‘ಎಸೆದ ಕಲ್ಲುಗಳಿಂದ ರಕ್ತ ಬಂದರೆ ಅದನ್ನು ಒಪ್ಪೋಕಾಗಲ್ಲ’; ಸುದೀಪ್ ಹೇಳಿಕೆಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

| Updated By: ರಾಜೇಶ್ ದುಗ್ಗುಮನೆ

Updated on: Jan 20, 2023 | 11:59 AM

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಧ್ಯೆ ಹಲವು ವಿಚಾರಗಳನ್ನು ಲಿಂಕ್ ಮಾಡಲಾಗುತ್ತಿದೆ. ಕೆಲವೊಮ್ಮೆ ಅತಿಯಾಗಿ ಕೀಳು ಮಟ್ಟದಲ್ಲಿ ಮಾತನಾಡುವುದರಿಂದ ರಶ್ಮಿಕಾಗೆ ಬೇಸರ ಆಗುತ್ತಿದೆ.

‘ಎಸೆದ ಕಲ್ಲುಗಳಿಂದ ರಕ್ತ ಬಂದರೆ ಅದನ್ನು ಒಪ್ಪೋಕಾಗಲ್ಲ’; ಸುದೀಪ್ ಹೇಳಿಕೆಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
Follow us on

ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ವಿವಾದಗಳ ಮೂಲಕ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಆಗ್ರಹಗಳು ಕೇಳಿ ಬಂದವು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಕಿಚ್ಚ ಸುದೀಪ್ (Kichcha Sudeep) ಅವರಿಗೂ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅವರು ಇದಕ್ಕೆ ಉತ್ತರ ನೀಡಿದ್ದರು. ಸುದೀಪ್ ನೀಡಿದ ಹೇಳಿಕೆಗೆ ಸಂಬಂಧಿಸಿ ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸುದೀಪ್ ಹೇಳಿದ್ದೇನು?

ತೆಲುಗಿನ ಇಂಡಿಯಾಗ್ಲಿಟ್ಜ್​ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸುದೀಪ್​, ‘ಜಗತ್ತನ್ನು ಹೇಗೆ ಬದಲಾಯಿಸಲು ಸಾಧ್ಯ? 15-20 ವರ್ಷಗಳ ಹಿಂದೆ ಮಾಧ್ಯಮದವರು ನಮ್ಮನ್ನು ಸಂದರ್ಶನ ಮಾಡುತ್ತಿದ್ದರು. ಆಗಿನ ಕಾಲಕ್ಕೆ ಅದು ಹೊಸದು. ಡಾ.ರಾಜ್​ಕುಮಾರ್ ಅವರ ಕಾಲದಲ್ಲಿ ದೂರದರ್ಶನ ಮತ್ತು ಪೇಪರ್ ಬಿಟ್ಟು ಬೇರೆ ಯಾವುದೂ ಇರುತ್ತಿರಲಿಲ್ಲ. ಅಂದಿನ ಕಾಲವೇ ಚೆನ್ನಾಗಿತ್ತು ಎಂದು ಹೇಳುವುದೆಲ್ಲ ತಪ್ಪು. ನಾವು ಇದನ್ನು ನಿರ್ವಹಣೆ ಮಾಡುವುದನ್ನು ಕಲಿಯಬೇಕಿದೆ. ಪಬ್ಲಿಕ್ ಫಿಗರ್ ಆದೆವು ಎಂದರೆ ಹೂವಿನ ಮಾಲೆಯ ಜತೆಗೆ ಮೊಟ್ಟೆ, ಟೊಮ್ಯಾಟೋ ಹಾಗೂ ಕಲ್ಲುಗಳು ಕೂಡ ನಮ್ಮ ಕಡೆ ಬರುತ್ತವೆ’ ಎಂದಿದ್ದರು.

ರಶ್ಮಿಕಾ ಕೊಟ್ರು ಉತ್ತರ

ಪ್ರೇಮಾ ದಿ ಜರ್ನಲಿಸ್ಟ್​ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ಅವರು, ‘ಇತ್ತೀಚೆಗೆ ನನ್ನ ಫೇವರಿಟ್ ಹೀರೋ ಮಾತನಾಡುತ್ತಾ ಮಾಲೆಯ ಜತೆಗೆ ಟೊಮ್ಯಾಟೊ, ಕಲ್ಲು, ಮೊಟ್ಟೆಗಳೂ ಬರುತ್ತವೆ. ಅದನ್ನು ತೆಗೆದುಕೊಳ್ಳಲು ರೆಡಿ ಇರಬೇಕು ಎಂದು ಹೇಳಿದ್ದರು. ನಾನು ಅದನ್ನು ಒಪ್ಪುತ್ತೇನೆ. ಏಕೆಂದರೆ ನಾವು ಪಬ್ಲಿಕ್ ಫಿಗರ್ಸ್. ಆದರೆ, ಅವರು ಎಸೆದ ಕಲ್ಲುಗಳಿಂದ ನೋವಾಗುತ್ತಿದೆ, ರಕ್ತ ಬರುತ್ತಿದೆ ಎಂದಾಗ ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದಿದ್ದಾರೆ ರಶ್ಮಿಕಾ.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ರಶ್ಮಿಕಾ ಹೇಳಿಕೆ ನೀಡಿದ್ದೇಕೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಉತ್ತಮ ಗೆಳೆಯರು. ಇವರ ಮಧ್ಯೆ ಹಲವು ವಿಚಾರಗಳನ್ನು ಲಿಂಕ್ ಮಾಡಲಾಗುತ್ತಿದೆ. ಈ ಬಗ್ಗೆ ರಶ್ಮಿಕಾಗೆ ಬೇಸರವಿಲ್ಲ. ಆದರೆ ಕೆಲವೊಮ್ಮೆ ಅತಿಯಾಗಿ ಕೀಳು ಮಟ್ಟದಲ್ಲಿ ಮಾತನಾಡುವುದರಿಂದ ಬೇಸರ ಆಗುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Fri, 20 January 23