ಸ್ಟಾರ್ ಹೀರೋಗಳಿಗೆ ನಿರ್ದೇಶನ ಮಾಡಲ್ಲ ರಾಜ್ ಬಿ. ಶೆಟ್ಟಿ; ದಿಟ್ಟ ನಿರ್ಧಾರಕ್ಕೆ ಕಾರಣ ಇಲ್ಲಿದೆ

ರಾಜ್ ಬಿ ಶೆಟ್ಟಿ ಅವರು ಸ್ಟಾರ್ ನಟರೊಂದಿಗೆ ಕೆಲಸ ಮಾಡಲು ಇಷ್ಟಪಡೋದಿಲ್ಲ. ಹೊಸಬರನ್ನು ಪ್ರೋತ್ಸಾಹಿಸುವುದು ಅವರ ಮುಖ್ಯ ಗುರಿ. ‘ಸು ಫ್ರಮ್ ಸೋ’ ಚಿತ್ರದ ಯಶಸ್ಸಿನ ಹೊರತಾಗಿಯೂ, ಅವರು ತಮ್ಮ ನೀತಿಯನ್ನು ಬದಲಾಯಿಸಿಲ್ಲ. ಹೊಸ ತಂಡಗಳೊಂದಿಗೆ ಕೆಲಸ ಮಾಡುವುದರ ಮಹತ್ವವನ್ನು ಅವರು ವಿವರಿಸಿದ್ದಾರೆ.

ಸ್ಟಾರ್ ಹೀರೋಗಳಿಗೆ ನಿರ್ದೇಶನ ಮಾಡಲ್ಲ ರಾಜ್ ಬಿ. ಶೆಟ್ಟಿ; ದಿಟ್ಟ ನಿರ್ಧಾರಕ್ಕೆ ಕಾರಣ ಇಲ್ಲಿದೆ
ರಾಜ್

Updated on: Aug 05, 2025 | 1:30 PM

ರಾಜ್​ ಬಿ. ಶೆಟ್ಟಿ (Raj B Shetty) ಅವರು ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಹೊಸಬರ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. ರಾಜ್ ಅವರು ಇಷ್ಟು ವರ್ಷಗಳ ಕಾಲ ಅವರು ಹೊಸ ತಂಡದ ಜೊತೆ ಕೆಲಸ ಮಾಡಲು ಇಷ್ಟಡುತ್ತಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

‘ದುಲ್ಕರ್ ಸಲ್ಮಾನ್ ಅವರ ಚಿತ್ರಕ್ಕೆ ನಿರ್ದೇಶನ ಮಾಡ್ತೀರಾ’ ಎಂದು ಹಾಲಿವುಡ್ ರಿಪೋರ್ಟರ್​ ಯೂಟ್ಯೂಬ್ ಚಾನೆಲ್ ಆ್ಯಂಕರ್ ಅನುಪಮಾ ಚೋಪ್ರಾ ಕೇಳಿದರು. ಇದಕ್ಕೆ ರಾಜ್ ಬಿ. ಶೆಟ್ಟಿ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ. ‘ನಾನು ಸ್ಟಾರ್​ಗಳಿಗೆ ನಿರ್ದೇಶನ ಮಾಡಲ್ಲ. ಅದು ತುಂಬಾನೇ ನೋವಿನ ಪ್ರಕ್ರಿಯೆ. ಸಿನಿಮಾ ನನಗೆ ತುಂಬಾನೇ ವೈಯಕ್ತಿಕ ವಿಷಯ. ನಾನು ಬೇರೆಯವರಿಗೆ ಕಾಯಬೇಕು, ಕೆಲವರು ಇದನ್ನು ಒಪ್ಪಬೇಕು, ಆ ಬಳಿಕ ಓಕೆ ಹೇಳಬೇಕು ಎಂದರೆ ಅದು ಸಾಧ್ಯವಿಲ್ಲ. ನನಗೆ ಹಾಗೆ ಕೆಲಸ ಮಾಡೋಕೆ ಆಗಲ್ಲ’ ಎಂದಿದ್ದಾರೆ ರಾಜ್.

ರಾಜ್ ಬಿ ಶೆಟ್ಟಿ ಸಂದರ್ಶನ

ಇದನ್ನೂ ಓದಿ
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ
ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’
ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರೀತಿಯೇ ಕೇಸ್ ಹಾಕಿದ ನಟಿ
ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದಂಪತಿ ಪೈಕಿ ಯಾರು ಶ್ರೀಮಂತರು?

‘ಇದು ನನ್ನ ಆಯ್ಕೆಯೂ ಹೌದು. ಹಣ ಮಾಡಬೇಕು ಎಂಬುದು ನನಗೆ ಇಲ್ಲ. ನನಗೆ ಸ್ಟಾರ್ ಸಿನಿಮಾ ಮಾಡಬೇಕು ಎಂಬುದಿಲ್ಲ. ಹೊಸ ತಂಡದ ಜೊತೆ ಸಿನಿಮಾ ಮಾಡಬೇಕು. ನಾನು ಒಂದು ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದೇನೆ. ನಾನೇ ಬರೆಯುತ್ತಿದ್ದೇನೆ. ವೆಬ್ ಸೀರಿಸ್ ಮಾಡುತ್ತಿದ್ದೇನೆ, ಇದು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಇದರ ಜೊತೆ ಹೊಸಬರ ಸಿನಿಮಾ ನಿರ್ಮಾಣ ಮಾಡುತ್ತೇನೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ: ಬಾವ ಬಂದರು ಹಾಡಿಗೆ ರಾಜ್ ಬಿ ಶೆಟ್ಟಿ ಗ್ಯಾಂಗ್​ನಿಂದ ಭರ್ಜರಿ ಸ್ಟೆಪ್

ರಾಜ್ ಬಿ ಶೆಟ್ಟಿ ಅವರು ಮೊದಲ ಬಾರಿಗೆ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮಾಡಿದರು. ಈ ಚಿತ್ರ ಮೆಚ್ಚುಗೆ ಪಡೆಯಿತು. ಆ ಬಳಿಕ ಅವರು ಹೊಸ ತಂಡಗಳ ಜೊತೆ ಹೆಚ್ಚು ಕೆಲಸ ಮಾಡಲು ಇಷ್ಟಪಡುತ್ತಾರೆ. ಈಗ ‘ಸು ಫ್ರಮ್ ಸೋ’ ಸಿನಿಮಾದಿಂದ ದೊಡ್ಡ ಗೆಲುವು ಕಂಡ ಹೊರತಾಗಿಯೂ ಅವರು ತಮ್ಮ ಮೂಲಕ ನಿಯಮ ಬಿಡುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:24 pm, Tue, 5 August 25