ನಟಿ ರಮ್ಯಾ (Ramya Divya Spandana) ಅವರು ನಾಯಕಿ ಆಗಿ ಇತ್ತೀಚೆಗೆ ತೆರೆಮೇಲೆ ಬಂದಿಲ್ಲ. ಅವರನ್ನು ಮತ್ತೆ ದೊಡ್ಡಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಇಂದು (ನವೆಂಬರ್ 29) ರಮ್ಯಾ ಜನ್ಮದಿನ. ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ಲುಕ್ ಹೇಗಿದೆ ಎಂಬುದು ರಿವೀಲ್ ಆಗಬಹುದು ಎಂದು ಫ್ಯಾನ್ಸ್ ಕಾದಿದ್ದಾರೆ.
ರಮ್ಯಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. 2003ರಲ್ಲಿ ರಿಲೀಸ್ ಆದ ‘ಅಭಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಮೊದಲ ಚಿತ್ರದಲ್ಲೇ ಪುನೀತ್ ರಾಜ್ಕುಮಾರ್ ಜೊತೆ ಅವರು ತೆರೆ ಹಂಚಿಕೊಂಡರು. ಅವರಿಗೆ ‘ಅಭಿ’ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ‘ಎಕ್ಸ್ಕ್ಯೂಸ್ ಮಿ’ ಸಿನಿಮಾದಿಂದ ದೊಡ್ಡ ಗೆಲುವು ಕಂಡರು. ಆ ಬಳಿಕ ಅವರು ಹಲವು ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡರು.
2016ರಿಂದ ಈಚೆ ರಮ್ಯಾ ಯಾವುದೇ ಸಿನಿಮಾದಲ್ಲಿ ನಾಯಕಿ ಆಗಿ ನಟಿಸಿಲ್ಲ. ಈಗ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ‘ಉತ್ತರಕಾಂಡ’ ಸಿನಿಮಾದಿಂದ ಅವರ ಪೋಸ್ಟರ್ ಅಥವಾ ಟೀಸರ್ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಡಾಲಿ ಧನಂಜಯ್ ಅವರ ಪಾತ್ರ ಈ ಚಿತ್ರದಲ್ಲಿ ಸಖತ್ ಖಡಕ್ ಆಗಿದೆ. ರಮ್ಯಾ ಅವರಿಗೂ ಅದೇ ರೀತಿಯ ಪಾತ್ರ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ‘ಉತ್ತರಕಾಂಡ’ ಸಿನಿಮಾಗೆ ರೋಹಿತ್ ಪದಕಿ ನಿರ್ದೇಶನ ಮಾಡಲಿದ್ದಾರೆ. ‘ಕೆಆರ್ಜಿ ಸ್ಟುಡಿಯೋಸ್’ ಬ್ಯಾನರ್ ಮೂಲಕ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಮ್ಯಾ, ಡಾಲಿ ಧನಂಜಯ್ ಜೊತೆ ‘ಉತ್ತರಕಾಂಡ’ ಚಿತ್ರತಂಡಕ್ಕೆ ಸೇರ್ಪಡೆ ಆದ ಶಿವರಾಜ್ಕುಮಾರ್
ಕಳೆದ ವಾರ ರಮ್ಯಾ ನಿರ್ಮಾಣದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ರಿಲೀಸ್ ಆಗಿದೆ. ಹೀಗಾಗಿ, ರಮ್ಯಾ ಜನ್ಮದಿನ ಮತ್ತಷ್ಟು ವಿಶೇಷ ಎನಿಸಿಕೊಂಡಿದೆ. ಬರ್ತ್ಡೇ ಸಂದರ್ಭದಲ್ಲಿ ವೆಕೇಶನ್ಗೆ ತೆರಳಿದ್ದಾರೋ ಎನ್ನುವ ವಿಚಾರ ಇನ್ನೂ ರಿವೀಲ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:36 am, Wed, 29 November 23