‘ಹಿರಣ್ಯ’ ಟೀಸರ್​ ಬಿಡುಗಡೆ: ‘ಬಿಚ್ಚುಕತ್ತಿ’ ರಾಜವರ್ಧನ್ ಭರ್ಜರಿ ಆಕ್ಷನ್

|

Updated on: Nov 30, 2023 | 10:30 PM

Hiranya: ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಭರವಸೆ ಮೂಡಿಸಿರುವ ರಾಜವರ್ಧನ್ ಅವರು ‘ಹಿರಣ್ಯ’ ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಆಕ್ಷನ್ ಭರಿತ ಟೀಸರ್ ಬಿಡುಗಡೆ ಆಗಿದೆ.

‘ಹಿರಣ್ಯ’ ಟೀಸರ್​ ಬಿಡುಗಡೆ: ‘ಬಿಚ್ಚುಕತ್ತಿ’ ರಾಜವರ್ಧನ್ ಭರ್ಜರಿ ಆಕ್ಷನ್
Follow us on

‘ಬಿಚ್ಚುಕತ್ತಿ’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ರಾಜವರ್ಧನ್ (Rajavardhan), ‘ಹಿರಣ್ಯ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೀಗ ‘ಹಿರಣ್ಯ’ ಸಿನಿಮಾದ ಮಾಸ್ ಟೀಸರ್ (Teaser) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಾಜವರ್ಧನ್ ಭರ್ಜರಿ ಆಕ್ಷನ್ ಮಾಡಿದ್ದಾರೆಂಬುದರ ಕುರುಹು ಟೀಸರ್​ನಲ್ಲಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಹಿರಣ್ಯ’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಜವರ್ಧನ್, ‘ಹಿರಣ್ಯ’ ಸಿನಿಮಾದ ಕತೆಯನ್ನು ಎರಡು ವರ್ಷದ ಹಿಂದೆ ಪ್ರವೀಣ್ ಹೇಳಿದ್ದರು. ‘ಬಿಚ್ಚುಕತ್ತಿ’ ರೀತಿಯ ದೊಡ್ಡ ಸಿನಿಮಾ ಮಾಡಿದ್ದೆ. ಹಾಗಾಗಿ ಈ ಸಮಯದಲ್ಲಿ ಕಥೆ ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಪ್ರವೀಣ್ ಕಥೆ ಹೇಳಿದಾಗ ಒಂದು ಅಂಶ ಬಹಳ ಇಷ್ಟವಾಯ್ತು. ನಿರ್ದೇಶಕ ಪ್ರವೀಣ್ ಕಿರುಚಿತ್ರ ಮಾಡಿ ಸಿನಿಮಾ ನಿರ್ದೇಶನಕ್ಕೆ ಇಳಿದವರು ನೀವು ಈ ಮಟ್ಟಕ್ಕೆ ಬಂದಿದ್ದೀರಾ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು. ಕಥೆಯನ್ನು ನೀವು ನಂಬಿದ್ದೀರಾ. ನಿರ್ಮಾಪಕರು ನಿಮ್ಮನ್ನು ನಂಬಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ ಎಂದರು.

ನಿರ್ದೇಶಕ ಪ್ರವೀಣ್ ಅವ್ಯುಕ್ತ ಮಾತನಾಡಿ, ಸಿನಿಮಾದ ಮುಹೂರ್ತದಲ್ಲಿಯೇ ಹೇಳಿದ್ದೆ ಈಗ ಮಾತನಾಡಲ್ಲ ಕೆಲಸ ಮುಗಿಸಿದ ಮೇಲೆ ನಿಮ್ಮ ಮುಂದೆ ಬರುತ್ತೇವೆ ಅಂತ. ಅದರಂತೆ ಕೆಲಸ ಮುಗಿಸಿ ಈಗ ಜನರ ಮುಂದೆ ಬಂದಿದ್ದೇವೆ. ಈ ಸಿನಿಮಾ ಎಲ್ಲರೂ ಒಟ್ಟು ಸೇರಿ ಎಂಜಾಯ್ ಮಾಡಬೇಕಾದಂಥಹಾ ಸಿನಿಮಾ. ರಾಣಾ ಡೆಡ್ಲಿ ಹೆಸರಿನ ಪಾತ್ರದಲ್ಲಿ ರಾಜವರ್ಧನ್ ಮಿಂಚಿದ್ದಾರೆ. ಮೊದಲಿಗೆ ಪಾತ್ರಕ್ಕಾಗಿ ರಾಜವರ್ಧನ್ ಅವರ ಟೆಸ್ಟ್ ಲುಕ್ ಮಾಡಿದೆವು, ನನಗೆ ಬಹಳ ಇಷ್ಟವಾಯ್ತು. ಸಿನಿಮಾದಲ್ಲಿ ಸಹ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇಡೀ ತಂಡ ನೀಡಿದ ಬೆಂಬಲದಿಂದಾಗಿ ಈ ಚಲನಚಿತ್ರ ತಯಾರಾಗಿದೆ ಎಂದು ಎಲ್ಲರಿಗೂ ಧನ್ಯವಾದ ಹೇಳಿದರು.

ಇದನ್ನೂ ಓದಿ:ತೆಲುಗು ಯುವನಟನ ‘ಹರೋಮ್ ಹರ’ ಸಿನಿಮಾ ಟೀಸರ್ ರಿಲೀಸ್ ಮಾಡಲಿರುವ ಸುದೀಪ್

ಸಿನಿಮಾದ ನಿರ್ಮಾಪಕ ವಿಜಯ್ ಗೌಡ ಮಾತನಾಡಿ, ನಿರ್ದೇಶಕ ಪ್ರವೀಣ್ ಕತೆ ತೆಗೆದುಕೊಂಡು ಬಂದು ನಮ್ಮನ್ನು ಕೇಳಿದರು. ಆ ನಂತರ ಕತೆಗೆ ತಕ್ಕದಾದ ನಟ ಎಂಬ ಕಾರಣಕ್ಕೆ ರಾಜವರ್ಧನ್ ಅವರನ್ನು ನಟಿಸುವಂತೆ ಕೇಳಿದೆವು. ಅವರೂ ಸಹ ಒಪ್ಪಿಕೊಂಡರು. ಆ ನಂತರ ಇತರೆ ನಟರು, ತಂತ್ರಜ್ಞರನ್ನು ಕಟ್ಟಿಕೊಂಡು ಸಿನಿಮಾ ಪ್ರಾರಂಭ ಮಾಡಿದೆವು. ರಾಜವರ್ಧನ್ ಹಾಗೂ ಇಡೀ ತಂಡದ ಬೆಂಬಲದಿಂದಾಗಿ ಈ ಸಿನಿಮಾ ಇಲ್ಲಿವರೆಗೆ ಬಂದಿದೆ, ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಸಹ ಆಗಲಿದೆ ಎಂದರು.

ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಪಡೆದಿರುವ ಪ್ರವೀಣ್‌ ಅವ್ರ್ಯುಕ್ತ್ ‘ಹಿರಣ್ಯ’ ಸಿನಿಮಾದ ಮೂಲಕ ಮೊದಲ ಫೀಚರ್ ಲೆಂತ್ ಸಿನಿಮಾ ಮಾಡುತ್ತಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ಸಿನಿಮಾದಲ್ಲಿ ರಾಜವರ್ಧನ್​ಗೆ ನಾಯಕಿಯಾಗಿ ಯುವನಟಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸಹ ಸಿನಿಮಾದಲ್ಲಿದ್ದಾರೆ. ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೇದಾಸ್‌ ಇನ್ಫಿನಿಟಿ ಪಿಕ್ಚರ್ ನಿರ್ಮಾಣ ಸಂಸ್ಥೆಯ ಮೂಲಕ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ‘ಹಿರಣ್ಯ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ