ಜನ್ಮದಿನಕ್ಕೆ ವಿಶ್​ ಮಾಡಲು ಫೋನ್​ ನಂಬರ್​ ಕೊಟ್ಟ ರಮೇಶ್​ ಅರವಿಂದ್​; ಇಲ್ಲಿದೆ ಸೂಪರ್​ ಅವಕಾಶ

TV9kannada Web Team

TV9kannada Web Team | Edited By: Madan Kumar

Updated on: Sep 09, 2022 | 3:01 PM

Ramesh Aravind Birthday: ರಮೇಶ್​ ಅರವಿಂದ್ ​ನೀಡಿದ ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ​ಹುಟ್ಟುಹಬ್ಬದ ಶುಭಾಶಯ ತಿಳಿಸಬಹುದು. ಅಲ್ಲದೇ,​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು.

ಜನ್ಮದಿನಕ್ಕೆ ವಿಶ್​ ಮಾಡಲು ಫೋನ್​ ನಂಬರ್​ ಕೊಟ್ಟ ರಮೇಶ್​ ಅರವಿಂದ್​; ಇಲ್ಲಿದೆ ಸೂಪರ್​ ಅವಕಾಶ
ರಮೇಶ್ ಅರವಿಂದ್

ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್​ (Ramesh Aravind) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ವಿವಿಧ ಬಗೆಯ ಪಾತ್ರಗಳ ಮೂಲಕ ಜನಮನ ಗೆ​ದ್ದಿರುವ ಅವರು ಇಂದಿಗೂ ಸಖತ್​ ಬೇಡಿಕೆ ಉಳಿಸಿಕೊಂಡಿದ್ದಾರೆ. ಕನ್ನಡದ ಚಿತ್ರರಂಗದಲ್ಲಿ ಅವರು ಎವರ್​ಗ್ರೀನ್ ಹೀರೋ ಆಗಿ ಮಿಂಚುತ್ತಿದ್ದಾರೆ. ಸೆಪ್ಟೆಂಬರ್​ 10ರಂದು ರಮೇಶ್​ ಅರವಿಂದ್​ ಜನ್ಮದಿನ (Ramesh Aravind Birthday) . ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ನೇರವಾಗಿ ವಿಶ್​ ಮಾಡುವುದು ಕಷ್ಟ. ಅದಕ್ಕಾಗಿ ಸ್ವತಃ ರಮೇಶ್​ ಅರವಿಂದ್​ ಕಡೆಯಿಂದ ಒಂದು ದೊಡ್ಡ ಆಫರ್​ ನೀಡಲಾಗಿದೆ. ಅಭಿಮಾನಿಗಳಿಗಾಗಿ ಅವರು ಫೋನ್​ ನಂಬರ್​ (Ramesh Aravind Phone Number) ನೀಡಿದ್ದಾರೆ. ಆ ನಂಬರ್​ಗೆ ವಾಟ್ಸಾಪ್​ ಸಂದೇಶ ಕಳಿಸುವ ಮೂಲಕ ನೆಚ್ಚಿನ ನಟನಿಗೆ ನೀವು ವಿಶ್​ ಮಾಡಬಹುದು.

ಕನ್ನಡ ಚಿತ್ರರಂಗದಲ್ಲಿ ರಮೇಶ್​ ಅವರು ವಿಶೇಷ ಛಾಪು ಮೂಡಿಸಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಅವರ ಪಾಸಿಟಿವ್​ ಮಾತುಗಳಿಗೆ ಎಲ್ಲರೂ ತಲೆದೂಗುತ್ತಾರೆ. ಅನೇಕ ಶಾಲೆ-ಕಾಲೇಜುಗಳಲ್ಲಿ ಅವರು ಮೋಟಿವೇಷನಲ್​ ಸ್ಪೀಚ್​ ನೀಡಿದ್ದಾರೆ. ಹಾಗಾಗಿ ರಮೇಶ್​ ಅರವಿಂದ್​ ಅವರಿಗೆ ಎಲ್ಲ ವಯಸ್ಸಿನ ಅಭಿಮಾನಿಗಳು ಇದ್ದಾರೆ. ಅಂಥ ಎಲ್ಲ ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.

ತಾಜಾ ಸುದ್ದಿ

ಬರೀ ವಿಶ್​ ಮಾಡುವುದು ಮಾತ್ರವಲ್ಲದೇ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎಂಬುದು ವಿಶೇಷ.

2020ರಲ್ಲಿ ರಮೇಶ್​ ಅರವಿಂದ್​ ನಟಿಸಿದ ‘ಶಿವಾಜಿ ಸುರತ್ಕಲ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ ಆ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಮತ್ತೆ ಡಿಟೆಕ್ಟೀವ್​ ಆಗಿ ಅಭಿಮಾನಿಗಳನ್ನು ಅವರು ರಂಜಿಸಲಿದ್ದಾರೆ. ಇನ್ನೊಂದು ಕೇಸ್​ ಪತ್ತೆ ಹಚ್ಚಲು ಅವರು ಜನರ ಮುಂದೆ ಬರಲಿದ್ದಾರೆ. ‘ಶಿವಾಜಿ ಸುರತ್ಕಲ್​ 2’ ಚಿತ್ರಕ್ಕೆ ಆಕಾಶ್​ ಶ್ರೀವಸ್ತ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆಎನ್​ ಮತ್ತು ಅನೂಪ್​ ಗೌಡ ನಿರ್ಮಾಣ ಮಾಡುತ್ತಿ​ದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada