‘ರಾಮಾಯಣ’ ಯಶಸ್ಸು: ಯಶ್ ಸಾಧನೆ ಬಗ್ಗೆ ತಾಯಿ ಪುಷ್ಪ ಸಂತಸ

‘ರಾಮಾಯಣ’ ಕತೆಯನ್ನು ಇಷ್ಟು ಅದ್ಧೂರಿಯಾಗಿ ಎಂದಿಗೂ ನೋಡಿರಲಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಯಶ್ ಅವರ ನಟನೆಯನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರ ನಟನೆಯ ಬಗ್ಗೆ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ. ಭರಪೂರ ಪ್ರಶಂಸೆಗಳು ಯಶ್ ನಟನೆಗೆ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೆ ಯಶ್ ಅವರ ತಾಯಿ ಪುಷ್ಪ ಅವರು ಮಗನ ಸಾಧನೆ ಬಗ್ಗೆ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

‘ರಾಮಾಯಣ’ ಯಶಸ್ಸು: ಯಶ್ ಸಾಧನೆ ಬಗ್ಗೆ ತಾಯಿ ಪುಷ್ಪ ಸಂತಸ
Yash Mother

Updated on: Nov 05, 2026 | 1:41 PM

‘ರಾಮಾಯಣ’ ಸಿನಿಮಾ ಇಂದು (ನವೆಂಬರ್ 05) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ‘ರಾಮಾಯಣ’ ಕತೆಯನ್ನು ಇಷ್ಟು ಅದ್ಧೂರಿಯಾಗಿ ಎಂದಿಗೂ ನೋಡಿರಲಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಯಶ್ ಅವರ ನಟನೆಯನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರ ನಟನೆಯ ಬಗ್ಗೆ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ. ಭರಪೂರ ಪ್ರಶಂಸೆಗಳು ಯಶ್ ನಟನೆಗೆ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೆ ಯಶ್ ಅವರ ತಾಯಿ ಪುಷ್ಪ ಅವರು ಮಗನ ಸಾಧನೆ ಬಗ್ಗೆ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪುಷ್ಪ ಅವರು, ‘ಒಬ್ಬ ತಾಯಿಗೆ ಇದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನು ಬೇಕು? ತನ್ನ ಮಗ ತಾನು ಕಂಡ ಪ್ರತಿಯೊಂದು ಕನಸನ್ನೂ ನನಸಾಗಿಸಿಕೊಂಡು, ಸಾಧನೆಯ ಶಿಖರವೇರಿ, ಜನರ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿರುವುದನ್ನು ನೋಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಇಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದ “ರಾಮಾಯಣ” ಚಿತ್ರ ಬಿಡುಗಡೆಯಾಗಿದ್ದು, “ರಾವಣ”ನ ಪಾತ್ರದಲ್ಲಿ ನಿನ್ನ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಅಭಿಮಾನವನ್ನು ಕಂಡು ನನ್ನ ಸಂತೋಷಕ್ಕೆ ಪಾರವೇ ಇಲ್ಲ’ ಎಂದಿದ್ದಾರೆ.

Loading...

ಮುಂದುವರೆದು, ‘ನಿನ್ನ ಈ ಸಾಧನೆ, ಪರಿಶ್ರಮ ಮತ್ತು ಅದ್ಭುತ ಅಭಿನಯಕ್ಕೆ ತಾಯಿಯಾಗಿ ಹೃತ್ಪೂರ್ವಕ ಅಭಿನಂದನೆಗಳು. ನಿನ್ನ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ. ನಿನ್ನಾಗು ಹಾಗೂ ಇಡೀ ಚಿತ್ರತಂಡದ ಪ್ರತಿಯೊಬ್ಬರಿಗೂ ಶುಭಾಶಯಗಳು. ಹೀಗೆಯೇ ಇನ್ನಷ್ಟು ಎತ್ತರಕ್ಕೆ ಬೆಳೆದು, ಸದಾ ನಮ್ಮೆಲ್ಲರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿರು ಮಗನೇ’ ಎಂದಿದ್ದಾರೆ ಪುಷ್ಪ ಅವರು.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ ನೋಡಿ

ಯಶ್ ಅವರ ತಾಯಿ ಪುಷ್ಪ ಸಿನಿಮಾ ನಿರ್ಮಾಪಕಿ ಮತ್ತು ವಿತರಕಿಯೂ ಆಗಿದ್ದಾರೆ. ಪುತ್ರನ ಬಗ್ಗೆ ಸದಾ ಹೆಮ್ಮೆಯಿಂದ ಮಾತನಾಡುವ ಅವರು, ಕೆಲ ತಿಂಗಳ ಹಿಂದೆ ಯಶ್ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದ ನಿರ್ಮಾಪಕ ಅಲ್ಲು ಅರವಿಂದ್ ಅವರಿಗೆ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದ್ದರು. ಈಗ ಯಶ್ ಅವರನ್ನು ಕೊಂಡಾಡುತ್ತಿರುವ ಸಮಯದಲ್ಲಿ ಮಗನ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಜೊತೆಗೆ ಈ ಸಿನಿಮಾಕ್ಕೆ ಸಹ ನಿರ್ಮಾಪಕರೂ ಆಗಿದ್ದಾರೆ ನಟ ಯಶ್. ಸಿನಿಮಾನಲ್ಲಿ ರಾವಣನ ಪಾತ್ರ ನಿರ್ವಹಿಸಲು ಸಾಕಷ್ಟು ಶ್ರಮ ಮತ್ತು ತರಬೇತಿಯನ್ನು ಯಶ್ ಪಡೆದುಕೊಂಡಿದ್ದರು. ಯಶ್ ಅವರು ಹಾಕಿರುವ ಶ್ರಮಕ್ಕೆ ಈಗ ಪ್ರತಿಫಲ ದೊರೆತಿದೆ. ಈ ಸಿನಿಮಾದ ಬಳಿಕ ಹಾಲಿವುಡ್​​ನಲ್ಲೂ ಯಶ್ ಹವಾ ಹಬ್ಬುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Thu, 5 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us