Ranjani Raghavan: ನಿಸರ್ಗ ನೋಡಿ ತಾಳ್ಮೆ ಕಲಿತ ನಟಿ ರಂಜನಿ ರಾಘವನ್

|

Updated on: Jul 28, 2023 | 2:44 PM

ನಟಿ ರಂಜನಿ ರಾಘವನ್ ಅವರದ್ದು ಭಿನ್ನ ವ್ಯಕ್ತಿತ್ವ. ಅವರು ನಟನೆಯ ಜೊತೆಗೆ ಕಾದಂಬರಿ ಹಾಗೂ ಕಥೆಗಳನ್ನು ಕೂಡ ಬರೆಯುತ್ತಾರೆ. ಈಗ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಸುತ್ತಾಡುತ್ತಿದ್ದಾರೆ.

Ranjani Raghavan: ನಿಸರ್ಗ ನೋಡಿ ತಾಳ್ಮೆ ಕಲಿತ ನಟಿ ರಂಜನಿ ರಾಘವನ್
ರಂಜನಿ
Follow us on

ನಟಿ ರಂಜನಿ ರಾಘವನ್ (Ranjani Raghavan) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ವಿಡಿಯೋ ಹಾಗೂ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ರಂಜನಿ ಅವರು ಕೇರಳದ ವಯನಾಡಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಕೃತಿಯನ್ನು ಅವರು ಆರಾಧಿಸುತ್ತಿದ್ದಾರೆ ಎಂಬುದು ಈ ಪೋಸ್ಟ್​ನಲ್ಲಿ ಗೊತ್ತಾಗಿದೆ. ಸದ್ಯ ಅವರು ಕಿರುತೆರೆ ಬಿಟ್ಟು ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ರಂಜನಿ ರಾಘವನ್ ಅವರದ್ದು ಭಿನ್ನ ವ್ಯಕ್ತಿತ್ವ. ಅವರು ನಟನೆಯ ಜೊತೆಗೆ ಕಾದಂಬರಿ ಹಾಗೂ ಕಥೆಗಳನ್ನು ಕೂಡ ಬರೆಯುತ್ತಾರೆ. ‘ಕನ್ನಡತಿ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಅವರು ಈಗ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಸುತ್ತಾಡುತ್ತಿದ್ದಾರೆ. ಕೇರಳದ ವಯನಾಡಿನ ರೆಸಾರ್ಟ್ ಒಂದರಲ್ಲಿ ಸಮಯ ಕಳೆಯುತ್ತಿದ್ದಾರೆ.

ಪ್ರಕೃತಿ ಮಧ್ಯೆ ಇರುವ ರೆಸಾರ್ಟ್​​ನಲ್ಲಿ ರಂಜನಿ ರಾಘವನ್ ನಿಂತಿದ್ದಾರೆ. ಈ ವಿಡಿಯೋಗೆ ಅವರು, ‘ನಿಸರ್ಗ ನೋಡು.. ಆಕೆಯ ತಾಳ್ಮೆಯ ಕಲಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ರಂಜನಿ ರಾಘವನ್ ಅವರು ಹೇಳಿದ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ರಂಜನಿ ಅವರನ್ನು ಸುಂದರಿ ಎಂದು ಕರೆದಿದ್ದಾರೆ. ‘ಸುಂದರ ಲೋಕದಲ್ಲೊಬ್ಬಳು ಸುಂದರಿ’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವಯನಾಡು ಪ್ರವಾಸದ ಫೋಟೋ ಹಂಚಿಕೊಂಡ ರಂಜನಿ ರಾಘವನ್

ಇತ್ತೀಚೆಗೆ ರಂಜನಿ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ಅವರು ಈ ಚಿತ್ರಕ್ಕೆ ಹೀರೋ. ಈ ಸಿನಿಮಾಗೆ ಕಿಶೋರ್ ಮೇಗಳಮನೆ ಅವರು ನಿರ್ದೇಶನ ಮಾಡುತ್ತಿದ್ದಾರೆ‌‌. ಕಿಶೋರ್ ಮೇಗಳಮನೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾಗೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಅಶ್ವಿನ್ ಹಾಸನ್, ಕರಿಸುಬ್ಬು, ಶಿವಮಣಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದಿತ್ಯ ಮತ್ತು ರಂಜನಿ ರಾಘವನ್ ಕಾಂಬಿನೇಷನ್​ ಬಗ್ಗೆ ನಿರೀಕ್ಷೆ ಮೂಡಿದೆ. ಈ ಮೊದಲು ರಂಜನಿ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Fri, 28 July 23