕೂಡ ಆಯ್ರಾ ಹಾಗೂ ಯಥರ್ವ್ ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ವಿವಿಧ ಫೋಟೋ ಹಾಗೂ ವಿಡಿಯೋ ಪೋಸ್ಟ್ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಈಗ ಆಯ್ರಾಳ ಹೊಸ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವಳ ಪೋಸ್ ನೋಡಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.
ಇತ್ತೀಚೆಗೆ ಕ್ರಿಸ್ಮಸ್ ಪೂರ್ಣಗೊಂಡಿದೆ. ಸೆಲೆಬ್ರಿಟಿಗಳ ಮನೆಯಲ್ಲಿ ಈ ಹಬ್ಬದ ಆಚರಣೆ ಜೋರಾಗಿತ್ತು. ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಕ್ರಿಸ್ಮಸ್ ಟ್ರೀ ನಿಲ್ಲಿಸಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಕೂಡ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಕ್ರಿಸ್ಮಸ್ ದಿನ ತೆಗೆದ ಕೆಲ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
ಕ್ರಿಸ್ಮಸ್ ಟ್ರೀ ಎದುರು ನಿಂತಿರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಾಮಾನ್ಯ ಪೋಸ್ ನೀಡಿದ್ದಾರೆ. ಆದರೆ, ಆಯ್ರಾ ಹಾಗಲ್ಲ. ಸೊಂಟದ ಮೇಲೆ ಕೈ ಇಟ್ಟುಕೊಂಡು, ಒಂದು ಕಣ್ಣನ್ನು ಮುಚ್ಚಿದ್ದಾಳೆ. ಅವಳು ಕೊಟ್ಟ ಪೋಸ್ ನೋಡಿ ಅಭಿಮಾನಿಗಳಿಗೆ ಮಾತ್ರವಲ್ಲದೆ, ಸ್ವತಃ ರಾಧಿಕಾ ಪಂಡಿತ್ಗೂ ಅಚ್ಚರಿ ಆಗಿದೆ. ಆಯ್ರಾ ನನಗಿಂತಲೂ ಉತ್ತಮವಾಗಿ ಪೋಸ್ ನೀಡಿದ್ದಾಳೆ ಎಂಬರ್ಥ ಬರುವ ರೀತಿಯಲ್ಲಿ ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ ರಾಧಿಕಾ.
ಮಗಳು ಆಯ್ರಾ ಹಾಗೂ ಮಗ ಯಥರ್ವ್ ಯಶ್ ಆರೈಕೆಯಲ್ಲಿ ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್ ಅಪೇಕ್ಷಿಸುತ್ತಿದ್ದಾರೆ. ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ರಾಧಿಕಾ ಶೀಘ್ರವೇ ಖಂಡಿತ ಕಮ್ಬ್ಯಾಕ್ ಮಾಡಲಿದ್ದಾರೆ.
ಇದನ್ನೂ ಓದಿ: ಯಶ್-ರಾಧಿಕಾ ಪಂಡಿತ್ ಪುತ್ರಿ ಆಯ್ರಾ ಹುಟ್ಟುಹಬ್ಬ; 3ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಸ್ಟಾರ್ ಕಿಡ್
ರಾಧಿಕಾ-ಯಶ್ಗಾಗಿ ಸಾಂಟಾ ಕ್ಲಾಸ್ ಆದ ಯಥರ್ವ್; ಕ್ಯೂಟ್ ಆಗಿ ನಕ್ಕ ಆಯ್ರಾ