1992ರಲ್ಲಿ ಅಪ್ಪಾಜಿ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಕರೆದುಕೊಂಡು ಬಂದಿದ್ರು, ಈಗ ತಮ್ಮ ಕರ್ಕೊಂಡು ಬಂದಿದ್ದಾನೆ: ರಾಘಣ್ಣ ಭಾವುಕ

1992ರಲ್ಲಿ ಅಪ್ಪಾಜಿ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಕರೆದುಕೊಂಡು ಬಂದಿದ್ರು, ಈಗ ಪುನೀತ್ ಕರ್ಕೊಂಡು ಬಂದಿದ್ದಾನೆ ಎಂದು ರಾಘಣ್ಣ ಭಾವುಕರಾದ್ರು

1992ರಲ್ಲಿ ಅಪ್ಪಾಜಿ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಕರೆದುಕೊಂಡು ಬಂದಿದ್ರು, ಈಗ ತಮ್ಮ ಕರ್ಕೊಂಡು ಬಂದಿದ್ದಾನೆ: ರಾಘಣ್ಣ ಭಾವುಕ
Raghavendra-Rajkumar-Puneeth-Rajkumar
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 01, 2022 | 6:53 PM

ಇಂದು(ನ.01) ಕನ್ನಡ ರಾಜ್ಯೋತ್ಸವದಂದು ವಿಧಾನಸೌಧದ ಮುಂಭಾಗ ಡಾ.ಪುನೀತ್‌ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪ್ರಶಸ್ತಿಯನ್ನು ಗೌರವವನ್ನು ಸ್ವೀಕರಿಸಿದರು. ಇನ್ನು ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್, 1992ರಲ್ಲಿ ಅಪ್ಪಾಜಿಗೆ(ರಾಜ್​ಕುಮಾರ್) ‘ಕರ್ನಾಟಕ ರತ್ನ’ ಪ್ರಶಸ್ತಿ ದೊರಕಿತ್ತು. ಕಾರ್ಯಕ್ರಮಕ್ಕೆ ಅಪ್ಪಾಜಿ ನನ್ನನ್ನು ಕರೆದುಕೊಂಡು ಬಂದಿದ್ರು. ಈಗ ತಮ್ಮ ಕರೆದುಕೊಂಡು ಬಂದಿದ್ದಾನೆ ಎಂದ ಭಾವುಕರಾದರು.

2021ರಲ್ಲಿ ಒಂದು ಗೀಟ್ ಇದೆ ಈ ಗೀಟಿನಲ್ಲಿ ಹೇಗೆ ಬದುಕಿದ್ದೇವೆ ಎಂದು ಇಂಪಾರ್ಟೆಂಟ್ . ಸತ್ತ ದಿನ ಅಲ್ಲ ಹುಟ್ಟಿದ ದಿನ. ಸಂದೇಶ ಕೊಡುವುದಕ್ಕೆ ಗಂಧದಗುಡಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿದ್ದು, ಕಾಡು, ನೀರು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ನಟನೆ ಮಾಡಿದ್ದಾನೆ,. ಅಭಿಮಾನಿಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದರು.

Karnataka Ratna Award 2022 ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ

ಒಂದು ಸಂದೇಶ ಕೊಡುವುದಕ್ಕೆ ಗಂಧದಗುಡಿ ಮಾಡಿದ್ದಾನೆ. ಮಕ್ಕಳಿಗೆ ಇದನ್ನು ತೋರಿಸಬೇಕು ಕಲಿಸಬೇಕು. ಕಾಡು , ನೀರು , ಪರಿಸರ ತಿಳಿದುಕೊಳ್ಳಬೇಕು ಎಂದಿರುವ ರಾಘಣ್ಣ, ಪುನಿತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮಳೆಯನ್ನೂ ಲೆಕ್ಕಿಸದೇ ಭಾಗವಹಿಸಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ರು.

ಕನ್ನಡದಲ್ಲೇ ಮತನಾಡಿದ ರಜನಿಕಾಂತ್

ಈ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ರಜನಿಕಾಂತ್​ (Rajinikanth) ಅವರು ಮನಸಾರೆ ಮಾತನಾಡಿದ್ದಾರೆ. ‘67ನೇ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 7 ಕೋಟಿ ಕನ್ನಡದ ಜನತೆಗೆ ಇಲ್ಲಿಂದಲೇ ನನ್ನ ರಾಜ್ಯೋತ್ಸವದ ಶುಭಾಶಯಗಳು’ ಎನ್ನುವ ಮೂಲಕ ರಜನಿಕಾಂತ್​ ಮಾತು ಆರಂಭಿಸಿದರು. ಕನ್ನಡದಲ್ಲೇ ಮಾತನಾಡಿ ಅವರು ಕರುನಾಡಿನ ಅಭಿಮಾನಿಗಳ ಮನ ಗೆದ್ರು.

‘ಎಲ್ಲರೂ ಜಾತಿ-ಮತ ಎಂಬ ಭೇದ ಇಲ್ಲದೇ ಸಹೋದರರಂತೆ ಬಾಳಬೇಕು ಎಂದು ರಾಜರಾಜೇಶ್ವರಿ, ಅಲ್ಲಾ, ಜೀಸಸ್​ ಬಳಿ ಕೇಳಿಕೊಳ್ಳುತ್ತೇನೆ’ ಎಂದು ಸಹೋದರತ್ವದ ಆಶಯವನ್ನು ರಜನಿ ಬಿತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ರಜನಿಕಾಂತ್​ ಅವರಿಗೆ ಇರುವ ಒಡನಾಟ ತುಂಬ ವರ್ಷಗಳದ್ದು. ಅಪ್ಪು ವ್ಯಕ್ತಿತ್ವನ್ನು ಅವರು ಕೊಂಡಾಡಿದ್ರು.

Published On - 6:52 pm, Tue, 1 November 22