ವಿಮಾನದಲ್ಲಿ ಸಂಚರಿಸುವಾಗ ರಾಧಿಕಾ ಪಂಡಿತ್​ ಮಕ್ಕಳು ಮಾಡೋ ಕೆಲಸವೇನು? ಫೋಟೋ ಹಂಚಿಕೊಂಡ ನಟಿ

ಆಯ್ರಾ ಹಾಗೂ ಯಥರ್ವ್​ ಇಬ್ಬರೂ ವಿಮಾನದಲ್ಲಿ ಸಂಚಾರ ಮಾಡುತ್ತಿರುವ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಜರ್ನಿ ಮಾಡುವಾಗ ಮಕ್ಕಳು ಮೊಬೈಲ್​ ಆಡಿಕೊಂಡು ಟೈಮ್​ಪಾಸ್ ಮಾಡುತ್ತಾರೆ. ಆದರೆ, ಆಯ್ರಾ ಹಾಗೂ ಯಥರ್ವ್​ ಹಾಗಲ್ಲ.

ವಿಮಾನದಲ್ಲಿ ಸಂಚರಿಸುವಾಗ ರಾಧಿಕಾ ಪಂಡಿತ್​ ಮಕ್ಕಳು ಮಾಡೋ ಕೆಲಸವೇನು? ಫೋಟೋ ಹಂಚಿಕೊಂಡ ನಟಿ
ಆಯ್ರಾ-ಅಥರ್ವ್​-ರಾಧಿಕಾ
Edited By:

Updated on: Feb 25, 2022 | 3:45 PM

ನಟಿ ರಾಧಿಕಾ ಪಂಡಿತ್ (Radhika Pandit) ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸಂಪೂರ್ಣ ಸಮಯವನ್ನು ಅವರು ಫ್ಯಾಮಿಲಿ ಜತೆ ಕಳೆಯುತ್ತಿದ್ದಾರೆ. ಮಗಳು ಆಯ್ರಾ (Ayra) ಹಾಗೂ ಮಗ ಯಥರ್ವ್​ (Yatharv) ಆರೈಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರಾಧಿಕಾ ಪಂಡಿತ್​ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಅದರಲ್ಲೂ ಇನ್​​​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ. ಸ್ಟೇಟಸ್​​​ಗೆ ಮಕ್ಕಳು ಮಾಡುವ ಕೀಟಲೆ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳನ್ನು ಖುಷಿಯಾಗಿಡಲು ಹಾಗೂ ಅವರ ಜತೆ ಸದಾ ಸಂಪರ್ಕದಲ್ಲಿರಲು ರಾಧಿಕಾ ಬಯಸುತ್ತಾರೆ. ಈಗ ರಾಧಿಕಾ ಪಂಡಿತ್​ ಅವರು ಮಕ್ಕಳು ವಿಮಾನದಲ್ಲಿ ಸಂಚರಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಆಯ್ರಾ ಹಾಗೂ ಯಥರ್ವ್​ ಇಬ್ಬರೂ ವಿಮಾನದಲ್ಲಿ ಸಂಚಾರ ಮಾಡುತ್ತಿರುವ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಜರ್ನಿ ಮಾಡುವಾಗ ಮಕ್ಕಳು ಮೊಬೈಲ್​ ಆಡಿಕೊಂಡು ಟೈಮ್​ಪಾಸ್ ಮಾಡುತ್ತಾರೆ. ಆದರೆ, ಆಯ್ರಾ ಹಾಗೂ ಯಥರ್ವ್​ ಇಬ್ಬರನ್ನೂ ಬೇರೆಯದೇ ರೀತಿಯಲ್ಲಿ ಬೆಳೆಸುತ್ತಿದ್ದಾರೆ ರಾಧಿಕಾ. ಪ್ರಯಾಣದ ವೇಳೆ ರಾಧಿಕಾ ಪಂಡಿತ್​ ಅವರು ಮಕ್ಕಳಿಗೆ ಪುಸ್ತಕ ನೀಡಿದ್ದಾರೆ. ಇದನ್ನು ಓದುತ್ತಾ ಟೈಮ್​ಪಾಸ್​ ಮಾಡುತ್ತಿದ್ದಾರೆ ಆಯ್ರಾ ಹಾಗೂ ಯಥರ್ವ್​​.

2016ರಲ್ಲಿ ‘ಸಂತು ಸ್ಟ್ರೇಟ್​ ಫಾರ್ವರ್ಡ್​’ ಚಿತ್ರ ತೆರೆಗೆ ಬಂದ ನಂತರದಲ್ಲಿ ರಾಧಿಕಾ ಪಂಡಿತ್​ ಒಂದು ಬ್ರೇಕ್​ ಪಡೆದುಕೊಂಡರು. ಆ ಬಳಿಕ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಅವರು ಬೇಗ ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆ. ಇದನ್ನು ಅವರು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  

ರಾಧಿಕಾಗೆ ಬಂದಿತ್ತು ತಾಯಿ ಪಾತ್ರದ ಆಫರ್

‘ಡಿಎನ್​ಎ’ ಸಿನಿಮಾದಲ್ಲಿ ತಾಯಿ-ಮಗುವಿನ ಸಂಬಂಧದ ಕಥೆ ಹೇಳಲಾಗಿದೆ. ಮಗುವಿನ ತಾಯಿ ಪಾತ್ರವನ್ನು ಎಸ್ತರ್​ ನರೋನಾ ನಿಭಾಯಿಸಿದ್ದಾರೆ. ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ  ರಾಧಿಕಾ ಪಂಡಿತ್​ ಅವರು ಆ ಪಾತ್ರವನ್ನು ಮಾಡಲು ಹಿಂದೇಟು ಹಾಕಿದರು.

ಇದನ್ನೂ ಓದಿ: ಯಶ್ -ರಾಧಿಕಾ ಪಂಡಿತ್ ಮುದ್ದು ಮಕ್ಕಳ ಕ್ಯೂಟ್ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್

ಅಮೂಲ್ಯ ಬೇಬಿ ಶವರ್ ಪಾರ್ಟಿಯಲ್ಲಿ ಚಿತ್ರರಂಗ; ರಾಧಿಕಾ ಪಂಡಿತ್ ಸೇರಿ ಹಲವರು ಭಾಗಿ