AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ವದಂತಿ ಬಗ್ಗೆ ಮೌನ ಮುರಿದ ರಮ್ಯಾ; ಸ್ಯಾಂಡಲ್​ವುಡ್​ ಕ್ವೀನ್​ ಹೇಳಿದ್ದೇನು?

ನಟಿ ರಮ್ಯಾ ದಿವ್ಯ ಸ್ಪಂದನಾ ಅವರ ಮದುವೆ ಬಗ್ಗೆ ಕೆಲವು ದಿನಗಳಿಂದ ಗಾಸಿಪ್ ಕೇಳಿಬರುತ್ತಿತ್ತು. ಉದ್ಯಮಿಯೊಬ್ಬರ ಜೊತೆ ರಮ್ಯಾ ಅವರ ವಿವಾಹ ನಿಶ್ಚಯ ಆಗಿದೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು. ಆ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ಅವರ ಅಭಿಮಾನಿಗಳು ಕಾದಿದ್ದರು. ಹಾಗಾಗಿ ಈಗ ಸ್ವತಃ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮದುವೆ ವದಂತಿ ಬಗ್ಗೆ ಮೌನ ಮುರಿದ ರಮ್ಯಾ; ಸ್ಯಾಂಡಲ್​ವುಡ್​ ಕ್ವೀನ್​ ಹೇಳಿದ್ದೇನು?
ರಮ್ಯಾ ದಿವ್ಯ ಸ್ಪಂದನಾ
ಮದನ್​ ಕುಮಾರ್​
|

Updated on: Sep 10, 2024 | 10:55 PM

Share

‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ನಟನೆಯಿಂದ ದೂರ ಉಳಿದಿದ್ದರೂ ಕೂಡ ಅವರ ಬಗ್ಗೆ ಕೇಳಿಬರುವ ಸುದ್ದಿಗಳು ಕಡಿಮೆ ಆಗಿಲ್ಲ. ಅವರಿಗೆ ಸಂಬಂಧಿಸಿದ ಒಂದಲ್ಲಾ ಒಂದು ಗಾಸಿಪ್​ ಹರಡುತ್ತಲೇ ಇರುತ್ತದೆ. ಇತ್ತೀಚೆಗೆ ರಮ್ಯಾ ಅವರ ವಿವಾಹದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಉದ್ಯಮಿಯೊಬ್ಬರ ಜೊತೆಗೆ ರಮ್ಯಾ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಅಂತೆಕಂತೆಗಳ ಬಗ್ಗೆ ಈಗ ಸ್ವತಃ ರಮ್ಯಾ ಅವರೇ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮದುವೆಗೆ ಬಗ್ಗೆ ಹಬ್ಬಿರುವ ಮಾಹಿತಿ ಸುಳ್ಳು ಎಂದು ಅವರು ಹೇಳಿದ್ದಾರೆ.

ರಮ್ಯಾ ಅವರ ವೈಯಕ್ತಿಕ ಜೀವನದ ಬಗ್ಗೆ, ಅದರಲ್ಲೂ ಮದುವೆ ಬಗ್ಗೆ ಗಾಳಿಸುದ್ದಿ ಹಬ್ಬಿದ್ದು ಇದೇ ಮೊದಲೇನೂ ಅಲ್ಲ. ಆಗಾಗ ಈ ಕುರಿತು ಗಾಸಿಪ್​ ಹರಡುತ್ತಲೇ ಇರುತ್ತದೆ. ಈ ಬಾರಿ ವರ ಇವರೇ ಎಂದು ಹೇಳುವ ಮೂಲಕ ವ್ಯಕ್ತಿಯೊಬ್ಬರ ಫೋಟೋವನ್ನು ಕೂಡ ಹಾಕಲಾಯಿತು. ಶೀಘ್ರದಲ್ಲೇ ಎಂಗೇಜ್​ಮೆಂಟ್​ ಎಂದು ಗಾಸಿಪ್​ ಹಬ್ಬಿಸಲಾಯಿತು. ಆದರೆ ಅದೆಲ್ಲ ಸುಳ್ಳು ಎಂದು ರಮ್ಯಾ ಅವರು ಹೇಳಿದ್ದಾರೆ.

ರಮ್ಯಾ ಪ್ರತಿಕ್ರಿಯೆ

ಮದುವೆ ಕುರಿತು ಹಬ್ಬಿದ ಗಾಳಿಸುದ್ದಿ ರಮ್ಯಾ ಅವರ ಕಿವಿಗೆ ಬಿದ್ದಿದೆ. ಹಾಗಾಗಿ ಅವರು ಸೋಶಿಯಲ್​ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ರಮ್ಯಾ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಮಾಧ್ಯಮದವರೇ ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಎಷ್ಟು ಬಾರಿ ಎಂಬುದರ ಲೆಕ್ಕವೇ ನನಗಿಲ್ಲ. ಒಂದು ವೇಳೆ ಮದುವೆಯಾದರೆ ನಾನೇ ಅದನ್ನು ನಿಮಗೆ ತಿಳಿಸುತ್ತೇವೆ. ಅನಧಿಕೃತ ಮೂಲಗಳಿಂದ ಬಂದ ವದಂತಿ ಹಬ್ಬಿಸುವುದನ್ನು ದಯವಿಟ್ಟು ನಿಲ್ಲಿಸಿ’ ಎಂದು ರಮ್ಯಾ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಮ್ಯಾ ಬದಲು ರಚಿತಾ ರಾಮ್: ಪ್ರೇಕ್ಷಕರು ಇದನ್ನು ಒಪ್ಪಿಕೊಳ್ತಾರಾ? ನಾಗಶೇಖರ್ ಹೇಳಿದ್ದಿಷ್ಟು

ಸದ್ಯಕ್ಕಂತೂ ರಮ್ಯಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ಅಭಿನಯಿಸಬೇಕಿತ್ತು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಅವರು ನಟಿಸಿಬೇಕಿತ್ತು. ಕಾರಣಾಂತರಗಳಿಂದ ಅವರು ಆ ಪಾತ್ರಗಳನ್ನು ಅರ್ಧಕ್ಕೆ ಬಿಟ್ಟರು. ರಮ್ಯಾ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಮದುವೆಯ ಬಗ್ಗೆ ಗಾಸಿಪ್​ ಕೇಳಿಬಂದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಆದರೆ ಈಗ ರಮ್ಯಾ ಅವರಿಂದಲೇ ಸ್ಪಷ್ಟನೆ ಸಿಕ್ಕಿದ್ದು, ಎಲ್ಲ ಗಾಳಿಸುದ್ದಿಗಳಿಗೆ ಫುಲ್​ಸ್ಟಾಪ್​ ಇಟ್ಟಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.