AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಪ್ರಕರಣ ವಿಚಾರಣೆ: ‘ನಂಗೇನೂ ಗೊತ್ತಿಲ್ಲ’ ಎಂದ ಪುನೀತ್

ಪ್ರದೋಶ್, ಈಗಾಗಲೇ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಪ್ರಕರಣಕ್ಕೆ ಮಹತ್ವದ ತಿರುವನ್ನು ನೀಡಿದೆ. ಅಂದು ನಡೆದ ಘಟನೆಯ ಹಲವು ಮಹತ್ವದ ಮಾಹಿತಿಯನ್ನು ಪ್ರದೋಶ್ ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಇದರ ನಡುವೆ ಪ್ರತ್ಯಕ್ಷ ಸಾಕ್ಷಿ ಆಗಿದ್ದ ಪುನೀತ್ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದು, ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸಿದ್ದಾರೆ. ಇದು ಸರ್ಕಾರಿ ವಕೀಲರಿಗೆ ತಲೆನೋವಾಗಿದೆ.

ರೇಣುಕಾ ಸ್ವಾಮಿ ಪ್ರಕರಣ ವಿಚಾರಣೆ: ‘ನಂಗೇನೂ ಗೊತ್ತಿಲ್ಲ’ ಎಂದ ಪುನೀತ್
Darshan Thoogudeepa
ಮಂಜುನಾಥ ಸಿ.
|

Updated on: Nov 13, 2026 | 2:13 PM

Share

ಮುಖ್ಯಾಂಶಗಳು

  • ರೇಣುಕಾ ಸ್ವಾಮಿ ಪ್ರಕರಣದ ವಿಚಾರಣೆ
  • ಸಾಕ್ಷಿ ಹೇಳಿಕೆ ಬದಲಾಯಿಸಿದ ಪುನೀತ್
  • ಏನೂ ಗೊತ್ತಿಲ್ಲ ಎಂದ ಸಾಕ್ಷಿ ಪುನೀತ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮಹತ್ವದ ಘಟ್ಟದಲ್ಲಿದೆ. ಆರೋಪಿ ಪ್ರದೋಶ್, ಈಗಾಗಲೇ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಪ್ರಕರಣಕ್ಕೆ ಮಹತ್ವದ ತಿರುವನ್ನು ನೀಡಿದೆ. ಅಂದು ನಡೆದ ಘಟನೆಯ ಹಲವು ಮಹತ್ವದ ಮಾಹಿತಿಯನ್ನು ಪ್ರದೋಶ್ ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಇದರ ನಡುವೆ ಪ್ರತ್ಯಕ್ಷ ಸಾಕ್ಷಿ ಆಗಿದ್ದ ಪುನೀತ್ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದು, ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸಿದ್ದಾರೆ. ಇದು ಸರ್ಕಾರಿ ವಕೀಲರಿಗೆ ತಲೆನೋವಾಗಿದೆ.

ಪ್ರತಿಕೂಲ ಸಾಕ್ಷಿ ಪುನೀತ್​​ರ ಪಾಟಿಸವಾಲನ್ನು ಎಸ್​​ಪಿಪಿ ಪ್ರಸನ್ನ ಕುಮಾರ್ ನಡೆಸಿದ್ದು, ವಕೀಲರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಪುನೀತ್ ‘ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡಿದ್ದಾರೆ. ಅಲ್ಲದೆ, ತಾನು ಪ್ರಕರಣದ ಬಗ್ಗೆ ಟಿವಿಯಲ್ಲಿ ಮಾತ್ರವೇ ನೋಡಿದ್ದಾಗಿ ಹೇಳಿದ್ದಾರೆ. ಈ ಹಿಂದೆ ಮ್ಯಾಜಿಸ್ಟ್ರೇಟ್​​ ಮುಂದೆ ಹೇಳಿಕೆ ನೀಡಿದ್ದಾಗ ತಾನು ಹೆದರಿದ್ದು, ಅದೇ ಕಾರಣಕ್ಕೆ ಆ ರೀತಿ ಹೇಳಿಕೆ ದಾಖಲಿಸಿದ್ದಾಗಿಯೂ, ಆ ಹೇಳಿಕೆಗಳು ಟಿವಿಯಲ್ಲಿ ನೋಡಿ ತಿಳಿದ ಮಾಹಿತಿಯನ್ನೇ ಆಧರಿಸಿವೆ ಎಂದು ಪುನೀತ್ ಹೇಳಿದ್ದಾನೆ. ಸಿಆರ್‌ಪಿಸಿ 164 ಹೇಳಿಕೆಯನ್ನೂ ಸಹ ಪುನೀತ್ ನಿರಾಕರಿಸಿದ್ದಾನೆ.

ಪುನೀತ್, ಪಟ್ಟಣಗೆರೆ ಶೆಡ್​​ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ರೇಣುಕಾ ಸ್ವಾಮಿ ಮೇಲೆ ನಡೆದ ಹಲ್ಲೆಯನ್ನು ನೋಡಿದ್ದ. ಈ ಹಿಂದೆ ನೀಡಿದ್ದ ಹೇಳಿಕೆಗಳಲ್ಲಿ ಪುನೀತ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದ. ಆದರೆ ಈಗ ತನ್ನ ಹೇಳಿಕೆಯನ್ನು ಬದಲಾವಣೆ ಮಾಡಿದ್ದಾನೆ. ಶೆಡ್​​ನ ಮಾಲೀಕ ವಿನಯ್ ಅನ್ನು ಹೊರತಾಗಿ ಇನ್ಯಾರನ್ನೂ ಪುನೀತ್ ಗುರುತಿಸಿಲ್ಲ. ಉಳಿದವರ್ಯಾರೂ ತನಗೆ ಗೊತ್ತಿಲ್ಲ ಎಂದಿದ್ದಾನೆ. ಪುನೀತ್, ತನ್ನ ಹೇಳಿಕೆ ಬದಲಾವಣೆ ಮಾಡಿದ್ದು ಪ್ರಕರಣವನ್ನು ಇನ್ನಷ್ಟು ಕುತೂಹಲಗೊಳಿಸಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್

ಇನ್ನು ದರ್ಶನ್ ಮತ್ತೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಫಿಸಿಯೋಥೆರಪಿಗಾಗಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಅನುಮತಿ ನೀಡಿದೆ. ಜೊತೆಗೆ ದರ್ಶನ್ ಆರೋಗ್ಯದ ಕುರಿತು ವರದಿ ನೀಡುವಂತೆ ಸಹ ಸೂಚಿಸಿತ್ತು. ಜೈಲಿನ ವೈದ್ಯಾಧಿಕಾರಿಗಳು ದರ್ಶನ್​​ ಆರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ