ಅರೇಬಿಕ್ ಭಾಷೆಗೆ ಡಬ್ ಆಯ್ತು ರಾಜ್ ಬಿ. ಶೆಟ್ಟಿ ಸಿನಿಮಾ; ಆಗಸ್ಟ್ 2ಕ್ಕೆ ಗಲ್ಫ್​ನಲ್ಲಿ ರಿಲೀಸ್

|

Updated on: Jul 31, 2024 | 8:46 AM

ರಾಜ್ ಬಿ. ಶೆಟ್ಟಿ ಅವರು ಇತ್ತೀಚೆಗೆ ಮಲಯಾಳಂನ ‘ಟರ್ಬೋ’ ಹೆಸರಿನ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಚಿತ್ರ ಗಮನ ಸೆಳೆದಿತ್ತು. ಈ ಸಿನಿಮಾಗೆ ಮಮ್ಮೂಟಿ ಹೀರೋ. ವೆಟ್ರಿವೇಲ್‍ ಷಣ್ಮುಖಂ ಹೆಸರಿನ ಪಾತ್ರದಲ್ಲಿ ರಾಜ್ ಶೆಟ್ಟಿ ಗಮನ ಸೆಳೆದಿದ್ದರು. ಈಗ ಈ ಸಿನಿಮಾ ಅರೇಬಿಕ್ ಭಾಷೆಗೆ ಡಬ್ ಆಗಿದೆ.

ಅರೇಬಿಕ್ ಭಾಷೆಗೆ ಡಬ್ ಆಯ್ತು ರಾಜ್ ಬಿ. ಶೆಟ್ಟಿ ಸಿನಿಮಾ; ಆಗಸ್ಟ್ 2ಕ್ಕೆ ಗಲ್ಫ್​ನಲ್ಲಿ ರಿಲೀಸ್
ರಾಜ್ ಬಿ ಶೆಟ್ಟಿ
Follow us on

ರಾಜ್ ಬಿ. ಶೆಟ್ಟಿ ಅವರ ಖ್ಯಾತಿ ಹೆಚ್ಚಿದೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಅವರು ಗಮನ ಸೆಳೆದರು. ಆ ಬಳಿಕ ಅವರನ್ನು ಒಳ್ಳೆಯ ಸಿನಿಮಾಗಳು ಅರಸಿ ಬಂದವು. ಇತ್ತೀಚೆಗೆ ಅವರ ನಟನೆಯ ‘ರೂಪಾಂತರ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅದೇ ರೀತಿ ಈಗ ಅವರು ನಟಿಸಿದ ಸಿನಿಮಾ ಒಂದು ಅರೇಬಿಕ್ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ವಿಚಾರದ ಬಗ್ಗೆ ತಂಡದ ಕಡೆಯಿಂದಲೇ ಘೋಷಣೆ ಆಗಿದೆ.

ರಾಜ್ ಬಿ. ಶೆಟ್ಟಿ ಅವರು ಇತ್ತೀಚೆಗೆ ಮಲಯಾಳಂನ ‘ಟರ್ಬೋ’ ಹೆಸರಿನ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಚಿತ್ರ ಗಮನ ಸೆಳೆದಿತ್ತು. ಈ ಸಿನಿಮಾಗೆ ಮಮ್ಮೂಟಿ ಹೀರೋ. ವೆಟ್ರಿವೇಲ್‍ ಷಣ್ಮುಖಂ ಹೆಸರಿನ ಪಾತ್ರದಲ್ಲಿ ರಾಜ್ ಶೆಟ್ಟಿ ಗಮನ ಸೆಳೆದಿದ್ದರು. ಈಗ ಈ ಸಿನಿಮಾ ಅರೇಬಿಕ್ ಭಾಷೆಗೆ ಡಬ್ ಆಗಿದೆ. ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ.

ಆಗಸ್ಟ್ 2ರಂದು ಗಲ್ಫ್ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಅರೇಬಿಕ್ ಭಾಷೆಗೆ ಡಬ್ ಆದ ಮೊದಲ ಭಾರತೀಯ ಸಿನಿಮಾ ಅನ್ನೋದು ವಿಶೇಷ. ಗಲ್ಫ್ ದೇಶಗಳಲ್ಲಿ ‘ಟ್ರೂಥ್‍ ಗ್ಲೋಬಲ್‍ ಫಿಲ್ಮ್ಸ್’ ಮೂಲಕ ಸಮದ್‍ ಟ್ರೂಥ್‍ ‘ಟರ್ಬೋ’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ‘ಟರ್ಬೋ’ ಚಿತ್ರದ ಮಲಯಾಳಂ ಅವತರಣಿಕೆಯು ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಚಿತ್ರವನ್ನು ಅರೇಬಿಕ್ ಭಾಷೆಗೆ ಡಬ್‍ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ತುಂಬಾ ಹಿಂದಿನಿಂದಲೂ ಥಿಯೇಟರ್​ಗೆ ಜನ ಬರ್ತಿಲ್ಲ; ದರ್ಶನ್ ಫ್ಯಾನ್ಸ್​ ಸಿನಿಮಾ ನೋಡಲ್ಲ ಎಂಬ ಹೇಳಿಕೆ ಬಗ್ಗೆ ರಾಜ್ ಬಿ ಶೆಟ್ಟಿ ಮಾತು

‘ಟರ್ಬೋ’ ಚಿತ್ರದಲ್ಲಿ ಮಮ್ಮೂಟ್ಟಿ, ರಾಜ್ ಬಿ ಶೆಟ್ಟಿ ಜೊತೆ ಅಂಜನ ಜಯಪ್ರಕಾಶ್, ತೆಲುಗಿನ ಸುನೀಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಮೊದಲಾದವರು ಅಭಿನಯಿಸಿದ್ದಾರೆ. ಕ್ರಿಸ್ಟೋ ಕ್ಸೇವಿಯರ್‍ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ‘ಪುಲಿಮುರುಗನ್’, ‘ಮಧುರೈ ರಾಜ’ ಅಂತಹ ಹಿಟ್‍ ಚಿತ್ರಗಳನ್ನು ನಿರ್ದೇಶಿಸಿರುವ ವೈಶಾಕ್‍ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.