AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತೋಷ್ ಬಾಲರಾಜ್, ರಂಜನಿ ಜೋಡಿಯ ‘ಸತ್ಯಂ’ ಚಿತ್ರದಲ್ಲಿ ಪಂಜುರ್ಲಿ ಕಥೆ

‘ಸತ್ಯಂ’ ಸಿನಿಮಾದಲ್ಲಿ ಪಂಜುರ್ಲಿ ದೈವದ ಆರಾಧನೆಯ ಕಹಾನಿ ಇದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ಆ ಮೂಲಕ ಪ್ರೇಕ್ಷಕರಲ್ಲಿ ಕೌತಕ ಹೆಚ್ಚಿಸಲಾಗಿದೆ. ಸಂತೋಷ್​ ಬಾಲರಾಜ್​, ರಂಜನಿ ರಾಘವನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅನೇಕ ಅನುಭವಿ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಅಶೋಕ್​ ಕಡಬ ಅವರ ನಿರ್ದೇಶನ ಈ ಚಿತ್ರಕ್ಕಿದೆ.

ಸಂತೋಷ್ ಬಾಲರಾಜ್, ರಂಜನಿ ಜೋಡಿಯ ‘ಸತ್ಯಂ’ ಚಿತ್ರದಲ್ಲಿ ಪಂಜುರ್ಲಿ ಕಥೆ
ಸಂತೋಷ್​ ಬಾಲರಾಜ್​, ರಂಜನಿ ರಾಘವನ್
ಮದನ್​ ಕುಮಾರ್​
|

Updated on: May 05, 2024 | 1:34 PM

Share

ಕೆಲವೇ ತಿಂಗಳ ಹಿಂದೆ ‘ಸತ್ಯಂ’ ಸಿನಿಮಾ (Sathyam Kannada Movie) ಟೀಸರ್​ ಬಿಡುಗಡೆ ಆಗಿತ್ತು. ಆ ಟೀಸರ್​ಗೆ 10 ಲಕ್ಷಕ್ಕೂ ಅಧಿಕ ವೀವ್ಸ್​ ಸಿಕ್ಕಿದೆ. ಸಂತೋಷ್​ ಬಾಲರಾಜ್​ (Santhosh Balaraj) ನಟನೆಯ ‘ಸತ್ಯಂ’ ಸಿನಿಮಾಗೆ ಅಶೋಕ್​ ಕಡಬ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅವರು ಒಂದು ಭಿನ್ನವಾದ ಕಹಾನಿ ತೋರಿಸಲಿದ್ದಾರೆ. ಟೀಸರ್​ ನೋಡಿದ ಎಲ್ಲರಿಗೂ ಕೌತುಕ ಮೂಡಿದೆ. ಈಗ ಈ ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಸೆನ್ಸಾರ್​ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ‘ಸತ್ಯಂ’ ಸಿನಿಮಾಗೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಈ ಸಿನಿಮಾಗೆ ಮಹಾಂತೇಶ್​ ವಿ.ಕೆ. ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಂಜನಿ ರಾಘವನ್ (Ranjani Raghavan) ನಟಿಸಿದ್ದಾರೆ.

ನಟ ಸಂತೋಷ್​ ಬಾಲರಾಜ್​ ಅವರು ‘ಗಣಪ’ ಸಿನಿಮಾದಲ್ಲಿ ನಟಿಸಿ ಭರವಸೆ ಮೂಡಿಸಿದ್ದರು. ಅದು ಅವರ ಮೊದಲ ಸಿನಿಮಾ. ಎರಡನೇ ಸಿನಿಮಾ ‘ಕರಿಯ 2’ ಕೂಡ ಗಮನ ಸೆಳೆದಿತ್ತು. ಈಗ ಅವರು ನಟಿಸಿದ ಮೂರನೇ ಚಿತ್ರವಾಗಿ ‘ಸತ್ಯಂ’ ಸಿನಿಮಾ ಮೂಡಿಬಂದಿದೆ. ‘ರಂಗಿತರಂಗ’, ‘ಕಾಂತಾರ’ ಮುಂತಾದ ಸಿನಿಮಾಗಳಲ್ಲಿ ತುಳುನಾಡಿನ ದೈವಾರಾಧನೆ ಕುರಿತು ಕಥೆಯಿತ್ತು. ಆ ಭಾಗದ ಸೊಗಡಿನ ಕಥೆಯನ್ನೇ ಇಟ್ಟುಕೊಂಡು ಈಗ ‘ಸತ್ಯಂ’ ಕೂಡ ಸಿದ್ಧವಾಗಿದೆ. ಹಾಗಂತ ಈ ಸಿನಿಮಾಗೆ ‘ಕಾಂತಾರ’ ಪ್ರೇರಣೆ ಅಲ್ಲ. ಯಾಕೆಂದರೆ, ‘ಕಾಂತಾರ’ಗಿಂತ ಮೊದಲೇ ‘ಸತ್ಯಂ’ ಕಥೆ ಸಿದ್ಧವಾಗಿತ್ತು ಎಂದು ಚಿತ್ರತಂಡದವರು ಹೇಳಿದ್ದಾರೆ.

‘ಸತ್ಯಂ’ ಸಿನಿಮಾವನ್ನು ನೋಡಿದ ಸೆನ್ಸಾರ್​ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ. ಅದು ಚಿತ್ರತಂಡಕ್ಕೆ ಖುಷಿ ನೀದಿದೆ. ಯಾವುದೇ ಕಟ್ ನೀಡದೇ ‘ಯು/ಎ’ ಪ್ರಮಾಣಪತ್ರ ಕೊಡಲಾಗಿದೆ. ಈ ಸಿನಿಮಾದಲ್ಲಿ ಮಾಸ್​ ಅಂಶಗಳು ಇವೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಟೀಸರ್​ಗೆ ಸಿನಿಪ್ರಿಯರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ. ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಆರಾಧನೆಯ ಕಹಾನಿ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ. ಅದರ ಸುತ್ತ ರೋಚಕವಾದ ಮತ್ತು ಸುಲಭದಲ್ಲಿ ಊಹಿಸಲು ಸಾಧ್ಯವಾಗದ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುವುದು ಎಂದು ಹೇಳುವ ಮೂಲಕ ಚಿತ್ರತಂಡದವರು ಕೌತಕ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ‘ಕೊರಗಜ್ಜ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆಗೆ ದೈವದಿಂದಲೇ ಸಿಕ್ತು ಅನುಮತಿ

‘ಶ್ರೀಮಾತಾ ಕ್ರಿಯೇಷನ್ಸ್’ ಮೂಲಕ ‘ಸತ್ಯಂ’ ಸಿನಿಮಾ ನಿರ್ಮಾಣ ಆಗಿದೆ. ಕುಟುಂಬ ಸಮೇತರಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಇಷ್ಟ ಆಗಲಿದೆ ಎಂಬುದು ತಂಡದ ಭರವಸೆ. ರವಿ ಬಸ್ರೂರು ಅವರು ‘ಸತ್ಯಂ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ ಮಾಡಿದ್ದಾರೆ. ಸಂತೋಷ್ ಬಾಲರಾಜ್, ರಂಜಿನಿ ರಾಘವನ್ ಜೊತೆ ಸುಮನ್, ಪವಿತ್ರಾ ಲೋಕೇಶ್, ಸೈಯಾಜಿ ಶಿಂಧೆ, ಅವಿನಾಶ್, ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಸಾದ್, ಎಂ.ಎನ್. ಲಕ್ಷ್ಮಿದೇವಿ, ತನುಶ್ರೀ, ಶೃಂಗೇರಿ ರಾಮಣ್ಣ, ಎಂ.ಎಸ್. ಉಮೇಶ್, ಮೀನಾಕ್ಷಿ, ಬಸವರಾಜ್ ಕಟ್ಟಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ