AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಶಾಂಕ್ ಶೇಷಗಿರಿ ಕಂಠದಲ್ಲಿ ‘ತ್ರಿಕಾರಂ’ ಸಿನಿಮಾದ ಟೈಟಲ್ ಸಾಂಗ್

ಹರ್ಷವರ್ಧನ್, ನಿಶ್ವಿತಾ ಶೆಟ್ಟಿ ಮುಂತಾದವರು ನಟಿಸಿರುವ ‘ತ್ರಿಕಾರಂ’ ಟೈಟಲ್ ಸಾಂಗ್ ರಿಲೀಸ್ ಆಗಿದೆ. ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಯನ್ನು ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಹಾಡಿನ ಜೊತೆಗೆ ಮೇಕಿಂಗ್ ವಿಡಿಯೋ ಇದೆ. ಈ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಶಶಾಂಕ್ ಶೇಷಗಿರಿ ಕಂಠದಲ್ಲಿ ‘ತ್ರಿಕಾರಂ’ ಸಿನಿಮಾದ ಟೈಟಲ್ ಸಾಂಗ್
Trikaaram Movie Poster
ಮದನ್​ ಕುಮಾರ್​
|

Updated on: Jan 28, 2026 | 10:29 PM

Share

ಯದುವೀರ್ ಒಡೆಯರ್ ಅವರು ‘ತ್ರಿಕಾರಂ’ (Trikaaram) ಸಿನಿಮಾದ ಮೇಕಿಂಗ್ ದೃಶ್ಯಗಳನ್ನು ಒಳಗೊಂಡ ಟೈಟಲ್ ಸಾಂಗ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ‘ಆ ದೇವರ ವಂಶದ ಕುಡಿ ಇವನು, ಈ ಮಣ್ಣನು ಕಾಯಲು ಬಂದವನು..’ ಎಂದು ಆರಂಭ ಆಗುವ ಹಾಡಿಗೆ ಭರ್ಜರಿ ಚೇತನ್‌ಕುಮಾರ್ ಅವರು ಸಾಹಿತ್ಯ ನರೆದಿದ್ದಾರೆ. ಶಶಾಂಕ್ ಶೇಷಗಿರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ವಿವೇಕ್ ಚಕ್ರವರ್ತಿ ಅವರು ಸಂಗೀತ ಸಂಯೋಜಿಸಿದ್ದಾರೆ. ಹರ್ಷವರ್ಧನ್ (Harshavardhan) ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ತ್ರಿಕಾರಂ’ ಸಿನಿಮಾದ ಶೀರ್ಷಿಕೆಗೆ ‘ಇದು ಸ್ಮಶಾನ ಅಲ್ಲ’ ಎಂಬ ಟ್ಯಾಗ್​ ಲೈನ್ ಇದೆ. ಹೊಸದುರ್ಗದ ಜಿ. ಗಣೇಶ್ ಮೂರ್ತಿ ಅವರು ‘ಸದ್ಗುರು ಸಿನಿ ಪ್ರೊಡಕ್ಷನ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನಿರ್ಮಾಣ ಮಾಡುವುದು ಜೊತೆಗೆ ವಿಲನ್ ಪಾತ್ರದಲ್ಲೂ ಅವರೇ ನಟಿಸಿದ್ದಾರೆ. ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿ ಅನುಭವ ಪಡೆದಿರುವ ಅಜ್ಜಂಪುರದ ದಿಲೀಪ್ ಕುಮಾರ್ ಜೆ.ಆರ್. ಅವರು ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಈಗ ಬಿಡುಗಡೆ ಆಗಿರುವ ಈ ಹಾಡಿನ ಸಾಹಿತ್ಯ ಅರ್ಥಪೂರ್ಣವಾಗಿದೆ. ಆ ಮೂಲಕ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ನಾಯಕ ಎದುರಾಳಿಗಳ ಎದುರು ಸಿಡಿದೇಳುವಾಗ ಬರುವ ಹಾಡು ಇದಾಗಿದೆ ಎಂದು ಚಿತ್ರತಂಡ ಹೇಳಿದೆ. ಹಾಡು ನೋಡಿದ ಸಿನಿಪ್ರಿಯರು ಚಿತ್ರದ ರಿಲೀಸ್ ದಿನಾಂಕ ಯಾವಾಗ ಎಂದು ಕೇಳುತ್ತಿದ್ದಾರೆ. ಈ ವರ್ಷವೇ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ತ್ರಿಕಾರಂ’ ಟೈಟಲ್ ಸಾಂಗ್‌:

‘ತ್ರಿಕಾರಂ’ ಸಿನಿಮಾದಲ್ಲಿ ಬೆಂಗಳೂರಿನ ಹರ್ಷವರ್ಧನ್ ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ನಿಶ್ವಿತಾ ಶೆಟ್ಟಿ ಜೋಡಿ ಆಗಿದ್ದಾರೆ. ನಾಗೇಂದ್ರ ಅರಸ್, ಬಲ ರಾಜವಾಡಿ, ಮಂಜು ಪಾವಗಡ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಕಟ್ಲೆ’ ಸಿನಿಮಾ ಮೂಲಕ ಹೀರೋ ಆದ ಕೆಂಪೇಗೌಡ; ಟ್ರೇಲರ್ ರಿಲೀಸ್

ಹೊನ್ನಾಳಿ ಯಾಸಿನ್ ಅವರು ‘ತ್ರಿಕಾರಂ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸತೀಶ್ ಚಂದ್ರಯ್ಯ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ, ಹೈಟ್‌ ಮಂಜು ಮತ್ತು ಕಂಬಿ ರಾಜ್ ಅವರ ನ್ಯೃತ್ಯ ನಿರ್ದೇಶನ ಈ ಸಿನಿಮಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಮಾರಿ ಕಣಿವೆ, ಸಾಣೆಹಳ್ಳಿ, ದಾವಣಗೆರೆ, ಸಿರಾ, ಮೈಸೂರಿನಲ್ಲಿ ಶೂಟಿಂಗ್ ಮಾಡಲಾಗಿದೆ. 50 ದಿನಗಳ ಚಿತ್ರೀಕರಣ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.