ಹೊಟ್ಟೆ ಉರಿಗೆ ಅಣ್ಣಾವ್ರ ಸಿನಿಮಾಗೆ ಕೆಟ್ಟ ವಿಮರ್ಶೆ; ರಾಜ್​ಕುಮಾರ್ ಪ್ರತಿಕ್ರಿಯಿಸಿದ್ದ ರೀತಿಗೆ ಎಲ್ಲರೂ ಶಾಕ್

| Updated By: ರಾಜೇಶ್ ದುಗ್ಗುಮನೆ

Updated on: Jul 17, 2024 | 8:07 AM

ರಾಜ್​ಕುಮಾರ್ ಅವರು ಸ್ಟಾರ್ ಹೀರೋ ಆಗಿದ್ದರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಅನೇಕರನ್ನು ಬೆಳೆಸಿದ್ದಾರೆ. ನಿರ್ದೇಶಕ ಗುರುಪ್ರಸಾಸದ್ ಅವರು ಅಣ್ಣಾವ್ರ ದೊಡ್ಡತನದ ಬಗ್ಗೆ ಈ ಮೊದಲು ಮಾತನಾಡಿದ್ದರು. ಸಿನಿಮಾಗೆ ಕೆಟ್ಟ ವಿಮರ್ಶೆ ಬರೆದ ವಿಚಾರವನ್ನು ಅಣ್ಣಾವ್ರು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದ್ದರು.

ಹೊಟ್ಟೆ ಉರಿಗೆ ಅಣ್ಣಾವ್ರ ಸಿನಿಮಾಗೆ ಕೆಟ್ಟ ವಿಮರ್ಶೆ; ರಾಜ್​ಕುಮಾರ್ ಪ್ರತಿಕ್ರಿಯಿಸಿದ್ದ ರೀತಿಗೆ ಎಲ್ಲರೂ ಶಾಕ್
ರಾಜ್​ಕುಮಾರ್
Follow us on

ರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಮೇರುನಟ. ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಸಾಕಷ್ಟಿವೆ. ಅವರು ಚಿತ್ರರಂಗದಲ್ಲಿ ಇದ್ದುಕೊಂಡು ಇತರ ಕಲಾವಿದರನ್ನು, ಇತರ ಸಿನಿಮಾಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಯಾರಿಗೂ ಅವರು ಕೆಟ್ಟದನ್ನು ಬಯಸಿದವರಲ್ಲ. ಇದು ಅನೇಕ ಬಾರಿ ಸಾಬೀತಾಗಿದೆ. ಇದಕ್ಕೆ ಹೊಸ ಹೊಸ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ನಿರ್ದೇಶಕ ಗುರುಪ್ರಸಾಸದ್ ಅವರು ಅಣ್ಣಾವ್ರ ದೊಡ್ಡತನದ ಬಗ್ಗೆ ಈ ಮೊದಲು ಮಾತನಾಡಿದ್ದರು. ಸಿನಿಮಾಗೆ ಕೆಟ್ಟ ವಿಮರ್ಶೆ ಬರೆದ ವಿಚಾರವನ್ನು ಅಣ್ಣಾವ್ರು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದ್ದರು.

ರಾಜ್​ಕುಮಾರ್ ಅವರು ಸಿನಿಮಾ ರಂಗದಲ್ಲಿ ಹಲವು ಸೂಪರ್ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಕಥೆ ಆಯ್ಕೆಯಲ್ಲಿ ಅವರು ಲಯ ತಪ್ಪಿದ್ದು ತುಂಬಾನೇ ಕಡಿಮೆ. ಅವರ ಪತ್ನಿ ಪಾರ್ವತಮ್ಮ ಅವರು ನಿರ್ಮಾಣ ಸಂಸ್ಥೆಯನ್ನು ಹ್ಯಾಂಡಲ್ ಮಾಡುತ್ತಿದ್ದರು. ರಾಜ್​ಕುಮಾರ್ ಸಿನಿಮಾಗಳನ್ನು ಅವರೇ ನಿರ್ಮಾಣ ಮಾಡುತ್ತಿದ್ದರು. ಅವರ ನಟನೆಯ ಸಿನಿಮಾ ಒಂದು ರಿಲೀಸ್ ಆಗಿತ್ತು. ಅದು ಚೆನ್ನಾಗಿದ್ದರೂ ಸಿನಿಮಾ ಕೆಟ್ಟದಾಗಿದೆ ಎಂದು ಪತ್ರಕರ್ತರೊಬ್ಬರು ವಿಮರ್ಶೆ ಬರೆದಿದ್ದರಂತೆ.

ಈ ಬಗ್ಗೆ ಗುರುಪ್ರಸಾದ್ ಅವರು ‘ಕೀರ್ತಿ ENT ಕ್ಲಿನಿಕ್’ಗೆ ಸಂದರ್ಶನ ಒಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಅವರು ‘ವಿಮರ್ಶೆಗಳು ಸಿನಿಮಾ ರಿಲೀಸ್ ಆದ ಮೂರು ವಾರಗಳ ಬಳಿಕ ಪಬ್ಲಿಶ್ ಆಗಬೇಕು’ ಎಂದು ಹೇಳಿದ್ದರು. ಆಗ ಅವರು ರಾಜ್​ಕುಮಾರ್ ಅವರ ಬಗ್ಗೆ ಮಾತನಾಡಿದ್ದರು.

‘ರಾಜ್​ಕುಮಾರ್ ಸಿನಿಮಾ ಬಗ್ಗೆ ಮಾತನಾಡುವ ಹಾಗಿಲ್ಲ. ಆದರೆ, ಒಮ್ಮೆ ಹೊಟ್ಟೆ ಉರಿಗೆ ಓರ್ವ ಅವರ ಸಿನಿಮಾ ಬಗ್ಗೆ ಕೆಟ್ಟದಾಗಿ ಬರೆದಿದ್ದ. ಇದು ಪಾರ್ವತಮ್ಮ ಗಮನಕ್ಕೆ ಬಂದಿತ್ತು. ನಮ್ಮ ಸಿನಿಮಾ ಬಗ್ಗೆ ಕೆಟ್ಟದಾಗಿ ಬರೆದಿದ್ದಾನೆ ಒಮ್ಮೆ ಮಾತನಾಡಿ ಎಂದು ಪಾರ್ವತಮ್ಮ ರಾಜ್​ಕುಮಾರ್​ ಬಳಿ ಕೋರಿದರು. ಬೇಡ ನನ್ನ ಬಯ್ಯೋದರಿಂದ, ನನ್ನ ಸಿನಿಮಾ ಬಯ್ಯೋದರಿಂದ, ನಿನ್ನ ಸಿನಿಮಾ ಬಯ್ಯೋದರಿಂದ ಅವನಿಗೆ ಊಟ ಸಿಗುತ್ತಿದೆ. ಬದುಕಿಕೊಳ್ಳಿ ಬಿಡು ಎಂದಿದ್ದರು’ ಎಂಬುದಾಗಿ ಗುರುಪ್ರಸಾದ್ ವಿವರಿಸಿದ್ದಾರೆ. ಅವರು ಹೇಳಿದ್ದ ಮಾತು ಕೇಳಿ ಅನೇಕರಿಗೆ ಶಾಕ್ ಆಗಿತ್ತು. ದ್ವಾರಕೀಶ್ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ ಎನ್ನುವ ಕಾರಣಕ್ಕೆ ರಾಜ್​ಕುಮಾರ್ ತಮ್ಮ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದ್ದರು.

ಇದನ್ನೂ ಓದಿ: ‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್

ರಾಜ್​ಕುಮಾರ್ ಅಂದು ಡಬ್ಬಿಂಗ್ ವಿರೋಧಿಸಿದ್ದರು. ಡಬ್ಬಿಂಗ್ ಸಿನಿಮಾಗಳನ್ನು ತಂದರೆ ಕನ್ನಡ ಚಿತ್ರರಂಗದ ಬಿಸ್ನೆಸ್ ಹಾಳಾಗುತ್ತದೆ ಎಂಬುದು ಅಣ್ಣಾವ್ರ ಆಲೋಚನೆ ಆಗಿತ್ತು. ಡಬ್ಬಿಂಗ್ ಬರಬೇಕು ಎಂದು ಗುರುಪ್ರಸಾದ್ ಆಶಿಸಿದ್ದರು. ಇದರಿಂದ ಅವರು ಕೊಲೆ ಬೆದರಿಕೆ ಕೂಡ ಎದುರಿಸಿದರಂತೆ.

ಗುರುಪ್ರಸಾದ್ ನಿರ್ದೇಶನದ ಕೊನೆಯ ಸಿನಿಮಾ ‘ರಂಗನಾಯಕ’. ಇದರಲ್ಲಿ ಜಗ್ಗೇಶ್ ಹೀರೋ ಆಗಿ ನಟಿಸಿದ್ದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಂಥ ಮೆಚ್ಚುಗೆ ಪಡೆದುಕೊಳ್ಳಲಿಲ್ಲ.

ಗಡ್ಡ ಬಿಟ್ಟ ಕಥೆ

ರಾಜ್​ಕುಮಾರ್ ಅವರು ಗುರುಪ್ರಸಾದ್ ಗಡ್ಡ ಮುಟ್ಟಿದ್ದರಂತೆ. ಈ ಕಾರಣಕ್ಕೆ ಅಂದಿನಿಂದ ಅವರು ಗಡ್ಡಕ್ಕೆ ಬ್ಲೇಡ್ ಹಾಕಿಲ್ಲ. ಅವರು ಟ್ರಿಮ್ ಮಾಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:06 am, Wed, 17 July 24