‘ಧುರಂಧರ್’ ಗೆಲುವಿನ ಖುಷಿಯಲ್ಲಿರೋ ರಣವೀರ್​​​ಗೆ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು

FIR on Ranveer Singh: ರಣವೀರ್ ಸಿಂಗ್ ದೈವ ಅನುಕರಿಸಿ ವಿವಾದಕ್ಕೆ ಸಿಲುಕಿದ್ದರು. ಗೋವಾದಲ್ಲಿ ದೈವವನ್ನು ಅನುಕರಿಸಿದ ವಿಡಿಯೋ ವೈರಲ್ ಆಗಿತ್ತು. ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಿಂದ ನಟ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಅವರ 'ಧುರಂಧರ್' ಸಿನಿಮಾ ಯಶಸ್ಸಿನ ಖುಷಿಯನ್ನು ತಗ್ಗಿಸಿದೆ. ರಣವೀರ್ ಸಿಂಗ್ ದೈವ ಅನುಕರಿಸಿ ವಿವಾದಕ್ಕೆ ಸಿಲುಕಿದ್ದರು. ಗೋವಾದಲ್ಲಿ ದೈವವನ್ನು ಅನುಕರಿಸಿದ ವಿಡಿಯೋ ವೈರಲ್ ಆಗಿತ್ತು. ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಿಂದ ನಟ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಅವರ 'ಧುರಂಧರ್' ಸಿನಿಮಾ ಯಶಸ್ಸಿನ ಖುಷಿಯನ್ನು ತಗ್ಗಿಸಿದೆ.

‘ಧುರಂಧರ್’ ಗೆಲುವಿನ ಖುಷಿಯಲ್ಲಿರೋ ರಣವೀರ್​​​ಗೆ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು
ರಣವೀರ್ ಸಿಂಗ್
Image Credit source: Dhurandhar Movie
Edited By:

Updated on: Jan 29, 2026 | 9:13 AM

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ನಟನೆಯ ಜೊತೆಗೆ ವಿವಾದಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಈ ಮೊದಲು ಬೆತ್ತಲಾಗಿ ಫೋಟೋಶೂಟ್ ಮಾಡಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಕಳೆದ ವರ್ಷ ದೈವ ಅನುಕರಿಸಲು ಹೋಗಿ ವಿವಾದಕ್ಕೆ ಸಿಲುಕಿದ್ದರು. ಈ ಪ್ರಕರಣದ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್​​ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಿಂದ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ‘ಧುರಂಧರ್’ ಸಿನಿಮಾ ಗೆಲುವಿನ ಖುಷಿಯನ್ನು ಇದು ತಗ್ಗಿಸಿದೆ.

ನವೆಂಬರ್ 28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಣವೀರ್ ಸಿಂಗ್ ಭಾಗಿ ಆಗಿದ್ದರು. ‘ಕಾಂತಾರ’ ಚಿತ್ರದ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಅಲ್ಲಿಯೇ ಇದ್ದರು. ವೇದಿಕೆ ಏರಿದ ರಣವೀರ್ ಅವರು ದೈವವನ್ನು ಅನುಕರಿಸಿದರು. ಈ ವಿಡಿಯೋ ವೈರಲ್ ಆಗಿತ್ತು. ರಣವೀರ್ ಅವರನ್ನು ಅನೇಕರು ಟೀಕಿಸಿದರು.

ಭಕ್ತರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಅಭಿನಯ ಮಾಡಿದ್ದಾರೆ ಎಂದು 1ನೇ ಎಸಿಜೆಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿತ್ತು. ವಕೀಲ ಪ್ರಶಾಂತ್ ಮೇಥಲ್ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಬೆಂಗಳೂರು ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಆರಾಧಿಸುವ ಚಾವುಂಡಿ, ಗುಳಿಗ, ಪಂಜುರ್ಲಿ ದೈವಗಳನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ. ಬಿಎನ್​ಎಸ್​​ ಕಾಯ್ದೆ 196, 302, 299 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ‘ಪುಷ್ಪ 2’ ದಾಖಲೆ ಅಳಿಸಿ ಹಾಕಿದ ‘ಧುರಂಧರ್’; ರಣವೀರ್ ಸಿಂಗ್ ಈಗ ಬಾಕ್ಸ್ ಆಫೀಸ್ ಸುಲ್ತಾನ

ರಣವೀರ್ ಸಿಂಗ್ ಅವರು ದೈವ ಅನುಕರಿಸಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಪ್ರಕರಣದಿಂದ ಅವರ ನಟನೆಯ ‘ಧುರಂಧರ್’ ಚಿತ್ರಕ್ಕೆ ಆರಂಭದಲ್ಲಿ ಹಿನ್ನಡೆ ಆಯಿತು. ಆ ಬಳಿಕ ಸಿನಿಮಾ ಚೆನ್ನಾಗಿ ಇದ್ದಿದ್ದರಿಂದ ಸಿನಿಮಾಗೆ ಯಾವುದೇ ತೊಂದರೆ ಆಗಿಲ್ಲ. ಈ ಚಿತ್ರ 1300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜನವರಿ 30ಕ್ಕೆ ನೆಟ್​​​ಫ್ಲಿಕ್ಸ್​​ನಲ್ಲಿ ಸಿನಿಮಾ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:08 am, Thu, 29 January 26