ಜೂ.10ರಂದು ರಿಲೀಸ್​ ಆಗಲಿದೆ ‘777 ಚಾರ್ಲಿ’; ಸಿಹಿ ಸುದ್ದಿ​ ​ ನೀಡಿದ ರಕ್ಷಿತ್​ ಶೆಟ್ಟಿ ಆ್ಯಂಡ್​ ಟೀಮ್​

| Updated By: ಮದನ್​ ಕುಮಾರ್​

Updated on: Apr 10, 2022 | 12:44 PM

777 Charlie Movie Release Date: ‘ಜೂನ್ 10, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ‘777 ಚಾರ್ಲಿ’ ಬಿಡುಗಡೆ ಆಗಲಿದೆ. ಪ್ರೀತಿ, ಆಶೀರ್ವಾದ ಸದಾ ಇರಲಿ’ ಎಂದು ರಕ್ಷಿತ್ ಶೆಟ್ಟಿ ಅವರು ಟ್ವೀಟ್​ ಮಾಡಿದ್ದಾರೆ.

ಜೂ.10ರಂದು ರಿಲೀಸ್​ ಆಗಲಿದೆ ‘777 ಚಾರ್ಲಿ’; ಸಿಹಿ ಸುದ್ದಿ​ ​ ನೀಡಿದ ರಕ್ಷಿತ್​ ಶೆಟ್ಟಿ ಆ್ಯಂಡ್​ ಟೀಮ್​
777 ಚಾರ್ಲಿ
Follow us on

ನಟ ರಕ್ಷಿತ್​ ಶೆಟ್ಟಿ ಅಭಿನಯದ ‘777 ಚಾರ್ಲಿ’ (777 Charlie Movie) ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡುವ ರಕ್ಷಿತ್​ ಶೆಟ್ಟಿ (Rakshit Shetty)  ಅವರು ಈ ಚಿತ್ರದಲ್ಲಿ ಡಿಫರೆಂಟ್​ ಆದಂತಹ ಒಂದು ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಿ ಮತ್ತು ಮನುಷ್ಯನ ಸಂಬಂಧದ ಮೇಲೆ ಹೆಣೆಯಲಾದ ಕಥೆ ‘777 ಚಾರ್ಲಿ’ ಸಿನಿಮಾದಲ್ಲಿ ಇದೆ. ಈ ಚಿತ್ರ ಯಾವಾಗ ಬಿಡುಗಡೆ ಆಗಲಿದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ರಕ್ಷಿತ್​ ಶೆಟ್ಟಿ ಆ್ಯಂಡ್​ ಟೀಮ್​ ಈಗ ‘777 ಚಾರ್ಲಿ’ ಚಿತ್ರದ ರಿಲೀಸ್​ ದಿನಾಂಕ (777 Charlie Movie Release Date) ಘೋಷಣೆ ಮಾಡಿದ್ದಾರೆ. ಜೂ.10ರಂದು ಈ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಹೊಸ ಪೋಸ್ಟರ್​ ಹಂಚಿಕೊಂಡು ವಿಷಯ ತಿಳಿಸಲಾಗಿದೆ. ಕಿರಣ್​ ರಾಜ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ‘777 ಚಾರ್ಲಿ’ ಬಿಡುಗಡೆ ಆಗಲಿದೆ. ರಿಲೀಸ್​ ಮಾಡುವಲ್ಲಿ ಪರಭಾಷೆಯ ಸ್ಟಾರ್​ ಕಲಾವಿದರು ಈ ತಂಡದ ಜೊತೆ ಕೈ ಜೋಡಿಸಿದ್ದಾರೆ.

ಈ ಸಿನಿಮಾದಲ್ಲಿ ಧರ್ಮ ಎಂಬ ಪಾತ್ರವನ್ನು ರಕ್ಷಿತ್​ ಶೆಟ್ಟಿ ನಿಭಾಯಿಸಿದ್ದಾರೆ. ‘ರಾಮ ನವಮಿಯ ಈ ವಿಶೇಷ ದಿನದಂದು ರಿಲೀಸ್​ ಡೇಟ್​ ತಿಳಿಸಲು ಖುಷಿ ಆಗುತ್ತಿದೆ. ಜೂನ್ 10, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ‘777 ಚಾರ್ಲಿ’ ಬಿಡುಗಡೆ ಆಗಲಿದೆ. ಪ್ರೀತಿ, ಆಶೀರ್ವಾದ ಸದಾ ಇರಲಿ’ ಎಂದು ರಕ್ಷಿತ್ ಶೆಟ್ಟಿ ಅವರು ಟ್ವೀಟ್​ ಮಾಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ರಕ್ಷಿತ್​ ಶೆಟ್ಟಿ ಜೊತೆಗೆ ಅನೇಕ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ರಾಜ್​ ಬಿ. ಶೆಟ್ಟಿ, ದಾನಿಷ್​ ಸೇಠ್​, ಬಾಬಿ ಸಿಂಹ, ಸಂಗೀತ ಶೃಂಗೇರಿ ಮುಂತಾದವರು ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ಮತ್ತು ಟಾರ್ಚರ್​ ಸಾಂಗ್​ ಸಖತ್​ ಜನಪ್ರಿಯತೆ ಪಡೆದುಕೊಂಡಿದೆ. ನೋಬಿನ್​ ಪೌಲ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರವಿಂದ್​ ಎಸ್​. ಕಶ್ಯಪ್​ ಛಾಯಾಗ್ರಹಣ ಮತ್ತು ಪ್ರತೀಕ್​ ಶೆಟ್ಟಿ ಸಂಕಲನ ಮಾಡಿದ್ದಾರೆ.

‘777 ಚಾರ್ಲಿ’ ಸಿನಿಮಾಗೆ 160ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಶ್ವಾನದ ಮೂಡ್ ನೋಡಿಕೊಂಡು ಶೂಟಿಂಗ್ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಚಿತ್ರೀಕರಣಕ್ಕೆ ಹೆಚ್ಚು ಸಮಯ ಹಿಡಿದಿದೆ. ಇದು ಪ್ಯಾನ್​ ಇಂಡಿಯಾ ಚಿತ್ರ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಮಲಯಾಳಂನಲ್ಲಿ ಈ ಚಿತ್ರವನ್ನು ಪೃಥ್ವಿರಾಜ್​ ಸುಕುಮಾರನ್​ ಅವರು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕೆಆರ್​ಜಿ ಸ್ಟುಡಿಯೋಸ್​ ಮೂಲಕ ತೆರೆಕಾಣಲಿದೆ.

ಇದನ್ನೂ ಓದಿ:

ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಶ್ರುತಿ ಹರಿಹರನ್​; ಸ್ಟ್ರಾಬೆರಿ ಸಿನಿಮಾಗೆ ರಕ್ಷಿತ್​ ಶೆಟ್ಟಿ ನಿರ್ಮಾಣ

ಉಡುಪಿಯಲ್ಲಿ ರಕ್ಷಿತ್​ ಶೆಟ್ಟಿ ಹುಲಿಕುಣಿತ; ಲೋಬಾನ ಹಾಕುವ ಸಂಪ್ರದಾಯದಲ್ಲಿ ‘ಸಿಂಪಲ್ ಸ್ಟಾರ್’ ಭಾಗಿ

Published On - 12:36 pm, Sun, 10 April 22