‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ

ರಾಧಿಕಾ ಪಂಡಿತ್ ಜತೆ ತಂದೆ-ತಾಯಿ ಕೂಡ ವಾಸವಾಗಿದ್ದಾರೆ. ಮಕ್ಕಳ ಜತೆ ಹಾಕುವ ಫೋಟೋ, ಹಬ್ಬದ ಸಂದರ್ಭದಲ್ಲಿ ಪೋಸ್ಟ್​ ಮಾಡುವ ಚಿತ್ರಗಳಲ್ಲಿ ರಾಧಿಕಾ ತಂದೆ-ತಾಯಿ ಕೂಡ ಕಾಣಿಸಿಕೊಳ್ಳುತ್ತಾರೆ.

‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ
‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ
Updated By: ರಾಜೇಶ್ ದುಗ್ಗುಮನೆ

Updated on: Sep 15, 2021 | 8:26 PM

ನಟಿ ರಾಧಿಕಾ ಪಂಡಿತ್​ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮೂಲಕ ಅಭಿಮಾನಿಗಳ ಜತೆ ಅವರು ಸಂಪರ್ಕದಲ್ಲಿ ಇದ್ದಾರೆ. ಸದಾ ಮಕ್ಕಳ ಬಗ್ಗೆ ಪೋಸ್ಟ್ ಮಾಡುವ ರಾಧಿಕಾ ಪಂಡಿತ್​ ಇಂದು ತಮ್ಮ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ. ಅವರು ಎಷ್ಟು ಸ್ಟ್ರಾಂಗ್​ ಎಂದು ಬಣ್ಣಿಸಿದ್ದಾರೆ. ಜತೆಗೆ ಭಾವನಾತ್ಮಕ ಸಾಲುಗಳನ್ನು ತಾಯಿ ಮಾಡುವ ಕೆಲಸ ವಿವರಿಸಿದ್ದಾರೆ.

ರಾಧಿಕಾ ಪಂಡಿತ್ ಜತೆ ತಂದೆ-ತಾಯಿ ಕೂಡ ವಾಸವಾಗಿದ್ದಾರೆ. ಮಕ್ಕಳ ಜತೆ ಹಾಕುವ ಫೋಟೋ, ಹಬ್ಬದ ಸಂದರ್ಭದಲ್ಲಿ ಪೋಸ್ಟ್​ ಮಾಡುವ ಚಿತ್ರಗಳಲ್ಲಿ ರಾಧಿಕಾ ತಂದೆ-ತಾಯಿ ಕೂಡ ಕಾಣಿಸಿಕೊಳ್ಳುತ್ತಾರೆ. ರಾಧಿಕಾಗೆ ಪಾಲಕರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ರಾಧಿಕಾ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ತಾಯಿ ಮಂಗಳಾ ಪಂಡಿತ್​ ಮೇಲೂ ಇದೆ. ತಾಯಿ ಜತೆ ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿರುವ ರಾಧಿಕಾ ಆ ಬಗ್ಗೆ ಹೇಳಿಕೊಂಡಿದ್ದಾರೆ.

‘ಅವತು ಎಲ್ಲ ಕೆಲಸಗಳನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ನನಗೆ ಈಗಲೂ ಅಚ್ಚರಿ ಇದೆ. ಮನೆ ಕೆಲಸ, ಅಡುಗೆ, ನನ್ನ ಮಕ್ಕಳ ಜತೆ ನನ್ನ ಹಾಗೂ ನನ್ನ ತಂದೆಯನ್ನು ನೋಡಿಕೊಳ್ಳುವುದು. ಆದಾಗ್ಯೂ ಅವರಲ್ಲಿ ಇಷ್ಟೊಂದು ಶಕ್ತಿ ಇದೆ. ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ? ನನಗೆ ಯಾಕೋ ಅನುಮಾನ. ನನ್ನ ಸೂಪರ್​ವುಮನ್​. ನನ್ನ ಅಮ್ಮ’ ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.

ಈ ಪೋಸ್ಟ್​ ನೋಡಿದ ಅಭಿಮಾನಿಗಳು ತಾಯಿಯನ್ನು ಹಾಡಿ ಹೊಗಳಿದ್ದಾರೆ. ತಾಯಿ ಎಂದರೆ ಶಕ್ತಿ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ. ಯಶ್​ ನಟನೆಯ ‘ಕೆಜಿಎಫ್​’ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್​ ಕೂಡ ಹೈಲೈಟ್​ ಆಗಿತ್ತು. ಕೆಲವರು ಈ ಸಿನಿಮಾವನ್ನೂ ನೆನಪು ಮಾಡಿಕೊಂಡಿದ್ದಾರೆ. ಯಶ್​ ನಟನೆಯ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬರೋದು ವಿಳಂಬವಾಗಿದೆ. ಏಪ್ರಿಲ್​ 14ರಂದು ಸಿನಿಮಾ ಎಲ್ಲೆಡೆ ತೆರೆಕಾಣುತ್ತಿದೆ. ಇನ್ನು, ರಾಧಿಕಾ ಪಂಡಿತ್​ ನಟನೆಯಿಂದ ದೂರವೇ ಉಳಿದಿದ್ದು, ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ​

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ದಿನ ಆಯ್ರಾ, ಯಥರ್ವ್​​ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಯಶ್-ರಾಧಿಕಾ ಪಂಡಿತ್​ ಪೂಜೆ ಮಾಡುವಾಗ ಗಂಟೆ ಬಾರಿಸಿದ ಯಥರ್ವ್​​; ವಿಡಿಯೋ ವೈರಲ್​