ದರ್ಶನ್​ ನೋಡುವ ಆಸೆಯಿಂದ ಬೆಂಗಳೂರಿಗೆ ಬಂದು ಹೆಣವಾದ ರೇಣುಕಾ ಸ್ವಾಮಿ; ಕಿಡ್ನ್ಯಾಪರ್​ಗಳ ಐಡಿಯಾ ಹೇಗಿತ್ತು?

ಚಿತ್ರದುರ್ಗದ ಹೊರವಲಯದಲ್ಲಿ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಫ್ಟ್ ಮಾಡಿದರು. ನಟ ದರ್ಶನ್ ಜೊತೆ ಭೇಟಿ ಮಾಡಿಸುತ್ತೇನೆ ಎಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ಆತನ ಮಾತನ್ನು ನಂಬಿದ ರೇಣುಕಾ ಸ್ವಾಮಿಯು ದರ್ಶನ್​ರನ್ನು ಭೇಟಿ ಮಾಡುವ ಆಸೆಗೆ ಖುಷಿಯಿಂದ ಅಪಹರಣಕಾರರ ಜೊತೆ ಹೋಗಿದ್ದ. ಆದರೆ ಕೊನೆಯಲ್ಲಿ ಪತ್ತೆಯಾಗಿದ್ದು ಶವವಾಗಿ ಎಂಬುದೇ ದುರಂತ.

ದರ್ಶನ್​ ನೋಡುವ ಆಸೆಯಿಂದ ಬೆಂಗಳೂರಿಗೆ ಬಂದು ಹೆಣವಾದ ರೇಣುಕಾ ಸ್ವಾಮಿ; ಕಿಡ್ನ್ಯಾಪರ್​ಗಳ ಐಡಿಯಾ ಹೇಗಿತ್ತು?
ರೇಣುಕಾ ಸ್ವಾಮಿ, ದರ್ಶನ್​
Edited By:

Updated on: Jun 13, 2024 | 6:12 PM

ಚಿತ್ರದುರ್ಗದ ಹೊರವಲಯದಲ್ಲಿ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಫ್ಟ್ ಮಾಡಿದರು. ನಟ ದರ್ಶನ್ (Darshan) ಜೊತೆ ಭೇಟಿ ಮಾಡಿಸುತ್ತೇನೆ ಎಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ಆತನ ಮಾತನ್ನು ನಂಬಿದ ರೇಣುಕಾ ಸ್ವಾಮಿಯು ದರ್ಶನ್​ರನ್ನು ಭೇಟಿ ಮಾಡುವ ಆಸೆಗೆ ಖುಷಿಯಿಂದ ಅಪಹರಣಕಾರರ ಜೊತೆ ಹೋಗಿದ್ದ. ಆದರೆ ಕೊನೆಯಲ್ಲಿ ಪತ್ತೆಯಾಗಿದ್ದು ಶವವಾಗಿ ಎಂಬುದೇ ದುರಂತ.ಪವಿತ್ರಾ ಗೌಡಗೆ (Pavithra Gowda) ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಬದುಕು ದುರಂತ ಅಂತ್ಯ ಕಂಡಿದೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಸೋಶಿಯಲ್​ ಮೀಡಿಯಾ ಮೂಲಕ ಅಸಭ್ಯ ಫೋಟೋ ಕಳಿಸಿದ್ದ ರೇಣುಕಾ ಸ್ವಾಮಿಗೆ (Renuka Swamy) ಬುದ್ಧಿ ಕಲಿಸಲು ದರ್ಶನ್​ ಹಾಗೂ ಸಹಚರರು ಕಾನೂನು ಕೈಗೆತ್ತಿಕೊಂಡರು. ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ದುರಂತ ಏನೆಂದರೆ, ದರ್ಶನ್​ರನ್ನು ನೋಡುವ ಆಸೆಯಿಂದ ಕಿಡ್ನ್ಯಾಪರ್​ಗಳ ಕಾರು ಹತ್ತಿದ್ದ ರೇಣುಕಾ ಸ್ವಾಮಿ. ಆದರೆ ಬೆಂಗಳೂರಿಗೆ ಬಂದಾಗ ಆಗಿದ್ದು ಮಾತ್ರ ದೊಡ್ಡ ದುರಂತ.

ಚಿತ್ರದುರ್ಗದಲ್ಲಿ ಐವರು ಸೇರಿಕೊಂಡು ರೇಣುಕಾ ಸ್ವಾಮಿ ಕಿಡ್ನ್ಯಾಪ್ ಮಾಡಿದ್ದರು. ರಾಘವೇಂದ್ರ, ಜಗದೀಶ್, ಅನು, ರಾಜು, ರವಿಯಿಂದ ಕಿಡ್ನ್ಯಾಪ್​ ನಡೆಯಿತು ಎಂಬ ಆರೋಪ ಇದೆ. ಜಗದೀಶ್, ಅನು, ರವಿ ಹಾಗೂ ರಾಜು ಚಿತ್ರದುರ್ಗದವರು. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರೇಣುಕಾ ಸ್ವಾಮಿಯ ಕಿಡ್ನ್ಯಾಪ್ ಮಾಡಲಾಯಿತು. ಎಲ್ಲರೂ ಸೇರಿ ರೇಣುಕಾ ಸ್ವಾಮಿಯನ್ನು ಆಟೋದಲ್ಲಿ ಚಿತ್ರದುರ್ಗದ ಹೊರವಲಯಕ್ಕೆ ಕರೆದೊಯ್ದಿದ್ದರು.

ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್​ ನೋಡಲು ಕಿಕ್ಕಿರಿದು ಸೇರಿದ ಜನರಿಗೆ ಪೊಲೀಸ್​ ಲಾಠಿ ರುಚಿ

ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದ ಹೊರವಲಯದಲ್ಲಿ ಆಟೋದಿಂದ ಕಾರಿಗೆ ಶಿಫ್ಟ್ ಮಾಡಲಾಯಿತು. ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ದರ್ಶನ್ ಭೇಟಿ ಮಾಡಿಸುತ್ತೇನೆಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ದರ್ಶನ್​ರನ್ನು ಭೇಟಿ ಮಾಡುವ ಆಸೆಯಿಂದ ರೇಣುಕಾ ಸ್ವಾಮಿ ಹೋಗಿದ್ದ. ಆದರೆ ಕೊನೆಗೆ ಶವಾಗಿ ಪತ್ತೆಯಾಗಿದ್ದು ದುರಂತ ಸಂಗತಿ.

ಈ ಕೇಸ್​​ನಲ್ಲಿ ದರ್ಶನ್​, ಪವಿತ್ರಾ ಗೌಡ, ರಾಘವೇಂದ್ರ ಮುಂತಾದವರ ಬಂಧನ ಆಗಿದೆ. ಕಾರು ಚಾಲಕ ರವಿ ಇಂದು (ಜೂನ್​ 13) ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. 3 ಆರೋಪಿಗಳು ನಾಪತ್ತೆ ಆಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. 6 ದಿನಗಳ ಕಾಲ ಎಲ್ಲ ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಹೈ ಪ್ರೊಫೈಲ್​ ಕೇಸ್​ ಆದ್ದರಿಂದ ತನಿಖೆ ಚುರುಕುಗೊಂಡಿದೆ. ತನಿಖೆಯ ಪ್ರತಿ ಹಂತದಲ್ಲೂ ಹೊಸ ಹೊಸ ಶಾಕಿಂಗ್​ ವಿವಚಾರಗಳು ಹೊರಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us