ಸನ್ನಡತೆ ಆಧಾರದಲ್ಲಿ ಬಿಡುಗಡೆ; ದರ್ಶನ್ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದ ಅಭಿಮಾನಿ ಮತ್ತೆ ಜೈಲಿಗೆ?
ಸಿದ್ದಾರೂಢ ದರ್ಶನ್ ಅಭಿಮಾನಿ ಕೂಡ ಹೌದು. ‘ದರ್ಶನ್ ಅವರ ಭೇಟಿಗೆ ಅವಕಾಶ ಕೇಳಿದೆ. ನನಗೆ ಒಪ್ಪಿಗೆ ಸಿಕ್ಕಿತು. ಅವರು ನನ್ನನ್ನು ತಬ್ಬಿದರು. ಅವರಿಗೆ ಧ್ಯಾನ ಹೇಳಿಕೊಟ್ಟೆ. ಎಲ್ಲರಿಗೂ ಈ ಅವಕಾಶ ಸಿಗಲ್ಲ’ ಎಂದು ಸಿದ್ದಾರೂಢ ಹೇಳಿಕೊಂಡಿದ್ದ. ಈಗ ಈತನ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ, ಅವರಿಗೆ ಧ್ಯಾನ ಹೇಳಿಕೊಟ್ಟಿದ್ದೇನೆ, ದರ್ಶನ್ ಅವರದ್ದು ವಿಐಪಿ ಸೆಲ್, ಅಲ್ಲಿ ಟಿವಿ ಇದೆ.. ಹೀಗೆ ಸಾಲು ಸಾಲು ಸುಳ್ಳುಗಳನ್ನು ಹೇಳಿದ್ದ ಮಾಜಿ ಖೈದಿ ಸಿದ್ದಾರೂಢನಿಗೆ ಈಗ ಮತ್ತೆ ಜೈಲು ಸೇರುವ ಭಯ ಕಾಡಿದೆ. ಸನ್ನಡತೆ ಆಧಾರದ ಮೇಲೆ ಮೊದಲೇ ರಿಲೀಸ್ ಆಗಿದ್ದ ಸಿದ್ದಾರೂಢ, ಮಾಧ್ಯಮಗಳ ಮುಂದೆ ಸಾಕಷ್ಟು ಬಿಲ್ಡಪ್ ಕೊಟ್ಟಿದ್ದ. ಈಗ ಆತನ ಸನ್ನಡತೆ ಕ್ಯಾನ್ಸಲ್ ಮಾಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಕೊಲೆ ಕೇಸ್ನಲ್ಲಿ ಸಿದ್ದಾರೂಢ ಅರೆಸ್ಟ್ ಆಗಿ ಬಳ್ಳಾರಿ ಜೈಲಿನಲ್ಲಿ ಇದ್ದ. ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಸನ್ನಡತೆ ಆಧಾರದ ಮೇಲೆ ಮೊದಲೇ ರಿಲೀಸ್ ಆಗಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳು ಆತನನ್ನು ಮುತ್ತಿಕೊಂಡವು. ಈತ ದರ್ಶನ್ ಅಭಿಮಾನಿ ಕೂಡ ಹೌದು. ‘ದರ್ಶನ್ ಅವರ ಭೇಟಿಗೆ ಅವಕಾಶ ಕೇಳಿದೆ. ನನಗೆ ಒಪ್ಪಿಗೆ ಸಿಕ್ಕಿತು. ಅವರು ನನ್ನನ್ನು ತಬ್ಬಿದರು. ಅವರಿಗೆ ಧ್ಯಾನ ಹೇಳಿಕೊಟ್ಟೆ. ಎಲ್ಲರಿಗೂ ಈ ಅವಕಾಶ ಸಿಗಲ್ಲ’ ಎಂದು ಸಿದ್ದಾರೂಢ ಹೇಳಿಕೊಂಡಿದ್ದ.
ಸಿದ್ದಾರೂಢನಿಗೆ ಕಾನೂನು ಮೂಲಕವೇ ಬಿಸಿ ಮುಟ್ಟಿಸಲು ಕಾರಾಗೃಹ ಇಲಾಖೆ ಮುಂದಾಗಿದೆ. ಈತನಿಗೆ ನೀಡಲಾಗಿದ್ದ ಸನ್ನಡತೆಯನ್ನು ಕ್ಯಾನ್ಸಲ್ ಮಾಡಲು ಜೈಲಾಧಿಕಾರಿಗಳ ತೀರ್ಮಾನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಜೈಲಿನ ಮ್ಯಾನ್ಯುಯಲ್ ಪ್ರಕಾರ ಶಿಸ್ತು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕಾರಾಗೃಹದ ಬಗ್ಗೆ ಅವಹೇಳನ ಹಾಗೂ ದರ್ಶನ್ ಭೇಟಿಯಾಗದಿದ್ದರೂ ಭೇಟಿಯಾಗಿದ್ದಾಗಿ ಅವರು ಹೇಳಿಕೆ ನೀಡಿದ್ದರು. ಸದ್ಯ ಕಾರಾಗೃಹ ಇಲಾಖೆಯಿಂದ ಗೃಹ ಇಲಾಖೆ ರಿಪೋರ್ಟ್ ಕೇಳಿದೆ.
ಮೇ ತಿಂಗಳ ಎಂಟನೇ ತಾರೀಕು ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಿದ್ಧಾರೂಢ ಬಂದಿದ್ದ. ಆತನನ್ನು ಒಂಬತ್ತನೇ ತಾರೀಕು ಬಿಡುಗಡೆ ಆಗಿದ್ದ. ಇಲ್ಲಿ ದರ್ಶನ್ ಅನ್ನು ಅವರು ಭೇಟಿ ಆಗಿಲ್ಲ. ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: : ಸಿದ್ಧಾರೂಢ ದರ್ಶನ್ ಭೇಟಿಯಾಗಿದ್ದು ಸುಳ್ಳಾ? ನೊಟೀಸ್ ಕೊಟ್ಟ ಪೊಲೀಸರು
ಸಿದ್ದಾರೂಢಗೆ ನೀಡಲಾಗಿದ್ದ ಸನ್ನಡತೆಯನ್ನು ಕ್ಯಾನ್ಸಲ್ ಮಾಡಿ, ಸ್ಥಳೀಯ ಪೊಲೀಸ್ ಠಾಣೆಯಿಂದಲೇ ಬಂಧಿಸಲು ತೀರ್ಮಾನ ಮಾಡಲಾಗಿದೆ. ಸದ್ಯ ಮೂರು ದಿನದಲ್ಲಿ ಕಾರಾಗೃಹ ಇಲಾಖೆ ಕೈಗೆ ರಿಪೋರ್ಟ್ ಸೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:21 am, Wed, 31 July 24