ಅಶ್ವಿನಿ, ತಾರಾ ಅನುರಾಧಾ, ವಿಜಯ್​ ಕಿರಗಂದೂರು ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ವಿಶೇಷ ಪ್ರಶಸ್ತಿ

Raghavendra Chitravani Award: 2022ನೇ ಸಾಲಿನ 11 ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ ಈ ಬಾರಿ ಇನ್ನೂ 3 ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಜ.25ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಅಶ್ವಿನಿ, ತಾರಾ ಅನುರಾಧಾ, ವಿಜಯ್​ ಕಿರಗಂದೂರು ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ವಿಶೇಷ ಪ್ರಶಸ್ತಿ
ಅಶ್ವಿನಿ ಪುನೀತ್​ ರಾಜ್​ಕುಮಾರ್​, ತಾರಾ ಅನುರಾಧಾ, ವಿಜಯ್​ ಕಿರಗಂದೂರು, ಸುಧೀಂದ್ರ ವೆಂಕಟೇಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 19, 2023 | 5:57 PM

ರಾಘವೇಂದ್ರ ಚಿತ್ರವಾಣಿ (Raghavendra Chitravani) ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 25ರ ಸಂಜೆ 5 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ (Kannada Film Industry) ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ಜರುಗಲಿದೆ. ಅಂದು ವಿಜಯ್ ಕಿರಗಂದೂರು (Vijay Kiragandur), ಅಶ್ವಿನಿ ಪುನೀತ್ ರಾಜ್​ಕುಮಾರ್​ ಮತ್ತು ತಾರಾ ಅನುರಾಧಾ ಅವರಿಗೆ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಈಗ ಸುಧೀಂದ್ರ ವೆಂಕಟೇಶ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಂದಲೇ ಈ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ‘ರಾಘವೇಂದ್ರ ಚಿತ್ರವಾಣಿ’ ಕಾರ್ಯ ನಿರ್ವಹಿಸುತ್ತಿದೆ. ಕಳೆದ 20 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಿಗೆ ಮತ್ತು ಚಿತ್ರರಂಗದ ಗಣ್ಯರಿಗೆ ಈ ಸಂಸ್ಥೆಯು ಪ್ರಶಸ್ತಿಗಳನ್ನು ನೀಡುತ್ತಿದೆ. ಸುಧೀಂದ್ರ ಅವರ ನಂತರ ಸುಧೀಂದ್ರ ವೆಂಕಟೇಶ್ ಈ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. 2022ನೇ ಸಾಲಿನ ವಾರ್ಷಿಕ 11 ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ: ಜ.25ಕ್ಕೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸಮಾರಂಭ; ಈ ಬಾರಿ ಯಾರಿಗೆಲ್ಲ ಸಿಗಲಿದೆ ಗೌರವ?

ಇದನ್ನೂ ಓದಿ
Image
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Image
MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
Image
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
Image
Oscar 2023: ‘ಆಸ್ಕರ್​ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್​ ಚರಣ್​ ಬಳಿ ಶಾರುಖ್​ ಖಾನ್​ ಮನವಿ​

2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳೆಂದರೆ ಅದು ‘ಕೆಜಿಎಫ್: ಚಾಪ್ಟರ್ 2′ ಮತ್ತು ‘ಕಾಂತಾರ’. ಈ ಎರಡೂ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಿಸಿದ್ದು ವಿಜಯ್ ಕಿರಗಂದೂರು. ಅವರ ಈ ಸಾಧನೆಗಾಗಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ: ‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ

2022ರಲ್ಲಿ ಬಿಡುಗಡೆಯಾದ ‘ಗಂಧದ ಗುಡಿ’ ಕೂಡ ಒಂದು ವಿಶೇಷ ಪ್ರಯತ್ನವಾಗಿ ಗಮನ ಸೆಳೆಯಿತು. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ಈ ಸಾಕ್ಷ್ಯಚಿತ್ರದ ಮೂಲಕ ಕನ್ನಡಿಗರಿಗೆ ತೋರಿಸಿದ್ದು ಪುನೀತ್ ರಾಜ್​ಕುಮಾರ್. ಈ ಡಾಕ್ಯುಮೆಂಟರಿಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ರಾಘವೇಂದ್ರ ಚಿತ್ರವಾಣಿ ಕಡೆಯಿಂದ ಪ್ರಶಸ್ತಿ ಸಂದಾಯವಾಗಲಿದೆ.

ಅದೇ ರೀತಿ, ಕನ್ನಡದ ಹೆಸರಾಂತ ನಟಿ ತಾರಾ ಅನುರಾಧಾ ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಈ ಬಾರಿ ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ