ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತ ಮಾತ್ರವಲ್ಲದೆ, ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರು ಅನೇಕ ಸ್ಟಾರ್ಗಳ ಜತೆ ತೆರೆ ಹಂಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದರ ಜತೆಗೆ ಒಂದು ವರ್ಗದ ಜನ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅವರ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಬಂದರೂ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಾರೆ. ಈಗ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಲುಕ್ ಬಹಿರಂಗವಾಗಿದೆ. ಇದನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
‘ಪುಷ್ಪ’ ಟಾಲಿವುಡ್ನ ಬಹು ನಿರೀಕ್ಷಿತ ಚಿತ್ರ. ಈ ಸಿನಿಮಾಗೆ ಸುಕುಮಾರ್ ನಿರ್ದೇಶನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲು ಅರ್ಜುನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ರಗಡ್ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಈ ಸಿನಿಮಾದ ಮೇಲೆ ಪ್ರೇಕ್ಷಕ ವರ್ಗ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ. ಅವರು ಈ ಸಿನಿಮಾದಲ್ಲಿ ಶ್ರೀವಲ್ಲಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಲುಕ್ಅನ್ನು ರಶ್ಮಿಕಾ ಶೇರ್ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸೀರೆ ಉಟ್ಟು ಹಳ್ಳಿ ಹುಡುಗಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎದುರಲ್ಲಿ ಹೂವು, ಬೆಂಕಿ ಪೊಟ್ಟಣ ಮತ್ತಿತ್ಯಾದಿ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದಾರೆ. ಅವರ ಲುಕ್ ಒಂದಷ್ಟು ಜನರಿಗೆ ಇಷ್ಟವಾಗಿದೆ. ಅವರ ಲುಕ್ಅನ್ನು ಅನೇಕರು ಹೊಗಳುತ್ತಿದ್ದಾರೆ. ಆದರೆ, ಕೆಲವರು ಇದನ್ನು ಟ್ರೋಲ್ ಮಾಡೋದಕ್ಕೆ ಬಳಕೆ ಮಾಡಿಕೊಂಡಿದ್ದಾರೆ.
Srivalli ?❤️#PushpaTheRise #ThaggedheLe ?@alluarjun @aryasukku @ThisIsDSP @adityamusic @PushpaMovie @MythriOfficial pic.twitter.com/kz8iGxavaQ
— Rashmika Mandanna (@iamRashmika) September 29, 2021
‘ದಂಡುಪಾಳ್ಯ’ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ನಾಲ್ಕು ಪಾರ್ಟ್ಗಳಲ್ಲಿ ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಪೂಜಾ ಗಾಂಧಿ ಲುಕ್ಗೆ ರಶ್ಮಿಕಾ ಮಂದಣ್ಣ ಲುಕ್ ಹೋಲಿಕೆ ಮಾಡಿ ಟ್ರೋಲ್ಗಳನ್ನು ಮಾಡಲಾಗುತ್ತಿದೆ.
ಹಲವು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಎಲ್ಲ ಸಿನಿಮಾದಲ್ಲೂ ಐಟಂ ಸಾಂಗ್ಗೆ ಸುಕುಮಾರ್ ಹೆಚ್ಚು ಮಹತ್ವ ನೀಡುತ್ತಾರೆ. ಅದನ್ನು ‘ಪುಷ್ಪ’ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ ಸನ್ನಿ ಲಿಯೋನ್ ಜೊತೆಗೆ ಚಿತ್ರತಂಡ ಈಗಾಗಲೇ ಒಂದು ಸುತ್ತಿನ ಮಾತುಕಥೆ ಮುಗಿಸಿದೆ. ಅವರು ಈ ಒಂದು ಐಟಂ ಸಾಂಗ್ನಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ 50 ಲಕ್ಷ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಇದನ್ನೂ ಓದಿ: ‘ಪುಷ್ಪ’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಲುಕ್ ನೋಡಿ ಫಿದಾ ಆದ ಅಭಿಮಾನಿಗಳು
Pushpa: ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಫರ್ಸ್ಟ್ ಲುಕ್ ಬಹಿರಂಗ; ನೂತನ ಗೆಟಪ್ಗೆ ಫಿದಾ ಆದ ಅಭಿಮಾನಿಗಳು