ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಜೂನ್ 8 ರಿಂದ ಇಂದಿನ ವರೆಗೆ ಏನೇನಾಯ್ತು?

ಚಿತ್ರದುರ್ಗದ ರೇಣುಕಾ ಸ್ವಾಮಿ ಬಂಧನದ ಆರೋಪದಲ್ಲಿ ನಟ ದರ್ಶನ್ ಹಾಗೂ ಇತರೆ 10 ಮಂದಿಯನ್ನು ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಜೂನ್ 8 ರಿಂದ ಜೂನ್ 11 ರವರೆಗೆ ಏನೇನಾಯ್ತು? ದಿನವಹಿ ಮಾಹಿತಿ ಇಲ್ಲಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಜೂನ್ 8 ರಿಂದ ಇಂದಿನ ವರೆಗೆ ಏನೇನಾಯ್ತು?
Follow us
|

Updated on: Jun 11, 2024 | 2:01 PM

ದರ್ಶನ್ (Darshan Thoogudeepa) ಅಭಿಮಾನಿ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಮಾತ್ರವೇ ಅಲ್ಲದೆ ಅವರ 10 ಮಂದಿ ಸಹಚರರನ್ನೂ ಸಹ ಪೊಲೀಸರು ಬಂಧಿಸಿದ್ದು, ವಿಚಾರಣೆ ಚಾಲ್ತಿಯಲ್ಲಿದೆ. ರೇಣುಕಾ ಸ್ವಾಮಿ ಕೊಲೆ ನಡೆದಿದ್ದು ಹೇಗೆ? ಯಾವ ದಿನ ಏನೇನಾಯ್ತು? ದಿನವಹಿ ಮಾಹಿತಿ ಇಲ್ಲಿದೆ.

ಜೂನ್ 8 : ಚಿತ್ರದುರ್ಗದಿಂದ ರೇಣಕಾಸ್ವಾಮಿಯನ್ನು ಚಿತ್ರದುರ್ಗ ದರ್ಶನ್​ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಹಾಗೂ ಆತನ ಸಹಚರರು ಅಪಹರಿಸಿ ಬೆಂಗಳೂರಿಗೆ ಕರೆತಂದರು.

ಜೂನ್ 8 : ದರ್ಶನ್ ಆಪ್ತ ವಿನಯ್ ಗೆ ಸೇರಿದ ರಾಜರಾಜೇಶ್ವರಿ ನಗರದ ಶೆಡ್​​ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ, ಕೊಲೆ.

ಜೂನ್ 8 : ರಾತ್ರಿ ವೇಳೆ ವಿನಯ್ ಹಾಗೂ ಇತರೆ ಇಬ್ಬರು ಸೇರಿ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದರು.

ಜೂನ್ 9 : ಬೆಳಗ್ಗೆ 8 ಗಂಟೆಗೆ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆ ಆಗಿದೆ. ಪಕ್ಕದಲ್ಲೇ ಇರುವ ಸತ್ವ ಅನುಗ್ರಹ ಅಪಾರ್ಟ್​ಮೆಂಟ್​ನ ಭದ್ರತಾ ಕಾವಲುಗಾರ ರಾಮ್ ದೋರ್ ಜೀ ದೂರು ನೀಡಿದ್ದಾರೆ.

ಜೂನ್ 9 : ಬೆಳಗ್ಗೆ 8.30ಕ್ಕೆ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೂನ್ 10 : ಮೂವರು ದರ್ಶನ್ ಸಹಚರರು ಕೊಲೆ ಮಾಡಿದ್ದಾಗಿ ಒಪ್ಪಿ ಠಾಣೆಗೆ ಶರಣಾಗಿದ್ದಾರೆ. ಆದರೆ ವಿಚಾರಣೆ ನಡೆದಾಗ ಕೊಲೆಯ ಅಸಲಿ ವಿಷಯ ಬೆಳಕಿಗೆ.

ಜೂನ್ 10 : ರಾತ್ರಿಯೇ ಮೈಸೂರಿಗೆ ತೆರಳಿದ ಬೆಂಗಳೂರು ಪೊಲೀಸರು. ದರ್ಶನ್ ಇರುವ ಸ್ಥಳದ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಇತರೆ ಆರೋಪಿಗಳನ್ನೂ ಬಂಧಿಸಿದ್ದಾರೆ.

ಜೂನ್ 11 : ಬೆಳಗ್ಗೆ 6.30ಕ್ಕೆ ಮೈಸೂರಿನ ರ್ಯಾಡಿಸನ್ ಹೋಟೆಲ್​ನಲ್ಲಿ ಜಿಮ್ ಮಾಡ್ತಿದ್ದ ದರ್ಶನ್.

ಜೂನ್ 11 : ಹೋಟೆಲ್ ಜಿಮ್ ಹೊರಗೆ ಕಾಯುತ್ತಿದ್ದ ಪೊಲೀಸರು, ದರ್ಶನ್ ಜಿಮ್ ಮಾಡಿ ಹೊರಬರುತ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ.

ಜೂನ್ 11 : ಮಧ್ಯಾಹ್ನದ ವೇಲೆಗೆ ದರ್ಶನ್​​ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಪೊಲೀಸರು.

ಜೂನ್ 11: ದರ್ಶನ್​ರ ಆಪ್ತೆ, ಪವಿತ್ರಾ ಗೌಡ ಅವರನ್ನು ರಾಜರಾಜೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ