Ramesh Aravind Birthday: ನಟ ರಮೇಶ್​ ಅರವಿಂದ್​ಗೆ ಬರ್ತ್​ಡೇ ಸಂಭ್ರಮ; ‘ಶಿವಾಜಿ ಸುರತ್ಕಲ್ 2’ ಟೀಸರ್ ಗಿಫ್ಟ್

Ramesh Aravind: 2018ರಿಂದ ಈಚೆಗೆ ಅವರ ನಟನೆಯ ಬೆರಳೆಣಿಕೆ ಸಿನಿಮಾಗಳು ಮಾತ್ರ ರಿಲೀಸ್ ಆಗಿವೆ. 2020ರಲ್ಲಿ ‘ಶಿವಾಜಿ ಸುರತ್ಕಲ್’ ಸಿನಿಮಾ  ತೆರೆಗೆ ಬಂದು ಮೆಚ್ಚುಗೆ ಪಡೆದುಕೊಂಡಿತು. ಈಗ ಈ ಚಿತ್ರದ ಸೀಕ್ವೆಲ್ ಬರುತ್ತಿದೆ.

Ramesh Aravind Birthday: ನಟ ರಮೇಶ್​ ಅರವಿಂದ್​ಗೆ ಬರ್ತ್​ಡೇ ಸಂಭ್ರಮ; ‘ಶಿವಾಜಿ ಸುರತ್ಕಲ್ 2’ ಟೀಸರ್ ಗಿಫ್ಟ್
ರಮೇಶ್ ಅರವಿಂದ್
Edited By:

Updated on: Sep 10, 2022 | 6:03 AM

ರಮೇಶ್ ಅರವಿಂದ್ (Ramesh Aravind) ಅವರು ಚಿತ್ರರಂಗದಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಕನ್ನಡದಲ್ಲೇ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ವಿಶೇಷ. ಅವರ ಹಲವು ಚಿತ್ರಗಳು ಐಕಾನಿಕ್ ಆಗಿದ್ದು, ಈಗಲೂ ಆ ಸಿನಿಮಾಗಳಿಗೆ ಬೇಡಿಕೆ ಇದೆ. ಹಾಸ್ಯ ಪಾತ್ರ, ಗಂಭೀರ ಪಾತ್ರ ಸೇರಿ ಎಲ್ಲ ರೀತಿಯ ಪಾತ್ರಗಳನ್ನು ನೀರು ಕುಡಿದಂತೆ ನಟಿಸಿ ತೋರಿಸಿದ್ದಾರೆ ರಮೇಶ್ ಅರವಿಂದ್. ಕಿರುತೆರೆಯಲ್ಲಿಯೂ ಅವರು ಗುರುತಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಇಂದು (ಸೆಪ್ಟೆಂಬರ್ 10) ಅವರಿಗೆ ಬರ್ತ್​​ಡೇ ಸಂಭ್ರಮ. ಅವರಿಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳಿಂದ ವಿಶ್ ಬರುತ್ತಿದೆ.

ಮೊದಲಿಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ರಮೇಶ್ ಅರವಿಂದ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮ್ಮ ಪಾಲಿಗೆ ಬಂದ ಎಲ್ಲ ಚಿತ್ರಗಳನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. 2018ರಿಂದ ಈಚೆಗೆ ಅವರ ನಟನೆಯ ಬೆರಳೆಣಿಕೆ ಸಿನಿಮಾಗಳು ಮಾತ್ರ ರಿಲೀಸ್ ಆಗಿವೆ. 2020ರಲ್ಲಿ ‘ಶಿವಾಜಿ ಸುರತ್ಕಲ್’ ಸಿನಿಮಾ  ತೆರೆಗೆ ಬಂದು ಮೆಚ್ಚುಗೆ ಪಡೆದುಕೊಂಡಿತು. ಈಗ ಈ ಚಿತ್ರದ ಸೀಕ್ವೆಲ್ ಬರುತ್ತಿದೆ.

ನಿರ್ದೇಶಕರಾಗಿಯೂ ರಮೇಶ್ ಅರವಿಂದ್ ಅವರು ಗುರುತಿಸಿಕೊಂಡಿದ್ದಾರೆ. ‘ರಾಮ ಶಾಮ ಭಾಮ’ ಚಿತ್ರದಿಂದ ಅವರ ನಿರ್ದೇಶನದ ಹಾದಿ ಆರಂಭ ಆಯಿತು. ನಂತರ ಅವರು ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲಿ ಪ್ರಸಾರ ಕಂಡ ‘ವೀಕೆಂಡ್ ವಿತ್ ರಮೇಶ್’ ಶೋ ನಿರೂಪಣೆ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಸಾಧಕರನ್ನು ಪರಿಚಯಿಸುವ ಈ ಶೋ ಜನಮೆಚ್ಚುಗೆ ಪಡೆದುಕೊಂಡಿತು.

ಇದನ್ನೂ ಓದಿ
ಜನ್ಮದಿನಕ್ಕೆ ವಿಶ್​ ಮಾಡಲು ಫೋನ್​ ನಂಬರ್​ ಕೊಟ್ಟ ರಮೇಶ್​ ಅರವಿಂದ್​; ಇಲ್ಲಿದೆ ಸೂಪರ್​ ಅವಕಾಶ
Book Release : ಕನ್ನಡ ಪುಸ್ತಕಗಳಿಗೆ ‘ಸ್ಟಾರ್’ ಪಟ್ಟ, ಇದು ‘ವೀರಲೋಕ’ದ ಕೊಡುಗೆ
ಲತಾ ಮಂಗೇಶ್ಕರ್​ ನಿಧನಕ್ಕೆ ಮರುಗಿದ ಸ್ಯಾಂಡಲ್​ವುಡ್​​; ಶಿವರಾಜ್​ಕುಮಾರ್​, ರಮೇಶ್​ ಅರವಿಂದ್ ಕಂಬನಿ
2022ರ ಪೂರ್ತಿ ರಮೇಶ್​ ಅರವಿಂದ್​ ವಿಶೇಷ ಮಾತುಗಳು; ಹೊಸ ಪ್ರಯತ್ನಕ್ಕೆ ಕೈ ಹಾಕಿದ ಎವರ್​ಗ್ರೀನ್​ ನಟ

ರಮೇಶ್ ನಟನೆಯ ‘ಶಿವಾಜಿ ಸುರತ್ಕಲ್’ ಚಿತ್ರಕ್ಕೆ ಈಗ ಸೀಕ್ವೆಲ್ ಬರುತ್ತಿದೆ. ಇಂದು ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಬರ್ತ್​ಡೇ ಪ್ರಯುಕ್ತ ಫ್ಯಾನ್ಸ್​ಗೆ ಈ ಟೀಸರ್ ಗಿಫ್ಟ್ ಆಗಿ ಸಿಗಲಿದೆ ಅನ್ನೋದು ವಿಶೇಷ.

ಇದನ್ನೂ ಓದಿ: Ramesh Aravind: ಸೋಷಿಯಲ್ ಮೀಡಿಯಾ ವರವೋ, ಶಾಪವೋ?; ರಮೇಶ್ ಅರವಿಂದ್ ಹೇಳಿದ್ದೇನು?

ಇನ್ನು, ಬರ್ತ್​ಡೇ ಪ್ರಯುಕ್ತ ರಮೇಶ್ ಅವರು ಹೊಸ ಘೋಷಣೆ ಮಾಡಿದ್ದಾರೆ. ವಿಶ್ ಮಾಡೋಕೆ ಅವರು ಫ್ಯಾನ್ಸ್​ಗೆ ಅವಕಾಶ ನೀಡಿದ್ದಾರೆ. ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು. ಬರೀ ವಿಶ್​ ಮಾಡುವುದು ಮಾತ್ರವಲ್ಲದೇ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎಂಬುದು ವಿಶೇಷ.

Published On - 6:00 am, Sat, 10 September 22