ದರ್ಶನ್ ವಿರುದ್ಧ 4,800ಕ್ಕೂ ಅಧಿಕ ಪುಟಗಳ ಚಾರ್ಜ್​ಶೀಟ್; ನಡೀತಿದೆ ತಪ್ಪು ತಿದ್ದೋ ಕೆಲಸ

|

Updated on: Sep 04, 2024 | 10:28 AM

ನಟ ದರ್ಶನ್​ಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ಪ್ರಕರಣ ಕಂಟಕವಾಗಿದೆ. ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು (ಸೆಪ್ಟೆಂಬರ್ 4) ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಆಗಲಿದೆ. ಈ ಮಧ್ಯೆ ದರ್ಶನ್ ವಿರುದ್ಧವಾಗಿ ಪ್ರಬಲ ಸಾಕ್ಷಿಗಳೇ ಲಭ್ಯವಾಗಿವೆ.

ದರ್ಶನ್ ವಿರುದ್ಧ 4,800ಕ್ಕೂ ಅಧಿಕ ಪುಟಗಳ ಚಾರ್ಜ್​ಶೀಟ್; ನಡೀತಿದೆ ತಪ್ಪು ತಿದ್ದೋ ಕೆಲಸ
ದರ್ಶನ್
Follow us on

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು 4800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಯಾವೆಲ್ಲ ಅಂಶಗಳು ಇರಲಿವೆ ಎನ್ನುವ ಕುರಿತು ಕುತೂಹಲ ಮೂಡಿದೆ. ಒಂದೊಮ್ಮೆ ದರ್ಶನ್ ಅವರನ್ನು ಎ2ನಿಂದ ಎ1 ಆರೋಪಿ ಮಾಡಿದರೆ ಅದು ಪ್ರಮುಖ ಬೆಳವಣಿಗೆ ಆಗಲಿದೆ. ಇದಕ್ಕೆಲ್ಲ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಚಾರ್ಜ್​ಶೀಟ್ ಸಲ್ಲಿಕೆ ಆಗುತ್ತಿರುವ ವಿಚಾರ ಕೇಳಿ ದರ್ಶನ್ ಅವರು ರಾತ್ರಿಯಿಡೀ ನಿದ್ದೆ ಮಾಡಿಲ್ಲ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಏನಾಯಿತು? ಕೊಲೆಗೆ ಯಾರೆಲ್ಲ ಪ್ರಯತ್ನಿಸಿದರು? ತನಿಖೆ ವೇಳೆ ಸಿಕ್ಕ ಸಾಕ್ಷಿಗಳು ಸೇರಿದಂತೆ ಎಲ್ಲವೂ 4,800ಕ್ಕೂ ಪುಟಗಳ ಚಾರ್ಜ್​​ಶೀಟ್​ನಲ್ಲಿ ಇರಲಿದೆ. ಇಂದು ಚಾರ್ಜ್​ಶೀಟ್ ಕರೆಕ್ಷನ್ ಕೆಲಸ ನಡೆಯುತ್ತಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್​ಪಿಪಿ) ಸೂಚಿಸಿದ ಸಣ್ಣಪುಟ್ಟ ತಪ್ಪುಗಳನ್ನು ಸರಿ ಮಾಡುವ ಕೆಲಸ ಆಗುತ್ತಿದೆ. ನಂತರ ಕೋರ್ಟ್​​ಗೆ ಚಾರ್ಜ್​ಶೀಟ್ ಸಲ್ಲಿಕೆ ಆಗಲಿದೆ.

20 ಸೆಟ್

ಸಂಜೆ 5 ಗಂಟೆಯೊಳಗೆ ಚಾರ್ಜ್​ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ಒಟ್ಟು 20 ಸೆಟ್ ಚಾರ್ಜ್​ಶೀಟ್ ಪ್ರಿಂಟ್ ಆಗಲಿದೆ. 17 ಆರೋಪಿಗಳ ಪರ ವಕೀಲರಿಗೆ ಒಂದೊಂದು ಚಾರ್ಜ್​ಶೀಟ್ ನೀಡಲಾಗುತ್ತದೆ. ಒಂದು ಚಾರ್ಜ್​ಶೀಟ್ ಕಾಪಿ ಕೋರ್ಟ್​ಗೆ ಸಲ್ಲಿಸಲಾಗುತ್ತದೆ. ಒಂದು ಚಾರ್ಜ್​ಶೀಟ್ ಕಾಪಿ​​ ತನಿಖಾಧಿಕಾರಿ ಬಳಿ ಇರಲಿದ್ದು, ಒಂದು ಕಾಪಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇರಲಿದೆ.

ಇದನ್ನೂ ಓದಿ: ಹಲ್ಲೆಯ ವಿಡಿಯೋ, ಸಿಸಿಟಿವಿ ದೃಶ್ಯ; ದರ್ಶನ್ ವಿರುದ್ಧ ಸಿಕ್ಕ ಪ್ರಬಲ ಸಾಕ್ಷಿಗಳೇನು? 

ದರ್ಶನ್​ಗಿಲ್ಲ ನಿದ್ದೆ

ಚಾರ್ಜ್​ಶೀಟ್ ಸಲ್ಲಿಕೆ ವಿಚಾರದಿಂದ ದರ್ಶನ್ ಟೆನ್ಷನ್ ಆಗಿದ್ದಾರೆ. ಅವರು ನಿದ್ರೆ ಇಲ್ಲದೇ ಎಚ್ಚರವಾಗೇ ಕಾಲ ಕಳೆದಿದ್ದಾರೆ. ಅವರು ಊಟವನ್ನೂ ಸರಿಯಾಗಿ ಮಾಡಿಲ್ಲ ಎಂದು ವರದಿ ಆಗಿದೆ. ಜಾರ್ಜ್​ಶೀಟ್ ಸಲ್ಲಿಕೆ ಬಳಿಕ ಏನಾಗುತ್ತದೆ ಎನ್ನುವ ಟೆನ್ಷನ್ ಅವರನ್ನು ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.