‘ಕೋಟಿ’ ಸಿನಿಮಾದಲ್ಲಿ ಧನಂಜಯ್​ ಎದುರು ಅಬ್ಬರಿಸುವ ರಮೇಶ್‌ ಇಂದಿರಾ

|

Updated on: May 05, 2024 | 4:48 PM

ನಿರ್ದೇಶಕ ಪರಮ್​​ ಅವರು ‘ಕೋಟಿ’ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದ್ದಾರೆ. ವಿಲನ್​ ಪಾತ್ರದ ಕಿರು ಪರಿಚಯವನ್ನು ಅವರು ಈ ಪೋಸ್ಟರ್​ ಮೂಲಕ ಮಾಡಿಸಿದ್ದಾರೆ. ರಮೇಶ್​ ಇಂದಿರಾ ಅವರು ‘ಕೋಟಿ’ ಸಿನಿಮಾದಲ್ಲಿ ದಿನೂ ಸಾವ್ಕಾರ್​ ಎಂಬ ಪಾತ್ರ ಮಾಡಿದ್ದಾರೆ. ಆ ಪಾತ್ರದ ಬಗ್ಗೆ ಪರಮ್​​ ಅವರು ವಿವರಣೆ ನೀಡಿದ್ದಾರೆ. ವಿಲನ್​ ಎಷ್ಟು ಮುಖ್ಯ ಎಂಬುದನ್ನು ಅವರು ವಿವರಿಸಿದ್ದಾರೆ.

‘ಕೋಟಿ’ ಸಿನಿಮಾದಲ್ಲಿ ಧನಂಜಯ್​ ಎದುರು ಅಬ್ಬರಿಸುವ ರಮೇಶ್‌ ಇಂದಿರಾ
ರಮೇಶ್​ ಇಂದಿರಾ
Follow us on

‘ರಮೇಶ್‌ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್‌ ಗಾಬರಿಯಾಗಿದ್ದೇನೆʼ. ನಿರ್ದೇಶಕ ಪರಮ್​ (Param) ಅವರು ತಮ್ಮ ‘ಕೋಟಿ’ ಸಿನಿಮಾದ ಖಳನಟನ ಬಗ್ಗೆ ಹೇಳಿದ ಮಾತಿದು. ಈ ಚಿತ್ರಕ್ಕೆ ಡಾಲಿ ಧನಂಜಯ್​ ಹೀರೋ. ಅವರ ಎದುರು ವಿಲನ್​ ಆಗಿ ಅಬ್ಬರಿಸುವುದು ರಮೇಶ್​​ ಇಂದಿರಾ (Ramesh Indira). ಈಗಾಗಲೇ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಖಳನಾಗಿ ಗಮನ ಸೆಳೆದಿದ್ದಾರೆ. ‘ಕೋಟಿ’ (Kotee) ಸಿನಿಮಾದಲ್ಲೂ ಅವರಿಗೆ ಡಿಫರೆಂಟ್​ ಆದಂತಹ ವಿಲನ್​ ಪಾತ್ರವಿದೆ. ದಿನೂ ಸಾವ್ಕಾರ್ ಎಂಬುದು ಆ ಪಾತ್ರದ ಹೆಸರು. ದಿನೂ ಸಾವ್ಕಾರ್​ ಪಾತ್ರದ ಬಗ್ಗೆ ಪರಮ್​ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪರಮ್​ ಹಂಚಿಕೊಂಡಿರುವ ಪೋಸ್ಟರ್​ ಆಕರ್ಷಕವಾಗಿದೆ. ಬಾಯಲ್ಲಿ ಸಿಗರೇಟ್​ ಕಚ್ಚಿಕೊಂಡು ಯಾರದ್ದೋ ಮೇಲೆ ಕಿಡಿಕಾರಲು ಸಿದ್ಧವಾಗಿರುವಂತಹ ರೀತಿಯಲ್ಲಿ ರಮೇಶ್​ ಇಂದಿರಾ ಅವರು ಈ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಕೌತುಕ ಮೂಡಿಸುವಲ್ಲಿ ಈ ಪೋಸ್ಟರ್​ ಯಶಸ್ವಿ ಆಗಿದೆ. ಜೂನ್​ 14ಕ್ಕೆ ‘ಕೋಟಿ’ ಸಿನಿಮಾ ಬಿಡುಗಡೆ ಆಗಲಿದೆ. ಡಾಲಿ ಧನಂಜಯ್​ ವರ್ಸಸ್​ ರಮೇಶ್​ ಇಂದಿರಾ ನಡುವಿನ ಘರ್ಷಣೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಡಾಲಿ ಧನಂಜಯ್​ನ ನೋಡಲು ಮುಗಿಬಿದ್ದ ಅಭಿಮಾನಿಗಳು

‘ಕೋಟಿ’ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ನಿರ್ದೇಶಕ ಪರಮ್​​ ಅವರು ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಇಂಟರೆಸ್ಟಿಂಗ್​ ಸಂಗತಿಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಈಗ ಅವರ ತಮ್ಮ ಸಿನಿಮಾದ ವಿಲನ್​ ಬಗ್ಗೆ ವಿವರಿಸಿದ್ದಾರೆ. ‘ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಮನಸ್ಸಿನ ಆಳದಲ್ಲಿ ಹುದುಗಿರುವ ಆಸೆಗಳನ್ನು ಈ ಪಾತ್ರಗಳು ನಮಗೆ ಭೇಟಿ ಮಾಡಿಸುತ್ತವೆ. ಇಷ್ಟವಿಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತವಿದೆ. ಇಲ್ಲದಿದ್ದರೆ, ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿ ಆಗಬೇಕು? ಸುಯೋಧನ ಹಾಗೂ ಕರ್ಣನ ನಡುವಿನ ಸ್ನೇಹ ನೋಡಿ ಯಾಕೆ ನಾವು ಭಾವುಕರಾಗಬೇಕು? ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕಥೆಗೊಂದು ಎನರ್ಜಿ ಕೊಡುವವನು ಖಳನಾಯಕʼ ಎಂದು ಪರಮ್ ಪೋಸ್ಟ್​ ಮಾಡಿದ್ದಾರೆ.

‘ಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್.‌ ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್‌ ಸ್ಟೇಬಲ್.‌ ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್​ನದು. ರಮೇಶ್‌ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್‌ ಗಾಬರಿಯಾಗಿದ್ದೇನೆ. ಇದೇ ಜೂನ್‌ 14, ಶುಕ್ರವಾರ ಇವರು ಸಾರ್ವಜನಿಕರ ಭೇಟಿಗೆ ಸಿಗುತ್ತಾರೆ’ ಎಂದು ಪರಮ್​ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.