ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ

ನಟಿ ರಾಗಿಣಿ ದ್ವಿವೇದಿ ಅವರು ‘ರಾಗಿಣಿ ಐಪಿಎಸ್ 2’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಗುರುರಾಜ್ ಜಗ್ಗೇಶ್ ಮತ್ತು ಯತಿರಾಜ್ ಜಗ್ಗೇಶ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಕೆ. ಮಂಜು ಅವರು ನಿರ್ಮಾಣದಲ್ಲಿ ‘ರಾಗಿಣಿ ವೆಂಚರ್ಸ್’ ಕೈ ಜೋಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ
Yathiraj, Gururaj, Ragini Dwivedi, K Manju

Updated on: May 25, 2026 | 9:17 PM

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರ ಹೊಸ ಸಿನಿಮಾದ ಘೋಷಣೆ ಮಾಡಲಾಯಿತು. 12 ವರ್ಷಗಳ ಹಿಂದೆ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದ ‘ರಾಗಿಣಿ ಐಪಿಎಸ್’ ಸಿನಿಮಾ ತೆರೆಕಂಡಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್ ಮಾಡಲು ತಯಾರಿ ನಡೆದಿದೆ. ಹೌದು, ‘ರಾಗಿಣಿ ಐಪಿಎಸ್ 2’ ಸಿನಿಮಾ ಅನೌನ್ಸ್ ಆಗಿದೆ. ಜಗ್ಗೇಶ್ (Jaggesh) ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಕೆ. ಮಂಜು ಬಂಡವಾಳ ಹೂಡಲಿದ್ದಾರೆ.

ಜಗ್ಗೇಶ್ ರೀತಿಯೇ ಅವರ ಮಕ್ಕಳಾದ ಗುರುರಾಜ್, ಯತಿರಾಜ್ ಅವರು ನಟನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ನಿರ್ದೇಶನದ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ‘ರಾಗಿಣಿ ಐಪಿಎಸ್ 2’ ಸಿನಿಮಾದ ಮೂಲಕ ನಿರ್ದೇಶಕರಾಗಿ ಅವರಿಬ್ಬರು ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ರಾಗಿಣಿ ಅವರ ಹುಟ್ಟುಹಬ್ಬದ ದಿನವೇ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಕೆ. ಮಂಜು ಹಾಗೂ ‘ರಾಗಿಣಿ ವೆಂಚರ್ಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಗುರುರಾಜ್ ಮತ್ತು ಯತಿರಾಜ್ ಮಾತನಾಡಿದರು. ‘ರಾಗಿಣಿ ಐಪಿಎಸ್ ಜನಪ್ರಿಯ ಸಿನಿಮಾ. ರಾಗಿಣಿ ಅವರ ಅಭಿನಯ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ ಆ ಸಿನಿಮಾದ ಮುಂದುವರಿದ ಭಾಗವಾಗಿ ‘ರಾಗಿಣಿ ಐಪಿಎಸ್ 2’ ಸಿನಿಮಾವನ್ನು ಶುರು ಮಾಡುತ್ತಿದ್ದೇವೆ. ನಾವಿಬ್ಬರು 2019ರಿಂದಲೂ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ‌. ನಟನೆಯೇ ಬೇರೆ, ನಿರ್ದೇಶನವೇ ಬೇರೆ. ನಿರ್ದೇಶನಕ್ಕೆ ತಯಾರಿ ಅಗತ್ಯ’ ಎಂದು ಅವರು ಹೇಳಿದರು.

‘ರಾಗಿಣಿ ಅವರು ಈಗಾಗಲೇ ಜನಪ್ರಿಯ ನಟಿ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯೂ ಹೌದು. ಅವರ ಸಿನಿಮಾವನ್ನು ನಿರ್ದೇಶನ ಮಾಡುವುದು ಅಷ್ಟು ಸುಲಭವಲ್ಲ. ರಾಗಿಣಿ ಐಪಿಎಸ್ ಸಿನಿಮಾದ ಮುಂದುವರಿದ ಭಾಗ ಎಂದರೆ, ಮೊದಲ ಸಿನಿಮಾದಲ್ಲಿ ಕಥೆ ಎಲ್ಲಿ ಕೊನೆಯಾಗಿತ್ತೋ ಈಗ ಅಲ್ಲಿಂದಲೇ ಮುಂದುವರಿಯುತ್ತದೆ’ ಎಂದು ಗುರುರಾಜ್ ಮತ್ತು ಯತಿರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬಿ ಹಾಡು ಕೇಳುತ್ತಾ ಎಂಜಾಯ್ ಮಾಡಿದ ರಾಗಿಣಿ

ರಾಗಿಣಿ ದ್ವಿವೇದಿ ಅವರು ಮಾತನಾಡಿ, ‘ಕೆ.ಮಂಜು ಅವರು ನಿರ್ಮಾಣಕ್ಕೆ ಜೊತೆಯಾಗಿರುವುದು ಮತ್ತು ಜಗ್ಗೇಶ್ ಪುತ್ರರಾದ ಗುರುರಾಜ್, ಯತಿರಾಜ್ ನಿರ್ದೇಶನ ಮಾಡುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಹೇಳಿದರು. ‘ಈ ಸಿನಿಮಾದ ಕಥೆ ಬಹಳ ಚೆನ್ನಾಗಿದೆ. ಆದಷ್ಟು ಬೇಗ ಚಿತ್ರದ ಕೆಲಸಗಳಿಗೆ ಚಾಲನೆ ಸಿಗಲಿದೆ’ ಎಂದು ನಿರ್ಮಾಪಕ ಕೆ ಮಂಜು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us