ಬಿಗ್ ಬಾಸ್ ಮನೆಯಲ್ಲಿ ಕೇಳಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈಲಾಗ್

|

Updated on: Oct 14, 2023 | 8:52 AM

ದರ್ಶನ್ ಅವರ ಜನಪ್ರಿಯತೆ ಸಾಕಷ್ಟಿದೆ. ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಹಲವರು ಅವರನ್ನು ಆರಾಧಿಸುತ್ತಾರೆ. ಟ್ರೋಲ್ ಮೂಲಕ ಜನಪ್ರಿಯತೆ ಪಡೆದ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಕೂಡ ದರ್ಶನ್ ಅವರ ಅಭಿಮಾನಿ. ರಕ್ಷಕ್ ಈಗ ದೊಡ್ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ದರ್ಶನ್ ಡೈಲಾಗ್​ ಹೊಡೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕೇಳಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈಲಾಗ್
ದರ್ಶನ್
Follow us on

ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿ ಒಂದು ವಾರ ಕಳೆಯುತ್ತಾ ಬಂದಿದೆ. ಈಗ ಮನೆಯಲ್ಲಿ 17 ಸದಸ್ಯರು ಇದ್ದಾರೆ. ‘777 ಚಾರ್ಲಿ’ (777 Charlie Movie) ಶ್ವಾನ ಒಂದು ದೊಡ್ಮನೆಗೆ ಬರೋದು ಬಾಕಿ ಇದೆ. ಈ ಮಧ್ಯೆ ದೊಡ್ಮನೆಯಲ್ಲಿ ಸಾಕಷ್ಟು ಕಿತ್ತಾಟ, ಫನ್​​ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ (Darshan) ಅವರ ಡೈಲಾಗ್​ ಕೇಳಿಸಿದೆ. ಅಷ್ಟಕ್ಕೂ ಇದಕ್ಕೆ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ದರ್ಶನ್ ಅವರ ಜನಪ್ರಿಯತೆ ಸಾಕಷ್ಟಿದೆ. ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಹಲವರು ಅವರನ್ನು ಆರಾಧಿಸುತ್ತಾರೆ. ಟ್ರೋಲ್ ಮೂಲಕ ಜನಪ್ರಿಯತೆ ಪಡೆದ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಕೂಡ ದರ್ಶನ್ ಅವರ ಅಭಿಮಾನಿ. ರಕ್ಷಕ್ ಈಗ ದೊಡ್ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ದರ್ಶನ್ ಡೈಲಾಗ್​ ಹೊಡೆದಿದ್ದಾರೆ. ಸದ್ಯ ಈ ಕ್ಲಿಪ್ ಡಿ ಬಾಸ್ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗುತ್ತಿದೆ.

ಪ್ರಥಮ್ ಅವರು ದೊಡ್ಮನೆಗೆ ಬಂದಿದ್ದರು. ಲಾರ್ಡ್ ಪ್ರಥಮ್ ಆಗಿ ಅವರು ಕಾಣಿಸಿಕೊಂಡಿದ್ದರು. ಡಿಕ್ಟೇಟರ್ ರೀತಿ ಅವರು ನಡೆದುಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಬಂದಾಗ ರಕ್ಷಕ್ ಅವರ ಬಳಿ ಕೆಲವು ಸಿನಿಮಾ ಡೈಲಾಗ್​ ಹೊಡೆಯುವಂತೆ ಸೂಚಿಸಿದ್ದಾರೆ. ಮೊದಲು ಧ್ರುವ ಸರ್ಜಾ ಅವರ ಡೈಲಾಗ್ ಹೇಳಿದ್ದಾರೆ ರಕ್ಷಕ್. ಆ ಬಳಿಕ ‘ನವಗ್ರಹ’ ಸಿನಿಮಾದ ಡೈಲಾಗ್ ಹೇಳಿದ್ದಾರೆ.

‘ನಾನು ಇನ್ನು ನಾಲ್ಕು ಮಾಸ್​ ಡೈಲಾಗ್ ಹೊಡೆದ್ರೆ ಕರ್ನಾಟಕನೇ ಕೊಂಡುಕೊಳ್ಳಬಹುದು’ ಎನ್ನುವ ಮಾತನ್ನು ಹೇಳಿದ್ದರು ರಕ್ಷಕ್. ಈ ವಿಚಾರವನ್ನೂ ಪ್ರಥಮ್ ಅವರು ರಕ್ಷಕ್ ಬಳಿ ಚರ್ಚಿಸಿದ್ದಾರೆ. ‘ನಾಲ್ಕು ಮಾಸ್ ಡೈಲಾಗ್ ಹೇಳಿ ಕರ್ನಾಟಕನ ಕೊಂಡುಕೊಂಡ್ರಾ’ ಎಂದು ಪ್ರಥಮ್ ಕೇಳಿದ್ದಾರೆ.

ಇದನ್ನೂ ಓದಿ: ‘ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ತಾನೆ’: ಪ್ರದೀಪ್​ ಈಶ್ವರ್​ ವಿಡಿಯೋ ವೈರಲ್​

ರಕ್ಷಕ್ ಅವರು ದೊಡ್ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು, ಡ್ರೋನ್ ಪ್ರತಾಪ್ ಕೂಡ ಎಲ್ಲರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಅವರು ಮುಗ್ಧ ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೆಂಬಲ ಸಿಗುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡಲು ಅವಕಾಶ ಇದೆ. ಕಲರ್ಸ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:35 am, Sat, 14 October 23