ವರನಟ ಡಾ.ರಾಜ್ಕುಮಾರ್ ಅವರು 2006ರ ಏಪ್ರಿಲ್ 12ರಂದು ಮೃತಪಟ್ಟರು. ಇಂದು ಅವರ ಪುಣ್ಯತಿಥಿ. ಈ ವೇಳೆ ಅಭಿಮಾನಿಗಳು ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅವರು ನಟಿಸಿದ ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ಕುಮಾರ್ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಕೆ ಮಾಡಲಿದ್ದಾರೆ. ರಾಜ್ಕುಮಾರ್ ಮೃತಪಟ್ಟ ದಿನ ಬೆಂಗಳೂರಿನಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆದವು. ಅಣ್ಣಾವ್ರು ಮೃತಪಟ್ಟ ವಿಚಾರವನ್ನು ಅನೇಕರಿಂದ ಅರಗಿಸಿಕೊಳ್ಳೋಕೆ ಸಾಧ್ಯವೇ ಆಗಿರಲಿಲ್ಲ. ಒಂದೊಮ್ಮೆ ರಾಜ್ಕುಮಾರ್ (Rajkumar) ಮೃತಪಟ್ಟ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರೆ ಅಷ್ಟೆಲ್ಲ ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಅನೇಕರದ್ದು.
ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದರು. ರಾಜ್ಕುಮಾರ್ ಅವರು ಮೃತಪಟ್ಟ ವಿಚಾರ ಕುಟುಂಬದವರಿಗೆ ಶಾಕಿಂಗ್ ಎನಿಸಿತ್ತು. 2008ರ ಏಪ್ರಿಲ್ 12ರ ಮಧ್ಯಾಹ್ನ 2 ಗಂಟೆಗೆ ರಾಜ್ಕುಮಾರ್ ನಿಧನ ವಾರ್ತೆ ಅವರಿಗೆ ತಿಳಿದಿತ್ತು. ಸ್ವತಃ ರಾಘವೇಂದ್ರ ರಾಜ್ಕುಮಾರ್ ಅವರು ಸಾರಾ ಗೋವಿಂದುಗೆ ಮಾಹಿತಿ ನೀಡಿದ್ದರು. ಇದನ್ನು ಕೇಳಿ ಅವರಿಗೆ ಶಾಕ್ ಆಯಿತು. ಅವರು ನೇರವಾಗಿ ರಾಜ್ಕುಮಾರ್ ಮನೆಗೆ ಹೋದರು.
ಇಂಗ್ಲಿಷ್ ಮಾಧ್ಯಮವೊಂದು ಡಾಕ್ಟರ್ನ ಸಂದರ್ಶನ ಮಾಡಲು ಎಂಎಸ್ ರಾಮಯ್ಯ ಆಸ್ಪತ್ರೆಗೆ ಬಂದಿತ್ತು. ಅದೇ ಸಮಯಕ್ಕೆ ರಾಜ್ಕುಮಾರ್ ಅವರ ಡೆಡ್ ಬಾಡಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿದ್ದ ಮಾಧ್ಯಮದವರು ಕೇಳಿದರೂ ಕುಟುಂಬದವರು ಸುಳ್ಳು ಹೇಳಿದ್ದರು. ‘ರಾಜ್ಕುಮಾರ್ಗೆ ಅನಾರೋಗ್ಯ ಆಗಿದೆ. ಹೀಗಾಗಿ, ನಾವು ಆಸ್ಪತ್ರೆಗೆ ಕರೆತಂದಿದ್ದೇವೆ’ ಎಂದು ಮಾಹಿತಿ ನೀಡಿದ್ದರು. ಆದರೆ, ಆ ಮಾಧ್ಯಮದವರು ಬೇರೆ ಕಡೆಯಿಂದ ವಿಚಾರಿಸಿದಾಗ ರಾಜ್ಕುಮಾರ್ ಮೃತಪಟ್ಟಿರೋ ವಿಚಾರ ತಿಳಿದಿತ್ತು. ಅವರು ನ್ಯೂಸ್ನ ಬ್ರೇಕ್ ಮಾಡಿಯೇ ಬಿಟ್ಟರು. ಇದನ್ನು ಕೇಳಿ ಜನರು ರೊಚ್ಚಿಗೆದ್ದರು.
ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರಾಜ್ಕುಮಾರ್ ಶವ ಇದೆ ಎಂದರೆ ಆಸ್ಪತ್ರೆಯ ಗತಿ, ಅಲ್ಲಿರುವ ರೋಗಿಗಳ ಗತಿ ಏನಾಗಬೇಕು ಎನ್ನುವ ಚಿಂತೆ ಕುಟುಂಬದವರಿಗೆ ಕಾಡಿತು. ಹೀಗಾಗಿ, ಶವನ ಮನೆಗೆ ತೆಗೆದುಕೊಂಡು ಹೋಗಲಾಯಿತು. ಪೊಲೀಸರಿಗೆ ಸಾರಾ ಗೋವಿಂದು ಅವರು ಭದ್ರತೆ ನೀಡುವಂತೆ ಮನವಿ ಮಾಡಿಕೊಂಡರು. ಆದರೆ, ಪೊಲೀಸರು ಇದನ್ನು ಗಂಭೀರವಾಗಿ ಸ್ವೀಕರಿಸಿಯೇ ಇರಲಿಲ್ಲ.
ಕಣ್ಣನ್ನು ದಾನ ಮಾಡಿದ ಬಳಿಕ ರಾಜ್ಕುಮಾರ್ ಬಾಡಿಯನ್ನು ಪ್ಯಾಲೇಸ್ ಗ್ರೌಂಡ್ಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಜನವೋ ಜನ. ಇದ್ದಿದ್ದೇ ಕೆಲವೇ ಕೆಲವು ಪೊಲೀಸರು. ಮರಳಿ ಮನೆಗೆ ಹೋಗಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಆ್ಯಂಬುಲೆನ್ಸ್ ಅಡಿಯಲ್ಲಿ ಫ್ಯಾನ್ಸ್ ಮಲಗಿದ್ದರಿಂದ ವಾಹನ ತೆಗೆಯೋಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್ರಾಜ್ಕುಮಾರ್, ಬೆಲೆ ಎಷ್ಟು ಕೋಟಿ?
ರಾಜ್ಕುಮಾರ್ ಮೃತಪಟ್ಟ ವಿಚಾರ ಕೇಳಿ ಫ್ಯಾನ್ಸ್ ರೊಚ್ಚಿಗೆದ್ದರು. ಅಭಿಮಾನಿಗಳು ಕಲ್ಲು ತೂರಾಟ ಮಾಡಿದರು. ರಾತ್ರಿ ವೇಳೆಗೆ ಎಲ್ಲವೂ ಕಂಟ್ರೋಲ್ಗೆ ಸಿಕ್ಕಿತ್ತು. ಪೊಲೀಸ್ ಫೋರ್ಸ್ ಬಂದ ಬಳಿಕ ಎಲ್ಲವೂ ಶಾಂತವಾಯ್ತು. ನಂತರ ಕಂಠೀರವ ಕಂಠೀರವ ಸ್ಟೇಡಿಯಂನಲ್ಲಿ ರಾಜ್ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ರಾಜ್ಕುಮಾರ್ ಶವವನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಬೇಕಿತ್ತು. ಆಗ ಸಾಕಷ್ಟು ಗಲಾಟೆ ನಡೆದಿತ್ತು. ಪೊಲೀಸ್ ಫೈರಿಂಗ್ನಲ್ಲಿ ಎಂಟು ಜನರು ಮೃತಪಟ್ಟರು. ಬೇಸರದ ಸಂಗತಿ ಎಂದರೆ ಅಂತಿಮ ಸಂಸ್ಕಾರವನ್ನು ಸರಿಯಾಗಿ ಮಾಡಲು ಕುಟುಂಬದವರಿಗೆ ಆಗಿಲ್ಲ. ಕುಟುಂಬದವರು ಹಾಕಬೇಕಿದ್ದ ಮಣ್ಣನನ್ನು ಅಲ್ಲಿದ್ದ ಅಭಿಮಾನಿಗಳೇ ಹಾಕಿದ್ದರು. ಪುನೀತ್ ಹಾಗೂ ಶಿವರಾಜ್ಕುಮಾರ್ಗೆ ಅಂತಿಮ ಸಂಸ್ಕಾರ ನಡೆಯುವ ಜಾಗದ ಬಳಿಯೂ ಹೋಗೋಕೆ ಹರಸಾಹಸ ಪಡಬೇಕಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:09 am, Fri, 12 April 24