ನಟ ‘ಆ ದಿನಗಳು’ ಚೇತನ್ ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಸಿದ್ಧಾಂತಗಳ ಕಾರಣಕ್ಕಾಗಿ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೆ ಕೆಲವು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿರುವ ಚೇತನ್ ಈಗ ರಕ್ಷಿತ್ ಶೆಟ್ಟಿಯ ಅಸಮಾಧಾನಕ್ಕೆ ಕಾರಣ ಆಗಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಬೆಂಬಲಿಸಿದ ಕಾರಣಕ್ಕೆ ಅನೇಕರು ಚೇತನ್ ವಿರುದ್ಧ ಕಿಡಿಕಾರುತ್ತಿದ್ದಾರೆ.
‘ದಕ್ಷಿಣ ಭಾರತದಲ್ಲೇ ಅತಿ ಕೆಟ್ಟ ಚಿತ್ರರಂಗವಾದ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೊನೆಗೂ ಭರವಸೆ ಮೂಡಿದೆ. ಕನ್ನಡ ಸಿನಿಮಾ ಎಂಬ ಮರುಭೂಮಿಯಲ್ಲಿ ಚೇತನ್ ಅಹಿಂಸಾ ಅವರು ಮಳೆಯಂತೆ ಇದ್ದಾರೆ’ ಎಂದು ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್ಗೆ ಚೇತನ್ ಸಹಮತ ಸೂಚಿಸಿದ್ದರು. ‘ನಿಮ್ಮ ಮಾತಿಗೆ ಧನ್ಯವಾದಗಳು. ನೀವು ಆಡಿದ ಮಾತು ಕಟುವಾಗಿದ್ದರೂ ಅದನ್ನು ರಚನಾತ್ಮಕ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ’ ಎಂದು ಚೇತನ್ ಪ್ರತಿಕ್ರಿಯೆ ನೀಡಿದ್ದರು. ಅದೇ ಈಗ ಅಸಮಾಧಾನಕ್ಕೆ ಕಾರಣ ಆಗಿದೆ.
ಈ ಟ್ವೀಟ್ ಗಮನಿಸಿರುವ ರಕ್ಷಿತ್ ಶೆಟ್ಟಿ ಅವರು ತುಂಬ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಚೇತನ್ ಅವರೇ, ನಿಮ್ಮ ಕೆಲಸಗಳಿಂದಾಗಿ ನಿಮ್ಮನ್ನು ನಾನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಯನ್ನು ಸರಿಮಾಡಿಕೊಳ್ಳಿ. ಕೆಟ್ಟದನ್ನು ಬಿತ್ತಿದ ಕಡೆಯೇ ಕೆಡುಕು ಬೆಳೆಯುತ್ತದೆ’ ಎಂದು ರಕ್ಷಿತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.
With all due respect to @ChetanAhimsa whom we admire for the work he does… but you sir, you have to clean up your mental space… for the ‘worst’ lies where worse is sowed… all the best with that ?
— Rakshit Shetty (@rakshitshetty) June 13, 2021
‘ನನಗೆ ಈ ಸಿನಿಮಾ ಇಂಡಸ್ಟ್ರೀ ವೇದಿಕೆ ಒದಗಿಸಿಕೊಟ್ಟಿದೆ. ನಮಗಿಂತ ಮೊದಲು ಎಷ್ಟೋ ದಿಗ್ಗಜರು ಕಟ್ಟಿದ ವೇದಿಕೆ ಇದು. ಅದರ ಬಗ್ಗೆ ನಿಮಗೆ ತಿಳಿದಿಲ್ಲ. ಏನೂ ಇಲ್ಲದ ನಮಗೆ ಇಂದು ಈ ಚಿತ್ರರಂಗ ಬದುಕು ಕೊಟ್ಟಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಇದೇ ಜೀವನ’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್ ಆರೋಪ; ನಟ ಚೇತನ್ ಬಂಧನಕ್ಕೆ ಶಿವರಾಮ್ ಹೆಬ್ಬಾರ್ ಒತ್ತಾಯ
ನಟ ಚೇತನ್ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ನೋವು ತಂದಿದೆ, ಅವರು ಕ್ಷಮೆ ಕೇಳಬೇಕು; ಪೊಲೀಸ್ ಆಯುಕ್ತರಿಗೆ ದೂರು