ಹುಟ್ಟುಹಬ್ಬದ ದಿನ ಇಷ್ಟವಾದವರೊಟ್ಟಿಗೆ ಕಾಲ ಕಳೆದ ರಮ್ಯಾ

|

Updated on: Nov 29, 2023 | 3:27 PM

Ramya Birthday: ನಟಿ ರಮ್ಯಾ ಇಂದು (ನವೆಂಬರ್ 29) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಅವರು ತಮಗಿಷ್ಟವಾದವರೊಟ್ಟಿಗೆ ಸಮಯ ಕಳೆದಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.

ಹುಟ್ಟುಹಬ್ಬದ ದಿನ ಇಷ್ಟವಾದವರೊಟ್ಟಿಗೆ ಕಾಲ ಕಳೆದ ರಮ್ಯಾ
ರಮ್ಯಾ
Follow us on

ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ (Ramya) ಹುಟ್ಟುಹಬ್ಬ ಇಂದು (ನವೆಂಬರ್ 29). ರಮ್ಯಾ ದೊಡ್ಡ ಬ್ರೇಕ್ ಬಳಿಕ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಹಾಗಾಗಿ ಅವರ ಈ ಹುಟ್ಟುಹಬ್ಬಕ್ಕೆ ಅವರ ಹೊಸ ಸಿನಿಮಾದ ಅಪ್​ಡೇಟ್ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಈವರೆಗೆ ರಮ್ಯಾರ ಹೊಸ ಸಿನಿಮಾಗಳ ಯಾವುದೇ ಅಪ್​ಡೇಟ್​ಗಳು ಹೊರಬಿದ್ದಿಲ್ಲ. ಆದರೆ ರಮ್ಯಾ ಈ ಹುಟ್ಟುಹಬ್ಬವನ್ನು ಸರಳವಾಗಿ, ತಮಗೆ ಇಷ್ಟವಾದವರೊಟ್ಟಿಗೆ ಸಮಯ ಕಳೆಯುತ್ತಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ಪುಟ್ಟ-ಪುಟ್ಟ ನಾಯಿ ಮರಿಗಳೊಟ್ಟಿಗೆ ಆಟವಾಡುತ್ತಿರುವ ವಿಡಿಯೋ ಒಂದನ್ನು ರಮ್ಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ರಮ್ಯಾ ಮುಖ ಕಾಣುತ್ತಿಲ್ಲ. ಪುಟ್ಟಪುಟ್ಟ ನಾಯಿ ಮರಿಗಳು ಮುದ್ದು-ಮುದ್ದಾಗಿ ಆಡುತ್ತಿರುವ ವಿಡಿಯೋ ಮನಸ್ಸಿಗೆ ಮುದ ನೀಡುತ್ತಿದೆ. ‘‘ನಿಮ್ಮ ಹುಟ್ಟುಹಬ್ಬದ ಶುಭಾಶಯಗಳು ನನ್ನ ಮನಸ್ಸಿಗೆ ಮುದ ನೀಡಿದಂತೆ ಈ ಪುಟ್ಟ ವಿಡಿಯೋ ನಿಮ್ಮ ಮನಸ್ಸಿಗೆ ಮುದ ನೀಡುವ ವಿಶ್ವಾಸವಿದೆ’’ ಎಂದು ವಿಡಿಯೋಕ್ಕೆ ಕ್ಯಾಪ್ಷನ್ ಬರೆದಿದ್ದಾರೆ ನಟಿ ರಮ್ಯಾ.

ನಟಿ ರಮ್ಯಾ ಶ್ವಾನಪ್ರಿಯೆ. ಮನೆಯಲ್ಲಿ ಕೆಲವು ನಾಯಿಗಳನ್ನು ಸಾಕಿದ್ದಾರೆ. ತಾವು ರಕ್ಷಿಸಿದ ಬೀದಿ ನಾಯಿ, ದತ್ತು ತೆಗೆದುಕೊಂಡ ನಾಯಿ, ಉಡುಗೊರೆ ಬಂದ ನಾಯಿ ಹೀಗೆ ಕೆಲವು ನಾಯಿಗಳು ರಮ್ಯಾರ ಮನೆಯಲ್ಲಿವೆ. ಮನೆಯ ಸದಸ್ಯರಂತೆ ರಮ್ಯಾ ಅವುಗಳನ್ನು ಕಾಣುತ್ತಾರೆ. ರಮ್ಯಾರ ಬೆಡ್​ರೂಂನಲ್ಲಿ ಆಟವಾಡುವಷ್ಟು ನಾಯಿಗಳಿಗೆ ಸ್ವಾತಂತ್ರ್ಯವಿದೆ. ತಮ್ಮ ಮುದ್ದಿನ ನಾಯಿಗಳ ವಿಡಿಯೋ ಹಾಗೂ ಚಿತ್ರಗಳನ್ನು ರಮ್ಯಾ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ

ಶ್ವಾನ ಪ್ರೇಮಿಯಾಗಿರುವ ರಮ್ಯಾ, ಬೀದಿ ನಾಯಿಗಳ ಸಂರಕ್ಷಣೆ ಕುರಿತಾಗಿ ಕೆಲಸ ಮಾಡುವ ಕೆಲವು ಎನ್​ಜಿಓಗಳ ಜೊತೆಗೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಬೀದಿ ನಾಯಿಯ ಮೇಲೆ ಕಾರು ಹರಿಸಿ ಕೊಂದಾಗ ಅದನ್ನು ತೀವ್ರವಾಗಿ ಪ್ರತಿಭಟಿಸಿದ್ದ ರಮ್ಯಾ, ಆ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಆ ನಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಸಂತಾಪ ವ್ಯಕ್ತಪಡಿಸಿದ್ದರು. ಕೆಲವು ತಿಂಗಳ ಹಿಂದೆ ವೀಕೆಂಡ್ ವಿತ್ ರಮೇಶ್​ಗೆ ಬಂದಾಗಲೂ ಸಹ ತಮ್ಮ ಶ್ವಾನ ಪ್ರೇಮದ, ತಮ್ಮಲ್ಲಿರುವ ನಾಯಿಗಳ ಬಗ್ಗೆ, ಅವುಗಳು ತೋರುವ ಪ್ರೀತಿಯ ಬಗ್ಗೆ ಬಹಳ ಖುಷಿಯಾಗಿ ಮಾತನಾಡಿದ್ದರು.

ರಾಜಕೀಯಕ್ಕಾಗಿ ಚಿತ್ರರಂಗದಿಂದ ದೂರಾಗಿದ್ದ ನಟಿ ರಮ್ಯಾ, ಈಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ‘ಆಪಲ್ ಬಾಕ್ಸ್’ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಿಸಿದ್ದಾರೆ. ಜೊತೆಗೆ ‘ಹಾಸ್ಟೆಲ್ ಹುಡುಗರು’ ಸಿನಿಮಾದ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದರು. ಇದೀಗ ಡಾಲಿ ಧನಂಜಯ್, ಶಿವರಾಜ್ ಕುಮಾರ್ ನಟಿಸಿರುವ ‘ಉತ್ತರಕಾಂಡ’ ಸಿನಿಮಾದಲ್ಲಿಯೂ ರಮ್ಯಾ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ