AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಸ್ಟ್ ರ‍್ಯಾಂಕ್ ಬಂದಿದ್ದ ರಾಜು ಈಗ ಜೇಮ್ಸ್ ಬಾಂಡ್

Raju James Bond: ‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಾಯಕ ನಟ ಗುರುನಂದನ್ ಇನ್ನೊಮ್ಮೆ ರಾಜು ಆಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಆದರೆ ಈ ಬಾರಿ ‘ಫಸ್ಟ್ ರ‍್ಯಾಂಕ್ ರಾಜು’ ಅಲ್ಲ ಬದಲಿಗೆ ‘ರಾಜು ಜೇಮ್ಸ್ ಬಾಂಡ್’.

ಫಸ್ಟ್ ರ‍್ಯಾಂಕ್ ಬಂದಿದ್ದ ರಾಜು ಈಗ ಜೇಮ್ಸ್ ಬಾಂಡ್
ಮಂಜುನಾಥ ಸಿ.
|

Updated on: Nov 10, 2024 | 12:37 PM

Share

ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಬಿಡುಗಡೆ ಆದಾಗ ಉತ್ತಮ ಪ್ರದರ್ಶನ ಕಂಡಿತ್ತು. ಸಿನಿಮಾದ ಹಾಸ್ಯ ಮತ್ತು ಅದು ನೀಡಿದ ಸಂದೇಶ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಈಗ ‘ರಾಜು ಜೇಮ್ಸ್ ಬಾಂಡ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಸಿನಿಮಾದ ಮೋಷನ್ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಚಿತ್ರತಂಡ ಘೋಷಣೆ ಮಾಡಿದೆ.

‘ರಾಜು ಜೇಮ್ಸ್ ಬಾಂಡ್’ ಸಿನಿಮಾ ಡಿಸೆಂಬರ್ 27 ರಂದು ಬಿಡುಗಡೆ ಆಗಲಿದೆ. ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಮತ್ತು ಕಿರಣ್ ಭರ್ತೂರು (ಕೆನೆಡಾ) ಮೋಷನ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದರು. ‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾದ ನಾಯಕ ಗುರುನಂದನ್ ಮಾತನಾಡಿ, ‘ಜೇಮ್ಸ್ ಬಾಂಡ್’ ರಾಜುಗೂ ‘ಫಸ್ಟ್ ರ‍್ಯಾಂಕ್’ ರಾಜೂಗೂ ಬಹಳ ವ್ಯತ್ಯಾಸ ಇದೆ. ಎರಡು ಪಾತ್ರಗಳು ಒಂದಕ್ಕೊಂದು ಬಹಳ ಭಿನ್ನ, ವೈರುದ್ಯ ಹೊಂದಿವೆ. ‘ರಾಜು ಜೇಮ್ಸ್ ಬಾಂಡ್’ ಸಿನಿಮಾದಲ್ಲಿ ಯಾವುದೇ ಅಶ್ಲೀಲ ಸಂಭಾಷಣೆ ಇರುವುದಿಲ್ಲ. ಇದೊಂದು ಶುದ್ಧ ಮನೋರಂಜನೆ ಸಿನಿಮಾ ಆಗಿರಲಿದೆ.. ಎರಡುಕಾಲು ಗಂಟೆಗಳ ಚಿತ್ರದಲ್ಲಿ ಮಕ್ಕಾಲು ಗಂಟೆ ನೀವು ನಗುವಿಗೆ ಮೀಸಲಿಡಬೇಕು. ವರ್ಷದ ಕೊನೆಯಲ್ಲಿ ನಗುನಗುತ್ತಾ ನೂತನ ವರ್ಷವನ್ನು ನಮ್ಮ ಸಿನಿಮಾ ಮೂಲಕ ಸ್ವಾಗತಿಸೋಣ’ ಎಂದರು.

‘ಎಷ್ಟೋ ಜನ ನನ್ನನ್ನು ರಾಜು ಎಂದೇ ಗುರುತಿಸುತ್ತಾರೆ. ಅವರಿಗೆ ನನ್ನ ಹೆಸರು ಸಹ ಗೊತ್ತಿಲ್ಲ. ಈ ಚಿತ್ರದ ನಿರ್ದೇಶಕ ನಡುವಳ್ಳಿ ಅವರು ನನ್ನ ಹಿಂದಿನ ಜಾನರ್​ಗೆ ಬ್ರೇಕ್ ಹಾಕಿ, ಹೊಸ ಶೈಲಿಯಲ್ಲಿ ನನ್ನನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ನನ್ನಿಂದ ಸಖತ್ ಡ್ಯಾನ್ಸ್, ಆಕ್ಷನ್ ಮಾಡಿಸಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದ ಹಾಗೆ ಸಿನಿಮಾ ಮಾಡಿದ್ದಾರೆ. ನನ್ನ ಮೊದಲ ಚಿತ್ರದಿಂದಲೂ ತಾವು ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಈ ಚಿತ್ರದಲ್ಲೂ ಮುಂದುವರೆಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ವೇದಿಕೆ

ಕನ್ನಡ ಹಾಗೂ ಹಿಂದಿ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಅಚ್ಯುತ ಕುಮಾರ್, ಜೈಜಗದೀಶ್ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಮೃದುಲಾ ಈ ಚಿತ್ರದ ನಾಯಕಿ. ಸಿನಿಮಾವನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ದೀಪಕ್ ಮಧುವನಹಳ್ಳಿ ಪರಿಶುದ್ಧ ಮನೋರಂಜನೆಯ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದಕ್ಕೆ ಕಲಾವಿದರು, ತಂತ್ರಜ್ಞರು ಸಾಥ್ ನೀಡಿದ್ದಾರೆ. ನಗುವೇ ಪ್ರಧಾನವಾಗಿರುವ ಈ ನಮ್ಮ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಿದೆ. ನೋಡುಗರು ಕೊಟ್ಟ ದುಡ್ಡಿಗೆ ಮೋಸಮಾಡದ ಸಿನಿಮಾವಿದು ಎಂದು ಧೈರ್ಯವಾಗಿ ಹೇಳುತ್ತೇವೆ. ಕನ್ನಡದ ಜೊತೆಗೆ ಹಿಂದಿಯಲ್ಲೂ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರು. ‘ರಾಜು ಜೇಮ್ಸ್ ಬಾಂಡ್’ ಸಿನಿಮಾ ಡಿಸೆಂಬರ್ 27ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ