AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’; ರಾಧಿಕಾ ಪಂಡಿತ್​ ವಿಶೇಷ ಪೋಸ್ಟ್

ರಾಧಿಕಾ ಪಂಡಿತ್​ಗೆ ಕುಟುಂಬ ಎಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು, ಪತಿ ಯಶ್​ಗೆ ತೋರಿಸುವಷ್ಟೇ ಪ್ರೀತಿಯನ್ನು ರಾಧಿಕಾ ಪಂಡಿತ್​ ಅಪ್ಪ-ಅಮ್ಮನಿಗೂ ತೋರಿಸುತ್ತಾರೆ. ಅಪ್ಪ, ಅಮ್ಮನ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ರಾಧಿಕಾ ಪಂಡಿತ್​ ಈ ಮೊದಲು ಹಂಚಿಕೊಂಡಿದ್ದಿದೆ.

‘ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’; ರಾಧಿಕಾ ಪಂಡಿತ್​ ವಿಶೇಷ ಪೋಸ್ಟ್
ರಾಧಿಕಾ ಪಂಡಿತ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Feb 06, 2022 | 3:26 PM

Share

ನಟಿ ರಾಧಿಕಾ ಪಂಡಿತ್ (Radhika Pandit) ​ ಅವರು ಈಗ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ತಮ್ಮ ಸಂಪೂರ್ಣ ಸಮಯವನ್ನು ಅವರು ಕುಟುಂಬದ ಜತೆ ಕಳೆಯುತ್ತಿದ್ದಾರೆ. ಮಗಳು ಆಯ್ರಾ (Ayra) ಹಾಗೂ ಮಗ ಯಥರ್ವ್​ ಆರೈಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರ ಜತೆಗೆ ರಾಧಿಕಾ ಪಂಡಿತ್​ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಅದರಲ್ಲೂ ಇನ್​​​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ. ಸ್ಟೇಟಸ್​​​ಗೆ ಮಕ್ಕಳು ಮಾಡುವ ಕೀಟಲೆ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳನ್ನು ಖುಷಿಯಾಗಿಡಲು ಹಾಗೂ ಅವರ ಜತೆ ಸದಾ ಸಂಪರ್ಕದಲ್ಲಿರಲು ರಾಧಿಕಾ ಬಯಸುತ್ತಾರೆ. ಈಗ ರಾಧಿಕಾ ಪಂಡಿತ್ ಅವರು ವಿಶೇಷ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದೂ ಅಮ್ಮನ (Radhika Pandit Mother) ಬಗ್ಗೆ ಅನ್ನೋದು ವಿಶೇಷ.

ರಾಧಿಕಾ ಪಂಡಿತ್​ಗೆ ಕುಟುಂಬ ಎಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು, ಪತಿ ಯಶ್​ಗೆ ತೋರಿಸುವಷ್ಟೇ ಪ್ರೀತಿಯನ್ನು ರಾಧಿಕಾ ಪಂಡಿತ್​ ಅಪ್ಪ-ಅಮ್ಮನಿಗೂ ತೋರಿಸುತ್ತಾರೆ. ಅಪ್ಪ, ಅಮ್ಮನ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ರಾಧಿಕಾ ಪಂಡಿತ್​ ಈ ಮೊದಲು ಹಂಚಿಕೊಂಡಿದ್ದಿದೆ. ಈಗ ಅವರು ಅಮ್ಮನ ಫೋಟೋ ಹಾಕಿ ವಿಷ್​ ಮಾಡಿದ್ದಾರೆ. ಇದಕ್ಕೆ ಕಾರಣ ಇಂದು (ಫೆಬ್ರವರಿ 6) ಅವರ ತಾಯಿ ಮಂಗಲಾ ಅವರ ಜನ್ಮದಿನ.

‘ಹ್ಯಾಪಿ ಬರ್ತ್​ಡೇ ಅಮ್ಮ. ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಧನ್ಯವಾದಗಳು’ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಜತೆಗೆ ಅಮ್ಮನ ಜತೆ ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಎಲ್ಲರೂ ರಾಧಿಕಾ ಅವರ ತಾಯಿಗೆ ಶುಭಾಶಯ ತಿಳಿಸುತ್ತಿದ್ದಾರೆ.

2016ರಲ್ಲಿ ‘ಸಂತು ಸ್ಟ್ರೇಟ್​ ಫಾರ್ವರ್ಡ್​’ ಚಿತ್ರ ತೆರೆಗೆ ಬಂದ ನಂತರದಲ್ಲಿ ರಾಧಿಕಾ ಪಂಡಿತ್​ ಒಂದು ಬ್ರೇಕ್​ ಪಡೆದುಕೊಂಡರು. ಆ ಬಳಿಕ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಅವರು ಬೇಗ ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆ. ಇದನ್ನು ಅವರು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  

ರಾಧಿಕಾಗೆ ಬಂದಿತ್ತು ತಾಯಿ ಪಾತ್ರದ ಆಫರ್

‘ಡಿಎನ್​ಎ’ ಸಿನಿಮಾದಲ್ಲಿ ತಾಯಿ-ಮಗುವಿನ ಸಂಬಂಧದ ಕಥೆ ಹೇಳಲಾಗಿದೆ. ಮಗುವಿನ ತಾಯಿ ಪಾತ್ರವನ್ನು ಎಸ್ತರ್​ ನರೋನಾ ನಿಭಾಯಿಸಿದ್ದಾರೆ. ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ  ರಾಧಿಕಾ ಪಂಡಿತ್​ ಅವರು ಆ ಪಾತ್ರವನ್ನು ಮಾಡಲು ಹಿಂದೇಟು ಹಾಕಿದರು.

ಇದನ್ನೂ ಓದಿ: Radhika Pandit: ಹೊಸ ಫೋಟೋದಲ್ಲಿ ಮಿಂಚಿದ ರಾಧಿಕಾ ಪಂಡಿತ್​; ಅಭಿಮಾನಿಗಳು ಫುಲ್​ ಫಿದಾ

ಮಗಳು ಆಯ್ರಾಗೆ ಕನ್ನಡ ಪಾಠ; ರಾಧಿಕಾ ಪಂಡಿತ್ ಹಂಚಿಕೊಂಡ್ರು​ ವಿಶೇಷ ವಿಡಿಯೋ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್