Rashmika Mandanna: ಸೆಲ್ಫಿ ಹಂಚಿಕೊಂಡು ಕಾಲೇಜ್ ದಿನಗಳನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ವಿಶೇಷ ಕ್ಯಾಪ್ಶನ್ ನೀಡಿದ್ದಾರೆ.
Rashmika Mandanna
Follow us
ನಟಿ ರಶ್ಮಿಕಾ ಮಂದಣ್ಣ ಅವರ ನಟನೆಯ ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ನೇರವಾಗಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಸಿದ್ದಾರ್ಥ್ ಮಲ್ಹೋತ್ರಗೆ ಜತೆಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ವಿಶೇಷ ಕ್ಯಾಪ್ಶನ್ ನೀಡಿದ್ದಾರೆ.
‘ನಾನು ಈಗ ಸೆಲ್ಫಿಗಳನ್ನು ಅಷ್ಟಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ಕಾಲೇಜು ದಿನಗಳಲ್ಲಿ ಈ ರೀತಿಯ ಸೆಲ್ಫಿಗಳನ್ನು ಸಾಕಷ್ಟು ತೆಗೆದುಕೊಂಡಿದ್ದು ನೆನಪಿದೆ’ ಎಂದು ಹೇಳಿದ್ದಾರೆ.
ರಶ್ಮಿಕಾ ನಟನೆಯ ‘ವಾರಿಸು’ ಸಿನಿಮಾ ಈ ವರ್ಷ ತೆರೆಗೆ ಬಂತು. ಈ ಚಿತ್ರ ಹಿಟ್ ಆಗಿದೆ. ಈ ಚಿತ್ರದಿಂದ ರಶ್ಮಿಕಾ ಬೇಡಿಕೆ ಹೆಚ್ಚಿದೆ.
ರಶ್ಮಿಕಾ ಮಂದಣ್ಣ ಅವರ ಸಂದರ್ಶನದ ತುಣುಕು ಇತ್ತೀಚೆಗೆ ವೈರಲ್ ಆಗಿತ್ತು. ಅವರು ಮೊದಲ ಸಿನಿಮಾದಲ್ಲಿ ಅವಕಾಶ ನೀಡಿದ ರಕ್ಷಿತ್ ಹಾಗೂ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಿದ್ದರು.